ಅಶ್ವಿನಿ.ಕೆ.ಪಿ ರವರು ಏಷ್ಯದ ಪ್ರಪ್ರಥಮ ಮಹಿಳೆ “ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿ”ಗೆ ಸದಸ್ಯೆಯಾಗಿ ಆಯ್ಕೆ ಆಗಿದ್ದರೆ…!!!

Listen to this article

ಅಶ್ವಿನಿ.ಕೆ.ಪಿ ರವರು ಏಷ್ಯದ ಪ್ರಪ್ರಥಮ ಮಹಿಳೆ “ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿ”ಗೆ ಸದಸ್ಯೆಯಾಗಿ ಆಯ್ಕೆ ಆಗಿದ್ದರೆ..

ಹರಪನಹಳ್ಳಿ :-ದಲಿತರ ಮನೆಯಲ್ಲಿ ತಿಂಡಿ ತಿಂದದ್ದನ್ನು ಮುಖಪುಟದಲ್ಲಿ ಸುದ್ದಿ ಮಾಡುವ ಜಾತಿವಾದಿ ಮಾಧ್ಯಮಗಳು ಅದೇ ದಲಿತರ ಮನೆಯ ಕೋಲಾರ ಜಿಲ್ಲೆಯ ಹೆಮ್ಮೆಯ ಪುತ್ರಿ ಅಶ್ವಿನಿ.ಕೆ.ಪಿ ರವರು ಏಷ್ಯದ ಪ್ರಪ್ರಥಮ ಮಹಿಳೆ “ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿ” ಗೆ ಸದಸ್ಯೆಯಾಗಿ ಆಯ್ಕೆಯಾಗಿರುವುದನ್ನು ಪ್ರಕಟ ಮಾಡಲು ಹಿಂಜರಿಯುತ್ತವೆ*

UNHRC. “United nations human rights council” ಗೆ ಸದಸ್ಯರಾಗಿ ಆಯ್ಕೆಯಾದ ಭಾರತದ ಮೊದಲ ಪ್ರಜೆ ಸಹೋದರಿ ಅಶ್ವಿನಿ.ಕೆ.ಪಿ ರವರು. ಇದು ಯಾವುದೇ Main stream ಮೀಡಿಯಾದಲ್ಲಿ ಪ್ರಕಟವಾಗಲಿಲ್ಲ.

ಪ್ರಜಾವಾಣಿಯಂತಹ ಸೆಕ್ಯುಲರ್ ಪತ್ರಿಕೆ ಕೂಡ ಅಶ್ವಿನಿ.ಕೆ.ಪಿ ರವರ ಈ ಸಾಧನೆಯನ್ನು ಪ್ರಕಟಿಸುವ ಆಸಕ್ತಿ ತೋರಲಿಲ್ಲ.

ಪ್ರಕಟ ಮಾಡಿದರೂ ಒಂದು ಸಣ್ಣ ಮೂಲೆಯಲ್ಲಿ ವಿಷಯವನ್ನು ಕಾಟಾಚಾರಕ್ಕೆ ಹಾಕಿದಂತೆ ಹಾಕಲಾಗಿದೆ.. ಮೌಂಟ್ ಕಾರ್ಮೆಲ್ ನಲ್ಲಿ ಪದವೀ ಪಡೆದು, ಸೇಂಟ್ ಜೋಸೆಫ್ ನಲ್ಲಿ ಮಾಸ್ಟರ್ಸ್ ಮಾಡಿ, JNU ನಲ್ಲಿ Master of philosophy ಮತ್ತು South Asian studies ವಿಷಯವನ್ನು ಆಯ್ದುಕೊಂಡು ದಲಿತ ಮಾನವ ಹಕ್ಕುಗಳ ಮೇಲೆ PHD ಯನ್ನು ಪಡೆದಿದ್ದಾರೆ.

ಮಾನವ ಹಕ್ಕುಗಳ ಬಗ್ಗೆ ಸುಮಾರು 150 ದೇಶಗಳಲ್ಲಿ ಕೆಲಸ ಮಾಡುತ್ತಿದ್ದ*’Amnesty international’* ಸಂಸ್ಥೆಯಲ್ಲಿಯೂ ತಮ್ಮ ಸೇವೆ ಸಲ್ಲಿಸಿರುತ್ತಾರೆ.

ಇವೆಲ್ಲದರ ಆಧಾರದ ಮೇಲೆ ಪ್ರಪಂಚದ ಒಟ್ಟು 12 ಜನರನ್ನು Shortlist ಮಾಡಲಾಗಿತ್ತು ಅದರಲ್ಲಿ ಭಾರತದಿಂದ ಸ್ವತಂತ್ರ ಪ್ರಜೆಯಾಗಿ ಹಾಗೂ *UNHRC* ಗೆ ಭಾರತದಿಂದ ಮೊಟ್ಟ ಮೊದಲು ಆಯ್ಕೆಯಾಗಿರುವುದು ಇಡೀ ದೇಶಕ್ಕೆ ಹೆಮ್ಮೆಯ ವಿಷಯ. ಪ್ರಾಯಶಃ ಅಶ್ವಿನಿ.ಕೆ.ಪಿ ರವರು ದಲಿತರಾಗಿರದೆ ಮೇಲ್ವರ್ಗಕ್ಕೆ ಸೇರಿದ ಮಹಿಳೆಯಾಗಿದ್ದಿದ್ದರೆ ನಮ್ಮ ಜಾತಿವಾದಿ/ ಮಾಧ್ಯಮಗಳು 24 ಗಂಟೆಗಳ ಕಾಲ ಸುದ್ದಿ ಮಾಡುತ್ತಿದ್ದರು.,

ಇನ್ಯಾರದ್ದೋ ವೈಯಕ್ತಿಕ ವಿಷಯಗಳನ್ನು ವಿನಾಕಾರಣ ಚಿತ್ರಿಸುವ/ಪ್ರಕಟಿಸುವ ಈ ಮಾಧ್ಯಮಗಳು ಇಡೀ ಭಾರತವೇ ಹೆಮ್ಮೆ ಪಡಬೇಕಾದ ಇಂಥಹ ವಿಷಯವನ್ನು ಗಣನೆಗೆ ತೆಗೆದುಕೊಳ್ಳದಿರುವುದು ವಿಪರ್ಯಾಸ..

ಭಾರತದ ಬಹುಪಾಲು ಮಾಧ್ಯಮಗಳು ಜಾತಿವಾದಿಗಳ ಕೈಯಲ್ಲಿರುವಾಗ ಇದನ್ನೆಲ್ಲ ನಿರೀಕ್ಷೆ ಮಾಡುವುದೇ ತಪ್ಪು ಎನ್ನುವ ಕಾಲಘಟ್ಟದಲ್ಲಿ ನಾವಿದ್ದೇವೆ. ಸಹೋದರಿ ಅಶ್ವಿನಿ ರವರು ಆಯ್ಕೆಯಾಗಿರುವುದು ವಿಶ್ವ ಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಗೆ ಎನ್ನುವುದನ್ನೂ ಗಮನದಲ್ಲಿಟ್ಟುಕೊಂಡು, ಈ ದೇಶದಲ್ಲಿ ಪರಿಶಿಷ್ಟ ಜಾತಿಗಳನ್ನು/ಪಂಗಡವನ್ನು/ಆದಿವಾಸಿಗಳನ್ನು/ಅಲೆಮಾರಿಗಳನ್ನು ಮಾನವ ಹಕ್ಕುಗಳಿಂದ ವಂಚಿತರನ್ನಾಗಿಸಿ ಅವರು ಮನುಷ್ಯರೇ ಅಲ್ಲ, ಅವರು ಇರುವುದೇ ಸೇವೆ ಮಾಡೋಕೆ, ಜೀತ ಮಾಡೋಕೆ ಎನ್ನುವ ಅಲಿಖಿತ ನಿಯಮವನ್ನು ಸಾವಿರಾರು ವರ್ಷಗಳಿಂದ ಜಾರಿಗೊಳಿಸಿದ್ದ ಜಾತಿ ಆರಾಧಕರೇ ಇಂದು ಇಡೀ ದೇಶದ ಅಧಿಕಾರ ವರ್ಗವಾಗಿ, ಮಾಧ್ಯಮ ವರ್ಗವಾಗಿ, ರಾಜಕೀಯ ರಂಗದಲ್ಲಿ ಚುಕ್ಕಾಣಿ ಹಿಡಿದಿರುವಾಗ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಗೆ ಆಯ್ಕೆಯಾದವರ ಬಗ್ಗೆ ಅವರಿಗೆ ಪ್ರೀತಿಯಾದರೂ ಹೇಗೆ ಬರಬೇಕು.ಬಾಬಾ ಸಾಹೇಬರ ಆಶಯ ಗುರಿಯೊಂದಿಗೆ ಹೆಜ್ಜೆ ಇಡುತಿರುವ ಅಶ್ವಿನಿ ಅವರಿಗೆ ಜೈ ಭೀಮ್.ಪ್ರತಾಪ್ ಛಲವಾದಿ
ದಲಿತ ವಿದ್ಯಾರ್ಥಿ ಪರಿಷತ್ ತಾಲ್ಲೂಕು ಸಂಚಾಲಕರು, ಹಾಗೂ ತಾಲ್ಲೂಕು ಛಲವಾದಿ ಮಹಾ ಸಭಾ ಘಟಕದ ಪ್ರಧಾನಕಾರ್ಯದರ್ಶಿ ಇವರು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ…

ವರದಿ. ಪ್ರತಾಪ್, ಸಿ, ಹರಪನಹಳ್ಳಿ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend