ಐತಿಹಾಸಿಕ ನಗರ ಎನ್ನುವ ಸುರಪುರ ನರಕದಂತಿದೆ…!!!

Listen to this article

ಐತಿಹಾಸಿಕ ನಗರ ಎನ್ನುವ ಸುರಪುರ ನರಕದಂತಿದೆ.

ಸುರಪುರ ನಗರ ದಾರುಣ.ಇಕ್ಕಟ್ಟು ಪ್ರದೇಶದಲ್ಲಿ ಬಸ್ ನಿಲ್ದಾಣ,ಬಸ್ ನಿಲ್ದಾಣದಿಂದ ಗಾಂಧಿ ವೃತ್ತದವರೆಗೆ ಇಕ್ಕಟ್ಟಾದ ಒನ್ ವೇ,ಎರಡು ಬಸ್ ಗಳು ಪರಸ್ಪರ ಎದುರು ಬದುರಾದರೆ ಬಸ್ ಗಳ ಸಮ್ಮಿಲನ ತಪ್ಪಿಸಲು ಚಾಲಕರು ಅರ್ಧ ಗಂಟೆಯವರೆಗೆ ಪ್ರಾಯಾಸ ಪಡಬೇಕು,ಆ ಇಕ್ಕಟ್ಟು ರಸ್ತೆಯಲ್ಲಿ ಅಡ್ಡಾದಿಡ್ಡಿ ಬೀದಿ ವ್ಯಾಪಾರಿಗಳು.ಅಡ್ಡಾದಿಡ್ಡಿಯಾಗಿ ನಿಂತ ದ್ವೀಚಕ್ರವಾಹನಗಳು.

ಪಾರ್ಕಿಂಗ್ ಎನ್ನುವ ಕಲ್ಪನೆ ಇಲ್ಲಿನ ಜನಕ್ಕೆ ಇರುವಂತಿಲ್ಲ.ಇನ್ನು ಬಸ್ ನಿಲ್ದಾಣದ ಮಲಮೂತ್ರ ವಿಸರ್ಜನೆಯ ಕತೆ ಹೇಳಬೇಕು ಎಂದರೆ ಅಪ್ಪಟ ಅದು ನರಕ.ನರಕವನ್ನು ನಾವು ಕಣ್ಣಾರೆ ಕಾಣಬೇಕು ಎಂದರೆ ಸುರಪುರ ಬಸ್ ನಿಲ್ದಾಣಕ್ಕೆ ಬರಬೇಕು,ನಗರವೂ ಶುದ್ಧವಾಗಿಲ್ಲ.ಕಜ್ಜಿ ಹತ್ತಿದ ನಾಯಿಯ ಮೈಲಕ್ಷಣದಂತಹ ರಸ್ತೆಗಳು.ಬೇಕಾಬಿಟ್ಟಿ ಕಾಮಗಾರಿಗಳನ್ನು ಮಾಡಲಾಗಿದೆ.ನಗರ ಸಭೆಯ ಕ್ರಿಯಾಶೀಲತೆಯ ಯಾವ ಕುರುಹುಗಳೂ ಅಲ್ಲಿ ಕಾಣಲಿಲ್ಲ.ಆಡಳಿತಗಾರ ಭ್ರಷ್ಟನಿರಬಹುದು,ವಿರೋಧ ಪಕ್ಷಗಳ ನಾಯಕರು ಮಾಜಿ ಶಾಸಕರು ಮತ್ತು ಈ ಭಾಗದ ರಾಜಕೀಯ ನಾಯಕರು ಏನು ಮಾಡುತ್ತಿರಬಹುದು?ಪ್ರಗತಿ ಪರಿಶೀಲನೆ ಸಭೆಗಳು ಹೇಗೆ ನಡೆಯುತ್ತಿರಬಹುದು?ಅಲ್ಲಿನ ಮಾಧ್ಯಮ ವರದಿಗಾರರು ಏನನ್ನು ಬರೆಯುತ್ತಿರಬಹುದು ಎನ್ನುವ ಪ್ರಶ್ನೆಗಳು ಮೂಡಿದವು…

ವರದಿ. ಮುಕ್ಕಣ್ಣ ಹುಲಿಗುಡ್ಡ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend