ಪ್ರಜಾತಾಂತ್ರಿಕ ವ್ಯವಸ್ಥೆ ಯಲ್ಲಿ ಹಕ್ಕುಗಳ ದಮನವು ಒಂದು ಸವಾಲು…!!!ಎಚ್ಚರಿಕೆ…

Listen to this article

ಎಚ್ಚರಿಕೆ 3

ಸವಾಲು 2

ಪ್ರಜಾತಾಂತ್ರಿಕ ವ್ಯವಸ್ಥೆ ಯಲ್ಲಿ ಹಕ್ಕುಗಳ ದಮನವು ಒಂದು ಸವಾಲು. “ಅಭಿವ್ಯಕ್ತಿ ಸ್ವಾತಂತ್ರ್ಯವು ಪ್ರಜಾಪ್ರಭುತ್ವದ ತಳಹದಿ”. ಸಂವಿಧಾನದ ಅನುಚ್ಛೇದ 19(1)(ಎ) ಎಲ್ಲಾ ಪ್ರಜೆಗಳಿಗೆ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ನೀಡಿದೆ. ವಾಕ್ ಸ್ವಾತಂತ್ರ್ಯವು ಜನರು ಮುಕ್ತವಾಗಿ,ಸ್ವಾತಂತ್ರವಾಗಿ ವಿಭಿನ್ನ ಅಭಿಪ್ರಾಯಗಳನ್ನು ಹೊಂದಲು ಸ್ವಾತಂತ್ರ್ಯವನ್ನು ನೀಡುತ್ತದೆ. ಈ ವಾಕ್ ಸ್ವತಂತ್ರವು ಸರ್ವ ಸ್ವತಂತ್ರವಾದ್ದು.
ಮತ್ತೊಬ್ಬರ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಗೌರವಿಸುವುದು ಮತ್ತು ರಕ್ಷಿಸುವುದು ಪ್ರಜಾಪ್ರಭುತ್ವದ ಮೂಲ ಲಕ್ಷಣ. ಯಾವುದೇ ಮೂಲಭೂತ ಹಕ್ಕುಗಳ ಹತ್ತಿಕ್ಕುವಿಕೆಯನ್ನು ನಮ್ಮ ಸಂವಿಧಾನವು ಮಾನ್ಯ ಮಾಡುವುದಿಲ್ಲ. ಈಗ ನಡೆಯುತ್ತಿರುವ ವಿಧ್ಯಮಾನಗಳು ಬೇಹುಗಾರಿಕೆ ನಡೆಸಿ ಪೋನ್ ಕದ್ದಾಲಿಕೆ ( ಪೆಗಾಸಿಸ್) ನೋಡಿದರೆ ನಾವು ಇರುವುದು ಪ್ರಜಾಪ್ರಭುತ್ವ ರಾಷ್ಟ್ರದಲ್ಲೋ ಅಥವ ಗಡ್ಡಪ್ಪನ ಸರ್ವಾಧಿಕಾರದಲ್ಲೋ ಎಂಬ ಅನುಮಾನ ಬರುತ್ತದೆ. ಇದು ಪ್ರಜಾತಾಂತ್ರಿಕ ವ್ಯವಸ್ಥೆಗೆ ಅಪಾಯಕಾರಿ. ಈ ನಿಟ್ಟಿನಲ್ಲಿ ಫ್ರಾನ್ಸ್ ನ ಚಿಂತಕ ವಾಲ್ಟೇರ್ ಹೇಳಿರುವ ಮಾತು ಗಮನಾರ್ಹ “ನಿನ್ನ ಯಾವ ಮಾತನ್ನು ನಾನು ಒಪ್ಪುವುದಿಲ್ಲ. ಅದರೆ ನಿನ್ನ ಅಭಿಪ್ರಾಯ ವ್ಯಕ್ತಪಡಿಸುವ ಹಕ್ಕನ್ನು ನಾನ್ನ ಉಸಿರಿರುವವರೆಗೂ ಸಮರ್ಥೀಸುತ್ತೇನೆ”. ಸಮಾಜದ ಸರ್ವತೋಮುಖ ಅಭಿವೃದ್ಧಿಗೆ ವ್ಯಕ್ತಿ ಸ್ವಾತಂತ್ರ್ಯವು ಮೊದಲ ಹೆಜ್ಜೆ. ಈ ಹಕ್ಕುಗಳನ್ನು ಇಂದು ಕಳೆದುಕೊಳ್ಳುವ ಅಂಚಿನಲ್ಲಿರುವಂತೆ ಭಾಸವಾಗುತ್ತದೆ. ಸರ್ಕಾರಗಳು ತನ್ನ ಹಿಡಿತದಲ್ಲಿರುವ ದೂರದರ್ಶನ ಮತ್ತು ಆಕಾಶವಾಣಿಯೆಂಬ ಸಾರ್ವಜನಿಕ ಮಾಧ್ಯಮಗಳನ್ನು ತನ್ನ ವಕ್ತಾರರಾಗಿ ಬಳಸಿಕೊಳ್ಳುತ್ತಿವೆ. ಖಾಸಗಿ ಮಾಧ್ಯಮಗಳ ಮೇಲೆ ಪ್ರಭಾವ ಬೀರುತ್ತಿವೆ. ಸರ್ಕಾರ ತನ್ನ ಪರಮಾಧಿಕಾರವನ್ನು ದುರ್ಬಳಕೆ ಮಾಡಿಕೊಂಡು ವಿಭಿನ್ನ ಅಭಿಪ್ರಾಯಗಳನ್ನು ಹೊಂದಿದ ಪುಸ್ತಕಗಳನ್ನು,ಸಿನಿಮಾಗಳನ್ನು, ಚಿತ್ರಕಲೆಗಳನ್ನು ನಿಷೇಧಿಸುತ್ತಿದೆ. ಸರ್ಕಾರದ ಅತಿರೇಕಗಳನ್ನು ಪ್ರಶ್ನಿಸುವ ಕಲಾವಿದರು, ಸಾಮಾಜಿಕ ಕಾರ್ಯಕರ್ತರು,ವಿದ್ಯಾರ್ಥಿಗಳು ಹಾಗು ಸಾಹಿತಿಗಳನ್ನು ರಾಜದ್ರೋಹದ ಅಪಾದನೆ ಹೊರಿಸಿ ಬಂಧಿಸಿ,ಕ್ರಿಮಿನಲ್ ಕೇಸ್ ದಾಖಲಿಸಿ,ಜೈಲಿಗೆ ಕಳುಹಿಸುತ್ತಿದ್ದಾರೆ,ಹತ್ಯೆ ಮಾಡುತ್ತಿದ್ದಾರೆ. ಮಾಧ್ಯಮಗಳೂ ಕೂಡ ಮಾರುಕಟ್ಟೆ ಹಾಗು ಆಡಳಿತ ಯಂತ್ರಗಳ ಮೂಲಾಜಿಗೆ ಬಿದ್ದು ತಮ್ಮ ಅಗತ್ಯಕ್ಕೆ ಅನುಗುಣವಾಗಿ ಸುದ್ದಿಯನ್ನು ತಿರುಚಿದ ಉದಾಹರಣೆಗಳೂ ಇವೆ. ಇಂತಹ ಬೆಳವಣಿಗೆಗಳಿಂದ ನಾವು ಏನನ್ನು ಗಳಿಸಿದ್ದೇವೆಯೋ ಅದನ್ನು ಕಳೆದುಕೊಳ್ಳುತ್ತಿದ್ದೇವೆ . ಈ ಬೆಳವಣಿಗೆಗಳು ನಮ್ಮ ಸಂವಿಧಾನಕ್ಕೆ ಒಂದು ದೊಡ್ಡ ಸವಾಲಾಗಿದೆ. ಎಚ್ಚರಿಕೆ..

ವರದಿ.ಅಜಯ.ಚ ಹುಗಲೂರು
(ಹೂವಿನ ಹಡಗಲಿ)

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend