ಅಂತರಾಜ್ಯ ಎಟಿಎಂ,ಮೊಬೈಲ್ ಕಳ್ಳನ ಬಂಧನ, ನಗದು ಹಣ ಮತ್ತು ಎಟಿಎಂ ಕಾರ್ಡ ವಶ…!!!

Listen to this article

ಅಂತರಾಜ್ಯ ಎಟಿಎಂ,ಮೊಬೈಲ್ ಕಳ್ಳನ ಬಂಧನ, ನಗದು ಹಣ ಮತ್ತು ಎಟಿಎಂ ಕಾರ್ಡ ವಶ.

ಸಿಂಧನೂರು :ಅ.7.ರಾಯಚೂರು ಜಿಲ್ಲೆಯ ಸಿಂಧನೂರು ನಗರದಲ್ಲಿ ಮತ್ತು ಬೇರೆ ಕಡೆಗಳಲ್ಲಿ ಅಧಿಕ ಸಂಖ್ಯೆಯಲ್ಲಿ ಮೋಸದಿಂದ ಮತ್ತು ಕಳ್ಳತನದಿಂದ ಎಟಿಎಂಗಳಲ್ಲಿ ಕಾರ್ಡ ಬದಲಾವಣೆ ಮಾಡಿ ಎಟಿಎಂ ಕಾರ್ಡಗಳಿಂದ ಹಣ ಡ್ರಾ ಮಾಡಿ ಕೊಳ್ಳುವ ಪ್ರಕರಣಗಳು ವರದಿಯಾಗುತ್ತಿದ್ದರಿಂದ,
ಸಾರ್ವಜನಿಕರು ಯಾವುದೋ ಉದ್ದೇಶದಿಂದ ಕಳೆದುಕೊಂಡ ಮೊಬೈಲ್ ಗಳನ್ನು ಪತ್ತೆ ಕುರಿತು ವೃತ್ತದ ಠಾಣೆಗಳಲ್ಲಿ ನೀಡಿದ ದೂರಿನ ಅನ್ವಯ ಮೊಬೈಲ್ ಗಳನ್ನು ಪತ್ತೆ ಮಾಡುವ ಕುರಿತು ಡಿ. ವಾಯ್.ಎಸ್.ಪಿ.ವೆಂಕಟಪ್ಪ ನಾಯಕ ರವರ ಮಾರ್ಗದರ್ಶನದಲ್ಲಿ, ಸಿಪಿಐ ರವಿಕುಮಾರ ಕಪ್ಪತನವರ ರವರ ನೇತೃತ್ವದಲ್ಲಿಸಿಬ್ಬಂದಿಯವರಾದ ರಾಮಪ್ಪ,ಎ.ಎಸ್.ಐ, ಸಂಗನಗೌಡ ಪಿಸಿ-498, ಆದಯ್ಯ ಪಿಸಿ-67, ಅನಿಲ್ ಕುಮಾರ ಪಿಸಿ 447, ಪ್ರಕಾಶ ಪಿಸಿ-413 ರವರ ವಿಶೇಷ ತಂಡವನ್ನು ರಚಿಸಲಾಗಿತ್ತು.

ಈ ತಂಡದ ಅಧಿಕಾರಿ ಮತ್ತು ಸಿಬ್ಬಂದಿ ಯವರು ಹಗಲಿರುಳು ಶ್ರಮಿಸಿ ಎಂಟಿಎಂ ಕಾರ್ಡ ಬದಲಾವಣೆ ಮಾಡಿ ಹಣ ಡ್ರಾ ಮಾಡುವ ಅಂತರಾಜ್ಯ ಕಳ್ಳನಾದ ವೆಲಪು ವೀರ ಸುಬ್ಬ ರಾಯಡು ತಂದೆ ವೆಲಪು ಸುಬ್ಬಲಯ್ಯ, ವಯಾ: 45 ವರ್ಷ, ಜಾತಿ ವಡ್ಡರ, ಉದ್ಯೋಗ ಮೇಷನ ಕೆಲಸ, ಸಾ.ಅಲಂಕಾಂನಪಲ್ಲಿ, ಕಡಪ ಜಿಲ್ಲಾ,ರಾಜ್ಯ ಆಂಧ್ರ ಪ್ರದೇಶ ಇವನನ್ನು ಬಂಧಿಸಿರುತ್ತಾರೆ. ಸದರಿಯವನ ವಿರುದ್ಧ ಆಂಧ್ರ ಪ್ರದೇಶ ರಾಜ್ಯದ ಕಡಪ, ನೆಲ್ಲೂರು, ಕರ್ನೂಲ್ ಜಿಲ್ಲೆಗಳಲ್ಲಿ ಪ್ರಕರಣಗಳು ದಾಖಲಾಗಿದ್ದು ಇರುತ್ತದೆ.

ಅಕ್ಟೋಬರ್ 5 ರಂದು ಆರೋಪಿತನನ್ನು ಹಿಡಿದು ಅವನ ಕಡೆಯಿಂದ ವಿವಿಧ ಬ್ಯಾಂಕಿನ 25 ಎಟಿಎಂ ಕಾರ್ಡಗಳನ್ನು ಮತ್ತು ನಗದು ಹಣ ರೂ.19 ಸಾವಿರ ಹಣವನ್ನು ಜಪ್ತಿ ಮಾಡಿಕೊಂಡು ಪ್ರಕರಣವನ್ನು ಬೇದಿಸಲಾಗಿದೆ. ಆದರೆ ಎಟಿಎಂ ಕಾರ್ಡ್ ಆರೋಪಿತನ ಪತ್ಯೆ ಕಾರ್ಯವನ್ನು ಎಸ್ಪಿ ಮತ್ತು ಹೆಚ್ಚುವರಿ ಎಸ್‌ಪಿ ರಾಯಚೂರು ರವರು ಶ್ಲಾಘನೀಯ ವ್ಯಕ್ತಪಡಿಸಿದ್ದಾರೆ ಎಂದು ಡಿವಾಯ್. ಎಸ್.ಪಿ. ವೆಂಕಟಪ್ಪ ನಾಯಕ ಸುದ್ದಿ ಗೋಷ್ಟಿಯಲ್ಲಿ ತಿಳಿಸಿದರು.

ಸಾರ್ವಜನಿಕರು ಕಳೆದು ಕೊಂಡಿದ್ದ ಸಿಂದನೂರು ನಗರ ಪೊಲೀಸ್ ಠಾಣೆ 26,ಗ್ರಾಮೀಣ ಪೋಲಿಸ್ ಠಾಣೆ 10, ತುರ್ವಿಹಾಳ ಪೋಲಿಸ್ ಠಾಣೆ 04 ಅಂದಾಜು ರೂ. 5 ಲಕ್ಷ ಮೌಲ್ಯದ ಒಟ್ಟು 40 ಮೊಬೈಲ್‌ ಪೋನ್‌ಗಳನ್ನು ಪತ್ತೆ ಮಾಡಿರುತ್ತಾರೆ. ಸದರಿ ಮೊಬೈಲ್‌ಗಳನ್ನು ಸಂಬಂಧಪಟ್ಟ ವಾರಸು ದಾರರಿಗೆ ಈ ದಿನ ಹಿಂದಿರುಗಿಸಲಾಯಿತು.

ಈ ಕುರಿತು ಮೊಬೈಲ್ ಕಳೆದುಕೊಂಡ ಮಹಿಳೆ ಕವಿತಾ ಗೋರೆಬಾಳ ಮಾತನಾಡಿ ತಾಲೂಕಿನ ಪೋಲಿಸ್ ರು ತಮ್ಮ ಕರ್ತವ್ಯ ನಿಷ್ಠೆಯಿಂದ ಕಳೆದು ಹೋದ 35 ಸಾವಿರ ರೂಪಾಯಿ ಬೆಲೆ ಬಾಳುವ ನನ್ನ ಮೊಬೈಲ್ ಪತ್ತೆ ಹಚ್ಚಿ ವಾಪಾಸು ಕೊಟ್ಟಿದ್ದಕ್ಕೆ ಪೋಲಿಸ್ ನ ಎಲ್ಲಾ ಅಧಿಕಾರಿಗಳಿಗೆ ಧನ್ಯವಾದಗಳು ಎಂದು ತಿಳಿಸಿದರು. ಈ ಕಾರ್ಯಚರಣೆಗೆ ತಾಲೂಕಿನ ಸಾರ್ವಜನಿಕರಿಂದಲೂ ಕೂಡ ಮೆಚ್ಚುಗೆ ವ್ಯಕ್ತಪಡಿಸಿ ಅಭಿನಂದನೆ ಸಲ್ಲಿಸಿದ್ದಾರೆ.

ಈ ಸಂದರ್ಭದಲ್ಲಿ ಡಿವಾಯ್. ಎಸ್.ಪಿ.ವೆಂಕಟಪ್ಪ ನಾಯಕ,ಸಿಪಿಐ ರವಿಕುಮಾರ ಕಪ್ಪತನವರ , ಗ್ರಾಮೀಣ ಪಿಎಸ್ ಐ ಯರಿಯಪ್ಪ, ಸಂಚಾರಿ ಪಿಎಸ್ ಐ ಬಸವರಾಜ ಸಿಬ್ಬಂದಿಯವರಾದ ರಾಮಪ್ಪ, ಎ.ಎಸ್.ಐ, ಸಂಗನಗೌಡ ಪಿಸಿ ಆದಯ್ಯ,ಪಿಸಿ ಅನಿಲ್ ಕುಮಾರ ಪಿಸಿ ಪ್ರಕಾಶ ಇನ್ನಿತರ ಸಿಬ್ಬಂದಿಗಳು ಇದ್ದರು…

ವರದಿ. ದುಗ್ಗಪ್ಪ ಸಿಂಧನೂರು

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend