ಕುತೂಹಲ ಕೆರಳಿಸಿದ್ದ ಸ್ಥಳೀಯ ಪುರಸಭೆ ಕಾಂಗ್ರೆಸ್ ಒಳ ಜಗಳದಿಂದ ಎರಡನೆ ಅವಧಿಗೂ ಕೂಡ ಬಿಜೆಪಿ ವಶವಾಗಿದೆ…!!!

Listen to this article

ಕುತೂಹಲ ಕೆರಳಿಸಿದ್ದ ಸ್ಥಳೀಯ ಪುರಸಭೆ ಕಾಂಗ್ರೆಸ್ ಒಳ ಜಗಳದಿಂದ ಎರಡನೆ ಅವಧಿಗೂ ಕೂಡ ಬಿಜೆಪಿ ವಶವಾಗಿದೆ…….

ಕಾಂಗ್ರೆಸ್ ಪಕ್ಷ ಬಹುಮತ ಸಂಖ್ಯಾಬಲವನ್ನು ಹೊಂದಿದ್ದರೂ ಸಹ ಪಕ್ಷದಲ್ಲಿನ ಬಿನ್ನಾಭಿಪ್ರಾಯದಿಂದ ಬಿಜೆಪಿ ಅಧಿಕಾರಕ್ಕೆ ಬರಲು ಕಾರಣವಾಯಿತು…

ಹರಪನಹಳ್ಳಿ ಪಟ್ಟಣದ ಕಿರ್ವ ಕುತೂಹಲ ಕೆರಳಿಸಿದ್ದ ಸ್ಥಳೀಯ ಪುರಸಭೆ ಕಾಂಗ್ರೆಸ್ ಒಳ ಜಗಳದಿಂದ ಎರಡನೇ ಅವಧಿಗೂ ಕೂಡ ಬಿಜೆಪಿ ಹೊಸವಾಗಿದ್ದು ಅಧ್ಯಕ್ಷರಾಗಿ ಪಟ್ಟಣದ ಐದನೇ ವಾರ್ಡಿನ ಬಿಜೆಪಿ ಸದಸ್ಯ ಎಚ್ಎಂ ಅಶೋಕ್ ಶುಕ್ರವಾರ ನಡೆದ ಚುನಾವಣೆಯಲ್ಲಿ ಆಯ್ಕೆಯಾಗಿದ್ದಾರೆ.

ಪಟ್ಟಣದ ಪುರಸಭೆ ಕಚೇರಿಯಲ್ಲಿ ಅಧ್ಯಕ್ಷರ ಚುನಾವಣೆ ಶುಕ್ರವಾರ ನಡೆದಿದ್ದು. ಅಧ್ಯಕ್ಷ ಸ್ಥಾನ ಬಯಸಿ ಬಿಜೆಪಿ ಅಭ್ಯರ್ಥಿ ಹೆಚ್ ಎಂ ಅಶೋಕ್ ನಾಮಪತ್ರ ಸಲ್ಲಿಸಿದ್ದಾರೆ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಅಬ್ದುಲ್ ರಹಮಾನ್ ಸಾಬ್ ನಾಮಪತ್ರ ಸಲ್ಲಿಸಿದರು.
ಒಟ್ಟು 27 ಸದಸ್ಯರ ಪೈಕಿ 18 ಸದಸ್ಯರು ಹಾಜರಾಗಿದ್ದು, ಈ ಪೈಕಿ ಬಿಜೆಪಿ ಸಂಸದ ಹಾಗೂ ಶಾಸಕರು ಸೇರಿ ಒಟ್ಟು ಹನ್ನೊಂದು ಜನರಿದ್ದು ಕಾಂಗ್ರೆಸ್ನ ಪಕ್ಷೇತರ ಅಭ್ಯರ್ಥಿ ಸೇರಿ ಒಟ್ಟು ಒಂಬತ್ತು ಜನರಿಗೂ ಕಾಂಗ್ರೆಸ್ನ ಎಂಟು ಜನ ಬಿಜೆಪಿ ಒಂದು ಗೈರು ಆಗಿದ್ದರು, ಹಾಜರಿದ್ದ 18 ಸದಸ್ಯರಲ್ಲಿ ೧೧ ಮತಗಳನ್ನು ಪಡೆಯುವ ಮೂಲಕ ಬಿಜೆಪಿ ಮತ್ತು ಎರಡನೇ ಬಾರಿ ಅಧಿಕಾರದ ಚುಕ್ಕಾಣಿ ಹಿಡಿಯಲು ಯಶಸ್ವಿಯಾಯಿತು.
ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಪಕ್ಷ ಬಹುಮತ ಸಂಖ್ಯೆ ಬಲವನ್ನು ಹೊಂದಿದ್ದರು ಸಹ ಪಕ್ಷದಲ್ಲಿನ ಭಿನ್ನಾಭಿಪ್ರಾಯದಿಂದಾಗಿ ಬಿಜೆಪಿ ಅಧಿಕಾರಕ್ಕೆ ಬರಲು ಕಾರಣವಾಯಿತು.
ಶಾಸಕ ಜೀ ಕರುಣಾಕರ ರೆಡ್ಡಿ ಮಾತನಾಡಿ ಚುನಾವಣೆಯಲ್ಲಿ ಬಹುಮತ ಮುಖ್ಯ ಈ ಚುನಾವಣೆಯಲ್ಲಿ ನಮಗೆ ಸದಸ್ಯರ ಬಹುಮತವಿತ್ತು, ಆದ್ದರಿಂದ ಬಿಜೆಪಿಗೆ ಸುಲಭವಾಗಿದೆ ಎಂದು ಅವರ ತಮ್ಮ ಪಕ್ಷದಲ್ಲಿ ಪಕ್ಷದ ಹಾಲಿ ಪುರಸಭೆ ಉಪಾಧ್ಯಕ್ಷರು ಗೈರಾಗಿದ್ದಾರೆ ಎಂಬ ಪ್ರಶ್ನೆಗೆ ಉತ್ತರಿಸಿದವರು ಅದು ನಮಗೆ ಮಾಹಿತಿ ಇಲ್ಲ ಎನ್ನುವ ಮೂಲಕ ಜಾಣವು ನಡೆದರು ಇರುವ ಅವಧಿಯೊಳಗೆ ಪಟ್ಟಣದ ಅಭಿವೃದ್ಧಿಗೆ ಉತ್ತಮ ಆಡಳಿತ ನೀಡಲು ಸಂಸದರು ನಾನು ಬೆಂಬಲ ನೀಡುವುದಾಗಿ ಹೇಳಿದರು.
ಸಂಸದ ಜಿ ಎಂ ಸಿದ್ದೇಶ್ವರ ಚುನಾವಣೆಯಲ್ಲಿ ಭಾಗವಹಿಸಿ ನಂತರ ಮಾತನಾಡಿ ಕಾಂಗ್ರೆಸ್ ವೈಫಲ್ಯವು ವಿಫಲವೋ ಗೊತ್ತಿಲ್ಲ ನಮ್ಮ ಪಕ್ಷ ಮತ್ತೆ ಅಧಿಕಾರಿಕೆ ಬಂದಿರುವುದು ತುಂಬಾ ಸಂತೋಷವನ್ನುಂಟು ಮಾಡಿದೆ ಮೂಲಭೂತ ಸೌಕರ್ಯಗಳಾದ ನೀರು ಚರಂಡಿ ವಿದ್ಯುತ್ ಸೇರಿದಂತೆ ಉತ್ತಮ ಆಡಳಿತ ನೀಡಲಿದೆ ಎಂದರು.
ನೂತನ ಪುರಸಭೆ ಅಧ್ಯಕ್ಷ ಹಾರಾಡು ಅಶೋಕ್ ಮಾತನಾಡಿ ನನಗೆ ಸಂಸದ ಶಾಸಕರ ಮಾರ್ಗದರ್ಶನದಲ್ಲಿ ಪುರ ಪುರಸಭೆ ಸದಸ್ಯರ ಸಹಕಾರದಿಂದ ಅಧ್ಯಕ್ಷರಾಗಿದ್ದು ಪಟ್ಟಣವನ್ನು ಸುಂದರಿಕರಣ ಮಾಡುವುದು ಹಾಗೂ ವಿದ್ಯುತ್ ಚರಂಡಿ ರಸ್ತೆಗಳ ಅಭಿವೃದ್ಧಿ ಸೇರಿದಂತೆ ಮೂಲ ಸೌಕರ್ಯಗಳಿಗೆ ಆದ್ಯತೆ ನೀಡುವುದಾಗಿ ಎಂದ ಅವರು ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.
ಅಧ್ಯಕ್ಷರ ಆಯ್ಕೆ ಘೋಷಣೆ ಮಾಡುತ್ತಿದ್ದಂತೆ ಪುರಸಭೆ ಕಚೇರಿಯ ಹೊರಗೆ ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿ ಅಧ್ಯಕ್ಷರನ್ನು ಒತ್ತು ಸಂಭ್ರಮಾಚರಣೆ ನಡೆಸಿದರು ತಿಳಿಸಿದರು.
ಚುನಾವಣಾ ಅಧಿಕಾರಿ
ತಹಸಿಲ್ದಾರ್ ಡಾಕ್ಟರ್ ಶಿವಕುಮಾರ್ ಬೀರ್ದಾರ್, ಮುಖ್ಯ ಅಧಿಕಾರಿ ಶಿವಕುಮಾರ್ ಎರಗುಡಿ, ಚುನಾವಣಾ ಸಹಾಯಕ ಅಧಿಕಾರಿ ಅರವಿಂದ್, ಡಿವೈಎಸ್ಪಿ ಇ ವಿಎಸ್ ಆಲಮೂರ್ತಿ, ಸಿಪಿಐ ನಾಗರಾಜ್ ಕಮರ್.ಪಿಎಸ್ ಐ ಪ್ರಕಾಶ್ ಸಿ. ಪಿಎಸ್ಐ ಸತೀಶ್ ಸೇರಿದಂತೆ ಪೊಲೀಸ್ ಸಿಬ್ಬಂದಿಗಳು ಹಾಗೂ ಪುರಸಭೆಯ ಸಿಬ್ಬಂದಿ ವರ್ಗದವರು ಇದ್ದರು….

 

ವರದಿ. ಪ್ರತಾಪ್, ಸಿ, ಹರಪನಹಳ್ಳಿ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend