ಕಾಂಗ್ರೆಸ್ ಸಮಿತಿ ವತಿಯಿಂದ ತೈಲ ಬೆಲೆ ಮತ್ತು ಅಡುಗೆ ಅನಿಲ ಬೆಲೆ ಏರಿಕೆಯನ್ನು ವಿರೋಧಿಸಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿರುದ್ಧ ಬೃಹತ್ ಪ್ರತಿಭಟನೆ…!!!

Listen to this article

ಸಿಂಧನೂರು :ಇಂದು ತಾಲೂಕು ಕಾಂಗ್ರೆಸ್ ಸಮಿತಿ ವತಿಯಿಂದ ತೈಲ ಬೆಲೆ ಮತ್ತು ಅಡುಗೆ ಅನಿಲ ಬೆಲೆ ಏರಿಕೆಯನ್ನು ವಿರೋಧಿಸಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿರುದ್ಧ ಬೃಹತ್ ಪ್ರತಿಭಟನೆ.
ನಗರದ A.P. M.C. ಗಣೇಶ್ ದೇವಸ್ಥಾನದಿಂದ ತಹಸೀಲ್ದಾರ ಕಾರ್ಯಾಲಯದ ವರೆಗೆ “ಪಾದಯಾತ್ರೆ” ಮತ್ತು ” ಸೈಕಲ್ ಜಾಥಾ”ದ ಮೂಲಕ ರಾಜ್ಯ ಮತ್ತು ಕೇಂದ್ರ ಸರ್ಕಾರದ ಜನ ವಿರೋಧಿ ನೀತಿಗಳನ್ನು ಖಂಡಿಸಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಯಿತು.ಈ ಸಂಧರ್ಭದಲ್ಲಿ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಬಸನಗೌಡ ಬಾದರ್ಲಿ ಸರ್ಕಾರ ಜೋಳ ಖರೀದಿ ಕೇಂದ್ರವನ್ನು ಸ್ಥಾಪನೆ ಮಾಡಿ ಜೋಳವನ್ನು ಖರೀದಿ ಮಾಡಿದೆ. ಆದರೆ ಇಲ್ಲಿವರೆಗೂ ರೈತರಿಗೆ ಹಣವನ್ನು ಪಾವತಿ ಮಾಡಿಲ್ಲ. ನಮ್ಮ ರಾಯಚೂರು ಜಿಲ್ಲೆಗೆ ಸುಮಾರು 100 ಕೋಟಿ ರೂಪಾಯಿ ಹಣವನ್ನು ಸರ್ಕಾರ ರೈತರಿಗೆ ನೀಡಬೇಕಾಗಿದೆ ಮತ್ತು ಅದರಲ್ಲಿ 80 ಕೋಟಿ ರೂಪಾಯಿ ಹಣ ನಮ್ಮ ಸಿಂಧನೂರು ತಾಲೂಕಿನ ರೈತರ ಖಾತೆಗೆ ಪಾವತಿ ಮಾಡಬೇಕಾಗಿದೆ. ಒಂದು ವಾರದೊಳಗೆ ಪಾವತಿ ಮಾಡಬೇಕು,ಇಲ್ಲವಾದರೆ ಮತ್ತೆ ರಸ್ತೆರೋಖ ಚಳುವಳಿ ಮಾಡಬೇಕಾಗುತ್ತದೆ ಎಂದು ಸರಕಾರಕ್ಕೆ ಎಚ್ಚರಿಸಿದರು. ನೀವೇನಾದರೂ ಪೊಲೀಸ್ ಇಲಾಖೆಯನ್ನು ಬಳಸಿಕೊಂಡು ನಮ್ಮ ಹೋರಾಟಕ್ಕೆ ತಡೆಯೊಡ್ಡಿದರೆ ನಾವು ರೈತರಿಗಾಗಿ ಜೈಲಿಗೂ ಹೋಗುವುದಕ್ಕೂ ತಯಾರಾಗಿದ್ದೇವೆ ಎಂದರು. ಸರ್ಕಾರದ ನಿಯಮದ ಪ್ರಕಾರ ಮೂರು ದಿನದಲ್ಲಿ ರೈತರ ಖಾತೆಗೆ ಹಣ ಜಮಾ ಮಾಡಬೇಕು, ಆದರೆ ಆರು ತಿಂಗಳಾದರೂ ಇನ್ನೂ ಹಣ ಬಂದಿಲ್ಲ. ರೈತರ ಹೆಸರು ಹೇಳಿಕೊಂಡು ಅಧಿಕಾರಕ್ಕೆ ಬಂದ ಶಾಸಕ ನಾಡಗೌಡ್ರು ಬಿಜೆಪಿಯವರ ಜೊತೆಗೆ ಶಾಮೀಲಾಗಿದ್ದಾರೆ. ತಾಲೂಕಿನಲ್ಲಿ ಯಾವುದೇ ಕೆಲಸವಾಗಬೇಕಾದರೆ ಶಾಸಕರು 10‌ ರಿಂದ 15% ಪರ್ಸೆಂಟೇಜ್ ತೆಗೆದುಕೊಳ್ಳುತ್ತಿದ್ದಾರೆ ಎಂದು ತರಾಟೆಗೆ ತೆಗೆದುಕೊಂಡರು. ತಾಲೂಕಿನಲ್ಲಿ ಬಿಜೆಪಿಯವರು ಇದ್ದರು ಇಲ್ಲದಂತಾಗಿದೆ.
ಭತ್ತ ಖರೀದಿಯಲ್ಲಿ ಇರುವಂತ ಕೆಲ ಷರತ್ತುಗಳನ್ನು ಸರ್ಕಾರ ಕೂಡಲೇ ಸಡಲಿಕೆ ಮಾಡಬೇಕು ಎಂದು ಮಾತನಾಡಿದರು.


ಈ ಸಂದರ್ಭದಲ್ಲಿ ರಾಯಚೂರು ಜಿಲ್ಲೆ ವಿಕ್ಷಕರಾದ ಮಾಜಿ ಸಚಿವರಾದ ಮಲ್ಲಿಕಾರ್ಜುನ ನಾಗಪ್ಪ, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀಮತಿ ನಿರ್ಮಲ ಬೆಣ್ಣೆ, ಪನ್ನೂರ್ ಚನ್ನಬಸವ ಗೌಡ,ಕೆ.ಪಿ.ಸಿ.ಸಿ.ಎಸ್.ಟಿ.ಘಟಕದ ಕಾರ್ಯದರ್ಶಿಗಳಾದ ವೆಂಕಟೇಶ್ ನಾಯಕ್, ಶಿವಕುಮಾರ್ ಜವಳಿ, T.A.P.M.C. ಅಧ್ಯಕ್ಷರಾದ ಮಲ್ಲನಗೌಡ ಬಾದರ್ಲಿ ವೆಂಕನಗೌಡ ಗಿಣಿವಾರ,ಮಾಜಿ ತಾಲೂಕ ಪಂಚಾಯತಿ ಸದಸ್ಯರು, ಚನ್ನಬಸನಗೌಡ ಉಪ್ಪಳ, ಮಾಜಿ A.P.M.C.ಅಧ್ಯಕ್ಷರು H.N.ಬಡಿಗೇರ್, ಶರಣಯ್ಯ ಸ್ವಾಮಿ ಕೋಟೆ, ಹೊಸಳ್ಳಿ ಭೀಮನಗೌಡ,ಯೂನಿಸ್ ಪಾಷಾ, ಧಡೇಸ್ಗೂರ್,ಗೋಪಿ ನಾಯ್ಡು, ಕೃಷ್ಣ, ಸೋಮನ ಗೌಡ ಬಾದರ್ಲಿ,ನಾಗರಾಜ್ ಕವಿತಾಳ್ ,ಖಾಜಾ ಹುಸೇನ್ ರೌಡಕುಂದ, ಇಲಿಯಾಜ್ ಪಟೇಲ್,ಹಬೀಬ್ ಖಾಜಿ ಹಾಗೂ ಕಾಂಗ್ರೆಸ್ ಪಕ್ಷದ ಮುಖಂಡರು, ಯುವ ನಾಯಕರು, ಸಹಸ್ರಾರು ಸಂಖ್ಯೆಯಲ್ಲಿ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ವರದಿ. ದುಗ್ಗಪ್ಪ ಸಿಂಧನೂರು

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend