ತಾಲೂಕಾಡಳಿತದಿಂದ ಗಾಂಧಿ ಜಯಂತಿ ಆಚರಣೆ …!!!

Listen to this article

ತಾಲೂಕಾಡಳಿತದಿಂದ ಗಾಂಧಿ ಜಯಂತಿ ಆಚರಣೆ .

ಸಿಂಧನೂರು:ಅ.3. ಬ್ರಿಟಿಷರನ್ನು ಭಾರತದಿಂದ ತೊಲಗಿಸಲು ಮಹಾತ್ಮ ಗಾಂಧೀಜಿಯವರು ಲಕ್ಷಾಂತರ ಜನರೊಂದಿಗೆ ರಘುಪತಿ ರಾಘವ ರಾಜಾರಾಮ್ ಪತಿತ ಪಾವನ ಸೀತಾರಾಮ್ ಎಂಬ ಭಜನೆಯೊಂದಿಗೆ ಉಪ್ಪಿನ ಸತ್ಯಾಗ್ರಹದ ಅಹಿಂಸಾ ಮೂಲಕ ಭಾರತಕ್ಕೆ ಸ್ವಾತಂತ್ರ್ಯ ತಂದು ಕೊಟ್ಟ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದು ಶಾಸಕ ವೆಂಕಟರಾವ್ ನಾಡಗೌಡ ಹೇಳಿದರು.

ನಗರದ ಮಿನಿ ವಿಧಾನ ಸೌಧದ ಕಛೇರಿಯಲ್ಲಿ ತಾಲೂಕಾಡಳಿತ ವತಿಯಿಂದ ಹಮ್ಮಿಕೊಂಡಿದ್ದ ಮಹಾತ್ಮ ಗಾಂಧೀಜಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾಲಾರ್ಪಣೆ ಮಾಡಿ ಮಾತನಾಡಿದರು, ನಾಡು ಕಂಡ ಅಪರೂಪದ ರಾಜಕಾರಣಿ ಲಾಲ ಬಹದ್ದೂರ್ ಶಾಸ್ತ್ರಿ ಅವರ ಜನ್ಮದಿನವೂ ಇಂದು ಅವರನ್ನು ಸ್ಮರಿಸುತ್ತಾ ಅತ್ಯಂತ ಸರಳ,ಸಜ್ಜನಿಕೆಯ, ಪ್ರಾಮಾಣಿಕ ರಾಜಕಾರಣಿ ಹಾಗೂ ಮಾಜಿ ಪ್ರಧಾನಿ ಗಳು ಕೂಡ ಆಗಿದ್ದರು. ಶಾಸ್ತಿçಯವರ ಜೀವನ ಸಾಧನೆಗಳ ಕುರಿತು ಅರಿತುಕೊಂಡು ನಡೆಯಬೇಕು ಎಂದರು.

ಮಹಾತ್ಮಗಾಂಧೀಜಿಯವರು ಇಡೀ ದೇಶದ ನಾಲ್ಕು ದಿಕ್ಕುಗಳಲ್ಲಿ ಸುತ್ತಾಡಿ ಬಡ ಜನರ ಸಂಕಷ್ಟಗಳನ್ನು ಆರಿತು ಬ್ರಿಟಿಷರು ವಿರುದ್ಧ ಹೋರಾಡಿದರು. ಗಾಂಧಿ ಯ ಅಹಿಂಸೆ ಹೋರಾಟ ಬ್ರಿಟಿಷರು ಅನಿವಾರ್ಯ ವಾಗಿ ಭಾರತವನ್ನು ಬಿಟ್ಟು ಹೋಗಬೇಕಾಯಿತು. ಇಡೀ ವಿಶ್ವವೇ ಇಂದು ಮಹಾತ್ಮಾಜಿಯವರನ್ನು ಸ್ಮರಿಸುತ್ತಿದೆ,ಅವರ ಹೆಸರಿನಲ್ಲಿ ವಿಶ್ವ ಅಹಿಂಸಾ ದಿನವನ್ನು ಆಚರಿಸಲು ವಿಶ್ವ ಸಂಸ್ಥೆಯು ಅಂಗೀಕರಿ ಸುವ ಮೂಲಕ ಅವರಿಗೆ ನಿಜವಾದ ಗೌರವವನ್ನು ಸಮರ್ಪಿಸಿದೆ. ಅವರ ಜೀವನ ಆದರ್ಶಗಳನ್ನು ಪಾಲಿಸಬೇಕೆಂದು ಹೇಳಿದರು.

ಮಿನಿ ವಿಧಾನಸೌಧದ ಮುಂಭಾಗದಲ್ಲಿ ಗಾಂಧಿ ಸರ್ಕಲ್ ನಲ್ಲಿ ಮಹಾತ್ಮ ಗಾಂಧೀಜಿ ಪುತ್ತಳಿಗೆ ಮಾಲಾರ್ಪಣೆ ಮಾಡಿದರು .ಈ ಸಂದರ್ಭದಲ್ಲಿ ಪಿಎಲ್.ಡಿ ಬ್ಯಾಂಕ್ ಅಧ್ಯಕ್ಷ ಎಂ.ದೊಡ್ಡ ಬಸವರಾಜ, ನಗರಸಭೆ ಅಧ್ಯಕ್ಷ ಮಲ್ಲಿಕಾ ರ್ಜುನ ಪಾಟಿಲ್, ನಗರ ಯೋಜನೆ ಪ್ರಾಧಿಕಾರ ಅಧ್ಯಕ್ಷ ಮಧ್ವರಾಜ ಆಚಾರ್, ಧರ್ಮನ ಗೌಡ ಮಲ್ಕಾಪುರ, ಎಸ್ ಪಿ ಟೇಲರ್, ಚಂದ್ರಶೇಖರ್ ಹಿರೇಮಠ, ತಹಸೀಲ್ದಾರ್ ಅರುಣ್ ಹೆಚ್ ದೇಸಾಯಿ ನಗರಸಭೆ ಪೌರಾಯುಕ್ತ ಮಂಜುನಾಥ ಗುಂಡೂರು, ತಾಲೂಕ್ ಪಂಚಾಯತಿ ಇಓ.ಲಕ್ಷ್ಮೀದೇವಿ, ಲಕ್ಷ್ಮಿ ಪತ್ತಾರ್ ವಿವಿಧ ಸಂಘಟನೆ ಮುಖಂಡರು ಅಧಿಕಾರಿಗಳು ಇದ್ದರು…

ವರದಿ. ದುಗ್ಗಪ್ಪ ಸಿಂಧನೂರು

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend