ಅಗಸ್ಟ್ 3-5 ರ ,11ನೇ ಕರ್ನಾಟಕ ರಾಜ್ಯ ಸಮ್ಮೇಳನಕ್ಕೆ ಭಾಗವಹಿಸಿ – ಎಂ ಗಂಗಾಧರ್…!!!

Listen to this article

ಅಗಸ್ಟ್ 3-5 ರ ,11ನೇ ಕರ್ನಾಟಕ ರಾಜ್ಯ ಸಮ್ಮೇಳನಕ್ಕೆ ಭಾಗವಹಿಸಿ – ಎಂ ಗಂಗಾಧರ್

ಸಿಂಧನೂರು : ಜುಲೈ 30. ಬಂಡವಾಳವಾದಿ ಬ್ರಾಹ್ಮಣವಾದಿ ಹಿಂದೂ ರಾಷ್ಟ್ರ ಸರ್ವಾಧಿಕಾರ ವನ್ನು ಕಿತ್ತೆಸೆಯೋಣ ! ಜನವಾದಿ ಜಾತ್ಯಾತೀತ ಶ್ರಮಿಕ ಭಾರತಕ್ಕಾಗಿ ಬಲಿಷ್ಠ ಚಳುವಳಿ ಕಟ್ಟೋಣ ! ಎಂಬ ಶೀರ್ಷಿಕೆಯಡಿ ಸಿಪಿಐ (ಎಂಎಲ್) ರೆಡ್ ಸ್ಟಾರ್ 11ನೇ ಕರ್ನಾಟಕ ರಾಜ್ಯ ಸಮ್ಮೇಳನ ಆಗಸ್ಟ್ 3 ರಿಂದ 5 ರವರೆಗೆ ಬೆಂಗಳೂರಿನಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಎಂ. ಗಂಗಾಧರ್ ತಿಳಿಸಿದರು.

ನಗರದ ಎಪಿಎಂಸಿಯ ಶ್ರಮಿಕ ಭವನದಲ್ಲಿ ಸಿಪಿಐ(ಎಂಎಲ್) ರೆಡ್ ಸ್ಟಾರ್ ರಾಜ್ಯ ಹಾಗೂ ತಾಲೂಕು ಸಮಿತಿ ಜಂಟಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದರು.

ಮೋದಿಯ ಎಂಟು ವರ್ಷದ ಆಡಳಿತದಲ್ಲಿ ಭಾರತ ಪ್ರಭುತ್ವವು ನವ ಫ್ಯಾಸಿಸ್ಟ್ ಯಂತ್ರಾಂಗವಾಗಿ ತಯಾರಾಗಿದೆ. ದುಡಿಯುವ ವರ್ಗ ಹಾಗೂ ದಮನಿತ ಜನರು ಎಲ್ಲಾ ಹಕ್ಕುಗಳನ್ನು ಕಳೆದುಕೊಂಡಿದ್ದಾರೆ. ಸಂವಿಧಾನವು ಸಂಪೂರ್ಣ ಮೂಲೆ ಗುಂಪಾಗುತ್ತಿದೆ. ಧರ್ಮ ಹಾಗೂ ಜಾತಿ ತಾರತಮ್ಯವನ್ನು ಮರು ಸ್ಥಾಪಿಸುವುದರ ಮೂಲಕ ಭಾರತವನ್ನು ಹಿಂದೂ ರಾಷ್ಟ್ರ ಮಾಡುವ ಆರ್‌ಎಸ್‌ಎಸ್ ಅಜಂಡ ವಿರಾಟ ಶಕ್ತಿಯಾಗಿ ದಾಳಿ ಮಾಡುತ್ತಿದೆ. ನಿರುದ್ಯೋಗ, ಬೆಲೆ ಏರಿಕೆ ಹಾಗೂ ಆರ್ಥಿಕ ಕುಸಿತದ ಹಿಂದಿರುವ ನವ-ಉದಾರವಾದಿ ನೀತಿಗಳ ಬಗ್ಗೆ ಎಲ್ಲಾ ಬಲ ಪಕ್ಷಗಳು ಮೌನವಹಿಸಿವೆ. ವಿರೋಧಕ್ಕಾಗಿ ವಿರೋಧ ಬಿಟ್ಟರೆ ಕಾಂಗ್ರೇಸ್ ಹಾಗೂ ಇತರೆ ಪ್ರಾದೇಶಿಕ ಪಕ್ಷಗಳು ಸಿಪಿಐ(ಎಂ)ನ ಸುತ್ತ ಇರುವ ಎಡಪಕ್ಷಗಳು ನವ-ಉದಾರವಾದದ ವಿರುದ್ಧ ಜನತಾ ಪರ್ಯಾಯ ಕಾರ್ಯಕ್ರಮ ಇಡಲು ನಿರಾಕರಿಸುತ್ತಿವೆ. ದೆಹಲಿ ರೈತರ ಆಂದೋಲನ ಉಂಟುಮಾಡಿದ ಹೊಸ ಪ್ರತಿರೋಧವನ್ನು ದೇಶದಾದ್ಯಂತ ವಿಸ್ತರಿಸಲು ಒಂದೆಡೆ ಕಾಂಗ್ರೇಸ್ ಮತ್ತೊಂದೆಡೆ ಎಡಪಕ್ಷಗಳು ಅಡ್ಡಿಯಾಗಿವೆ. ಬಿಜೆಪಿ ವಿರುದ್ಧದ ಹೋರಾಟದಲ್ಲಿ ಇವುಗಳು ಕೂಡಿ ಹೋರಾಟ ಮಾಡಿದಾಗಲೂ ಸಾಮ್ರಾಜ್ಯಶಾಹಿ ನವ- ಉದಾರವಾದ ಹಾಗೂ ಹಿಂದೂತ್ವ ಫ್ಯಾಸಿಸಂನ್ನು ಕಿತ್ತೆಸೆಯುವ ಕಾರ್ಯಕ್ರಮ ಹೊಂದಿಲ್ಲ. ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಸಿಪಿಐಎಂನ ಗುರಿ ತೃಣಮೂಲ ಕಾಂಗ್ರೇಸ್ ವಿನಾಃ ಬಿಜೆಪಿಯಾಗಿರಲಿಲ್ಲ. ಕೇರಳದ ಎಡರಂಗವು ಜಾಗತೀಕರಣ, ಉದಾರೀಕರಣ ಹಾಗೂ ಖಾಸಗೀಕರಣ ನೀತಿಗಳನ್ನೇ ಜಾರಿಗೆ ತಂದಿದೆ. ಆರ್ಥಿಕಾಧಾರಿತ ಮೀಸಲಾತಿ ತಂದ ಮೊಟ್ಟಮೊದಲ ಸರಕಾರವೆಂದರೆ, ಎಡರಂಗ ಎಂದು ದೇಶ ಸಾಕ್ಷಿ ಹೇಳುತ್ತದೆ ಎಂದು ಮಾತನಾಡಿದರು.

ಸಮ್ಮೇಳನ ಉದ್ಘಾಟನಾ ಅಧಿವೇಶನ ಆಗಸ್ಟ್ 3 ಬೆಳಿಗ್ಗೆ 11ಕ್ಕೆ ಶಿಕ್ಷಕರ ಭವನ, ಜಲಮಂಡಳಿ ಎದುರುಗಡೆ, ಬೆಂಗಳೂರುನಲ್ಲಿ ಕೆ.ಎನ್. ರಾಮ ಚಂದ್ರನ್ ಸಿಪಿಐ(ಎಂಎಲ್ ) ಪಕ್ಷದ ಪ್ರಧಾನ ಕಾರ್ಯದರ್ಶಿಗಳು ನವದೆಹಲಿ ಉದ್ಘಾಟಿಸಲಿದ್ದಾರೆ,ಬಿ.ರುದ್ರಯ್ಯ ಸಿಪಿಐ (ಎಂಎಲ್) ರಾಜ್ಯ ಕಾರ್ಯದರ್ಶಿ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ನೂ‌ರ್ ಶ್ರೀಧರ್‌ ರಾಜ್ಯ ಸಮಿತಿ ಅಧ್ಯಕ್ಷರು ಕರ್ನಾಟಕ ಜನಶಕ್ತಿ , ಎಸ್‌.ಬಾಲನ್ ಖ್ಯಾತ ಜನಪರ ವಕೀಲರು ಬೆಂಗಳೂರು, ಮಾವಳ್ಳಿ ಶಂಕರ್‌ ರಾಜ್ಯ ಸಂಚಾಲಕರು ದಸಂಸ (ಅಂಬೇಡ್ಕರವಾದ) ಬೆಂಗಳೂರು,ಕೋಟಗಾನಹಳ್ಳಿ ರಾಮಯ್ಯ ಖ್ಯಾತ ಸಂಸ್ಕೃತಿ ಚಿಂತಕರು ಬೆಂಗಳೂರು,ಎಂ.ಡಿ.ಅಮೀರ ಅಲಿ, ಡಿ.ಹೆಚ್‌, ಪೂಜಾರ, ಡಿ.ಎಸ್‌.ನಿರ್ವಾಣಪ್ಪ, ಪೂರ್ಣಿಮಾ ಎಐಆರ್ ಡಬ್ಲ್ಯೂಪಿ,ಚಿನ್ನಪ್ಪ ಕೊಟ್ರಕಿ ಉಪಸ್ಥಿತರಿರುವರು.

ಮದ್ಯಾಹ್ನ 3 ಕ್ಕೆ ವಿಚಾರ ಸಂಕಿರಣ ನವ ಫ್ಯಾಸಿಸಂ ವಿರೋಧಿ ಬಲಿಷ್ಟ ಚಳವಳಿಯ ಮುಂದಿರುವ ಸವಾಲುಗಳ ಬಗ್ಗೆ ಪಿ.ಜೆ. ಜೇಮ್ಸ್ ಪಾಲಿಟ್ ಬ್ಯೂರೊ ಸದಸ್ಯರು ಸಿಪಿಐ (ಎಂಎಲ್) ಕೊಚ್ಚಿನ್ ಪೀಠಿಕೆ ಓದಲಿದ್ದಾರೆ. ಆರ್ ಮಾನಸಯ್ಯ ಪಾಲಿಟ್ ಬ್ಯೂರೊ ಸದಸ್ಯರು ಸಿಪಿಐ(ಎಂಎಲ್) ರಾಯಚೂರು ವಿಷಯ ಮಂಡನೆ ಮಾಡಲಿದ್ದಾರೆ. ಸಂವಾದ ಸಿರಿಮನೆ ನಾಗರಾಜ, ದೇವೆಂದ್ರ ಹೆಗಡೆ , ವಿ.ನಾಗರಾಜ ರಾಜ್ಯ ಸಂಯೋಜಕರು ದಲಿತ ಸಂಘರ್ಷ ಸಮಿತಿ (ಸಯೋಜಕ), ರಂಗಸ್ವಾಮಿ ಸಂಪಾದಕರು ಬಾರುಕೋಲು ಪಾಕ್ಷಿಕ ಪತ್ರಿಕೆ ಮೈಸೂರು, ಎಂ.ಗಂಗಾಧರ ಸಿಪಿಐ(ಎಂಎಲ್) ರಾಜ್ಯ ಸಮಿತಿ ಸದಸ್ಯರು ಭಾಗವಹಿಸುವವರು ಎಂದರು.

ಪ್ರತಿನಿಧಿ ಸಮ್ಮೇಳನ ಅಗಸ್ಟ್ 4 ಮತ್ತು 5 ರಂದು ಸ್ಕೌಟ್ಸ್ ಆ್ಯಂಡ್ ಗೈಡ್ಸ್‌ ಸಭಾಂಗಣ ಮಹಾರಾಣಿ ಕಾಲೇಜು ಹತ್ತಿರ ಬೆಂಗಳೂರಿನಲ್ಲಿ ನಡೆಯಲಿದ್ದು ಜಿಲ್ಲಾ ಸಮ್ಮೇಳನದಲ್ಲಿ ಆಯ್ಕೆಗೊಂಡಪ್ರತಿನಿಧಿಗಳು ಹಾಗೂ ವೀಕ್ಷಕರು ಮತ್ತು ವಿಶೇಷ ಆಮಂತ್ರಿತರು ಭಾಗವಹಿಸುವವರು. ತಾಲೂಕಿನಿಂದ ಹೆಚ್ಚಿನ ಸಂಖ್ಯೆಯಲ್ಲಿ ಪಕ್ಷದ ಕಾರ್ಯಕರ್ತರು ಭಾಗವಹಿಸಬೇಕಾಗಿದೆ. ಕಾರಟಗಿ ರೈಲ್ವೆ ಸ್ಟೇಷನ್ ನಿಂದ ಬೆಂಗಳೂರಿಗೆ ಸಂಜೆ 6 ಘಂಟೆಗೆ ರೈಲು ಹೊರಡಲಿದ್ದು, ಅಗಸ್ಟ್ 2 ರಂದು ಸಂಜೆ 5 ಘಂಟೆಗೆ ಸುಮಾರಿಗೆ ಬರಬೇಕು ಎಂದು ಎಂ ಗಂಗಾಧರ್ ತಿಳಿಸಿದರು.

ಈ ಸಂದರ್ಭದಲ್ಲಿ ಪಕ್ಷದ ಸದಸ್ಯರಾದ, ಹೆಚ್.ಆರ್.ಹೊಸಮನಿ, ಹುಲುಗಪ್ಪ ಬಳ್ಳಾರಿ, ರುಕ್ಮೀಣೆಮ್ಮ, ಅಂಬಮ್ಮ, ಮುದಿಯಪ್ಪ ಹನುಮನಗರ ಕ್ಯಾಂಪ್, ಅಂಬಣ್ಣ, ವೆಂಕಟೇಶ ಉಪಸ್ಥಿತರಿದ್ದರು…

ವರದಿ. ದುಗ್ಗಪ್ಪ  ಸಿಂಧನೂರು

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend