ಕಲಮಂಗಿ ಪ್ರೌಢಶಾಲೆಯಲ್ಲಿ ಗಾಂಧೀ ಜಯಂತಿ…!!!

Listen to this article

ಕಲಮಂಗಿ ಪ್ರೌಢಶಾಲೆಯಲ್ಲಿ ಗಾಂಧೀ ಜಯಂತಿ.

ಸಿಂಧನೂರು :ಅ.3.ಭಾರತವನ್ನು ವಿಶ್ವಮಟ್ಟಕ್ಕೇ ರಿಸಿದ ಕೀರ್ತಿ ಗಾಂಧೀಜಿಯವರಿಗೆ ಸಲ್ಲುತ್ತದೆ
ಭಾರತ ಸ್ವಾತಂತ್ರಯ ಹೋರಾಟದ ನೇತಾರ, ಅಹಿಂಸಾ ಚಳವಳಿಯವನ್ನು ವಿಶ್ವಕ್ಕೆ ಪರಿಚಯಿಸಿದ ಮಹಾತ್ಮ ಗಾಂಧೀಜಿಯರು ಭಾರತ ದೇಶವನ್ನು ವಿಶ್ವಮಟ್ಟಕ್ಕೆ ಏರಿಸಿದ್ದಾರೆ ಎಂದು ಪ್ರೌಢಶಾಲೆಯ ಎಸ್.ಡಿ.ಎಮ್.ಸಿ ಅಧ್ಯಕ್ಷರಾದ ವಿಶ್ವನಾಥರೆಡ್ಡಿ ಹೇಳಿದರು.
ಅವರು ರವಿವಾರದಂದು ತಾಲೂಕಿನ ಕಲಮಂಗಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡಿ ದ್ದ ಮಹಾತ್ಮ ಗಾಂಧೀಜಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರೀ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡು ತ್ತಾ,ಇಡೀ ವಿಶ್ವವೇ ಇಂದು ಮಹಾತ್ಮಾಜಿಯವರನ್ನು ಸ್ಮರಿಸುತ್ತಿದೆ, ಅವರ ಹೆಸರಿನಲ್ಲಿ ವಿಶ್ವ ಅಹಿಂಸಾ ದಿನವನ್ನು ಆಚರಿಸಲು ವಿಶ್ವ ಸಂಸ್ಥೆಯು ಅಂಗೀಕರಿ ಸುವ ಮೂಲಕ ಅವರಿಗೆ ನಿಜವಾದ ಗೌರವವನ್ನು ಸಮರ್ಪಿಸಿದೆ. ಅವರ ಜೀವನ ಆದರ್ಶಗಳನ್ನು ಪಾಲಿಸಬೇಕೆಂದು ಹೇಳಿದರು.
ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಅಮರೇಶ ಗೌಡೂರು ಮಾತನಾಡುತ್ತಾ, ಗ್ರಾಮ ಪಂಚಾಯತಿ ಅಧ್ಯಕ್ಷರು, ಸದಸ್ಯರು ಮತ್ತು ಸಿಬ್ಬಂದಿಗಳು ಹಾಗೂ ಶಾಲಾ ವಿದ್ಯಾರ್ಥಿಗಳು ಮತ್ತು ಶಿಕ್ಷಕರ ಸಹಕಾರದೊಂದಿಗೆ ಸ್ವಚ್ಚತಾ ದಿವಸ ಕಾರ್ಯಕ್ರಮವನ್ನು ಸಹ ಇದೇ ಸಂದರ್ಭದಲ್ಲಿ ಏರ್ಪಡಿಸಿದ್ದು ಪ್ರತಿಯೊಬ್ಬರೂ ಸಹಕರಿಸಬೇಕೆಂದು ಮನವಿ ಮಾಡಿದರು.

ಶಾಲಾ ಪ್ರಭಾರಿ ಮುಖ್ಯೋಪಾಧ್ಯಾಯರಾದ ವೀರೇಶ ಗೋನವಾರ ಅವರು ಮಾತನಾಡುತ್ತಾ, ಸ್ವಾತಂತ್ರ್ಯ ಹೋರಾಟ ನೇತೃತ್ವ ವಹಿಸಿಕೊಂಡು ಅಸಹಕಾರ ಚಳುವಳಿ, ದಂಡಿ ಸತ್ಯಾಗ್ರಹ, ಸ್ವದೇಶಿ ಚಳವಳಿಯ ಮೂಲಕ ದೇಶದ ಜನರನ್ನು ಸ್ವಾತಂತ್ರ್ಯದ ಸಂಗ್ರಾಮಕ್ಕೆ ಧುಮುಕುವಂತೆ ಮಾಡಿದರು. ಸ್ವಚ್ಚತೆ ಮತ್ತು ರೋಗಿಗಳನ್ನು ಆರೈಕೆ ಮಾಡುವ ಅವರ ಮಾನವೀಯ ಗುಣಗಳು ಪ್ರತಿಯೊಬ್ಬ ನಾಗರಿಕರಿಗೂ ಸ್ಫೂರ್ತಿಯವನ್ನು ನೀಡುತ್ತವೆ.ಅವರ ಆದರ್ಶಗಳನ್ನು ಮೈಗೂಡಿಸಿ ಕೊಳ್ಳುವ ಮೂಲಕ ನಮ್ಮ ಜೀವನವನ್ನು ಸಾರ್ಥಕಪಡಿಸಿಕೊಳ್ಳಬೇಕು. ಅತ್ಯಂತ ಸರಳ, ಸಜ್ಜನಿಕೆಯ, ಪ್ರಾಮಾಣಿಕ ರಾಜಕಾರಣಿಗಳು ಹಾಗೂ ಮಾಜಿ ಪ್ರಧಾನಿಗಳಾದ ಲಾಲ್ ಬಹದ್ದೂರು ಶಾಸ್ತಿçಯವರ ಜೀವನ-ಸಾಧನೆಗಳ ಕುರಿತು ಹೇಳಿದರು.
ವೇದಿಕೆಯ ಮೇಲೆ ಗ್ರಾಮದ ಮುಖಂಡರಾದ ಹನುಮಂತ, ಶಾಮಣ್ಣ, ಪಿಡಿಒ ರಾಮಚಂದ್ರಪ್ಪ, ಗ್ರಾ.ಪಂ ಕಾರ್ಯದರ್ಶಿ ನಾರಾಯಣಪ್ಪ, ಮಾಜಿ ಸಾಕ್ಷರತಾ ಪ್ರೇರಕ ರೇಣುಕಪ್ಪ, ಯಂಕಪ್ಪ ಚಿಕ್ಕಭೇರಗಿ, ಶಿಕ್ಷಕರಾದ ಶರಣಪ್ಪ ಮುಳ್ಳೂರು, ಸುಭಾಶಚಂದ್ರ ಪತ್ತಾರ, ರಾಜಪ್ಪ, ಬಸವರಾಜ ಮತ್ತು ಗ್ರಾಮದ ಯುವಕರು, ಗ್ರಾಮಸ್ಥರು ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಸ್ನೇಹಾ, ಸಂಜನಾ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.
ಪ್ರತಿಜ್ಞಾವಿಧಿ ಬೋಧನೆ:ಕೇಂದ್ರ ಮತ್ತು ರಾಜ್ಯ ಸರ್ಕಾರದ ನಿರ್ದೇಶನದನ್ವಯ ‘ಸ್ವಚ್ಛತಾ ಹೀ ಸೇವಾ ಆಂದೋಲನದ’ ಕಾರ್ಯಕ್ರಮದ ಪ್ರತಿಜ್ಞಾವಿಧಿಯನ್ನು ಬೋಧಿಸಲಾಯಿತು.
ಶ್ರಮದಾನ ಕಾರ್ಯಕ್ರಮ: ಮಹಾತ್ಮ ಗಾಂಧೀಜಿ ಜಯಂತಿಯ ಅಂಗವಾಗಿ ಹಾಜರಿದ್ದ ಗ್ರಾಮ ಪಂಚಾಯತಿಯ ಸದಸ್ಯರು, ಸಿಬ್ಬಂದಿ ವರ್ಗ, ಗ್ರಾಮಸ್ಥರು, ಯುವಕರು, ಶಾಲಾ ಶಿಕ್ಷಕರು ಮತ್ತು ಶಾಲಾ ವಿದ್ಯಾರ್ಥಿಗಳಿಂದ ಶಾಲಾ ಆವರಣದಲ್ಲಿ ಶ್ರಮದಾನ ಕಾರ್ಯಕ್ರಮವನ್ನು ನೆರವೇರಿಸಲಾಯಿತು…

ವರದಿ. ದುಗ್ಗಪ್ಪ ಸಿಂಧನೂರು

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend