ಎಚ್ಚರಿಕೆ ಪತ್ರಿಕೆ ವರದಿಗೆ ಎಚ್ಚೆತ್ತು,ಮೂಲಸೌಕರ್ಯ ಕಲ್ಪಿಸಿದ ಅಧಿಕಾರಿಗಳು….!!!

Listen to this article

ಎಚ್ಚರಿಕೆ ಪತ್ರಿಕೆ ವರದಿಗೆ ಎಚ್ಚೆತ್ತು,ಮೂಲಸೌಕರ್ಯ ಕಲ್ಪಿಸಿದ ಅಧಿಕಾರಿಗಳು.

ಸಿಂಧನೂರು : ಜುಲೈ 15. ನಗರದ ಪ್ರವಾಸಿ ಮಂದಿರದ ಹತ್ತಿರ ಇರುವ ಸಾರ್ವಜನಿಕ ಗ್ರಂಥಾಲಯದಲ್ಲಿ ಮೂಲ ಸೌಕರ್ಯ ಇಲ್ಲದಿರುವುದು ನಮ್ಮ ಪತ್ರಿಕೆಯಲ್ಲಿ ವರದಿಯಾಗಿತ್ತು,ನಿನ್ನೆ ನಗರಸಭೆ ಪೌರಾಯುಕ್ತರಾದ ಮಂಜುನಾಥ ಗುಂಡೂರು ರವರು ಬೇಟಿ ನೀಡಿ ಅಲ್ಲಿನ ಮೂಲಭೂತ ಸೌಲಭ್ಯಗಳ ಪರಿಶೀಲನೆ ಮಾಡಿ ಇಲ್ಲಿರುವ ಸಮಸ್ಯಗಳ ಕುರಿತು ಜಿಲ್ಲಾ ಮುಖ್ಯ ಗ್ರಂಥಪಾಲಕ ಡಾ.ರಾಮಕಲಾಲ ಅವರಿಗೆ ದೂರವಾಣಿ ಮೂಲಕ ಓದುಗರಿಗೆ ಯಾವುದೇ ಸಮಸ್ಯೆಯಾಗದಂತೆ ಆದಷ್ಟು ಬೇಗ ಬಗೆಹರಿಸಿ ಇಲ್ಲದಿದ್ದರೆ ಜಿಲ್ಲಾಧಿಕಾರಿಗಳ ಗಮನಕ್ಕೆ ತರಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದರು.

ಇಂದು ನಮ್ಮ ವರದಿಗೆ ಹಾಗೂ ಪೌರಾಯುಕ್ತರ ಎಚ್ಚರಿಕೆ ಎಚ್ಚೆತ್ತು ಕುಡಿಯುವ ನೀರು ಹಾಗೂ ಹೊಸದಾಗಿ ವಿಧ್ಯುತ್ ಬ್ಯಾಟರಿ ವ್ಯವಸ್ಥೆ ಕಲ್ಪಿಸಿ ಕೊಡಲು ಬಂದಿದ್ದ ಅಧಿಕಾರಿಗೆ ವಿಧ್ಯಾರ್ಥಿನಿಯರು ಕುಳಿತು ಕೊಳ್ಳುಲು ಚೇರಗಳು,ಸ್ಪರ್ಧಾತ್ಮಕ ಪುಸ್ತಕಗಳು ಇಲ್ಲದಿರುವ ಬಗ್ಗೆ ತಿಳಿಸಿದಾಗ ಸ್ಥಳದಲ್ಲಿದ್ದ ಗ್ರಂಥಾಪಾಲಕ ವಿಶ್ವನಾಥ ಕುಲಕರ್ಣಿ ಇಂದೇ ಹೈವೊಲ್ಟೆಜ್ ಎಲ್.ಇ.ಡಿ. ಬಲ್ಪ್ , ಸ್ಪರ್ಧಾತ್ಮಕ ಪುಸ್ತಕಗಳು ಸೇರಿದಂತೆ ಅವಶ್ಯಕತೆ ಇರುವಷ್ಟು ಚೇರಗಳನ್ನು ತರಿಸಿ ಕೊಡುವಂತೆ ಸೂಚನೆ ನೀಡಿದರು.

ನಂತರ ಪತ್ರಿಕೆ ಜೊತೆ ಮಾತನಾಡಿದ ಮುಖ್ಯ ಗ್ರಂಥಾಪಾಲಕ ಡಾ. ರಾಮಕಲಾಲ ಗ್ರಂಥಾಲದಲ್ಲಿರುವ ಮೂಲಭೂತ ಸೌಲಭ್ಯಗಳ ಕುರಿತು ಪತ್ರಿಕೆಯಲ್ಲಿ ಪ್ರಕಟವಾಗಿತ್ತು ಹಾಗೂ ನಗರಸಭೆ ಪೌರಾಯುಕ್ತರು ನಮಗೆ ದೂರವಾಣಿ ಕರೆ ಮಾಡುವುದರ ಮೂಲಕ ತಿಳಿಸಿದ್ದರು. ಇಂದು ಖುದ್ದಾಗಿ ಭೇಟಿ ನೀಡಿ ಇಲ್ಲಿರುವ ಎಲ್ಲ ಮೂಲಭೂತ ಸಮಸ್ಯೆಗಳನ್ನು ಬಗೆಹರಿಸಿದ್ದೇನೆ ಎಂದರು.

ನನ್ನ ಮೊಬೈಲ್ ನಂಬರ್ ಪ್ರತಿಯೊಬ್ಬರು ತೆಗೆದುಕೊಳ್ಳಿ ಓದಿಕೊಳ್ಳಲು ಇನ್ನೇನಾದರೂ ಸಮಸ್ಯಗಳಿದ್ದರೆ ನೇರವಾಗಿ ನನ್ನ ಗಮನಕ್ಕೆ ತಿಳಿಸಿ, ಸ್ಪರ್ಧಾತ್ಮಕ ಪರೀಕ್ಷೆಗೆ ಬೇಕಾಗುವ ಪುಸ್ತಕಗಳನ್ನು ಓದಿ ಒಳ್ಳೆಯ ವಿಧ್ಯಾಭ್ಯಾಸ ಪಡೆಯಿರಿ ಎಂದು ವಿದ್ಯಾರ್ಥಿಗಳಿಗೆ ಹೇಳಿದರು.

ಪತ್ರಿಕೆ ಜೊತೆ ಮಾತನಾಡಿದ ವಿಧ್ಯಾರ್ಥಿನಿಯೊಬ್ಬರು ಗ್ರಂಥಾಲಯದಲ್ಲಿನ ಮೂಲಭೂತ ಸೌಲಭ್ಯಗಳ ಕೊರತೆ ಬಗ್ಗೆ ಅಧಿಕಾರಿಗಳಿಗೆ ತಿಳಿಸಿದರು ಯಾವುದೇ ಪ್ರಯೋಜನವಾಗಿರಲಿಲ್ಲ, ಈ ಕುರಿತು ಪತ್ರಿಕೆಯಲ್ಲಿ ಸುದ್ದಿ ಪ್ರಕಟವಾಗಿತ್ತು ಅಧಿಕಾರಿಗಳು ಎಚ್ಚೆತ್ತುಕೊಂಡು ಇಲ್ಲಿರುವ ಸಮಸ್ಯೆಗಳನ್ನು ಬಗೆಹರಿಸಿದ್ದಾರೆ. ಮೂಲಭೂತ ಸೌಲಭ್ಯ ಕಲ್ಪಿಸಿದ ಮುಖ್ಯ ಗ್ರಂಥಪಾಲಕ ಅಧಿಕಾರಿ ಡಾ.ರಾಮಕಲಾಲ , ನಗರಸಭೆ ಪೌರಾಯುಕ್ತ ಮಂಜುನಾಥ ಗುಂಡೂರು, ಸುದ್ದಿ ಪ್ರಕಟ ಮಾಡಿದ ಪತ್ರಿಕೆಯವರಿಗೆ ಧನ್ಯವಾದಗಳು ತಿಳಿಸಿದರು.

ಈ ಸಂದರ್ಭದಲ್ಲಿ ಸಾರ್ವಜನಿಕ ಗ್ರಂಥಾಪಾಲಕ ವಿಶ್ವನಾಥ ಕುಲಕರ್ಣಿ, ನಗರಸಭೆ ಗ್ರಂಥಪಾಲಕ ನಾಗಪ್ಪ ಸುಕಾಲಪೇಟೆ, ಮಸ್ಕಿ ದ್ಯಾಮಣ್ಣ ವಿರುಪಾಪೂರು ಗ್ರಂಥಪಾಲಕ ಇದ್ದರು…

ವರದಿ. ದುಗ್ಗಪ್ಪ ಸಿಂಧನೂರು

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend