ಲೋಕಾಯುಕ್ತ ಅಧಿಕಾರಿಗಳಿಗೆ, ಲಾಕ್ ಆದ ವಿದ್ಯುತ್ ಇಲಾಖೆಯ ಲಂಚಾಧಿಕಾರಿ…!!!

Listen to this article

‍ಎಸ್ ಪಿ ಪುರುಷೋತ್ತಮ್ ಕರ್ನಾಟಕ ಲೋಕಾಯುಕ್ತ .ಡಿ.ಎಸ್. ಪಿ .ಅಯ್ಯನಗೌಡ ಪಾಟೀಲ್ ಮತ್ತು ರಾಜೇಶ ಲಮಾಣಿ ಸುರೇಶ್ ಬಾಬು ವಿಜಯನಗರ ಬಳ್ಳಾರಿ ಜಂಟಿ ಲೋಕಾಯುಕ್ತ ಕಚೇರಿ ಎ.ಎಸ್ ಐ ಆಯುಜ ಗೋವಿಂದರಾಜು ಶರತ್ ಬಾಬು ರೇಣುಕಪ್ಪ ಹನುಮಂತಪ್ಪ ಸಿಬ್ಬಂದಿ ಉಪಸ್ಥಿತರಿದ್ದರು,

ಹಗರಿಬೊಮ್ಮನಹಳ್ಳಿ ತಾಲೂಕಿನಲ್ಲೊಂದು ಅಮಾನವೀಯ ಘಟನೆ, ವಿದ್ಯುತ್ ಪರಿವರ್ತಕವನ್ನು ಅಳವಡಿಸಿಕೊಡಲು ಲಂಚವೆಂಬ ಬಹುಮಾನವನ್ನು ಬೇಡಿಕೆಯಿಟ್ಟ ಭ್ರಷ್ಟ, ಜೇಸ್ಕಾಂ ಅಧಿಕಾರಿಗಳು ಯಾಕೆ ಈ ಭ್ರಷ್ಟರಿಗೆ ಸರ್ಕಾರದ ಸಂಬಳ ಸಾಕಾಗಲ್ವ, ಇನ್ನೆಷ್ಟು ಬೇಕು ಇವರ ಹೊಟ್ಟೆತುಂಬಿಸಲು ಸರ್ಕಾರದ ಸಂಬಳ ನಾಚಿಕೆಯಾಗಬೇಕು ಇಂತಹ ಭ್ರಷ್ಟರಿಗೆ ಏಳಿ ಕೇಳಿ ಬರಪೀಡಿತ ತಾಲೂಕಿನಲ್ಲಿ ಅಲ್ಲಿನ ರೈತರು ತಮ್ಮ ಒಂದು ಕುಟುಂಬವನ್ನು ಸಲಹಲು ಹಗಲಿರಿಳು.
ಮಳೆ, ಚಳಿ, ಬಿಸಿಲು, ಗಾಳಿ, ಎಲ್ಲವನ್ನು ಮರೆತು ತಮ್ಮ ಒಂದು ಕುಟುಂಬವನ್ನು ಸಲಹಲು ಕಷ್ಟಪಟ್ಟು ದುಡಿಯುತ್ತಾರೆ ಅಂತಹ ಬಡಪಾಯಿಗಳಿಂದ “ಲಂಚ “ತೆಗೆದುಕೊಂಡು ತಮ್ಮ ಒಂದು ಕುಟುಂಬದವರನ್ನು ಖುಷಿಯಿಂದ ಸಾಕುವುದು ಎಷ್ಟು ಸರಿ “ಇಡೀ “ಸರ್ಕಾರಿ ನೌಕರಿಯಲ್ಲಿ ಹೆಚ್ಚಿನ ಸಂಬಳವನ್ನು ತೆಗೆದುಕೊಳ್ಳುವ ಇಲಾಖೆ ಅಂದರೆ ಆದೆ ವಿದ್ಯುತ್ ಇಲಾಖೆ, ಸರ್ಕಾರ ಕೊಡಲಿ ಅವರ ಕಷ್ಟವು ಸಹ ಅಷ್ಟೇ ಇದೆ ತಮ್ಮ ಪ್ರಾಣವನ್ನು ಒತ್ತೆ ಇಟ್ಟು ನಾಡಿಗೇ ಬೆಳಕನ್ನು ಕೊಡುವ ಭಾಗ್ಯವಂತರು ಈ ಇಲಾಖೆಯ ಸಿಬ್ಬಂದಿಗಳು “ಅವರಿಗೆ ನಮ್ಮ ಒಂದು ಪತ್ರಿಕಾ ತಂಡದಿಂದ ಅಂತವರಿಗೆ ನಮ್ಮದೊಂದು ಸಲಾಂ “.
ಅದನ್ನು ಬಿಟ್ಟು ತಮ್ಮ ಹಣದ ದಾಹವನ್ನು ತೀರಿಸಿಕೊಳ್ಳಲು ಬಡ ರೈತರ ಬದುಕಲ್ಲಿ ಆಟವನ್ನು ಆಡುವುದು ಎಷ್ಟು ಸರಿ ಈ ಇಲಾಖೆಯ ಕೆಲವು ಭ್ರಷ್ಟ ಅಧಿಕಾರಿಗಳು ಇವರಿಗೇನು ಸರ್ಕಾರ ಸರಿಯಾದ ಸಮಯದಲ್ಲಿ ಸಂಬಳ ಕೊಡುವುದಿಲ್ಲವೋ, ಯಾಕೆ “ಇಂಧನ “ಸಚಿವರಿಗೆ ನಿಮ್ಮ ಒಂದು ವಿಧಾನ ಪರಿಷತ್ತಿನಲ್ಲಿ ಅತೀ ಆದಾಯವುಳ್ಳ ಇಲಾಖೆ ವಿದ್ಯುತ್ ಇಲಾಖೆ ಅದನ್ನು ಬಡವರಿಗೆ ಕರೆಂಟ್ ಶಾಕ್ ಕೊಡುವುದು ಎಷ್ಟು ಸರಿ ನಿವೇ ಹೇಳಿ.
ಸುಮಾರು 3,4ವರ್ಷಗಳಿಂದ ರೈತರು ಹಾಕಿದ ಬಂಡವಾಳವನ್ನು ತೆಗೆದು ಕೊಳ್ಳದೆ ಸಾಲ, ಸೂಲಾ ಮಾಡಿ ಜೀವನವನ್ನು ನಡೆಸುತ್ತಿದ್ದಾರೆ ಅಂತಹ ಸಂದರ್ಭದಲ್ಲಿ ನಿಮ್ಮ ಇಲಾಖೆಯ ಕೆಲವು ಭ್ರಷ್ಟ ಅಧಿಕಾರಿಗಳಿಗೆ ವಿದ್ಯುತ್ ಪರಿವರ್ತಕ ಅಳವಡಿಸಲು ಲಂಚ ಕೊಡಬೇಕು, ಕಂಬಗಳನ್ನು ಹಾಕಲು ಅನುಮತಿ ಪಡೆಯಲು ಲಂಚ ಕೊಡಬೇಕು ಅಂದರೆ ಬಡ ರೈತರು ಎಲ್ಲಿ ಹೋಗಿ ಸಾಯಬೇಕು ನಿವೇ ಉತ್ತರ ಕೊಡಿ ಮಾತಿಗೆ ಮಾತ್ರ” ನಮ್ಮ ನಡೆ ಅಭಿವೃದ್ಧಿಯ ಕಡೆ “ಯಾರು ಅಭಿವೃದ್ಧಿ ಆಗುತ್ತಿದ್ದಾರೆ ಇಲ್ಲಿ ಭ್ರಷ್ಟ ಅಧಿಕಾರಿಗಳ???.
ನಿವೇ ಉತ್ತರ ಕೊಡಿ ಇಂತವರಿಗೆ ಏನೂ ಮಾಡಬೇಕು ಹೇಳಿ ನಿಮ್ಮ ಕೈಯಲ್ಲಿ ಇಂತವರಿಗೆ ಶಿಕ್ಷೆ ಕೊಡಿಸಲು ಆಗಲ್ಲ ಬಿಡಿ ಅದಕ್ಕೋಸ್ಕರ ರೈತರೇ ಸರಿಯಾದ ದಾರಿಯನ್ನು ಹುಡುಕಿ, ಲೋಕಾಯುಕ್ತ ಅಧಿಕಾರಿಗಳಿಗೆ ದೂರು ಕೊಟ್ಟು ಸರಿಯಾದ ಕ್ರಮವನ್ನು ತೆಗೆದುಕೊಂಡಿದ್ದಾರೆ ಇವರ ಕಾರ್ಯಕ್ಕೆ ಶಭಾಷ್ ಗಿರಿ ಕೊಡಲೇ ಬೇಕು, ಬೇಕಾ ಬಿಟ್ಟಿ ಮೀಟರ್ ಬಿಲ್ ಬರೆಯುವುದು ತನಗಿಷ್ಟ ಬಂದಂತೆ ರಶೀದಿ ಹಾಕಲು ನಿಮ್ಮ ಸರ್ಕಾರ ಅನುಮತಿಯನ್ನು ಇಂತಹ ಭ್ರಷ್ಟರಿಗೆ ಕೊಟ್ಟಿದೆಯಾ ಎಂತಹ ಆಡಳಿತ ವ್ಯವಸ್ಥೆಯಲ್ಲಿ ನಮ್ಮ ರಾಜ್ಯದ ಜನ ಬದುಕುತ್ತಿದ್ದಾರೆ.
ಇದನ್ನೆಲ್ಲಾ ಕೆಳಲು ಇಲ್ಲಿನ ಶಾಸಕರಿಗೆ ಕಣ್ಣು ಕಾಣಿಸಲ್ವಾ ಅಥವಾ ಮತ್ತೇನಾದ್ರು!!!ಇದೆಯಾ ಹೇಳಿ ಇಲ್ಲದಿದ್ದರೆ ರಾಜ್ಯದಲ್ಲಿ ಜೇಸ್ಕಾಂ ಇಲಾಖೆ ಸರಿಯಾದ ರೀತಿಯಲ್ಲಿ ಕಾರ್ಯವನ್ನು ನಿರ್ವಹಿಸುತ್ತಿಲ್ಲ ಎನ್ನುವ ಕೊಗು ಆಗಲೇ ಎಲ್ಲಾ ಕಡೆ ಕೇಳಿ ಬರುತ್ತಿದೆ, ಇವತ್ತು ಒಂದು ಗ್ರಾಮದಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡರೆ ಆ ಗ್ರಾಮಕ್ಕೆ ದೇವರ ದೀಪವೆ ಗತಿ ಎನ್ನುತ್ತಾರೆ ಕೆಲವು ಸಾರ್ವಜನಿಕರು ಯಾಕೆ ಇಲ್ಲಿರುವ ಮೇಲಾಧಿಕಾರಿಗಳು ಕಣ್ಣು ಮುಚ್ಚಿಕೊಂಡು ಕುಳಿತ್ತಿದ್ದಾರೆಯೇ ನಿವೇ ಉತ್ತರ ಕೊಡಿ ಇಲ್ಲ ಬಡ ರೈತರೇ ಇಂತವರಿಗೆ ಸರಿಯಾಗಿ ಸೂಕ್ತ ರೀತಿಯಲ್ಲಿ ಉತ್ತರ ಕೊಡಲು ಮುಂದಾಗುತ್ತಾರೆ” ಎಚ್ಚರಿಕೆ “ಇದು ಇಗೆ ಮುಂದುವರೆಯದಿರಲಿ ಎಂಬುದೇ ನಮ್ಮ ಉದ್ದೇಶ…

ವರದಿ. ಧನಂಜಯ್ ಹಗರಿಬೊಮ್ಮನಹಳ್ಳಿ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend