ಸಂವಿಧಾನ ರಕ್ಷಣೆಗಾಗಿ,ನಗರಕ್ಕೆ ಜೈ ಭೀಮ್ ಜನಜಾಗೃತಿ ಜಾತಾ…!!!

Listen to this article

ಸಂವಿಧಾನ ರಕ್ಷಣೆಗಾಗಿ,ನಗರಕ್ಕೆ ಜೈ ಭೀಮ್ ಜನಜಾಗೃತಿ ಜಾತಾ.

ಸಿಂಧನೂರು:ಅ.14.ಕಳೆದ 75ವರ್ಷಗಳಿಂದ ಜಾತೀಯತೆ ಕೋಮು ಗಲಭೆ ಅಸ್ಪರ್ಶತೆ,ಹಸಿವು, ಬಡತನ ಅನಕ್ಷರತೆ ನಿರುದ್ಯೋಗ ಎಲ್ಲಾ ರೋಗಗಳಿಗೆ ಬಲಿಯಾಗಿರುವುದು ಎಸ್ಸಿ, ಎಸ್ಟಿ, ಹಿಂದುಳಿದ, ಅಲ್ಪಸಂಖ್ಯಾತ ಮುಸ್ಲಿಮರು, ಕ್ರೈಸ್ತರು, ಬೌದ್ಧರು,ಸಿಕ್ಕರು ಈ ಸಮಸ್ಯೆಯಲ್ಲಿ ಸಿಕ್ಕಕೊಂಡಿದ್ದಾರೆ ಎಂದು ರಾಜ್ಯ ಸಂಯೋಜಕರು ಎಂ ಗೋಪಿನಾಥ ತಿಳಿಸಿದರು.
ಬಹುಜನ ಸಮಾಜ ಪಾರ್ಟಿ ಸಂವಿಧಾನ ರಕ್ಷಣೆ ಗಾಗಿ ಕರ್ನಾಟಕ ರಾಜ್ಯ ವ್ಯಾಪಿ ಜೈ ಭೀಮ್ ಜನ ಜಾಗೃತಿ ಜಾತಾ ಸೆಪ್ಟಂಬರ್ 28ರಿಂದ ನವೆಂಬರ್ 13ರ ತನಕ ಹಮ್ಮಿಕೊಂಡಿದ್ದ ಜಾತಾ ನಗರದ ಪ್ರಮುಖ ಬೀದಿಯಲ್ಲಿ ಸಂಚರಿಸಿ ಗಾಂಧಿ ಸರ್ಕಲ್ ನಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದರು.
ಎಲ್ಲದಕ್ಕೂ ಮೂಲ ಕಾರಣ ಸಂವಿಧಾನ ಸಂಪೂರ್ಣ ಜಾರಿಯಾಗಿಲ್ಲ, ಸಂವಿದಾನ ಎಲ್ಲಾ ಹಕ್ಕುಗಳನ್ನು ಕೊಟ್ಟಿದೆ. ಆಳುವ ಸರ್ಕಾರಗಳು ಇಲ್ಲಿಯತನಕ ಅವುಗಳನ್ನು ಪಾಲನೆ ಮಾಡಿಲ್ಲ ಅವರು ಪಾಲನೆ ಮಾಡದ ಪರಿಣಾಮ ವಾಗಿ ದೇಶದಲ್ಲಿ ಸಮಸ್ಯೆಗಳು ಹುಟ್ಟುಕೊಂಡಿವೆ.ಬಡತನ ನಿರುದ್ಯೋಗ ಜಾತೀಯತೆ ಸೇರಿದಂತೆ ಇತರ ಸಮಸ್ಯೆಗಳು ಅದರಿಂದ ನಾವುಗಳು ಬಹುಜನ ಸಮಾಜವಾದಿ ಪಾರ್ಟಿ ಜನರಿಗೆ ಹೆಚ್ಚಿಸುವುದಕ್ಕೆ ಹೊರಟಿದ್ದೇವೆ.
ನೀವುಗಳು ಯಾವ ಸರ್ಕಾರಕ್ಕೆ ನಿಮ್ಮ ಮತ ನೀಡಿ ಹಾರಿಸಿದ್ದೀರಿ ಆ ಸರ್ಕಾರಗಳು ಈಗ ಸಂವಿದಾನವನ್ನು ಉಲ್ಲಂಘನೆ ಮಾಡಿದ್ದಾವೆ ಆಗಾಗಿ ಸಂವಿದಾನವನ್ನು ಗೌರವಿಸುವಂತಹ ಪಕ್ಷಗಳನ್ನು ಗೆಲ್ಲಿಸಿ ನೀವು ಪಡೆಯುವಂತ ಹಕ್ಕುಗಳು ಪಡೆಯಿರಿ ನಿಮಗೆ ಸಂವಿದಾನವನ್ನು ಜಾರಿಗೆ ಮಾಡುವಂತ ಸರ್ಕಾರ ಆಯ್ಕೆ ಮಾಡುವ ಶಕ್ತಿ ನಿಮ್ಮಲಿದೆ ನಿಮ್ಮ ಶಕ್ತಿ ಯನ್ನು ಪ್ರಯೋಗ ಮಾಡಿ ಪ್ರಜಾ ಪ್ರಭುತ್ವದಲ್ಲಿ ಪ್ರಜಾಗಳೇ ಪ್ರಭುಗಳು ಪ್ರಜೆಗಳು ಇಚ್ಛೆ ಪಟ್ಟವರು ಮಾತ್ರ ಪ್ರಭುಗಳು ಆಗುವದಕ್ಕೆ ಸಾಧ್ಯ ಜನರಲ್ಲಿ ಸಂವಿದಾನದ ಬಗ್ಗೆ ಜಾಗೃತಿ ಇಲ್ಲದೇ ಇರುವುದರಿಂದ ನಮ್ಮ ಹಕ್ಕುಗಳ ಬಗ್ಗೆ ಜಾಗೃತಿ ಇಲದೇ ಇರುವುದು ಇಲ್ಲಿ ಬೇಜವಾಬ್ದಾರಿ ಪ್ರಜಾ ವಿರೋಧಿ ಸರ್ಕಾರ ಅಧಿಕಾರಕ್ಕೆ ಬರುತ್ತಿವೆ ಆ ಕಾರಣಕ್ಕೆ ಈ ಎಲ್ಲಾ ಸಮಸ್ಯೆಗಳಿಗೆ ಬಲಿಪಶು ಆಗಿರುವ ಜನರಿಗೆ ಹಕ್ಕುಗಳ ಬಗ್ಗೆ ತಿಳಿಸುವದಕ್ಕೆ ಬಹು ಜನ ಸಮಾಜವಾದಿ ಪಾರ್ಟಿ ವತಿಯಿಂದ ಜೈ ಬಿಮ್ ಜನ ಜಾಗೃತಿ ಜಾತವನ್ನು ಹಮ್ಮಿ ಕೊಳ್ಳಲಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಎಂ.ಕೆ.ಜಗ್ಗೇಶ,ವಾಯ್ ನರಸಪ್ಪ ಎಂ ಆರ್ ಬೇರ್ಗೆ,ಹುಲುಗಪ್ಪ ಮಲ್ಕಾಪುರ್, ಚೆನ್ನಪ್ಪ ಅಮಿನಗಡ, ವೀರೇಶ್ ಹಂಚಿನಾಳ, ಗುಡುದೇಶ್ ಬೇರ್ಗಿ,ಉಶ್ಮನ್ ಪಾಷಾ ಮಾಕಂದಾರ್, ಅಬ್ದುಲ್ ಸಾಬ್, ಎಸ್.ಎ. ಸಾಲ್ಗುಂದಾ ಇನ್ನಿತರರಿದ್ದರು..

ವರದಿ.ದುಗ್ಗಪ್ಪ ಸಿಂಧನೂರು

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend