ಆರೋಗ್ಯವನ್ನು ಕಾಪಾಡಿಕೊಳ್ಳುವುದು ಪ್ರತಿಯೊಬ್ಬರ ಹಕ್ಕು – ಡಾ.ಪದ್ಮಿನಿ…!!!

Listen to this article

ಅರೋಗ್ಯವನ್ನು ಕಾಪಾಡಿಕೊಳ್ಳುವುದು ಪ್ರತಿಯೊಬ್ಬರ ಹಕ್ಕು – ಡಾ.ಪದ್ಮಿನಿ

ಸಿಂಧನೂರು: ಜುಲೈ 27. ಅರೋಗ್ಯವನ್ನು ಕಾಪಾಡಿ ಕೊಳ್ಳುವುದು ಪ್ರತಿಯೊಬ್ಬರ ಹಕ್ಕು ಆದರೆ ಗ್ರಾಮೀಣ ಪ್ರದೇಶದ ಜನರಿಗೆ ,ಮಹಿಳೆಯರಿಗೆ, ಅವಕಾಶ ವಂಚಿತರಿಗೆ ತಿಳುವಳಿಕೆ ಕೊರತೆ ಇರುತ್ತದೆ ಎಂದು ಖ್ಯಾತ ಸ್ತ್ರೀರೋಗ ತಜ್ಞೆ ಡಾ.ಪದ್ಮನಿ ಪ್ರಸಾದ ಹೇಳಿದರು.

ಉದ್ಯಮಿ ರಾಜೇಶ ಹಿರೇಮಠ ಅವರ 50ನೇ ಹುಟ್ಟುಹಬ್ಬದ ಅಂಗವಾಗಿ ಬೆಂಗಳೂರಿನ ಭರವಸೆ ಚಾರಿಟೆಬಲ್ ಫೌಂಡೇಶನ್, ಉಮಾಶಂಕರ ಗ್ರೂಪ್ ಆಫ್ ಇಂಡಸ್ಟ್ರೀಸ್, ತಾಲ್ಲೂಕು ಸಾರ್ವಜನಿಕ ಆಸ್ಪತ್ರೆ ಸಹಯೋಗದಲ್ಲಿ ಇಂದು ಕನಕದಾಸ ಕಲ್ಯಾಣ ಮಂಟಪದಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರ ಕಾರ್ಯಕ್ರಮದಲ್ಲಿ ಮಾತನಾಡಿದರು.

ಮಹಿಳೆಯರು ಆರೋಗ್ಯವನ್ನು ಮುಕ್ತವಾಗಿ ಚರ್ಚೆ ಮಾಡದೇ ತಮ್ಮ ಕೈಯಿಂದಲೇ ಹಾಳು ಮಾಡಿಕೊಳ್ಳತ್ತಾರೆ. ಇಂತಹ ಉಚಿತ ಆರೋಗ್ಯ ತಪಾಸಣೆ ಶಿಬಿರದಲ್ಲಿ ಪಾಲ್ಗೊಂಡು ಸದುಪಯೋಗ ಪಡೆದುಕೊಳ್ಳಬೇಕು. ರಾಜೇಶ ಹಿರೇಮಠ ರವರು ಹುಟ್ಟು ಹಬ್ಬವನ್ನು ತಮ್ಮ ಕುಟುಂಬದ, ಹಿತೈಸಿಗಳ ಜೊತೆ ಆಚರಣೆ ಮಾಡಬಹುದಿತ್ತು. ಆದರೆ ಇಂತಹ ಉಚಿತ ಆರೋಗ್ಯ ತಪಾಸಣಾ ಶಿಬಿರ ಏರ್ಪಡಿಸಿದ್ದಾರೆ. ಮಹಿಳೆಯರು ಸದುಪಯೋಗ ಪಡೆದುಕೊಳ್ಳಿ ಎಂದರು.

ಹುಟ್ಟು ಹಬ್ಬದ ನಿಮಿತ್ತ ಕೇಕ ಕತ್ತರಿಸಿ ಮಾತನಾಡಿದ ರಾಜೇಶ ಹಿರೇಮಠ ಯಾವುದೇ ರಾಜಕೀಯ ದುರುದ್ದೇಶದಿಂದ ಈ ಶಿಬಿರವನ್ನು ಮಾಡುತ್ತಿಲ್ಲ, ಸಾರ್ವಜನಿಕರಿಗೆ, ಬಡವರಿಗೆ, ಮಹಿಳೆಯರಿಗೆ ಒಳ್ಳೆಯದಾಗಲಿ ಎಂಬ ಸಲುವಾಗಿ ಅಲ್ಪ ಸೇವೆ ಸಲ್ಲಿಸಿದ್ದೇನೆ. ಮುಂದಿನ ದಿನಗಳಲ್ಲಿ ರೈತರಿಗೆ, ಕಾರ್ಮಿಕರಿಗೆ, ಬಡವರಿಗೆ, ಒಳ್ಳೆದಾಗುವಂತ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಲ್ಲಾರು ಸಹಕಾರ ನೀಡಬೇಕು ಎಂದರು.

ಹುಟ್ಟು ಹಬ್ಬ ಆಚರಣಾ ಸಮಿತಿ ಹಮ್ಮಿಕೊಂಡ ಉಚಿತ ಆರೋಗ್ಯ ಶಿಬಿರದಲ್ಲಿ ಖ್ಯಾತ ಸ್ತ್ರೀರೋಗ ತಜ್ಞೆ ಡಾ.ಪದ್ಮನಿ ಪ್ರಸಾದ ಹಾಗೂ ತಜ್ಞ ವೈದ್ಯರು ಪಾಲ್ಗೊಂಡು ಈ ಶಿಬಿರದಲ್ಲಿ ಲೈಂಗಿಕ ಸಮಸ್ಯೆ, ರಕ್ತ ಹೀನತೆ, ಸ್ಥನ ಕ್ಯಾನ್ಸರ್, ಮುಟ್ಟಿನ ತೊಂದರೆಗಳು ಹಾಗೂ ಬಂಜೆತನ ತಪಾಸಣೆ ಸೇರಿದಂತೆ ಇನ್ನಿತರ ರೋಗಗಳಿಗೆ ಉಚಿತ ಚಿಕಿತ್ಸೆ ಹಾಗೂ ಔಷಧ ವಿತರಿಸಲಾಯಿತು.ಇದೇ ವೇಳೆ ಸಾಂಕೇತಿಕವಾಗಿ ಬಡ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಿಸಲಾಯಿತು.

ಈ ಸಂದರ್ಭದಲ್ಲಿ ಗುತ್ತೆದಾರರ ಸಂಘದ ಅಧ್ಯಕ್ಷ ಅಶೋಕುಮಾರ ಗೌಡ ಜಯಣ್ಣ, ಬಲವಂತ ರಾವ್ ಕುಲಕರ್ಣಿ, ನೀರುಪಾದಿ ಜೋಳದರಾಶಿ, ಶಿವು ಹಿರೇಮಠ, ಮುತ್ತುಪಾಟೀಲ, ಡಾ. ಅಯ್ಯನಗೌಡ, ಡಾ. ನಾಗರಾಜ ಕಾಟ್ವಾ, ಡಾ.ಮಲ್ಲಿಕಾರ್ಜುನ ಹಚ್ಚೋಳ್ಳಿ, ಡಾ.ಅಭಿನೇತ್ರಿ ಪಾಟೀಲ್, ಡಾ. ಗೀತಾಂಜಲಿ, ಡಾ.ಯೋಗಿತಾ, ಇನ್ನಿತರರಿದ್ದರು…

ವರದಿ. ದುಗ್ಗಪ್ಪ ಸಿಂಧನೂರು

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend