ಸಿಪಿಐ(ಎಂಎಲ್)ರೆಡ್ ಸ್ಟಾರ್ ವತಿಯಿಂದ ಕಮ್ಯೂನಿಸ್ಟ್ ಕ್ರಾಂತಿಕಾರಿಗಳ ಹುತಾತ್ಮ ದಿನಾಚರಣೆ…!!!

Listen to this article

ಸಿಪಿಐ(ಎಂಎಲ್)ರೆಡ್ ಸ್ಟಾರ್ ವತಿಯಿಂದ ಕಮ್ಯೂನಿಸ್ಟ್ ಕ್ರಾಂತಿಕಾರಿಗಳ ಹುತಾತ್ಮ ದಿನಾಚರಣೆ.

ಸಿಂಧನೂರು : ಜುಲೈ. 29. ಸಿಪಿಐ(ಎಂಎಲ್)ರೆಡ್ ಸ್ಟಾರ್ ಪಕ್ಷ ತಾಲೂಕು ಸಮಿತಿ ವತಿಯಿಂದ ಎಪಿಎಂಸಿಯ ಶ್ರಮಿಕ ಭವನದ ಮುಂದೆ ಹುತಾತ್ಮರ ಸ್ಥೂಪಕ್ಕೆ ಕೆಂಪು ಹೂಗಳನ್ನು ಅರ್ಪಿಸಿ, 2 ನಿಮಿಷಗಳ ಮೌನಾಚರಣೆ ಮಾಡಿ ಜಯಘೋಷಣೆಗಳನ್ನು ಹಾಕುತ್ತಾ ಕಮ್ಯೂನಿಸ್ಟ್ ಅಂತರಾಷ್ಟ್ರೀಯ ಗೀತೆಯೊಂದುಗೆ ಅಖಿಲಭಾರತ ಕಮ್ಯೂನಿಸ್ಟ್ ಕ್ರಾಂತಿಕಾರಿಗಳ ಹುತಾತ್ಮ ದಿನಾಚರಣೆಯನ್ನು ಆಚರಿಸಲಾಯಿತು.

ಈ ಸಂದರ್ಭದಲ್ಲಿ ಅತಿಥಿಯಾಗಿ ಭಾಗವಹಿಸಿ,ಹೋರಾಟಗಾರರಾದ ನಾರಾಯಣ ಬೆಳಗುರ್ಕಿ ಮಾತನಾಡಿ, ಸ್ವತಂತ್ರ ನಂತರ ಕಾಂಗ್ರೆಸ್ ಸರಕಾರ ಜನರ ಮುಖ್ಯ ಸಮಸ್ಯೆಗಳಿಗೆ ಸ್ಪಂದಿಸುತ್ತದೆ ಎನ್ನುವ ಕಮ್ಯೂನಿಸ್ಟ್ ಹೋರಾಟಗಾರರ ನಂಬಿಕೆ ಸುಳ್ಳಾಯಿತು. ಅಲ್ಲದೆ ತೆಲಂಗಾಣ ಮುಂತಾದ ಕಡೆ ಹೋರಾಟಗಾರರನ್ನು ಕೊಲ್ಲುವ ಮೂಲಕ ತನ್ನ ಸಾಮ್ರಾಜ್ಯವಾದ ಬಂಡವಾಳಶಾಹಿ ನೀತಿಯನ್ನು ಅನುಸರಿಸಿ ಜನರ ಮೇಲೆ ದಾಳಿ ಮಾಡಿತು.ಅಂದಿನ ದಿನಗಳಲ್ಲಿ ಕಾಮ್ರೇಡ್ ಚಾರುಮುಜುಂದಾರ ಅವರು ಸಿಲಿಗುರಿಯ ಭೂಮಾಲೀಕನ ಮಗನಾಗಿ ರಾಜಶಾಹಿ ವಂಶವನ್ನು ತೊರೆದು ಭೂ ಮಾಲೀಕ ವ್ಯವಸ್ಥೆ ವಿರುದ್ಧ ಹೋರಾಟ ಮಾಡಿದವರು. ಸ್ವಂತ ತಮ್ಮ ಭೂಮಿಯನ್ನು ಭೂಹೀನರಿಗೆ ಹಂಚುವ ಮೂಲಕ ನಿಜವಾದ ಕಮ್ಮೂನಿಷ್ಟರಾಗಿ ಹೊರಹೊಮ್ಮಿದರು.

1967 ರಲ್ಲಿ ಪಶ್ಚಿಮ ಬಂಗಾಳದ ಡಾರ್ಜಿಲಿಂಗ್ ಜಿಲ್ಲೆಯ ನಕ್ಸಲ್ಬರಿ ಗ್ರಾಮದಿಂದ ಭೂಮಿಗಾಗಿ ಭೂ ರಹಿತ ಬಡವರ ವಿಮೋಚನೆಗಾಗಿ ಧಣಿವರಿಯದ ಹೋರಾಟ ಕಟ್ಟಿದರು. ಆರಂಭದಲ್ಲಿ ಸಿಪಿಎಂ ಪಕ್ಷದ ಸದಸ್ಯರಾಗಿ ನಂತರ ಸಿಪಿಐ (ಎಂಎಲ್) ಪಕ್ಕದ ಸಂಸ್ಥಾಪಕರಾಗಿ ಪ್ರಧಾನ ಕಾರ್ಯದರ್ಶಿಯಾಗಿ ಸಮರ ರೂಪದ ಹೋರಾಟಕ್ಕೆ ಚಾಲನೆ ನೀಡಿದರು. ತ್ಯಾಗ ಮತ್ತು ಬಲಿದಾನದ ಮೂಲಕ ಭಾರತದ ಕ್ರಾಂತಿಗೆ ಮುನ್ನುಡಿ ಬರೆದ ಮಹಾನಾಯಕರಾದರು. 1979ರಲ್ಲಿ ಕಮ್ಯೂನಿಸ್ಟ್ ಪಕ್ಷದ ಇತಿಹಾಸದಲ್ಲೇ ಸೈದ್ಧಾಂತಿಕ ಸ್ಪಷ್ಟತೆ ಮತ್ತು ಮಾರ್ಗ ರೂಪಿಸುವ ಎಂಟು ಐತಿಹಾಸಿಕ ದಾಖಲೆ ಎಂಬ ಡಾಕುಮೆಂಟ್ ತಯಾರಿಸಿದರು. ಇದು ಕಮ್ಯುನಿಸ್ಟ್ ಪಾರ್ಟಿಯ ಕಾರ್ಯಸೂಚಿಯಾಗಿದೆ.
ಸಾಮ್ರಾಜ್ಯವಾದ ಅಳಿಯಬೇಕು
ಭೂ ಮಾಲೀಕ ಬಂಡವಾಳಶಾಹಿ ವ್ಯವಸ್ಥೆ ಕೊನೆಗಾಣಬೇಕು. ಸಮಾಜವಾದಿ ವ್ಯವಸ್ಥೆ ಸ್ಥಾಪನೆಗೆ ಕಟಿಬದ್ದರಾಗಿ ದುಡಿದವರು. ಇಂತಹ ಕ್ರಾಂತಿಕಾರಿ ನಾಯಕರು ಇಂದಿನ ಪ್ಯಾಸಿಸ್ಟ್ ದಾಳಿಯ ವಿರುದ್ಧ ಧಣಿವರಿಯದೆ ಹೋರಾಡಲು ಬೇಕಾದ ಸೈದ್ಧಾಂತಿಕ ಬದ್ಧತೆ ಹಾಗೂ ಆಚರಣಾತ್ಮಕ ಸಿದ್ದತೆಗೆ ನೀವೇ ತೀರದ ಪ್ರೇರಣೆ. ನಿಮಗಿದೋ ಲಾಲ್ ಸಲಾಂ ಎಂದರು.

ನಂತರ ಸಿಪಿಐ(ಎಂಎಲ್) ಪಕ್ಷದ ರಾಜ್ಯ ಸಮಿತಿ ಸದಸ್ಯರಾದ ಎಂ.ಗಂಗಾಧರ ಮಾತನಾಡಿದರು.

ಈ ಸಂದರ್ಭದಲ್ಲಿ ಬಸವರಾಜ ಬಾದರ್ಲಿ,ಮಾಬುಸಾಬ ಬೆಳ್ಳಟ್ಟಿ
ತಾಲೂಕು ಕಾರ್ಯದರ್ಶಿ
ಸಿಪಿಐ(ಎಂಎಲ್)ರೆಡ್ ಸ್ಟಾರ್, ಹೆಚ್.ಆರ್.ಹೊಸಮನಿ, ಅಂಬಮ್ಮ ಬಸಾಪೂರ, ರುಕ್ಮಿಣೆಮ್ಮ, ರಾಜಾನಾಯಕ, ಮಹಾಂತೇಶ ಹೊಸಳ್ಳಿ, ತಿಕ್ಕಣ್ಣ, ತಿಮ್ಮಣ್ಣ ಜವಳಗೇರಾ, ವೆಂಕಟೇಶ ಸೇರಿದಂತೆ ಅನೇಕರು ಇದ್ದರು…

ವರದಿ.ದುಗ್ಗಪ್ಪ ಸಿಂಧನೂರು

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend