ಶಾಸಕರಿಂದ ಬೂದಿಹಾಳಕ್ಯಾಂಪನಲ್ಲಿ ಜನಸಂಪರ್ಕ ಸಭೆ ಹಾಗೂ ಗ್ರಾಮ ವಾಸ್ತವ್ಯ…!!!

Listen to this article

ಶಾಸಕರಿಂದ ಬೂದಿಹಾಳಕ್ಯಾಂಪನಲ್ಲಿ ಜನಸಂಪರ್ಕ ಸಭೆ ಹಾಗೂ ಗ್ರಾಮ ವಾಸ್ತವ್ಯ.

ಸಿಂಧನೂರು :ನ. 25.ರಾಜ್ಯದಲ್ಲಿ ಎರಡು ರಾಷ್ಟ್ರೀಯ ಪಕ್ಷಗಳಿಗೆ ಅಧಿಕಾರ ಕೊಟ್ಟು ನೋಡಿದ್ದೀರಿ, ಅವರು 40% ಭ್ರಷ್ಟಾಚಾರದ ಬಗ್ಗೆ ಒಬ್ಬರ ಮೇಲೆ ಒಬ್ಬರು ಆರೋಪ ಮಾಡುತ್ತಾ ಕಾಲ ಕಳೆಯುತ್ತಿದ್ದಾರೆ.ಆದರೆ ನಾವು ಬಡವರ, ರೈತರ, ಮಹಿಳೆಯರ, ಕೂಲಿಕಾರರ ಪರವಾಗಿ ಏನು ಅಭಿವೃದ್ಧಿ ಕೆಲಸ ಮಾಡಿದ್ದೇವೆ, ಇನ್ನೂ ಏನೂ ಮಾಡಬೇಕಿದೆ ಎಂಬ ಬಗ್ಗೆ ನಿಮ್ಮ ಬಳಿ ‌‌‌ಚರ್ಚೆ ಮಾಡಲು ಬಂದಿದ್ದೇವೆ. ಬಿಜೆಪಿ ದುರಾಡಳಿತಕ್ಕೆ ಬೇಸತ್ತು ಕಾಂಗ್ರೆಸ್‌ನ ಒಳ ಜಗಳದಿಂದ ಜೆಡಿಎಸ್ ಪಕ್ಷದತ್ತ ಹೆಚ್ಚಿನ ಒಲವು ತೋರುತ್ತಿದ್ದಾರೆ. ಹೀಗಾಗಿ ಜೆಡಿಎಸ್ ಮತ್ತೆ ಅಧಿಕಾರಕ್ಕೆ ಬರುವುದು ಶತಸಿದ್ಧ ಕುಮಾರಸ್ವಾಮಿ ಮುಖ್ಯಮಂತ್ರಿ ಯಾಗುವುದು ನಿಶ್ಚಿತ ಇದನ್ನು ಯಾರಿಂದಲೂ ತಪ್ಪಿಸಲು ಸಾಧ್ಯವಿಲ್ಲ ಎಂದು ಮಾಜಿ ಸಚಿವ ಹಾಗೂ ಶಾಸಕ ವೆಂಕಟರಾವ್ ನಾಡಗೌಡ ಹೇಳಿದರು.
ತಾಲ್ಲೂಕಿನ ಬೂದಿಹಾಳ ಕ್ಯಾಂಪಿನಲ್ಲಿ ಗುರುವಾರ ಸಂಜೆ ನಡೆದ ಜನಸಂಪರ್ಕ ಸಭೆ ಹಾಗೂ ಗ್ರಾಮ ವಾಸ್ತವ್ಯದಲ್ಲಿ ಅವರು ಮಾತನಾಡಿದರು. ಕಾಂಗ್ರೆಸ್ ಮತ್ತು ಜೆಡಿಎಸ್‌ ಸಮ್ಮಿಶ್ರ ಸರ್ಕಾರದಲ್ಲಿ ಕುಮಾರಣ್ಣ ಮುಖ್ಯಮಂತ್ರಿ ಆಗಿದ್ದಾಗ ಎಲ್ಲಾ ರಾಷ್ಟ್ರೀಕೃತ, ಖಾಸಗಿ, ಸೊಸೈಟಿ ಬ್ಯಾಂಕ್‌ಗಳ ರೂ.25 ಸಾವಿರ ಕೋಟಿ ಸಾಲಮನ್ನಾ ಮಾಡಿ ರೈತಪರ, ಜನಪರ ಅಭಿವೃದ್ಧಿಗೆ ಸಾಕಷ್ಟು ಕೆಲಸ ಮಾಡಲಾಗಿದೆ. ರೈತಾಪಿ ಜನರಿಗೆ ನೆಮ್ಮದಿ ಸಿಕ್ಕಿದೆ. ಈಗಾ ಬಿಜೆಪಿ ಆಡಳಿತದಲ್ಲಿ ರೈತರಿಗೆ ಗೊಬ್ಬರದ ಬೆಲೆ,ಗ್ಯಾಸ್ ಸಿಲಿಂಡರ್,ಪೆಂಟ್ರೋಲ್, ಡಿಸೇಲ್,ದಿನ ನಿತ್ಯದ ಅಗತ್ಯ ಬೆಲೆಗಳನ್ನು ದುಪ್ಪಟಗೊಳಿಸಿ ಬಡವರ, ರೈತರ, ಜೀವನಕ್ಕೆ ಬರೆ ಎಳೆಯಲಾಗಿದೆ. ರೈತರು ಹಲವು ಸಂಕಷ್ಟ ಎದುರಿಸುತ್ತಿದ್ದಾರೆ ಎಂದರು.
ಕ್ಷೇತ್ರದಲ್ಲಿ ಶಾಸಕನಾಗಿ ನಗರದಲ್ಲಿ ಮಿನಿ ವಿಧಾನಸೌಧ,ಬಸ್ ನಿಲ್ದಾಣ,ಕೆಇಬಿ, 260 ಎಕರೆ ಪ್ರದೇಶದಲ್ಲಿ ಕುಡಿಯುವ ನೀರಿನ ಕೆರೆ ನಿರ್ಮಾಣ, 3 ಕೋಟಿ ರೂ. ವೆಚ್ಚದಲ್ಲಿ ಶುಸಜ್ಜಿತವಾದ ಪಶು ಆಸ್ಪತ್ರೆ, 6 ಕೋಟಿ ರೂ. ವೆಚ್ಚದಲ್ಲಿ ತಾಲೂಕು ಕ್ರೀಡಾಂಗಣ,5ಕೋಟಿ ರೂ.ಭವ್ಯವಾದ ರಂಗಮಂದಿರ, ‌‌ಅದಕ್ಕೆ ಯುವಕರ ಒತ್ತಾಸೆ ಮೇರೆಗೆ ಪುನೀತ್ ರಾಜಕುಮಾರ ಹೆಸರಿಡಲು ತೀರ್ಮಾನ, 12 ಕೋಟಿ ರೂ. ವೆಚ್ಚದಲ್ಲಿ ತಾಯಿ ಮತ್ತು ಮಕ್ಕಳ ಆಸ್ಪತ್ರೆ, ಜಿಲ್ಲಾ ನ್ಯಾಯಾಲಯ, ಎ ಆರ್ ಟಿ ಓ ಕಛೇರಿ ಮಂಜೂರು, ‌‌‌‌‌‌ಅನೇಕ ಗ್ರಾಮಗಳಲ್ಲಿ,ಸಿಸಿರಸ್ತೆ ಮತ್ತು ಚರಂಡಿ,ಬಡವರ ಮಕ್ಕಳು ವಿದ್ಯಾಭ್ಯಾಸ ಮಾಡಬೇಕು ಎನ್ನುವ ಉದ್ದೇಶದಿಂದ 500ಕ್ಕೂ ಹೆಚ್ಚು ಹೊಸ ಶಾಲಾ ಕೊಠಡಿಗಳು, ಜೆಜೆಎಮ್ ಯೋಜನೆಯಲ್ಲಿ ಮನೆ ಮನೆಗೆ ಕುಡಿಯುವ ನೀರು, ಅಂಗನವಾಡಿ ಕಟ್ಟಡ,ಪಿಕಾಪ್ ಡ್ಯಾಮ್ ಗಳು,20 ಕ್ಕೂ ಹೆಚ್ಚು ಬ್ರೀಜ್ ಗಳು,ಪಶು ಆಸ್ಪತ್ರೆ, ಸೇರಿದಂತೆ ಮೂಲಭೂತ ಸೌಕರ್ಯ ಒದಗಿಸಿದ್ದೇನೆ. ಅಭಿವೃದ್ಧಿಯ ವಿಷಯದಲ್ಲಿ ತಾರತಮ್ಯತೆ ಎಂದೂ ಮಾಡಿಲ್ಲ. ಮತ್ತೂಮ್ಮೆ ಅಧಿಕಾರಕ್ಕೆ ಬಂದರೆ ಇನ್ನುಳಿದ ಅಭಿವೃದ್ಧಿಗೆ ಮುತುವರ್ಜಿ ವಹಿಸಿ ಸಹಾಯಕ ಆಯುಕ್ತರ ‌‌‌‌‌‌‌‌‌‌‌‌‌ಕಛೇರಿ ತಂದು ಸಿಂಧನೂರು ತಾಲೂಕನ್ನು ಜಿಲ್ಲೆಯನ್ನಾಗಿ ಮಾಡುವುದೊಂದೆ ನನ್ನ ಗುರಿ ಎಂದರು.
ಜನರು ಎರಡು ರಾಷ್ಟ್ರೀಯ ಪಕ್ಷಗಳನ್ನು ದಿಕ್ಕರಿಸಿ, ಕೇರಳ, ತಮಿಳುನಾಡು, ಓರಿಸ್ಸಾ, ಕಲ್ಕತ್ತಾ ಇನ್ನಿತರ ರಾಜ್ಯಗಳಲ್ಲಿ ಪ್ರಾದೇಶಿಕ ಪಕ್ಷಗಳಿಗೆ ಬಲ ನೀಡುತ್ತಿದ್ದಾರೆ.ಕಾರಣ ರಾಜ್ಯದಲ್ಲಿ ಅನ್ಯಾಯ ವಾದಾಗ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು ರಾಜ್ಯದ ಪರವಾಗಿ ದ್ವನಿ ಎತ್ತುವುದಿಲ್ಲ.ಆದರೆ ಈ ಅನ್ಯಾಯಯನ್ನು ಸರಿಪಡಿಸಲು ಪ್ರಾದೇಶಿಕ ಪಕ್ಷಗಳಿಂದ ಮಾತ್ರ ಸಾಧ್ಯ. ಆದಕ್ಕಾಗಿಯೇ ರಾಜ್ಯದಲ್ಲಿ ಪ್ರಾದೇಶಿಕ ಜೆಡಿಎಸ್ ಪಕ್ಷದ ಅವಶ್ಯಕತೆಯಿದೆ ಎಂದರು.


ಬೂದಿಹಾಳ ಕ್ಯಾಂಪಿನ ಜನಸಂಪರ್ಕ ಸಭೆಯಲ್ಲಿ ಸರ್ವೇ ನಂ.45 ರಲ್ಲಿ ವಾಸಿಸುವ,ಸರ್ವೇ ನಂ 67. ರಲ್ಲಿ 1ಎಕರೆ 4 ಗುಂಟೆ ಸರಕಾರಿ ಭೂಮಿಯಲ್ಲಿ ವಾಸಿಸುವ ಜನರು ತಮ್ಮ ಹಕ್ಕು ಪತ್ರಗಳ ವಿತರಣೆ ‌‌‌‌‌‌‌ಬೇಡಿಕೆಯನ್ನು ಶಾಸಕರ ಮುಂದಿಟ್ಟರು, ಶಾಸಕರು ಸರ್ವೇ ನಂ.45ರ ಭೂಮಿ ಸೊಸೈಟಿ ಹೆಸರಿನಲ್ಲಿದ್ದು ಈ ಕುರಿತು ಮುಂದಿನ ತಿಂಗಳು ಅಧಿಕಾರಿಗಳ ಸಭೆ ಕರೆದು ಚರ್ಚಿಸಿ ‌‌ಭೂಮಿಯನ್ನು ಸರ್ಕಾರ ಸ್ವಾಮ್ಯಕ್ಕೆ ಪಡೆದು ಸರ್ವೇ ಮಾಡಿಸಿ ಕಾನೂನು ಪ್ರಕಾರ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
2023ರ ವಿಧಾನಸಭೆ ಸಾರ್ವತ್ರಿಕ ಚುನಾವಣೆಯಲ್ಲಿ ಜೆಡಿಎಸ್‌ ಪಕ್ಷಕ್ಕೆ ಪೂರ್ಣ ಬಹುಮತ ನೀಡಿದರೆ ಕುಮಾರಣ್ಣ ಮುಖ್ಯಮಂತ್ರಿಯಾಗಿ ಪಂಚರತ್ನ ಯೋಜನೆ ನೀಡಲಿದ್ದಾರೆ.ಅದಕ್ಕಾಗಿ ಮತ್ತೊಮ್ಮೆ ತಮಗೆ ಆರ್ಶಿವದಿಸಿ ಗೆಲ್ಲಿಸುವಂತೆ ಕ್ಷೇತ್ರದ ಜನರಲ್ಲಿ ಮನವಿ ಮಾಡಿಕೊಂಡರು.
ಈ ಸಂಧರ್ಭದಲ್ಲಿ ಜೆಡಿಎಸ್ ರಾಜ್ಯ ಕೋರ್ ಕಮಿಟಿ ಸದಸ್ಯ ಧರ್ಮನಗೌಡ ಮಲ್ಕಾಪುರ, ಗ್ರಾಮ ಪಂಚಾಯತಿ ಅಧ್ಯಕ್ಷ ಸೀತಾರಾಮಯ್ಯ, ಜಿಎಸ್ ಎನ್ ಸತ್ಯನಾರಾಯಣ ಹಂಚಿನಾಳಕ್ಯಾಂಪ್, ಸೂರ್ಯ ನಾರಾಯಣ ಬೂದಿಹಾಳ ಕ್ಯಾಂಪ್, ಸುಮೀತ್ ತಡಕಲ್, ಮಹಾವೀರ ಜೈನ್, ಆಸೀಪ್ ಇನ್ನಿತರರಿದ್ದರು…

ವರದಿ. ದುಗ್ಗಪ್ಪ ಸಿಂಧನೂರು

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend