ಮೂಲಭೂತ ಸೌಕರ್ಯ ಈಡೇರಿಸಲು ಇರದ ಪಂಚಾಯಿತಿಯ ಆಡಳಿತವೇಕೆ ಬೇಕು.???

Listen to this article

ಮೂಲಭೂತ ಸೌಕರ್ಯ ಈಡೇರಿಸಲು ಇರದ ಪಂಚಾಯಿತಿಯ ಆಡಳಿತವೇಕೆ ಬೇಕು.???

ಹರಪನಹಳ್ಳಿ ತಾಲೂಕು ತೆಲಿಗಿ ಗ್ರಾಮದ ಸಾರ್ವಜನಿಕ ಪಶುಆಸ್ಪತ್ರೆಯ ಗೇಟ್ ಮತ್ತು ಕಾಂಪೌಂಡ್ ಗಳು ಸಂಪೂರ್ಣ ಹಾಳಾಗಿ ಈ ಪಶು ಆಸ್ಪತ್ರೆಯಲ್ಲಿ ವೈದ್ಯರು ಇಲ್ಲದೇ ಇರುವ ಸಮಯ ಹಾಗೂ ಕಛೇರಿ ಸಮಯ ಮುಗಿದ ಮೇಲೆ ಹಾಗೂ ರಾತ್ರಿ ಸಮಯದಲ್ಲಿ ಅಹಿತಕರ ಚಟುವಟಿಕೆಗಳ ನಡೆಯಲು ಸ್ಪೂರ್ತಿದಾಯಕವಾಗಿದೆ. ಈ ಪಶು ಆಸ್ಪತ್ರೆಯು ಸುಮಾರು 30 ಹಳ್ಳಿಗಳ ಸಂಪರ್ಕವನ್ನು ಹೊಂದಿದ್ದು ಅದೇ ರೀತಿಯಲ್ಲಿ ತೆಲಿಗಿ ಗ್ರಾಮದಲ್ಲಿ ಸುಮಾರು 4500 ಹಸು ಮತ್ತು ಎಮ್ಮೆ ಸೇರಿ ಹಾಗೂ 9500 ಕುರಿ ಮೇಕೆಗಳು ಸೇರಿ ಇಲ್ಲಿನ ವೈದ್ಯಕೀಯ ಉಪಚಾರಕ್ಕೆ ಒಳಪಡುತಿದ್ದು, ಈರೀತಿಯ ಮೂಕ ಪ್ರಾಣಿಗಳ ಆಸ್ಪತ್ರೆಯ ಆವರಣದಲ್ಲಿ ವೈದ್ಯರು ಇರದೇ ಇರುವ ಸಮಯದಲ್ಲಿ ಮತ್ತು ಕಚೇರಿಯ ಅವಧಿ ಮುಗಿದ ನಂತರ ಮದ್ಯಪಾನ, ಧೂಮಪಾನ, ಇಸ್ಪೀಟ್, ಜೂಜಾಟ, ಮುಂತಾದ ಚಟುವಟಿಕೆ ನಡೆಯಲು ಈ ಪಶುಆಸ್ಪತ್ರೆ ಉತ್ತಮವಾಗಿದೆ.

ಕಾಂಪೌಂಡು ಸಂಪೂರ್ಣ ಬಿದ್ದಿರುವುದು ಹಾಗೂ ಮುಂಭಾಗದ ಗೇಟ್ ಸಂಪೂರ್ಣ ಹಾಳಾಗಿದೆ ಸರಿ ಪಡಿಸದೆ ಇರುವ ಕಾರಣ ರಾತ್ರಿ ಸಮಯದಲ್ಲಿ ಇಲ್ಲಿ ಎಲ್ಲಾ ತರಹದ ಚಟುವಟಿಕೆಗಳು ನಡೆಯುತ್ತವೆ.
ಹಾಗೂ ರಾಷ್ಟ್ರೀಯ ಹಬ್ಬ ಮತ್ತು ನಾಡ ಹಬ್ಬಗಳಲ್ಲಿ ಧ್ವಜಾರೋಹಣ ಮಾಡಲು ಧ್ವಜಕಟ್ಟೆ ಇದ್ದು ಇಲ್ಲದಂತೆ ಇದೆ ಇದರ ಸುತ್ತಲೂ ನೀರು ತುಂಬಿ ಕೆಸರು ಗದ್ದೆಯಾಗಿದೆ ದ್ವಜಸ್ಥಂಭವನ್ನು ಕೆಲವೊಂದು ಮೂಲಭೂತ ಸೌಕರ್ಯ ಇಲ್ಲದೆ ಇರವುದು ಸೂಚನೆಯವಾಗಿದೆ.
ಸಮಸ್ಯೆಯನ್ನು ಬಗೆಹರಿಸಲು ಸಾಧ್ಯವಾಗದ್ದಿದ್ದಾರೆ ತೆಲಿಗಿ ಗ್ರಾಮ ಪಂಚಾಯಿತಿ ಆಡಳಿತವೇಕೆ ಬೇಕು????

ಈ ಎಲ್ಲಾ ಸನ್ನಿವೇಶಕ್ಕೆ ಮುಖ್ಯಕಾರಣ ಕಾಂಪೌಂಡ್ ಮತ್ತು ಗೇಟ್ ಇಲ್ದೆ ಇರುವುದು ಎಂದು ತೆಲಿಗಿಗ್ರಾಮದ ಜಿ.ನಾಗರಾಜ ಆರೋಪಿಸಿದ್ದಾರೆ .

ಈ ವಿಚಾರವಾಗಿ ಈ ಪಶು ಆಸ್ಪತ್ರೆಯ ಪಶುವೈದ್ಯಾಧಿಕಾರಿಗಳಾದ ಡಾ॥ ಲಕ್ಷ್ಮಿಪತಿ ಡಿ.ಜೆ ಇವರನ್ನು ಸಂಪರ್ಕಿಸಿದಾಗ ನಾವು ಈಗಾಗಲೇ ಸಾಕಷ್ಟುಬಾರಿ ಪಂಚಾಯಿತಿವರಿಗೆ ಮತ್ತು ಸಂಬಂಧಪಟ್ಟ ಅಧಿಕಾರಿಗಳಿಗೆ ವಿಷಯ ತಿಳಿಸಿದರೂ ಕೂಡ ಸ್ಪಂದಿಸದೇ ಇರುವುದು ವಿಷಾದನೀಯ ಸಂಗತಿ ಎಂದು ತಿಳಿಸಿದ್ದಾರೆ .

ಇವರು ಉತ್ತಮ ಸೇವೆಯನ್ನು ಈ ಒಂದು ಆಸ್ಪತ್ರೆಯಲ್ಲಿ ಸಲ್ಲಿಸುತ್ತಿದ್ದು ಮೂಕ ಪ್ರಾಣಿಗಳ ವೇದನೆ ಅರಿತು ಮನೆಮನೆಯ ವೈದ್ಯರಾಗಿ ಸೇವೆ ಸಲ್ಲಿಸುತ್ತಿರುವುದು ತುಂಬಾ ಸಂತೋಷದ ಸಂಗತಿ ಎಂದು ಕೆಲಹಳ್ಳಿಗಳ ರೈತರು ಗುಸು-ಗುಸು ಮಾತನಾಡುತ್ತಿರುವುದು ಒಂದು ಕಡೆಯಾದರೆ ಈಗ ದನಕರುಗಳಿಗೆ ಚರ್ಮಗಂಟು ರೋಗದ ಹಾವಳಿಯಿಂದ ಹಸು ಕುರಿ ಆಡು ಎತ್ತು ಎಮ್ಮೆಗಳಿಗೂ ಕೂಡ ಹರಡಿ ರೈತರ ಆಧಾರಸ್ತಂಭವಾಗಿರುವ ದನಕರುಗಳು ಈ ರೋಗಕ್ಕೆ ತುತ್ತಾಗಿ ಸಾವನ್ನಪ್ಪುತ್ತಿವೆ.

ಈ ರೀತಿಯ ರೋಗವು ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಔಷದೀಯ ಕೊರತೆ ಇರುವುದನ್ನು ಕಂಡು ಈ ದಿನ ತೆಲಿಗಿಗ್ರಾಮದ ನಿವೃತ್ತ ಪಿಡಬ್ಲೂಡಿ ಗುತ್ತಿಗೆದಾರರು ಹಾಗೂ ರೈತಮುಖಂಡರಾದ ಬಸವರಾಜಪ್ಪ ಪೂಜಾರ, ಕರ್ನಾಟಕ ರಕ್ಷಣಾವೇದಿಕೆಯ ಉಪಾಧ್ಯಕ್ಷ ಜಿ.ನಾಗರಾಜ ರೈತರುಗಳಾದ ಮುತ್ತಿಗಿ ಬಸವರಾಜ, ಚೀಲೂರು ಮಂಜುನಾಥ, ಚಿನಿಗಿರಿ ಹಾಲೇಶ್, ನೀಲಗುಂದ ಚೌಡಪ್ಪ, ಕೃಷ್ಣಾಚಾರಿ ಪ್ರಜಾಕೀಯ, ಮತ್ತಿತರರು ಸೇರಿ ಆಕ್ರೋಶ ವ್ಯಕ್ತಪಡಿಸುತ್ತಾ ವೈಧ್ಯಾಧಿಕಾರಿಗಳಿರುವ ಪಶು ಆಸ್ಪತ್ರೆಗೆ ಭೇಟಿ ನೀಡಿ ನಮ್ಮ ಗ್ರಾಮದಲ್ಲಿ ಸಾರ್ವಜನಿಕ ಆಸ್ಪತ್ರೆಯಲ್ಲಿ ನಮ್ಮ ಗ್ರಾಮಕ್ಕೆ ಬೇಕಾಗುವಷ್ಟು ಔಷಧ ಉಪಾಚಾರ ಇರದೆ ಇರೋದನ್ನ ವೈದ್ಯರಿಂದ ತಿಳಿದು ಸಂಬಂಧಪಟ್ಟ ಮೇಲಾಧಿಕಾರಿಗಳಿಗೆ ದೂರವಾಣಿ ಕರೆಯ ಮೂಲಕ ದೂರನ್ನು ಸಲ್ಲಿಸಿ ಆಕ್ರೋಶ ವ್ಯಕ್ತಪಡಿಸಿರುತ್ತಾರೆ. ನಮ್ಮ ಗ್ರಾಮದಲ್ಲಿ ಔಷಧೋಪಚಾರ ವ್ಯವಸ್ಥೆಯು ಒಂದು ವಾರ ಮುಂಚಿತವಾಗಿ ಸಂಗ್ರಹಣೆಯಾಗಿ ಇರಬೇಕಾಗಿರೋದು ಯಾಕೆ ಇರುವುದಿಲ್ಲ ಎಂದು ಪ್ರಶ್ನಿಸಿರುತ್ತಾರೆ.

ಆಸ್ಪತ್ರೆಯ ಮುಂಭಾಗದಲ್ಲಿ ವಿದ್ಯುತ್ತಿನ ಕಂಬಕ್ಕೆ ವಿದ್ಯುತ್ ದೀಪವನ್ನು ಅಳವಡಿಸಬೇಕು ಏಕೆಂದರೆ ಈ ಆಸ್ಪತ್ರೆಯ ಆಸುಪಾಸಿನಲ್ಲಿ ಸುಮಾರು 36ರಿಂದ 40 ನಾಗರೀಕ ಕುಟುಂಬದ ಜನರು ವಾಸಿಸುವ ಮತ್ತು ಓಡಾಡುವ ಪ್ರದೇಶ ರಾತ್ರಿಯ ಸಮಯದಲ್ಲಿ ಈ ಆಸ್ಪತ್ರೆಯ ಮುಂಭಾಗ ಕತ್ತಲಾಗಿರುವ ಪ್ರಯುಕ್ತ ಮಲಮೂತ್ರ ವಿಸರ್ಜನೆ,ಕ್ರಿಮಿ ಕೀಟಗಳಿಂದ ರಕ್ಷಣೆ ಕಷ್ಟಸಾಧ್ಯ ಆದ್ದರಿಂದ ಈ ಕೂಡಲೇ ಅಲ್ಲಿ ವ್ಯವಸ್ಥೆ ಸರಿಪಡಿವ ಕೆಲಸಕ್ಕೆ ಪಂಚಾಯತಿ ಆಡಳಿತ ಮುಂದಾಗಬೇಕಾಗಿದೆ ಎಂಬುದು ನಮ್ಮ ಆಶಯವಾಗಿದೆ ಈ ವಿಚಾರವಾಗಿ
ಪಂಚಾಯಿತಿ ಅಭಿವೃದ್ದಿ ಅಧಿಕಾರಿ ಸಂಪರ್ಕಿಸಿದಾಗ ಪೋನ್ ಕರೆ ಸ್ವೀಕರಿಸದೇ ಇರುವುದು ವಿಷಾದನೀಯ?ಅವಶ್ಯಕತೆ ಇರುವ ಕಡೆ ವಿದ್ಯತ್ ದೀಪ ಅಳವಡಿಸಿ ಅನವಶ್ಯಕ ಕಡೆ ಅಳವಡಿಸಬೇಡಿ ಎಂದು ತಾಲೂಕು ಪ್ರಧಾನ ಕಾರ್ಯದರ್ಶಿ ವಾಲ್ಮೀಕಿ ನಾಯಕ ಸಮಾಜದ ಜಿ. ನಾಗರಾಜ್ ಆರೋಪಿಸಿದ್ದಾರೆ…

ವರದಿ.ಪ್ರತಾಪ್, ಸಿ, ಹರಪನಹಳ್ಳಿ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend