ಭೂತಲದಿನ್ನಿ ಗ್ರಾಮಪಂಚಾಯಿತಿಯ ಅಭಿವೃದ್ಧಿ ಅಧಿಕಾರಿಯ ನಿರ್ಲಕ್ಷ್ಯ, ಕೊರೋನಾ ನಿಯಮವನ್ನು ಗಾಳಿಗೆ ತೂರಿದ ನರೇಗಾ ಕೆಲಸಗಾರರು…!!!

Listen to this article

 

ಸಿಂಧನೂರು. ತಾಲೂಕಿನ ಭೂತಲದಿನ್ನಿ ಗ್ರಾಮ ಪಂಚಾಯತಿಯಲ್ಲಿ ನರೇಗಾ ಕಾಮಗಾರಿ ಗುಂಪು ಕೆಲಸ ಪ್ರಾರಂಭವಾಗಿದ್ದು, ಕೊವಿಡ್ ನಿಯಮಗಳನ್ನು ಪಾಲಿಸದೆ ಗಾಳಿಗೆ ತೂರಿದ್ದಾರೆ. ಇದರಿಂದ ಕೊರೊನಾ ನಿಯಂತ್ರಣ ಎಲ್ಲಿ ? ಯಾವಾಗ ? ಆಗುತ್ತದೆ ಮತ್ತು ಪಿಡಿಒ ದೊಡ್ಡ ನಿಂಗಪ್ಪ ಇದರ ಬಗ್ಗೆ ನಿರ್ಲಕ್ಷ್ಯ ವಹಿಸಿದ್ದು ಕಂಡುಬಂದಿದೆ.
ಭೂತಲದಿನ್ನಿ ಗ್ರಾಮ ಪಂಚಾಯಿತಿಯಲ್ಲಿ ಶನಿವಾರ, ರವಿವಾರ ,ಸೋಮವಾರ, ಮಂಗಳವಾರ, ಬುದುವಾರ 7ದಿನಗಳ ಕಾಲ ನರೇಗಾ ಕಾಮಗಾರಿಗೆ ಎನ್.ಎಮ್.ಆರ್.ತೆಗದು ಸುಮಾರು ತಂಡಗಳಲ್ಲಿ ಅಂದಾಜು 1500 ಜನರಿಗೆ ಕೆಲಸ ನೀಡಿದ್ದಾರೆ ,ಅದರಲ್ಲಿ ಒಂದು ಸಾವಿರ ಜನ ಕೂಲಿಕಾರರು ಕಾಮಗಾರಿ ಮಾಡುತ್ತಿದ್ದಾರೆ ಆದರೆ ಯಾರಿಗೂ ಮಾಸ್ಕ ಇಲ್ಲಾ ,ಸಾಮಾಜಿಕ ಅಂತರ ವಂತೂ ಮರೆತೆ ಹೋಗಿದೆ.ಒಂದು ಸಾವಿರ ಜನ ಕಾಮಗಾರಿ ನಿರ್ವಹಿಸುತ್ತಿದ್ದರೂ ಸರ್ಕಾರದ ಆದೇಶದ ಪ್ರಕಾರ ಕಾಮಗಾರಿ ನಡೆಯುವ ಸ್ಥಳದಲ್ಲಿ ಪೆಂಡಲ್ ಹಾಕಬೇಕು ಆದರೆ ಹಾಕಿಲ್ಲ, ಕುಡಿಯುವ ನೀರಿನ ವ್ಯವಸ್ಥೆಯಿಲ್ಲ,ಪ್ರಥಮ ಚಿಕಿತ್ಸೆ ಪೆಟ್ಟಿಗೆಯಿಲ್ಲ,ಆರೋಗ್ಯ ಇಲಾಖೆಯ ಸಿಬ್ಬಂದಿಗಳಿಂದ ಕೆಲಸಕ್ಕೆ ಹೋಗುವ ಪ್ರತಿಯೊಬ್ಬರಿಗೂ ಕೊವಿಡ್ ಪರೀಕ್ಷೆ ಮಾಡಿಸಬೇಕು ಆದರೆ ಮಾಡಿಸಿಲ್ಲ .
ಈಗಾಗಲೇ ಕೊರೊನಾ ಪಾಸಿಟಿವ್ ಬಂದಂತಹವರು ಇದ್ದಾರೆ, ಆದರೆ ಭೂತಲದಿನ್ನಿ ಪಂಚಾಯತಿ ಪಿಡಿಒ ದೊಡ್ಡ ನಿಂಗಪ್ಪ ಇದ್ಯಾವದನ್ನು ಗಮನಕ್ಕೆ ಹಾಕಿಕೊಳ್ಳದೆ ಸರ್ಕಾರದ ನಿಯಮಗಳನ್ನು ಗಾಳಿಗೆ ತೂರಿದ್ದಾರೆ.ಸಾಮಾನ್ಯ ಜನರ ಜೀವಕ್ಕೆ ಬೆಲೆ ಇಲ್ಲವಾ ? ಇದರ ಬಗ್ಗೆ ಪಿಡಿಒ ಅವರನ್ನು ಕೇಳಿದರೆ” ನೀವು ಏನು ಮಾಡಿತ್ತಿರಾ?
ಮಾಡುವದಾದರೆ ಮಾಡಿ ನಾನೇನು ಮಾಡಲಿ ” ಎನ್ನುತ್ತಾರೆ .
ಇಡೀ ರಾಜ್ಯದಾದ್ಯಂತ ಲಾಕ್ ಡೌನ್ ಮಾಡಿ ಮಾಸ್ಕ ಹಾಕದೆ ಇದ್ದರೆ ದಂಡ ವಸೂಲಿ ,ಪ್ರಕರಣ ದಾಖಲಿಸುವ ಕೆಲಸವನ್ನು ಪ್ರತಿ ಕಡೆ ಪೋಲಿಸರು ಮಾಡುತ್ತಿದ್ದಾರೆ ಆದರೆ ಭೂತಲದಿನ್ನಿ ಗ್ರಾಮ ಪಂಚಾಯತಿಯಲ್ಲಿ ಇದ್ಯಾವುದನ್ನು ಕೇಳುವವರು ಇಲ್ಲವಾ ಎಂದು ಅದೇ ಗ್ರಾಮದ ಗ್ರಾಮಸ್ಥರು ಸ್ವತಃ ಖುದ್ದಾಗಿ ಪತ್ರಿಕೆಯವರೊಂದಿಗೆ ತಮ್ಮ ನೋವನ್ನು ಹಂಚಿಕೊಳ್ಳುತ್ತಿದ್ದಾರೆ.ಆದರೆ ಪಿಡಿಓ ದೊಡ್ಡ ನಿಂಗಪ್ಪ, ತಾಲೂಕು ಇಓ ಪವನಕುಮಾರ ಅವರು ಗಾಳಿಗೆ ತೂರಿದ್ದಾರೆ. ಪರೋಕ್ಷವಾಗಿ ಕಾರಣರಾಗಿದ್ದಾರೆ. ಇವರ ವಿರುದ್ಧ ಯಾವ ರೀತಿ ಕ್ರಮ ಕೈಗೊಳ್ಳುತ್ತಾರೆ ಕಾದು ನೊಡೋಣ.

ವರದಿ. ದುಗ್ಗಪ್ಪ ಸಿಂಧನೂರು

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend