ವಾಣಿವಿಲಾಸ ಸಾಗರ ಜಾಲಾಶಯ ಕೋಡಿ ಬೀಳೋದಕ್ಕೆ ಕೇವಲ ಅರ್ಧ ಅಡಿ ಮಾತ್ರವೇ ಬಾಕಿ…!!!

Listen to this article

ಜಿಲ್ಲೆಯ ಹಿರಿಯೂರು ತಾಲೂಕಿನ ವಾಣಿವಿಲಾಸ ಸಾಗರ ಜಾಲಾಶಯ ( Vanivilasa Sagara Dam ) ಕೋಡಿ ಬೀಳೋದಕ್ಕೆ ಕೇವಲ ಅರ್ಧ ಅಡಿ ಮಾತ್ರವೇ ಬಾಕಿ ಉಳಿದಿದೆ. ಹೀಗಾಗಿ ಕೋಡಿ ಬಿದ್ದ ನೀರು ವೇದಾವತಿ ನದಿಗೆ ( Vedavati River ) ಹರಿಯೋ ಕಾರಣ, ಎಚ್ಚರಿಕೆಯಿಂದ ಇರುವಂತೆ ತಾಲೂಕು ಆಡಳಿತ ಜನರಿಗೆ ಸೂಚಿಸಿದೆ.
ಈ ಸಂಬಂಧ ಪತ್ರಿಕಾ ಪ್ರಕಟಣೆಯಲ್ಲಿ ಹಿರಿಯೂರು ನಗರಸಭೆಯಿಂದ ಮಾಹಿತಿ ನೀಡಲಾಗಿದ್ದು, ವಾಣಿ ವಿಲಾಸ ಸಾಗರ ಕೋಡಿ ಬೀಳುವ ಸಂಭವ ಇದೆ. ಕೋಡಿ ಬಿದ್ದ ನೀರು ವೇದಾವತಿ ನದಿಯಲ್ಲಿ ಹರಿಯಲಿದೆ. ಹೀಗಾಗಿ ವೇದಾವತಿ ನದಿ ಪಾತ್ರದಲ್ಲಿನ ಚನರು ಎಚ್ಚರಿಕೆಯಿಂದ ಇರುವಂತೆ ತಿಳಿಸಿದೆ.
ಇನ್ನೂ ವೇದಾವತಿ ನದಿ ತೀರದ ಸಾರ್ವಜನಿಕರು ಮಕ್ಕಳನ್ನು, ದನಕರುಗಳನ್ನು ಬಿಡಬಾರದೆಂದು ತಿಳಿಸಿದೆ. ಜೊತೆಗೆ ಹಿರಿಯೂರು ನಗರದ ನದಿ ಪಾತ್ರದಲ್ಲಿ ವಾಸವಾಗಿರುವ ವಾರ್ಡ್ ನಂ.8, 9, 6, 7, 11 ಮತ್ತು 12ರ ಜನರು ಮಕ್ಕಳ ಜೊತೆಗೆ, ಧನಕರುಗಳನ್ನು ನದಿ ಪಾತ್ರದಲ್ಲಿ ಬಿಡಬಾರದು ಎಂದು ಹೇಳಿದೆ.
ಐತಿಹಾಸಿಕ ಕ್ಷಣಕ್ಕೆ ಇನ್ನು 2 ದಿನಗಳಲ್ಲಿ ನಾವೆಲ್ಲರೂ ಸಾಕ್ಷಿಯಾಗಲಿದ್ದೇವೆ.
ವಿವಿ ಸಾಗರ ಜಲಾಶಯವು ಕೋಡಿಗೆ ಕೇವಲ 0.27cm ಬೇಕಿದ್ದು 88 ವರ್ಷಗಳ ನಂತರ ಕೋಡಿ ಬೀಳಲಿದೆ.
ನದಿ ಪಾತ್ರದ ಜನರು ಹಾಗೂ ಸಾರ್ವಜನಿಕರು ಎಚ್ಚರಿಕೆಯಿಂದ ಇರಲು ತಮ್ಮಲ್ಲಿ ಮನವಿ ಮಾಡುತ್ತಿದ್ದೇನೆ. ಹಾಗೂ ತಾಲೂಕು ಆಡಳಿತದೊಂದಿಗೆ ಮುನ್ನೆಚ್ಚರಿಕೆ ಕ್ರಮವಾಗಿ ಕೆಲವು ವಿಚಾರಗಳನ್ನು ನಿರ್ಣಯ ಮಾಡಿದ್ದು ಶೀಘ್ರದಲ್ಲೇ ಪ್ರಕಟಿಸಲಾಗುವುದು.

ನಮ್ಮ ಕಾಲಘಟ್ಟದಲ್ಲಿ ಈ ಅದ್ಭುತ ನಡೆಯುತ್ತಿರುವುದು ನನ್ನ ಪೂರ್ವ ಜನ್ಮದ ಪುಣ್ಯವೆಂದು ಭಾವಿಸುತ್ತೇನೆ…

ವರದಿ. ಶಶಿಕುಮಾರ್ ಚಳ್ಳಕೆರೆ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend