ದೇವರಗುಡಿ ಪಿಡಿಓ ಸವಿತಾ ವರ್ಗಾವಣೆಗೆ ಸಂಗನಗೌಡ ಪಾಟೀಲ ಒತ್ತಾಯ…!!!

Listen to this article

ದೇವರಗುಡಿ ಪಿಡಿಓ ಸವಿತಾ ವರ್ಗಾವಣೆಗೆ ಸಂಗನಗೌಡ ಪಾಟೀಲ ಒತ್ತಾಯ.

ಸಿಂಧನೂರು :ಅ. 21.ತಾಲೂಕಿನ ದೇವರಗುಡಿ ಗ್ರಾಮ ಪಂಚಾಯಿತಿ ಪಿಡಿಓ ಸವಿತಾ ರವರು ಗ್ರಾಮದ ಜನರ ಸಮಸ್ಯೆಗಳ ಬಗ್ಗೆ ಬಗೆಹರಿಸುವಂತೆ ಮನವಿ ಮಾಡಿಕೊಂಡರೆ ನೀನು ನನಗೆ ಏನು ಹೇಳುವುದಕ್ಕೆ ಬರುತ್ತೀಯಾ ಗ್ರಾಮ ಪಂಚಾಯಿತಿ ಸದಸ್ಯರು ಬಳಿ ಹೇಳಿಕೊ ಅಥವಾ ಅರ್ಜಿಕೊಟ್ಟು ಮನೆಗೆ ಹೋಗು ಎಂದು ಬೇಜವಾಬ್ದಾರಿತನ, ಸರ್ವಾಧಿಕಾರಿಯಂತೆ ಮಾತನಾಡುತ್ತಾರೆ ಎಂದು ಬಿಜೆಪಿ ಯುವ ಮೋರ್ಚ ಉಪಾಧ್ಯಕ್ಷ ಸಂಗನಗೌಡ ಪಾಟೀಲ ಆರೋಪ ಮಾಡಿದರು.

ದೇವರಗುಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೇವಿಕ್ಯಾಂಪ ಬಳಿ ಸುಮಾರು 35 ವರ್ಷಗಳ ಹಿಂದೆ ಸರ್ವೇ ನಂ 79 ರಲ್ಲಿ ಕುಡಿಯುವ ನೀರಿನ ವಾಟರ್ ಟ್ಯಾಂಕ್ ಗಾಗಿ ಉಚಿತವಾಗಿ ದೊಡ್ಡ ಬಸ್ಸಮ್ಮ ಗಂಡ ಬಸನಗೌಡ ದೇವರಗುಡಿ ರವರು ಜಾಗವನ್ನು ದಾನವಾಗಿ ನೀಡಿರುತ್ತಾರೆ.ಅದು ಈಗ ಶೀಥಿಲಾ ವ್ಯವಸ್ಥೆಯಲ್ಲಿ ಇರುವುದರಿಂದ ಸರ್ವೇ ನಂ 80 ರಲ್ಲಿ ಹೊಸದಾಗಿ ಬೇರೆ ವಾಟರ್ ಟ್ಯಾಂಕ್ ನಿರ್ಮಾಣ ಮಾಡಿರುತ್ತಾರೆ.ಅದನ್ನು ಉಪಯೋಗಮಾಡಿಕೊಳ್ಳಿ ಶಿಥಿಲಗೊಂಡ ಹಳೆಯ ವಾಟರ್ ಟ್ಯಾಂಕ್ ನ್ನು ಹೊಡೆದು ಹಾಕಲು ಅರ್ಜಿ ಸಲ್ಲಿಸಿದ್ದು ಇದರ ಬಗ್ಗೆ ಗಮನ ಹರಿಸದ ಕಾರಣ ಪಿಡಿಓ ಸವಿತಾರವರನ್ನು ಯಾಕೆ ವಿಳಂಭವಾಗುತ್ತಿದೆ ಎಂದು ಕೇಳಿದರೆ ನಾವು ಏನು ಮಾಡಲಿಕ್ಕೆ ಬರುವುದಿಲ್ಲ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಗೆ ಡೆಮಾಲಿಸ್ ಮಾಡಲು ಅರ್ಜಿ ಸಲ್ಲಿಸಿದ್ದೇವೆ ಎಂದು ಸುಳ್ಳು ಹೇಳಿರುತ್ತಾರೆ.

ಸಂಬಂಧಪಟ್ಟ ಇಲಾಖೆಯವ ರನ್ನು ಕೇಳಿದರೆ ನಮ್ಮಬಳಿ ಈ ವಿಷಯಕ್ಕೆ ಸಂಬಂಧಿ ಸಿದಂತೆ ಯಾವುದೇ ಅರ್ಜಿ ಬಂದಿರುವುದಿಲ್ಲ ಎಂದು ಹೇಳುತ್ತಾರೆ. ಈ ವಿಷಯವಾಗಿ ಪಿಡಿಓ ರವರನ್ನು ಪೋನ್ ಸಂಪರ್ಕದಲ್ಲಿ ನೇರವಾಗಿ ಮಾತನಾಡಿಸಿ ದಾಗ ನಿಮಗೆ ಅರ್ಜಿ ಸಲ್ಲಿಸಿಲ್ಲ ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರರು ಜಿಲ್ಲಾ ಪಂಚಾಯತ್ ರವರಿಗೆ ಸಲ್ಲಿಸಿರುವುದಾಗಿ ಹೇಳುತ್ತಾರೆ.ಪಿಡಿಓ ಸವಿತಾ ರವರಿಗೆ ಯಾವ ಇಲಾಖೆಗೆ ಬರುತ್ತದೆ ಎಂಬ ಮಾಹಿತಿಯಿಲ್ಲದೇ ಸುಳ್ಳು ಹೇಳಿ ಜನರಿಗೆ ದಾರಿ ತಪ್ಪಿಸುತ್ತಾರೆ.
ಪಿಡಿಓ ಸವಿತಾರವರು ಸರಿಯಾದ ಸಮಯಕ್ಕೆ ಕೆಲಸಕ್ಕೆ ಹಾಜರಾಗುವುದಿಲ್ಲ.ಜನರು ಸಮಸ್ಯೆ ಹೇಳಿ ಕೊಂಡರೆ ಸ್ಪಂದನೆ ನೀಡುತ್ತಿಲ್ಲ, ಈ ಬಗ್ಗೆ ಮೇಲಾಧಿ ಕಾರಿಗಳ ಗಮನಕ್ಕೆ ತರಬೇಕಾಗುತ್ತದೆ ಎಂದು ಹೇಳಿದರೆ ತಾವೂ ಜವಾಬ್ದಾರಿ ಸ್ಥಾನದಲ್ಲಿರುವ ಅಧಿಕಾರಿ ಎಂಬುದನ್ನು ಮರೆತು ಯಾರಿಗೇ ಬೇಕಾದರೂ ಹೇಳಿಕೋ ಹೋಗು ನನ್ನನ್ನು ಏನೂ ಮಾಡಲು ಸಾಧ್ಯವಿಲ್ಲ, ನಿಮ್ಮಂತವರನ್ನು ತುಂಬಾ ಜನರನ್ನು ನೋಡಿದೇನೆ ಎಂದು ಏಕವಚನದಲ್ಲಿ ಮಾತನಾಡುತ್ತಾರೆ ಎಂದು ಸಂಗನಗೌಡ ದೇವರಗುಡಿ ಆಪಾದನೆ ಮಾಡಿದರು.
ಜನಸಾಮನ್ಯರ ಸಮಸ್ಯೆಯನ್ನು ಬಗೆಹರಿಸದ ಇಂತಹ ಬೇಜವಾಬ್ದಾರಿತನ ಮಾತನಾಡುವ ಪಿಡಿಓ ರವರನ್ನು ಪಂಚಾಯತಿಯಿಂದ ವರ್ಗಾವಣೆ ಮಾಡಲು ಗ್ರಾಮಸ್ಥರ ಪರವಾಗಿ ತಾಲೂಕು ಪಂಚಾಯಿತಿಯ ಕಾರ್ಯನಿರ್ವಾಹಕ ಅಧಿಕಾರಿಗೆ ಹಾಗೂ ಸಿಎಸ್ ಗೆ ಪತ್ರಿಕೆ ಹೇಳಿಕೆ ಮೂಲಕ ಒತ್ತಾಯಿಸಿದರು….

 

ವರದಿ. ದುಗ್ಗಪ್ಪ ಸಿಂಧನೂರು

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend