ಟ್ಯಾಂಕರ್ ನಲ್ಲಿ ಹಲ್ಲಿ ಬಿದ್ದ ನೀರು ಸೇವಿಸಿ 30ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥ…!!!

Listen to this article

ಟ್ಯಾಂಕರ್ ನಲ್ಲಿ ಹಲ್ಲಿ ಬಿದ್ದ ನೀರು ಸೇವಿಸಿ 30ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥ.

ಸಿಂಧನೂರು :ಟ್ಯಾಂಕರ್ ನಲ್ಲಿ ಬಿದ್ದ ನೀರು ಸೇವಿಸಿ 30ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥರಾಗಿರುವ ಘಟನೆ ತಾಲೂಕಿನ ಸಾರ್ವಜನಿಕ ಗ್ರಂಥಾಲಯದಲ್ಲಿ ನಡೆದಿದೆ.
ಪ್ರಸ್ತುತ ಸ್ಪರ್ಧಾತ್ಮಕ ಯುಗದಲ್ಲಿ ಹಲವಾರು ಬಡ ವಿದ್ಯಾರ್ಥಿಗಳು ಯಾವುದೇ ಕೊಚಿಂಗ್ ತರಗತಿಗಳಿಗೆ ಹೋಗಲು ಹಣವಿಲ್ಲದೇ ವಿದ್ಯಾಭ್ಯಾಸ ಮಾಡಲು ಆರ್ಥಿಕವಾಗಿ ಸಬಲರಿಲ್ಲದ ಕಾರಣ ಸರಕಾರಿ ಗ್ರಂಥಾಲಯದಲ್ಲಿರುವ ಪುಸ್ತಕಗಳನ್ನು ಓದಿಕೊಂಡು ಸರ್ಕಾರಿ ನೌಕರಿ ಪಡೆಯಬೇಕೆಂದು ಓದಲು ಹೋಗಿದ್ದರು.


ಬಿಸಿಲಿನ ತಾಪಮಾನ ಹೆಚ್ಚು ಇರುವ ಕಾರಣ ಸಾರ್ವಜನಿಕ ಗ್ರಂಥಾಲಯದ ಓದಲು ಬಂದ ವಿದ್ಯಾರ್ಥಿಗಳು ನೀರಿನ ಟ್ಯಾಂಕರ್‍ನಲ್ಲಿ ಹಲ್ಲಿ ಬಿದ್ದ ನೀರು ಸೇವಿಸಿ ವಾಂತಿಯಿಂದ ಬಳಲುತ್ತಿದ್ದಾರೆ. ವೈದ್ಯರು ಎಲ್ಲಾ ವಿಧ್ಯಾರ್ಥಿಗಳಿಗೆ ಚಿಕಿತ್ಸೆ ನೀಡಿ ಮನೆಗೆ ಕಳಿಸಿದ್ದಾರೆ.ಹಲ್ಲಿ ಬಿದ್ದ ನೀರು ಸೇವಿಸಿದ ಪರಿಣಾಮ ಓರ್ವ ಬಾಲಕನ ಸ್ಥಿತಿಗಂಭೀರವಾಗಿದ್ದು, ಆತನನ್ನು ಸಾರ್ವಜನಿಕ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ.

ಹೆಸರಿಗೆ ಮಾತ್ರ ಗ್ರಂಥಾಲಯ ಅಲ್ಲಿ ಸರಿಯಾದ ಓದಲು ಪುಸ್ತಕಗಳೇ ಇಲ್ಲಾ,ಶೌಚಾಲಯ, ಶುದ್ದ ಕುಡಿಯುವ ನೀರಿನ ವ್ಯವಸ್ಥೆ ಇಲ್ಲಾ, ಹಾಗೂ ವಿದ್ಯುತ್ ಪೂರೈಕೆ ಸ್ಥಗಿತಗೊಂಡಾಗ ಗ್ರಂಥಾಲಯ ವೆಲ್ಲಾ ಕತ್ತಲೆಯಿಂದ ಕೂಡಿರುತ್ತದೆ.ಕಳೆದ ಎರಡು ದಿನಗಳಿಂದ ಟ್ಯಾಂಕರ್ ಸ್ವಚ್ಚ ಮಾಡದೆ ನೀರು ಪೂರೈಸುತ್ತಿರುವುದೇ ಇದಕ್ಕೆ ಕಾರಣ,ಗ್ರಂಥಾಲಯ ಸಿಬ್ಬಂದಿಗಳ ನಿರ್ಲಕ್ಷ್ಯವೂ ಕೂಡಾ ಘಟನೆಗೆ ಕಾರಣ ಎಂದು ಅಸ್ವಸ್ಥಗೊಂಡ ವಿಧ್ಯಾರ್ಥಿ ಆರೋಪಿಸುತ್ತಿದ್ದಾರೆ.ಇಲ್ಲಿರುವ ಸಮಸ್ಯೆಗಳನ್ನು ಜಿಲ್ಲಾ ಗ್ರಂಥಪಾಲಕರಿಗೆ ದೂರವಾಣಿ ಮೂಲಕ ಮನವಿ ಮಾಡಿಕೊಂಡಾಗ ಮನೆಯಿಂದ ನೀರಿನ ಬಾಟಲಿ ತರಬೇಕೆಂದು ಹೇಳುತ್ತಾರೆಂದು ವಿದ್ಯಾರ್ಥಿಗಳು ತಮ್ಮ ಕಷ್ಟವನ್ನು ಪತ್ರಿಕೆಯವರೊಂದಿಗೆ ತೊಡಿಕೊಂಡರು.

ಆನಂದ ತಾವರಗೇರಾ,ಯುವರಾಜ ಗೊಬ್ಬರಕಲ್, ಸುದೀಪ ಅಮರಾಪುರ, ಸೊಯಲ್ ಸಾಲಗುಂದಾ , ಬಸವರಾಜ ಪುರ ಸೇರಿದಂತೆ ಹಲವಾರು ವಿದ್ಯಾರ್ಥಿಗಳು ಹಲ್ಲಿಬಿದ್ದ ನೀರನ್ನು ಕುಡಿದು ಆಸ್ಪತ್ರೆಗೆ ದಾಖಲಾಗಿದ್ದವರು.

ಶಿವನಗೌಡ ಗೋರೆಬಾಳ ಸಾರ್ವಜನಿಕ ಆಸ್ಪತ್ರೆಗೆ ಬೇಟಿ ನೀಡಿ ವೈದ್ಯರಿಗೆ ಉತ್ತಮ ರೀತಿಯಲ್ಲಿ ಚಿಕಿತ್ಸೆ ನೀಡಿ ಎಂದು ಹೇಳಿದರು. ಜಿಲ್ಲಾ ಗ್ರಂಥಾಪಾಲಕಗೆ ದೂರವಾಣಿ ಕರೆ ಮಾಡಿ ಗ್ರಂಥಾಲಯದಲ್ಲಿರುವ ಅವ್ಯವಸ್ಥೆಯನ್ನು ಶೀಘ್ರ ಪರಿಹರಿಸಿ ವಿಧ್ಯಾರ್ಥಿಗಳಿಗೆ ಓದಲು ತೊಂದರೆಯಾಗದಂತೆ ಸರಿಪಡಿಸಿ ಎಂದರು. ಅಸ್ವಸ್ಥಗೊಂಡ ವಿಧ್ಯಾರ್ಥಿಗಳ ಆರೋಗ್ಯದ ಬಗ್ಗೆ ವಿಚಾರಿಸಿ ಯಾವುದೇ ಭಯಬೇಡ ಎಂದು ವಿಧ್ಯಾರ್ಥಿಗಳಿಗೆ ಧೈರ್ಯ ತುಂಬಿದರು.

ಗ್ರಂಥಪಾಲಕ ಎ.ಬಿ ಕುಲಕರ್ಣಿಯನ್ನು ಕೇಳಿದಾಗ ಮುಚ್ಚಿದ ನೀರಿನ ಟ್ಯಾಂಕ್ ಇದೆ ಹಲ್ಲಿ ಯಾವ ರೀತಿ ಒಳಗಡೆ ಹೋಗಿದೆ ಗೊತ್ತಾಗುತ್ತಿಲ್ಲ ಎಂದು ಸಂಪೂರ್ಣವಾಗಿ ಉತ್ತರಿಸದೇ ಆಸ್ಪತ್ರೆಯಿಂದ ಓಡಿಹೋದರು.

ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.ಪಿ.ಎಸ್.ಐ.ಸೌಮ್ಯ ಹಿರೇಮಠ ಆಸ್ಪತ್ರೆಗೆ ಬೇಟಿ ನೀಡಿ ವಿಧ್ಯಾರ್ಥಿಗಳಿಗೆ ಯಾವುದೇ ಭಯಪಡುವ ಅಗತ್ಯವಿಲ್ಲ ಎಂದು ಧೈರ್ಯ ತುಂಬಿದರು….

ವರದಿ. ದುಗ್ಗಪ್ಪ ಸಿಂಧನೂರು

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend