ಕೆ.ಆರ್.ಎಸ್.ನಿಂದ ಜುಲೈ19 ರಿಂದ ಅನಿರ್ದಿಷ್ಟಾವಧಿ ಧರಣಿ…!!!

Listen to this article

ಕೆ.ಆರ್.ಎಸ್.ನಿಂದ ಜುಲೈ19 ರಿಂದ ಅನಿರ್ದಿಷ್ಟಾವಧಿ ಧರಣಿ.

ಸಿಂಧನೂರು : ಜುಲೈ.12.ಕರ್ನಾಟಕ ರೈತ ಸಂಘ (KRS-AIKKS)ವತಿಯಿಂದ ಮಸ್ಕಿ,ಸಿಂಧನೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಮಗಳ ಬಗ‌ರಹುಕುಂ ರೈತರ ಸಾಗುವಳಿ ಭೂಮಿಗೆ ಪಟ್ಟಾ ಹಾಗೂ ನಿವೇಶನ ಹಕ್ಕುಪತ್ರ ನೀಡಲು ಹಾಗೂ ಇನ್ನಿತರ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ಜುಲೈ19 ರಿಂದ ಸಿಂಧನೂರಿನ ತಹಸೀಲ್ದಾರ್ ಕಾರ್ಯಾಲಯದ ಮುಂದೆ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ ಎಂದು ಡಿ. ಎಚ್ ಪುಜಾರ್ ತಿಳಿಸಿದರು.

ನಗರದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದರು. ಸಿಂಧನೂರು, ಮತ್ತು ಮಸ್ಕಿ ವಿಧಾನಸಭಾ ಕ್ಷೇತಗಳ ನೂರಾರು ಗ್ರಾಮಗಳಲ್ಲಿ 3 ತಲೆಮಾರುನಿಂದ ಸಾಗುವಳಿ ಮಾಡುವ ರೈತರಿಗೆ ಭೂಮಿ ಪಟ್ಟಾ ದೊರೆತಿರುವುದಿಲ್ಲ. ಅಕ್ರಮ-ಸಕ್ರಮ ಕಾಯ್ದೆಯ ಪಾರಂ ನಂ.50, 53, 57 ಅಡಿಯಲ್ಲಿ ಆರ್ಜಿ ಸಲ್ಲಿಸಿದರೂ ತಹಸೀಲ್ದಾರರು ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಭೂಮಿಯ ಪಟ್ಟಾ ನೀಡುತ್ತಿಲ್ಲ. ಹತ್ತಾರು ಸಾವಿರ ಲಂಚ ಕೊಟ್ಟವರಿಗೆ ಮಾತ್ರ ಭೂ ಮಂಜೂರಾತಿ ದೊರೆಯುತ್ತದೆ. ಹಣ ಕೊಡಲು ಸಾಧ್ಯವಾಗದ ಬಡ ರೈತರ ಅರ್ಜಿಗಳನ್ನು ತಿರಸ್ಕರಿಸಲಾಗುತ್ತದೆ.

30 ವರ್ಷಗಳ ಹಿಂದೆ ನಿಡಿಗೋಳ ಗ್ರಾಮದ ಸರ್ವೆ ನಂ.15ರಲ್ಲಿ ಭೂ ಮಂಜುರಾತಿ ಪಡೆದ 10 ಕುಟುಂಬಗಳಿಗೆ ಪೂರ್ಣ ಪ್ರಮಾಣದ ಭೂಮಿ ನೀಡದೆ, ಈ ಭೂಮಿಗೆ ಹೊಂದಿಕೊಂಡಿರುವ 6 ಎಕರೆ ನಾಲಾ ಭೂಮಿಯನ್ನು ಆ ಗ್ರಾಮದ 7 ಜನ ದಲಿತರು ಸಾಗುವಳಿ ಮಾಡುತ್ತಿದ್ದರು,ಸರ್ವೆ.ನಂ15 ರಲ್ಲಿ ಸರ್ಕಾರಿ ಭೂಮಿಯಲ್ಲಿ ದೊಡ್ಡ ದೊಡ್ಡ ಶ್ರೀಮಂತರು ನಿವೇಶನಗಳನ್ನು ಕೂಡ ಪಡೆದುಕೊಂಡಿದ್ದಾರೆ. 3 ಎಕರೆ ಸರ್ಕಾರಿ ಭೂಮಿಯನ್ನು ಮಂಜೂರು ಮಾಡಿಸಿಕೊಂಡಿದ್ದಾರೆ ಎಂದು ಆರೋಪ ಮಾಡಿದರು.

ರೌಡಕುಂದಾ ಗ್ರಾಮದ ಸರ್ವೆ ನಂ.214ರ ಭೂಮಿಯಲ್ಲಿ ಕೋಟ್ಯಂತರ ಬೆಲೆ ಬಾಳುವ 33 ಎಕರೆ 16 ಗುಂಟೆ ಸರ್ಕಾರಿ ಜಮೀನನ್ನು ಗೊರೇಬಾಳ ಸ್ವಾಮಿ, ಸೋಮಲಾಪುರ ಸೀಮಾದ ಸರ್ವೆ 71ರ 3 ಎಕರೆ 27 ಗುಂಟೆ ಸರಕಾರಿ ಭೂಮಿಯನ್ನು ಬೂದಿವಾಳ್‌ ಕ್ಯಾಂಪಿನ ಶ್ರೀಮಂತ ರೈತರೊಬ್ಬರು ಅಕ್ರಮವಾಗಿ ಸಾಗುವಳಿ ಮಾಡುತ್ತಿದ್ದಾರೆ. ಒಟ್ಟು ರಾಜ್ಯದಲ್ಲಿ 20 ಲಕ್ಷ ಎಕರೆ ಅತಿಕ್ರಮಣ ಆಗಿದೆ, ಅದರಲ್ಲಿ 12 ಲಕ್ಷ ಭೂಮಿಯಲ್ಲಿ 6 ಲಕ್ಷ ಹೆಕ್ಟೇರ್ ಬಡವರಿಗೆ ಹಚ್ಚುತ್ತೇವೆ ಎಂದು ಸುಳ್ಳು ಹೇಳಿ ರಾಜ್ಯ ಸರ್ಕಾರ ಬಡವರಿಗೆ ಮೋಸಮಾಡಿದೆ ಎಂದರು.

ಸರ್ಕಾರಿ ಭೂಮಿ, ಪರಂಪೂಕ, ಗೋಮಾಳ, ಹೆಚ್ಚುವರಿ, ಅರಣ್ಯ ಇತರೆ ಭೂಮಿಯಲ್ಲಿ ಅರ್ಜಿ ಹಾಕಿದ ಎಲ್ಲಾ ರೈತರ ಜಮೀನು ಸ್ಥಳಕ್ಕೆ ಗ್ರಾಮ ಲೆಕ್ಕಾಧಿಕಾರಿಗಳು ಹಾಗೂ ಕಂದಾಯ ನಿರೀಕ್ಷಕರು ತೆರಳಿ ಜನರ ಸಮಕ್ಷಮದಲ್ಲಿ ಪಂಚನಾಮೆ ಮಾಡಬೇಕು.ನಗರದ ದೋಬಿಗಲ್ಲಿ ನಲ್ಲಿ 768/ 1ರಲ್ಲಿ ವಾಸಮಾಡುವ ನಿವಾಸಿಗಳಿಗೆ ಹಕ್ಕುಪತ್ರ ನೀಡಬೇಕು.ಏಳುರಾಗಿ ಕ್ಯಾಂಪ್‌ನಲ್ಲಿ ವಾಸ ಮಾಡುವ ಜನರಿಗೆ ಹಕ್ಕುಪತ್ರ ಕೊಡಬೇಕು ಇನ್ನಿತರ ಬೇಡಿಕೆಗಳ ಹಕ್ಕೊತ್ತಾಯಗಳಿಗಾಗಿ ಒತ್ತಾಯಿಸಿ ಜುಲೈ 19 ರಂದು ತಹಸೀಲ್ ಕಾರ್ಯಾಯದ ಮುಂದುಗಡೆ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ ತಾಲೂಕಿನ ರೈತರು ಕಾರ್ಮಿಕರು, ವಿದ್ಯಾರ್ಥಿ ಯುವಜನರು ಭಾಗವಹಿಸಬೇಕೆಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರಾದ ಅಶೋಕ ನಿಲೋಗಲ್, ಬಿ. ಎನ್. ಯರದಿಹಾಳ ಜಿಲ್ಲಾ ಕಾರ್ಯದರ್ಶಿ, ರಮೇಶ್ ಪಾಟೀಲ ತಾಲೂಕು ಅಧ್ಯಕ್ಷ ರು, ಚಿಟ್ಟಿಬಾಬು ತಾಲೂಕು ಉಪಾಧ್ಯಕ್ಷರು, ಸಂತೋಷ ಹೀರೆದಿನ್ನಿ ,ಮಾರುತಿ ಜನ್ನಾಪೂರ,ಹಮೀನಸಾಬ ಇದ್ದರು…

ವರದಿ. ದುಗ್ಗಪ್ಪ ಸಿಂಧನೂರು

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend