ಮಣ್ಣೆತ್ತಿನ ಅಮಾವಾಸ್ಯಯಂದು ರೈತರು ಪೂಜೆಯೊಂದಿಗೆ ಬಿತ್ತನೆ ಕಾರ್ಯ ಪ್ರಾರಂಭ…!!!

Listen to this article

ವಿಜಯನಗರ: ಕೋವಿಡ್ ಲಾಕ್ ಡೌನ್ ನಿಂದ ಮುಕ್ತವಾದ ಹಿನ್ನಲೆಯಲ್ಲಿ ಹಾಗೂ ಮಣ್ಣೆತ್ತಿನ ಅಮವಾಸ್ಯೆ ಪ್ರಯುಕ್ತ,ವಿಜಯನಗರ ಜಿಲ್ಲೆ ಹಗರಿಬೊಮ್ಮನಹಳ್ಳಿ ತಾಲೂಕು ಹೊಸಕೇರಿ ಶ್ರೀಕ್ಷೇತ್ರ ಹೊಸಕೇರಿ ಶ್ರೀವೀರಭದ್ರೇಶ್ವರ ದೇವಸ್ಥಾನದಲ್ಲಿ. ಭಕ್ತರು ಮಣ್ಣೆತ್ತಿನ ಅಮವಾಸ್ಯೆ ಹಿನ್ನಲೆಯಲ್ಲಿ ದೇವರ ದರ್ಶನವನ್ನು ತುಂಬಾ ಉತ್ಸುಕರಾಗಿ ಪಡೆದರು, ಈ ಸಂದರ್ಭದಲ್ಲಿ ಕೋವಿಡ್ ನಿಯಮಗಳನ್ನು ಪಾಲಿಸುವಂತೆ ಅರ್ಚಕರು ಭಕ್ತರಿಗೆ ಸೂಚಿವುದು ಕಂಡು ಬಂತು.

ಹೊಸಕೇರಿ ಗ್ರಾಮದ ಶ್ರೀವೀರಭದ್ರೇಶ್ವರ ದೇವಸ್ಥಾನದಲ್ಲಿರುವ ಶ್ರೀವೀರಭದ್ರೇಶ್ವರ ,ಹಾಗೂ ಶ್ರೀಕಾಳಿಕಾದೇವಿಗೆ ಭಕ್ತರು ವಿಶೇಷವಾಗಿ ಪೂಜೆ ಸಲ್ಲಿಸಿದರು. ನಾಣ್ಯಾಪುರ ಶ್ರೀಬಸವಲಿಂಗೇಶ್ವರ ಹಾಗೂ ಶ್ರೀಜಗಲೂರಪ್ಪ ಸ್ವಾಮಿ,ಗ್ರಾಮದ ಹೊರವಲಯದಲ್ಲಿರುವ ಶ್ರೀಸಂಗನ ಬಸವೇಶ್ವರ ದೇವರಿಗೆ ಭಕ್ತರು ವಿಶೇಷವಾಗಿ ಭಕ್ತರು ಪೂಜೆ ಸಲ್ಲಿಸಿದರು.

ಬಿತ್ತನೆ ಪೂಜೆ- ನಾಣ್ಯಾಪುರ ಗ್ರಾಮದಲ್ಲಿರೈತರೋರ್ವರು ತಾವು ಬಿತ್ತನೆ ಪ್ರಾರಂಭಿಸುವ ಮುನ್ನ, ಹೊಲದಲ್ಲಿ ಮಣ್ಣೆತ್ತಿನ ಅಮವಾಸ್ಯೆ ಪ್ರಯುಕ್ತ,ಬಿತ್ತನೆಗೆ ಊಡಿದ್ದ ಎತ್ತುಗಳನ್ನು ವಿಶೇಷವಾಗಿ ಪೂಜಿಸಲಾಗುತ್ತದೆ. ಬಿತ್ತನೆಗೆ ಬಳಸುವ ಸಕಲ ಸಾಮಾಗ್ರಿಗಳನ್ನು ವಿಧಿವತ್ತಾಗಿ ಪೂಜಿಸಿ,ಮನೆದೇವರನ್ನ ಕುಲದೇವರನ್ನು ಮತ್ತು ಸ್ಥಳೀಯ ದೇವರನ್ನು ಆರಾಧಿಸಲಾಗುತ್ತದೆ. ನಂತರ ಬಿತ್ತನೆಯಲ್ಲಿ ಪಾಲ್ಗೊಂಡ ಸಕಲರಿಗೆ ಲೇಸು ಮಾಡೆಂದು ಕೋರಲಾಗುವುದು,ಹಾಗೆಂದು ಬಸವಣ್ಣ ದೇವರಾದ ಎತ್ತುಗಳಲ್ಲಿ ಆರಾಧಿಸಿ,ದೇವರಿಗೆ ಎಡೆ ಮಾಡಿರೋ ಪ್ರಸಾದವನ್ನು ನೆರೆದವರಿಗೆ ಹಂಚಿ ನಂತರ ಬಿತ್ತನೆ ಪ್ರಾರಂಭಿಸಲಾಗುವುದು..

ವರದಿ. ಬಸಣ್ಣಿ ಬಣವಿಕಲ್ಲು

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend