ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರ್ಕಾರ ಕೆಟ್ಟ ಆರ್ಥಿಕ ನೀತಿಗಳು, ಹಾಗೂ ಬಡ ಕುಟುಂಬಗಳು,ಬದನಿರುದ್ಯೋಗ ವಿರೋಧಿ ಸರ್ಕಾರ,…???

Listen to this article

ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರ್ಕಾರ ಕೆಟ್ಟ ಆರ್ಥಿಕ ನೀತಿಗಳು, ಹಾಗೂ ಬಡ ಕುಟುಂಬಗಳು,ಬದನಿರುದ್ಯೋಗ ವಿರೋಧಿ ಸರ್ಕಾರ,……?

ಕೇಂದ್ರ ಮತ್ತು ರಾಜ್ಯ ಬಿಜೆಪಿ ಪಕ್ಷ ಕೇವಲ ಉಳ್ಳವರ ಪರ ಕಡತಗಳನ್ನು ಮಂಡಿಸುತ್ತ ಜನ ಪರ ಯೋಜನೆಯನ್ನು ಮರೆತ ಸರ್ಕಾರ

ಯೋಜಿತವಲ್ಲದ ಲಾಕ್‌ಡೌನ್‌ನಿಂದಾಗಿ ಆರ್ಥಿಕ ಕುಸಿತ, ನಿರುದ್ಯೋಗ, ಉದ್ಯೋಗ ಕಡಿತ, ಬೆಲೆ ಏರಿಕೆ, ಬಡತನ ಹಾಗೂ ಅಪೌಷ್ಟಿಕತೆ ಹೆಚ್ಚಾಗಿದೆ. ಬಡವರು ತೀವ್ರ ಆರ್ಥಿಕ ಸಂಕಷ್ಟದಲ್ಲಿದ್ದಾರೆ. ಅಲ್ಲದೇ ಅಕಾಲಿಕವಾಗಿ ಸುರಿದ ಮಳೆಯಿಂದಾಗಿ ರೈತರ ಬೆಳೆ ನೀರುಪಾಲಾಗಿ ರೈತರು ಕಂಗಾಲಾಗಿದ್ದಾರೆ. ಇಂಥ ಬಿಕ್ಕಟ್ಟಿನ ಸಮಯಲ್ಲಿ ರಾಜ್ಯದ ಬಡವರ ಹಸಿವು ನೀಗಿಸಲು ಸರ್ಕಾರ ಯಾವುದೇ ಜನಪರ ಕಾರ್ಯಕ್ರಮಗಳನ್ನು ರೂಪಿಸಲಿಲ್ಲ.

ಬದಲಿಗೆ ಅಧಿಕಾರಕ್ಕೆ ಬಂದ ಮೇಲೆ ಜನವಿರೋಧಿ ವರಸೆಗಳನ್ನು ಆರಂಭಿಸಿದರು.

▪️ ಬೈಕ್, ಟಿವಿ ಇದ್ದವರಿಗೆ ಬಿಪಿಎಲ್ ಕಾರ್ಡ್ ಕೊಡುವುದಿಲ್ಲ, ಬೈಕ್, ಟಿವಿ ಇರುವವರು ಕಡು ಬಡವರಾಗಿರುವುದಿಲ್ಲ ಎಂದು ಹೇಳಿತು.

▪️ ಸಿದ್ದರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರ ಬಡವರಿಗೆ ಅನ್ನಭಾಗ್ಯ ಯೋಜನೆಯಡಿ 7ಕೆ.ಜಿ ಅಕ್ಕಿ ಕೊಟ್ಟರೆ ಬಿಜೆಪಿ ಅದನ್ನು ಮೊದಲು 5 ಕೆ.ಜಿ ನಂತರ 3 ಕೆ.ಜಿ ಗೆ ಇಳಿಸಿತು.

▪️ ಕೋವಿಡ್ ಬಿಕ್ಕಟ್ಟಿನ ಸಮಯದಲ್ಲಿ ಅನ್ನಭಾಗ್ಯ ಯೋಜನೆಯಡಿ 10 ಕೆ.ಜಿ ಅಕ್ಕಿ ಕೊಡಿ, ಇಲ್ಲದಿದ್ದರೆ ನಮ್ಮ ಕುಟುಂಬ ಹಸಿವಿನಿಂದ ಸಾಯಬೇಕಾಗುತ್ತದೆ ಎಂದು ಹೇಳಿದಾಗ ಆಹಾರ ಸಚಿವ ಉಮೇಶ್ ಕತ್ತಿ ಅವರು ‘ಹೋಗಿ ಸಾಯಿರಿ’ ಎಂದು ಹೇಳಿದರು.

2017-21ರವರೆಗೆ ಬಿಪಿಎಲ್‌ ಕಾರ್ಡ್‌ಗಾಗಿ ರಾಜ್ಯಾದ್ಯಂತ 39,02,745 ಅರ್ಜಿ ಸಲ್ಲಿಕೆಯಾಗಿದ್ದು, 34,97,529 ಅರ್ಜಿ ವಿಲೇಯಾಗಿವೆ. 4,05,216 ಬಾಕಿ ಉಳಿದಿವೆ. ಅನರ್ಹರ ಪತ್ತೆಯ ಬಳಿಕವೇ ಹೊಸ ಬಿಪಿಎಲ್ ಕಾರ್ಡ್ ವಿತರಿಸುವುದಾಗಿ ಹೇಳುತ್ತಿದೆ. ಅನರ್ಹ ಫಲಾನುಭವಿಗಳನ್ನು ಪತ್ತೆ ಹಚ್ಚುವುದು ಸರ್ಕಾರಸರ್ಕಾರದ ಕೆಲಸ. ಇದಕ್ಕಾಗಿ ಅವರ ಬಳಿ ಅಧಿಕಾರವಿದೆ, ಇಡೀ ಆಡಳಿತ ಯಂತ್ರವೇ ಇದೆ. ಅದನ್ನು ಬಳಸಿಕೊಂಡು ಅನರ್ಹರನ್ನು ಗುರುತಿಸಿ ಆ ಬಳಿಕ ಬೇಕಿದ್ದರೆ ಅಂಥವರ ಕಾರ್ಡುಗಳನ್ನು ರದ್ದು ಮಾಡಿಕೊಳ್ಳಲಿ. ಆದರೆ, ಅನರ್ಹರು ಬಂದು ಕಾರ್ಡು ಕೊಟ್ಟು ಹೋಗುವವರೆಗೂ ಬಿಜೆಪಿ ಸರ್ಕಾರ ಕಾದು ಕುಳಿತರೆ ಅರ್ಹ ಫಲಾನುಭವಿಗಳ ಸ್ಥಿತಿ ಏನಾಗಬೇಕು? ಬಡವರು ಏನು ಊಟ ಮಾಡಬೇಕು? ಈ ರೀತಿ ಅಸಡ್ಡೆಯಿಂದ ನಡೆದುಕೊಳ್ಳುವುದನ್ನು ನಿಲ್ಲಿಸಿ ಮೊದಲು ಬಾಕಿ ಉಳಿದಿರುವ 4 ಲಕ್ಷ ಅರ್ಜಿಗಳನ್ನು ಇತ್ಯರ್ಥಗೊಳಿಸಿ ಬಿಪಿಎಲ್ ಕಾರ್ಡ್ ವಿತರಿಸಿ.

*ಶ್ರೀಮತಿ ಎಂ ಪಿ ವೀಣಾ ಮಹಾಂತೇಶ್ ಮಾಧ್ಯಮ ವಿಶ್ಲೇಷಕರು ಕೆ ಪಿ ಸಿ ಸಿ ಬಳ್ಳಾರಿ ಹರಪನಹಳ್ಳಿ ವಿಧಾನಸಭಾ ಕ್ಷೇತ್ರ.ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರ್ಕಾರ ಕೆಟ್ಟ ಆರ್ಥಿಕ ನೀತಿಗಳು, ಹಾಗೂ ಬಡ ಕುಟುಂಬಗಳು,ಬದನಿರುದ್ಯೋಗ ವಿರೋಧಿ ಸರ್ಕಾರ,……?

ಕೇಂದ್ರ ಮತ್ತು ರಾಜ್ಯ ಬಿಜೆಪಿ ಪಕ್ಷ ಕೇವಲ ಉಳ್ಳವರ ಪರ ಕಡತಗಳನ್ನು ಮಂಡಿಸುತ್ತ ಜನ ಪರ ಯೋಜನೆಯನ್ನು ಮರೆತ ಸರ್ಕಾರ

ಯೋಜಿತವಲ್ಲದ ಲಾಕ್‌ಡೌನ್‌ನಿಂದಾಗಿ ಆರ್ಥಿಕ ಕುಸಿತ, ನಿರುದ್ಯೋಗ, ಉದ್ಯೋಗ ಕಡಿತ, ಬೆಲೆ ಏರಿಕೆ, ಬಡತನ ಹಾಗೂ ಅಪೌಷ್ಟಿಕತೆ ಹೆಚ್ಚಾಗಿದೆ. ಬಡವರು ತೀವ್ರ ಆರ್ಥಿಕ ಸಂಕಷ್ಟದಲ್ಲಿದ್ದಾರೆ. ಅಲ್ಲದೇ ಅಕಾಲಿಕವಾಗಿ ಸುರಿದ ಮಳೆಯಿಂದಾಗಿ ರೈತರ ಬೆಳೆ ನೀರುಪಾಲಾಗಿ ರೈತರು ಕಂಗಾಲಾಗಿದ್ದಾರೆ. ಇಂಥ ಬಿಕ್ಕಟ್ಟಿನ ಸಮಯಲ್ಲಿ ರಾಜ್ಯದ ಬಡವರ ಹಸಿವು ನೀಗಿಸಲು ಸರ್ಕಾರ ಯಾವುದೇ ಜನಪರ ಕಾರ್ಯಕ್ರಮಗಳನ್ನು ರೂಪಿಸಲಿಲ್ಲ.

ಬದಲಿಗೆ ಅಧಿಕಾರಕ್ಕೆ ಬಂದ ಮೇಲೆ ಜನವಿರೋಧಿ ವರಸೆಗಳನ್ನು ಆರಂಭಿಸಿದರು.

▪️ ಬೈಕ್, ಟಿವಿ ಇದ್ದವರಿಗೆ ಬಿಪಿಎಲ್ ಕಾರ್ಡ್ ಕೊಡುವುದಿಲ್ಲ, ಬೈಕ್, ಟಿವಿ ಇರುವವರು ಕಡು ಬಡವರಾಗಿರುವುದಿಲ್ಲ ಎಂದು ಹೇಳಿತು.

▪️ ಸಿದ್ದರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರ ಬಡವರಿಗೆ ಅನ್ನಭಾಗ್ಯ ಯೋಜನೆಯಡಿ 7ಕೆ.ಜಿ ಅಕ್ಕಿ ಕೊಟ್ಟರೆ ಬಿಜೆಪಿ ಅದನ್ನು ಮೊದಲು 5 ಕೆ.ಜಿ ನಂತರ 3 ಕೆ.ಜಿ ಗೆ ಇಳಿಸಿತು.

▪️ ಕೋವಿಡ್ ಬಿಕ್ಕಟ್ಟಿನ ಸಮಯದಲ್ಲಿ ಅನ್ನಭಾಗ್ಯ ಯೋಜನೆಯಡಿ 10 ಕೆ.ಜಿ ಅಕ್ಕಿ ಕೊಡಿ, ಇಲ್ಲದಿದ್ದರೆ ನಮ್ಮ ಕುಟುಂಬ ಹಸಿವಿನಿಂದ ಸಾಯಬೇಕಾಗುತ್ತದೆ ಎಂದು ಹೇಳಿದಾಗ ಆಹಾರ ಸಚಿವ ಉಮೇಶ್ ಕತ್ತಿ ಅವರು ‘ಹೋಗಿ ಸಾಯಿರಿ’ ಎಂದು ಹೇಳಿದರು.

2017-21ರವರೆಗೆ ಬಿಪಿಎಲ್‌ ಕಾರ್ಡ್‌ಗಾಗಿ ರಾಜ್ಯಾದ್ಯಂತ 39,02,745 ಅರ್ಜಿ ಸಲ್ಲಿಕೆಯಾಗಿದ್ದು, 34,97,529 ಅರ್ಜಿ ವಿಲೇಯಾಗಿವೆ. 4,05,216 ಬಾಕಿ ಉಳಿದಿವೆ. ಅನರ್ಹರ ಪತ್ತೆಯ ಬಳಿಕವೇ ಹೊಸ ಬಿಪಿಎಲ್ ಕಾರ್ಡ್ ವಿತರಿಸುವುದಾಗಿ ಹೇಳುತ್ತಿದೆ. ಅನರ್ಹ ಫಲಾನುಭವಿಗಳನ್ನು ಪತ್ತೆ ಹಚ್ಚುವುದು ಸರ್ಕಾರಸರ್ಕಾರದ ಕೆಲಸ. ಇದಕ್ಕಾಗಿ ಅವರ ಬಳಿ ಅಧಿಕಾರವಿದೆ, ಇಡೀ ಆಡಳಿತ ಯಂತ್ರವೇ ಇದೆ. ಅದನ್ನು ಬಳಸಿಕೊಂಡು ಅನರ್ಹರನ್ನು ಗುರುತಿಸಿ ಆ ಬಳಿಕ ಬೇಕಿದ್ದರೆ ಅಂಥವರ ಕಾರ್ಡುಗಳನ್ನು ರದ್ದು ಮಾಡಿಕೊಳ್ಳಲಿ. ಆದರೆ, ಅನರ್ಹರು ಬಂದು ಕಾರ್ಡು ಕೊಟ್ಟು ಹೋಗುವವರೆಗೂ ಬಿಜೆಪಿ ಸರ್ಕಾರ ಕಾದು ಕುಳಿತರೆ ಅರ್ಹ ಫಲಾನುಭವಿಗಳ ಸ್ಥಿತಿ ಏನಾಗಬೇಕು? ಬಡವರು ಏನು ಊಟ ಮಾಡಬೇಕು? ಈ ರೀತಿ ಅಸಡ್ಡೆಯಿಂದ ನಡೆದುಕೊಳ್ಳುವುದನ್ನು ನಿಲ್ಲಿಸಿ ಮೊದಲು ಬಾಕಿ ಉಳಿದಿರುವ 4 ಲಕ್ಷ ಅರ್ಜಿಗಳನ್ನು ಇತ್ಯರ್ಥಗೊಳಿಸಿ ಬಿಪಿಎಲ್ ಕಾರ್ಡ್ ವಿತರಿಸಿ.

ಶ್ರೀಮತಿ ಎಂ ಪಿ ವೀಣಾ ಮಹಾಂತೇಶ್ ಮಾಧ್ಯಮ ವಿಶ್ಲೇಷಕರು ಕೆ ಪಿ ಸಿ ಸಿ ಬಳ್ಳಾರಿ ಹರಪನಹಳ್ಳಿ ವಿಧಾನಸಭಾ ಕ್ಷೇತ್ರ.

ವರದಿ. ಪ್ರತಾಪ್, ಸಿ, ಹರಪನಹಳ್ಳಿ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend