ಕೇಂದ್ರ ಸರ್ಕಾರ ರೂಪಿಸಿರುವ ಶಾಸನಗಳು, ರೈತರ ಮರಣ ಶಾಸನಗಳು

Listen to this article
ವರದಿ. ಧನಂಜಯ್ ಹಡಗಲಿ
ಕೇಂದ್ರ ಸರ್ಕಾರ ರೂಪಿಸಿದ ಶಾಸನಗಳು ರೈತರ ಮರಣ ಶಾಸನಗಳು
ಹೂವಿನಹಡಗಲಿ: ಪಟ್ಟಣದಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಜನಶಕ್ತಿ ಸಂಘಟನೆಯ ಪುರುಷೋತ್ತಮ ಅವರು “ಕೇಂದ್ರ ಸರ್ಕಾರ ರೂಪಿಸಿದ ಶಾಸನಗಳು ರೈತರ ಪರಮ ಶತ್ರುಗಳು. ಕೇಂದ್ರ ಸರ್ಕಾರ ರೂಪಿಸಿದ ಶಾಸನಗಳು ರೈತರ ಮರಣ ಶಾಸನಗಳು. ರೈತರಿಗೆ, ಕಾರ್ಮಿಕರಿಗೆ ಬೇಡವಾದ ಕಾನೂನು ರೂಪಿಸಿ ಜಾರಿಗೆ ತರಲು ಮುಂದಾಗಿರುವ ಅವರ ಸಾಧನೆ ಏನಿದೆ? ರೈತರು ಈ ದೇಶದ ಸಂಪತ್ತು, ರೈತ ದೇಶದ ಬೆನ್ನೆಲುಬು, ನೀರಾವರಿ ಮಾಡುವ ರೈತರು, ಉಚಿತ ವಿದ್ಯುತ್ ಉಪಯೋಗಿಸುತ್ತಿದ್ದರು. ಆದರೆ ಇನ್ನೂ ಮುಂದೆ ಬಿಲ್ ಕಟ್ಟಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತದೆ.                                ರೈತರಿಗೆ ಸರ್ಕಾರಗಳು ಅನುಕೂಲ ಆಗುವಂತೆ ಶಾಸನ ರಚಿಸಬೇಕೆ ಹೊರತು, ಈ ರೀತಿ ರೈತರ ಗೋಣು ಹಿಚುಕುವಲ್ಲಿ ನಿರತರಾಗಿರುವ ಸರ್ಕಾರಗಳ ಕ್ರಮ ಸರಿಯಲ್ಲ ಎಂದು ಹೇಳಿದರು.                         ಎ.ಐ.ಟಿ.ಯು.ಸಿ ತಾಲೂಕು ಸಂಚಾಲಕ  ಶಾಂತರಾಜ್ ಜೈನ್ ಮಾತನಾಡಿ “ಇಂದಿನ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ, ಸರ್ಕಾರ ರೂಪಿಸುತ್ತಿರುವ ಕಾನೂನುಗಳು ರೈತರ ಪರ ಇಲ್ಲವೆಂಬ ನೋವು ರೈತ ವರ್ಗದಲ್ಲಿ ತುಂಬಿದ್ದು, ಇಂತಹ ರೈತ ಮರಣ ಶಾಸನಗಳನ್ನು ಜಾರಿಗೆ ತರದೇ,ರೈತರಿಗೆ ಅನುಕೂಲ ಆಗುವ ಕಾನೂನು ಜಾರಿಗೆ ತಂದಿದ್ದರೆ, ರೈತ ವರ್ಗಕ್ಕೆ ಉತ್ತಮವಾಗುತ್ತಿತ್ತು ಎಂದು ಹೇಳಿದರು.”                      ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಹಸಿರು ಸೇನೆ ರೈತ ಸಂಘದ ಉಪಾಧ್ಯಕ್ಷ ಅಂಬಣ್ಣ ಹಾಗೂ ಕೃಷ್ಣಪ್ಪ ಸೊಪ್ಪಿನ ಇತರರು ಜನವರಿ ತಿಂಗಳ 26 ಗಣರಾಜ್ಯೋತ್ಸವ ಪೆರೇಡ್ ನಲ್ಲಿ ರೈತ ಸಂಘದ ಪರವಾಗಿ ಹೋರಾಡುತ್ತೇವೆಂದು ಪತ್ರಿಕೆ ಹೇಳಿಕೆ ನೀಡಿದರು.
Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend