ಕುನ್ನಟಗಿ ಪಿಕಪ್ ಕಳಪೆ ಅದಿಕಾರಿಗಳ ತರಾಟೆ ತೆಗೆದುಕೊಂಡ ಶಾಸಕ ನಾಡಗೌಡ.

Listen to this article

ಕುನ್ನಟಗಿ ಪಿಕಪ್ ಕಳಪೆ ಅದಿಕಾರಿಗಳ ತರಾಟೆ ತೆಗೆದುಕೊಂಡ ಶಾಸಕ ನಾಡಗೌಡ.
ಸಿಂಧನೂರು :ಅ.5. ಪೀಕಪ್ ಡ್ಯಾಮ ಕಳಪೆ ಕಾಮಗಾರಿ ಮಾಡಿದನ್ನು ಕಂಡು ಮಾಜಿ ಸಚಿವ ಹಾಗೂ ಶಾಸಕ ವೆಂಕಟರಾವ್ ನಾಡಗೌಡ ಮೇಲಾಧಿಕಾರಿಗಳ ಹಾಗೂ ಗುತ್ತಿಗೆದಾರರ ವಿರುದ್ಧ ಗರಂ ಆಗಿ ತರಾಟೆ ತೆಗೆದುಕೊಂಡರು. ಕಳಪೆ ಕಾಮ ಗಾರಿಗೆ ಕಾರಣವಾದ ಅಧಿಕಾರಿಗಳನ್ನು ಕೂಡಲೇ ಅಮಾನತ್ತು ಮಾಡಿ ಗುತ್ತಿಗೆದಾರ ಮೇಲೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸ್ಥಳದಲ್ಲಿದ್ದ ನೀರಾವರಿ ಇಲಾಖೆಯ ಅದಿಕಾರಿಗಳನ್ನು ತೀರ್ವವಾಗಿ ತರಾಟೆಗೆ ತೆಗೆದುಕೊಂಡರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕರು ತಾಲೂಕಿನ ಕುನ್ನಟಗಿ ಗ್ರಾಮದಲ್ಲಿ 1ಕೋಟಿ ರೂಗಳಲ್ಲಿ ಬ್ರೀಜ್ ಕಂ ಬ್ಯಾರೇಜ್ ಕಾಮ ಗಾರಿ ಮುಗಿದಿದ್ದು,ಅದು ನಿರಂತರ ಮಳೆಯಿಂದಾಗಿ ಹಾಗೂ ಬ್ರಿಜ್ ನ ಪಕ್ಕದಲ್ಲಿರುವ ಹಳ್ಳದಲ್ಲಿ ಜಾಲಿ ಗಿಡಗಳನ್ನು ಕಡಿದು ಸ್ವಚ್ಛಗೊಳಿಸದೆ ಸಮತಟ್ಟು ಮಾಡದ ಕಾರಣ ನೀರು ಒಂದೇ ಕಡೆ ಹರಿಯುವದ ರಿಂದ, ಸ್ಥಳೀಯರು ಪೈಪಗಳನ್ನು ಅಳವಡಿಸಲು ಒತ್ತಾಯ ಮಾಡಿದ ಕಾರಣ ಅಥವಾ ಅಧಿಕಾರಿಗಳ ಲೋಪದಿಂದಾಗಿ ಏನೇ ತಪ್ಪುಗಳಾಗಿರಲಿ ಸಂಬಂಧ ಪಟ್ಟ ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ತೆಗೆದು ಕೊಳ್ಳ ‌ಲು ಮೇಲಾಧಿಕಾರಿಗಳಿಗೆ ಸೂಚನೆ ನೀಡಿ ದ್ದೇನೆ ಎಂದರು.


ಕಾಮಲೆ ಕಣ್ಣಿಗೆ ಕಾಣುವುದೆಲ್ಲ ಹಳದಿಯಾಗಿ ಕಾಣುತ್ತದೆ. ಬಾಬುಗೌಡರು ತಮ್ಮ ಐದು ವರ್ಷದ ಆಡಳಿತ ಅವಧಿಯಲ್ಲಿ ಪ್ರತಿ ಕೆಲಸದಲ್ಲಿಯೂ ತಮ್ಮ ಕುಟುಂಬದವರು ಗುತ್ತೇದಾರರ ಜೊತೆಗೂಡಿ ಕಳಪೆ ಕೆಲಸ, ಬೋಗಸ್ ಬಿಲ್, 60 ಲಕ್ಷ ರೂಪಾಯಿ ಕೆಲಸ ಮಾಡಿ ಒಂದು ಕೋಟಿ ರೂಪಾಯಿಗಳ ಬಿಲ್ ಮಾಡಿಕೊಂಡಿರುವ ಅನೇಕ ಉದಾಹರಣೆಗಳು ನನ್ನ ಬಳಿ ಇವೆ. ಹಂಪನಗೌಡರು ಜನರಿಗೆ ಮೋಸ ಮಾಡಿ ರಾಜಕೀಯ ಮಾಡಿಕೊಂಡು ಬಂದಿದ್ದಾರೆ. ಅವರ ಹಾಗೆ ನಮ್ಮ ಮೇಲೆ,ನಮ್ಮ ಕುಟುಂಬದವರ ಮೇಲೆ ಕೆಲಸದಲ್ಲಿ ಶಾಮಿಲ್ ಆಗಿದ್ದಾರೆಂದು ಸುಳ್ಳು ಆರೋಪ ಮಾಡುತ್ತಿದ್ದಾರೆ. ಆದರೆ ಆರೋಪ ಮಾಡೋಬೇಕಾದರೆ ತಮ್ಮ ಬಳಿ ದಾಖಲೆಗಳಿದ್ದರೆ ತೋರಿಸಿ, ನಮ್ಮ ಕುಟುಂಬದವರು ಈ ಕೆಲಸದಲ್ಲಿ ಭಾಗಿಯಾಗಿದ್ದರೆ, ಕೆಲಸದ ಮೇಲೆ ಯಾವತ್ತಾದರೂ ಬಂದಿದ್ದು ದಾಖಲೆಗಳಿದ್ದರೆ ತೋರಿಸಿ ಎಂದು ತಿರುಗೇಟು ನೀಡಿದರು.
ನಮ್ಮ ಕುಟುಂಬದವರು ಯಾರು ಕಾಂಟ್ರಾಕ್ಟರ್ ಗಳು ಇಲ್ಲಾ.ಸುಳ್ಳು ಆಪಾದನೆಮಾತನಾಡುವುದನ್ನು ಬಿಟ್ಟು ದಾಖಲೆ ಸಹಿತ ಮಾತನಾಡಿ ನಾಡಗೌಡ್ರು 48 ಪರ್ಸೆಂಟೇಜ್ ತೆಗೆದುಕೊಳ್ಳುತ್ತಾರೆ ಎಂಬ ಆಪಾದನೆ ಗೆ ನಿಮ್ಮ ಬಳಿ ಏನು ದಾಖಲೆಗಳಿವೆ. ಕೆಲಸದಲ್ಲಿ ಪರ್ಸೆಂಟೇಜ್ ತೆಗೆದುಕೊಳ್ಳುವುದು ಏನಾದರೂ ಇದ್ದರೆ ಅದು ಎರಡು ರಾಷ್ಟ್ರೀಯ ಪಕ್ಷಗಳಲ್ಲಿ ಇದೆ. ನೀವೇ ಒಬ್ಬರ ಮೇಲೊಬ್ಬರು ಕೆಸರೆರಚಾಟ ಮಾಡಿ ಕೊಳ್ಳುತ್ತಿದ್ದೀರಿ.ಅದನ್ನು ಬಿಟ್ಟು ನಮ್ಮ ಮೇಲೆ ಸುಳ್ಳು ಆಪಾದನೆ ಮಾಡುವುದನ್ನು ಬಿಟ್ಟು ನೇರ ರಾಜಕೀಯ ಮಾಡುವುದನ್ನು ಕಲಿತುಕೊಳ್ಳಿರಿ ಎಂದರು.
ಕಾಂಗ್ರೆಸ್ ಮುಖಂಡ ಬಾಬುಗೌಡ ಸ್ಥಳೀಯ ಗ್ರಾಮಸ್ಥರು ಆರೋಪ ಮಾಡದಿದ್ದಾಗ ಬೇರೆ ಗ್ರಾಮದ ಗ್ರಾಮಸ್ಥರನ್ನು ಕರೆದುಕೊಂಡು ಬಂದು ಪತ್ರಕರ್ತರ ಮುಂದೆ ಬಲವಂತವಾಗಿ ನೀವು ಹೇಳಿ ನೀವು ಹೇಳಿ ಎಂದು ಗ್ರಾಮಸ್ಥರಲ್ಲದವರನ್ನು ಹೇಳಿಕೆ ನೀಡಲು ಹೇಳುತ್ತಾರೆ. ಯಾರು ಮುಂದೆ ಬರಲಿಲ್ಲ ಅದನ್ನು ನಾನು ಗಮನಿಸಿದ್ದೇನೆ. ಇಂತಹ ಕೀಳು ಮಟ್ಟದ ರಾಜಕೀಯ ಮಾಡುವವರಿಗೆ ಒಂದು ವಾರದ ನಂತರ ಎಲ್ಲವನ್ನೂ ದಾಖಲೆ ಸಮೇತ ಬಿಚ್ಚಿಡಲಿದ್ದೇನೆ ಎಂದರು.


ಈ ಸಂದರ್ಭದಲ್ಲಿ ವೆಂಕೋಬಣ್ಣ ಕಲ್ಲೂರು, ವೀರನಗೌಡ, ಶಿವಪ್ಪ ನಾಯಕ, ಅಮರೇಗೌಡ, ವೆಂಕೊಬ ಬಾವಿಕಟ್ಟಿ, ಸುರೇಶ, ಅಮರೇಶ ಪಗಡದಿನ್ನಿ, ವಿಜಯ ರೆಡ್ಡಿ, ನಿರುಪಾದಿ, ಪರಸಪ್ಪ, ಗುತ್ತಿಗೆದಾರ ಜಕ್ಕರಾಯ,ನೀರಾವರಿ ಇಲಾಖೆಯ ಇಇ ನಾಗನ ಗೌಡ,ಎಇಇ ಸೂಗಪ್ಪ ಸೇರಿದಂತೆ ಇತರರು ಇದ್ದರು ಆದರೆ ಕೆಲಸ ಮಾಡಿದ ಗುತ್ತಿದಾರ ಮಾತ್ರ ನಾಪತ್ತೆಯಾಗಿದ್ದು ಕಂಡುಬಂತು..

ವರದಿ. ದುಗ್ಗಪ್ಪ ಸಿಂಧನೂರು

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend