ಸಿಂಧನೂರು : ಜುಲೈ 9ಕ್ಕೆ. ಹೈಟೆಕ್ ಪಶು ಆಸ್ಪತ್ರೆ ಸಚಿವರಿಂದ ಉದ್ಘಾಟನೆ,..!!!

Listen to this article

ಸಿಂಧನೂರು : ಜುಲೈ 9ಕ್ಕೆ. ಹೈಟೆಕ್ ಪಶು ಆಸ್ಪತ್ರೆ ಸಚಿವರಿಂದ ಉದ್ಘಾಟನೆ,

ಕಲ್ಬುರ್ಗಿ ವಿಭಾಗದಲ್ಲಿ ಅತ್ಯಂತ ವೈಜ್ಞಾನಿಕವಾಗಿ ನಗರದಲ್ಲಿ ನಿರ್ಮಾಣಗೊಂಡಿರುವ ಹೈಟೆಕ್ ಪಶು ಆಸ್ಪತ್ರೆಯನ್ನು ಪಶು ಸಂಗೋಪನೆ ಸಚಿವ ಪ್ರಭು ಚೌಹ್ಹಾಣ ಜುಲೈ 9 ಕ್ಕೆ,ಉದ್ಘಾಟಿಸಲಿದ್ದಾರೆ ಎಂದು ಶಾಸಕ ವೆಂಕಟರಾವ್ ನಾಡಗೌಡ ಹೇಳಿದರು.

ತಾಲೂಕಿನ ವಿವಿಧ ಕಾಮಗಾರಿಗಳಿಗೆ ಬಪ್ಪೂರ ರಸ್ತೆಯ ಗೀತಾ ಕ್ಯಾಂಪ್ ಹತ್ತಿರ ಲೋಕೋಪಯೋಗಿ ಇಲಾಖೆ ಅಡಿಯಲ್ಲಿ ಮೂರು ಕೋಟಿ ವೆಚ್ಚದಲ್ಲಿ ಎರಡು ಕಿ.ಮೀ. ರಸ್ತೆ ಡಾಂಬರೀಕರಣ,ಹೊಸಳ್ಳಿ ಇ.ಜೆ. ಕ್ಯಾಂಪಿನಿಂದ ಹನುಮಾನ್ ನಗರ ಕ್ಯಾಂಪಿನವರೆಗೆ, ಎರಡು ಕೋಟಿ ಐವತ್ತು ಲಕ್ಷದ ವೆಚ್ಚದಲ್ಲಿ ಪಿಎಂಜಿಎಸ್ ವೈ ಇಲಾಖೆಯ ಅಡಿಯಲ್ಲಿ ರಸ್ತೆ ಡಾಂಬರೀಕರಣ, ದುರ್ಗಕ್ಯಾಂಪ್ ನಲ್ಲಿ ಇಪ್ಪತ್ತು ಲಕ್ಷ ವೆಚ್ಚದಲ್ಲಿ ಸಿಸಿ ರಸ್ತೆ ನಿರ್ಮಾಣ ಕಾಮಗಾರಿಗೆ ಪೂಜೆ ನೆರವೇರಿಸಿ ಸುದ್ದಿಗಾರರೊಂದಿಗೆ ಮಾತನಾಡಿದರು .

ಕ್ಷೇತ್ರದ ರೈತಾಪಿ ಜನರ ಅನುಕೂಲಕ್ಕಾಗಿ
ಕಲ್ಬುರ್ಗಿ ವಿಭಾಗದಲ್ಲಿ ಅತ್ಯಂತ ವೈಜ್ಞಾನಿಕವಾಗಿ ಪಶು ಆಸ್ಪತ್ರೆಯನ್ನು ಹೈಟೆಕ್ ಆಸ್ಪತ್ರೆಯನ್ನು ನಿರ್ಮಿಸಿದ್ದು. ಇದರ ಉದ್ಘಾಟನೆ ಜುಲೈ 9 ಕ್ಕೆ, ಪಶು ಸಂಗೋಪನೆ ಸಚಿವ ಪ್ರಭು ಚೌಹ್ಹಾಣರಿಂದ ಉದ್ಘಾಟನೆ ಗೊಳಿಸಲಾಗುತ್ತದೆ. ತಾಲೂಕಿನಲ್ಲಿ ಪಶು ವೈದ್ಯರ ಕೊರತೆಯಿದ್ದು. ಪಶು ವೈದ್ಯರನ್ನು ಕೂಡ ನೇಮಕ ಮಾಡಿಕೊಡಲು ಸಚಿವರಿಗೆ ಮನವರಿಕೆ ಮಾಡಲಾಗುವುದು ಎಂದರು.

ಈ ಸಂದರ್ಭದಲ್ಲಿ ಜೆಡಿಎಸ್ ಪಕ್ಷದ ಮುಖಂಡ ಚಂದ್ರು ಭೂಪಾಲ್ ನಾಡಗೌಡ, ಪುರಸಭೆಯ ಮಾಜಿ ಅಧ್ಯಕ್ಷ ಕೆ.ಮರಿಯಪ್ಪ, ನಗರಸಭೆ ಸದಸ್ಯರಾದ ಚಂದ್ರು ಮೈಲಾರ, ಛತ್ರಪ್ಪ ಕುರುಕುಂದಿ, ಹನುಮೇಶ ಉಪ್ಪಾರ, ಮೈನುದ್ದೀನ್, ಬಾಬಾ ಕನಕಗಿರಿ, ನಿರುಪಾದಿ ಸುಕಾಲಪೇಟೆ, ಜೆಡಿಎಸ್ ಯುವ ಮುಖಂಡ ಸೈಯದ್ ಆಸಿಫ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು…

ವರದಿ. ದುಗ್ಗಪ್ಪ ಸಿಂಧನೂರು

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend