ನಿಮಗೆ ನೆನಪಿರಬಹುದು… ಯುಪಿಎ ಸರಕಾರದ ಭ್ರಷ್ಟಾಚಾರದ ವಿರುದ್ಧ ಅಣ್ಣಾ ಹಜಾರೆ ನೇತೃತ್ವದಲ್ಲಿ ನಡೆದ ಬೃಹತ್ ಆಂದೋಲನ…!!!

Listen to this article

ನಿಮಗೆ ನೆನಪಿರಬಹುದು…
ಯುಪಿಎ ಸರಕಾರದ ಭ್ರಷ್ಟಾಚಾರದ ವಿರುದ್ಧ ಅಣ್ಣಾ ಹಜಾರೆ ನೇತೃತ್ವದಲ್ಲಿ ನಡೆದ ಬೃಹತ್ ಆಂದೋಲನ. ಯಾವ ಪಕ್ಷವಾದರೂ ಸರಿ, ಭ್ರಷ್ಟಾಚಾರದ ವಿರುದ್ಧ ಆಂದೋಲನಕ್ಕೆ ಬೆಂಬಲ ನೀಡಲೇ ಬೇಕು ಎಂದು ಬಹುತೇಕ ಪ್ರಗತಿ ಪರರು ಆ ಆಂದೋಲನದ ಒಳ ರಾಜಕೀಯ ಅರ್ಥ ಮಾಡಿ ಕೊಳ್ಳದೆ ಬೆಂಬಲ ನೀಡಿದ್ದರು. ಇಂದು ಏನಾಯಿತು. ಯು ಪಿ ಎ ಹೋಯಿತು. ಆರೆಸ್ಸೆಸ್ ನೇತೃತ್ವದಲ್ಲಿ ಅದಕ್ಕಿಂತಲೂ ಅಪಾಯಕಾರಿ ಸರಕಾರ ಅಸ್ತಿತ್ವಕ್ಕೆ ಬಂತು. ಭ್ರಷ್ಟಾಚಾರ ದುಪ್ಪಟ್ಟು ಆಯಿತು. ಪ್ರಜಾಸತ್ತೆ ಸರ್ವ ನಾಶ ಆಯಿತು. ದೇಶ ದಿವಾಳಿ ಆಯಿತು.

ರಾಜ್ಯದಲ್ಲಿ ಇದು ಪುನರಾವರ್ತನೆ ಆಗುತ್ತಿದೆ.
ಸದ್ಯದ ರಾಜಕೀಯ ಬೆಳವಣಿಗೆ ಭ್ರಷ್ಟ ಯಡಿಯೂರಪ್ಪರನ್ನು ಹೊರಗಿಡಲು ನಡೆಯುತ್ತಿರುವ ಪ್ರಯತ್ನ ಎಂದು ಪ್ರಗತಿ ಪರರೂ ನಂಬಿದ್ದಾರೆ. ಬೆಂಬಲವನ್ನೂ ನೀಡುತ್ತಿದ್ದಾರೆ. ರಾಜ್ಯವನ್ನು ಆರೆಸ್ಸೆಸ್ ಸಂಪೂರ್ಣ ತನ್ನ ಕೈವಶ ಮಾಡಲು ನಡೆಸುತ್ತಿರುವ ಕಾರ್ಯಾಚರಣೆ ಎಂದು ಯಾರಿಗೂ ಅನ್ನಿಸುತ್ತಿಲ್ಲ.
ರಾಜ್ಯದ ಇಂದಿನ ಸ್ಥಿತಿ -ಗತಿಗೆ, ಭ್ರಷ್ಟಾಚಾರಕ್ಕೆ ಬಿಜೆಪಿ ಕಾರಣ ಅಲ್ಲ, ಯಡಿಯೂರಪ್ಪ ಕಾರಣ ಎನ್ನುವುದನ್ನು ಜನರ ಮನದಲ್ಲಿ ಬಿತ್ತುವಲ್ಲಿ ಮಾಧ್ಯಮ ಯಶಸ್ವಿ ಆಗಿದೆ. ಮತ್ತು ಯಡಿಯೂರಪ್ಪ ತೊಲಗಿ ಹೊಸ ಯುವ ಮುಖಗಳಿಗೆ ಅವಕಾಶ ಮಾಡುವ ಮೂಲಕ ಬಿಜೆಪಿಯೊಳಗೆ ಸುಧಾರಣೆ ಮಾಡಲಾಗುತ್ತದೆ . ಮತ್ತು ಮುಂದಿನ ಚುನಾವಣೆಯಲ್ಲಿ “ಈಗ ಯಡಿಯೂರಪ್ಪ ತಂಡವಿಲ್ಲ . ಮುಂದೆ ಎಲ್ಲ ಸರಿಯಾಗಲಿದೆ ” ಎನ್ನುತ್ತಾ ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೆ ಬರಲಿದೆ. ಯಡಿಯೂರಪ್ಪ ಶೆಟ್ಟರ್ ಅವರಿರುವ ಜಾಗದಲ್ಲಿ ಜೋಶಿ, ತೇಜಸ್ವಿ, ಸಂತೋಷ್ ಮುನ್ನೆಲೆಗೆ ಬರಲಿದ್ದಾರೆ. ಇಷ್ಟೇ ನಡೆಯುವುದು. ಲಿಂಗಾಯತ ಸ್ವಾಮೀಜಿಗಳ ಜಾಗವನ್ನು ಆರೆಸ್ಸೆಸ್ ಆಕ್ರಮಿಸಿ ಕೊಳ್ಳುತ್ತದೆ. ಉತ್ತರಭಾರತ ಈ ಮೂಲಕ ಪೂರ್ಣ ಪ್ರಮಾಣದಲ್ಲಿ ಕರ್ನಾಟಕದ ಸೂತ್ರವನ್ನು ಕೈಗೆತ್ತಿ ಕೊಳ್ಳುತ್ತದೆ. ವ್ಯತ್ಯಾಸ ಇಷ್ಟೇ.

ಲಿಂಗಾಯತ ಸ್ವಾಮೀಜಿಗಳು ಕರ್ನಾಟಕದ ಪ್ರಮುಖ ಐಡೆಂಟಿಟಿ ಗಳಲ್ಲಿ ಒಂದು ಎನ್ನುವುದನ್ನು ಅವರನ್ನು ಟೀಕಿಸುವ ಕನ್ನಡಿಗರು ಮರೆಯ ಬಾರದು..

ವರದಿ. ಪ್ರತಾಪ್, ಸಿ, ಹರಪನಹಳ್ಳಿ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend