ಅಂಬೇಡ್ಕರ್ ಫೋಟೋ ತೇಗಿಸಿ ದೇಶಕ್ಕೆ ಮಾಡಿದ ಅವಮಾನ – ಭೀಮನಗೌಡ ವಕೀಲರು…!!!

Listen to this article

ಅಂಬೇಡ್ಕರ್ ಫೋಟೋ ತೇಗಿಸಿ ದೇಶಕ್ಕೆ ಮಾಡಿದ ಅವಮಾನ – ಭೀಮನಗೌಡ ವಕೀಲರು.

ಸಿಂಧನೂರು :ರಾಯಚೂರಿನ ಜಿಲ್ಲಾ ನ್ಯಾಯಾಲಯದಲ್ಲಿ ಜನವರಿ 26 ಗಣರಾಜ್ಯೋತ್ಸವದ ಧ್ವಜರೋಹಣ ಸಮಾರಂಭದಲ್ಲಿ ಜಿಲ್ಲಾ ಪ್ರಧಾನ ಸತ್ರ ನ್ಯಾಯಾಧೀಶರಾದ ಮಲ್ಲಿಕಾರ್ಜುನಗೌಡ ರವರು ಅಂಬೇಡ್ಕರ್ ಭಾವಚಿತ್ರವನ್ನು ತೆಗೆದರೆ ಮಾತ್ರ ರಾಷ್ಟ್ರ ಧ್ವಜವನ್ನು ಅನಾವರಣಗೊಳಿಸುತ್ತೇನೆಂದು ಮಾಡಿದ ಅಮಾನವೀಯ ವರ್ತನೆ ಖಂಡಿಸಿ ತಾಲೂಕು ನ್ಯಾಯವಾದಿಗಳ ಸಂಘದಿಂದ ಮನವಿ ಪತ್ರ ಸಲ್ಲಿಸಿದರು.

ಜನೆವರಿ 26ರಂದು ಗಣರಾಜ್ಯೋತ್ಸವದ ಧ್ವಜರೋಹಣ ಸಮಾರಂಭದಲ್ಲಿ ರಾಯಚೂರು ಜಿಲ್ಲಾ ಪ್ರಧಾನ ಸತ್ರ ನ್ಯಾಯಾಧೀಶರಾದ ಮಲ್ಲಿಕಾರ್ಜುನಗೌಡ ಇವರು ಅಂಬೇಡ್ಕರ್ ಭಾವಚಿತ್ರವನ್ನು ತೆಗೆದರೆ ಮಾತ್ರ ರಾಷ್ಟ್ರ ಧ್ವಜವನ್ನು ಅನಾವರಣಗೊಳಿಸುತ್ತೇನೆಂದು ಮಾಡಿದ ಅಮಾನವೀಯ ವರ್ತನೆ ಅತ್ಯಂತ ಖಂಡನಾರ್ಹ ಹಾಗೂ ಸಂವಿಧಾನ ವಿರುದ್ಧ ಮಾಡಿದ ಕೃತ್ಯ.ಈ ದೇಶಕ್ಕೆ ಸಂವಿಧಾನವನ್ನು ತಂದು ಕೊಟ್ಟಂತಹ ನಾಯಕ ಜಗತ್ತಿನ ಶ್ರೇಷ್ಠ ವ್ಯಕ್ತಿ ಡಾ.ಬಾಬಾ ಸಾಹೇಬ ಅಂಬೇಡ್ಕರ್‌ರವರಿಗೆ ಮಾಡಿದ ಅವಮಾನವೆಂದು ಪರಿಗಣಿಸಿ ಭಾರತೀಯ ಸಮಾಜನದ ಎಲ್ಲಾ ಜಾತಿ ಜನಾಂಗದ ವರ್ಗದವರಿಗೆ ಸ್ವಾತಂತ್ರ್ಯ, ಸಮಾನತೆ, ವಿಶ್ವಪ್ರೇಮ, ಅದರ ಜೊತೆಗೆ ಮಾನವೀಯ ಹಕ್ಕುಗಳಿಗೆ ತನ್ನೆಲ್ಲ ಜೀವನವನ್ನು ತ್ಯಾಗ ಮಾಡಿದ ಮಹಾನ್ ವ್ಯಕ್ತಿ ಡಾ.ಬಾಬಾ ಸಾಹೇಬ ಅಂಬೇಡ್ಕರ್ ಅವರಿಗೆ ಮಾಡಿದ ಅವಮಾನವನ್ನು ಯಾವುದೇ ಕಾರಣಕ್ಕೆ ಸಹಿಸಲು ಸಾಧ್ಯವಿಲ್ಲ ಎಂದು ಸಿಂಧನೂರು ನ್ಯಾಯವಾದಿಗಳ ಸಂಘದಿಂದ ತಹಸೀಲ್ದಾರ ಮುಖಾಂತರ ರಾಜ್ಯಪಾಲರಿಗೆ, ಸರ್ವೋಚ್ಚ ನ್ಯಾಯಾಲಯ ಮುಖ್ಯ ನ್ಯಾಯಮೂರ್ತಿಗಳು ನವದೆಹಲಿ,ಮುಖ್ಯ ನ್ಯಾಯಮೂರ್ತಿಗಳು ಉಚ್ಚ ನ್ಯಾಯಾಲಯ ಬೆಂಗಳೂರು, ಇವರಿಗೆ ಮನವಿ ಪತ್ರ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ತಾಲೂಕ್ ನ್ಯಾಯವಾದಿಗಳ ಸಂಘದ ಅಧ್ಯಕ್ಷ ರಾಮನಗೌಡ ವಕೀಲರು ಜಿಲ್ಲಾ ನ್ಯಾಯದೀಶರು ಮಾಡಿದಂತ ಅವಮಾನ ಇಡೀ ಪ್ರಪಂಚಕ್ಕೆ ಮಾಡಿದಂತ ಅವಮಾನ.ಮನುಕುಲಕ್ಕೆ ನ್ಯಾಯಸಿಕ್ಕಿದೆ ಎಂದು ಹೇಳುವುದಾದರೆ ಅದು ಅಂಬೇಡ್ಕರ್ ಕೊಟ್ಟ ಬಿಕ್ಷೆ, ಸಂವಿಧಾನದ ಹಕ್ಕುನ್ನು ಕಾಪಾಡಬೇಕಾದ ನ್ಯಾಯಾಧೀಶರು ತಮಗೆ ಬೇಕಾದ ರೀತಿಯಲ್ಲಿ ವ್ಯಕ್ತಪಡಿಸಲು ಅವಕಾಶಗಳಿಲ್ಲ. ನ್ಯಾಯಧೀಶರು ಗಣರಾಜ್ಯೋತ್ಸವ ದಿನದಂದು ಅಂಬೇಡ್ಕರ್ ಫೋಟೋ ತೇಗಸಿ ದೇಶಕ್ಕೆ ಅವಮಾನ ಮಾಡಿದ್ದಾರೆ. ಇಂತಹ ಮನಸ್ಥಿತಿ ಉಳ್ಳ ವ್ಯಕ್ತಿಗಳನ್ನು ನ್ಯಾಯಾಧೀಶರ ಸ್ಥಾನದಲ್ಲಿ ಕುಳಿತುಕೊಳ್ಳಲು ಯೋಗ್ಯರಲ್ಲ, ಸರಕಾರದ ಮತ್ತು ಉಚ್ಚ ನ್ಯಾಯಾಲಯ ಇಂಥವರಿಗೆ ಅವಕಾಶಮಾಡಿಕೊಡಬಾರದು, ಇವರು ಮಾಡಿದ ತಪ್ಪಿಗೆ ಇಡೀ ದೇಶ ಬೆಂಕಿಹತ್ತಿ ಉರಿಯುತ್ತಿದೆ. ಇವರನ್ನು ಸೂಕ್ತ ವಿಚಾರಣೆ ನಡೆಸಿ ಕಾನೂನಿನ ಪ್ರಕಾರ ಶಿಕ್ಷೆ ವಿದಿಸಬೇಕು. ಸ್ವತಂತ್ರ ದಿನಾಚರಣೆ ಮತ್ತು ಗಣರಾಜ್ಯೋತ್ಸವ ದಿನದಂದು ಅಂಬೇಡ್ಕರ್ ಫೋಟೋವನ್ನು ಕಡ್ಡಾಯವಾಗಿ ಇರಬೇಕು ಎಂದು ಆಗ್ರಹಿಸಿದರು.

ಸಂವಿಧಾನದ ಅಶೋತ್ತರ ಗಳನ್ನು ಈಡೇರಿಸುವ ಮೂಲಕ ನಮ್ಮ ದೇಶದಲ್ಲಿ ವಾಸವಾಗಿರುವ ನಿಮ್ನ ವರ್ಗದವರಿಗೆ ಆಶಯಗಳನ್ನು ಪೂರೈಸುವ ಮೂಲಕ ಅಂಬೇಡ್ಕರ್ ಕೊಟ್ಟಂತಹದ್ದು. ಸಮಾಜದ ಕಟ್ಟಕಡೆಯ ವ್ಯಕ್ತಿಗಳನ್ನು ಮುಖ್ಯವಾಹಿನಿಗೆ ತಂದು ಅವರ ಬಾಳಿಗೆ ಬೆಳಕಾಬೇಕಾದ ನ್ಯಾಯಾಧೀಶರು ಸಂವಿಧಾನ ಬರೆದ ಅಂಬೇಡ್ಕರ್ ಗೆ ಮಾಡಿದ ಅವಮಾನ, ದೇಶಕ್ಕೆಅವಮಾನ ಮಾಡಿದ್ದಾರೆ, ಸರ್ವತಂತ್ರ, ಸ್ವತಂತ್ರ, ಪ್ರಜಾತಂತ್ರ ಗಣರಾಜ್ಯದಲ್ಲಿ ಭಾರತ ದೇಶದ ಸಮಗ್ರತೆ,ಐಕ್ಯತೆ, ಭಾವೈಕ್ಯತೆ ಎತ್ತಿಹಿಡಿಯಬೇಕು ಎನ್ನುವ ಉದ್ದೇಶದಿಂದ ಸಂವಿಧಾನದ ಮಹಾಶಯರು 42ನೇ ತಿದ್ದುಪಡಿ ತರುವ ಮುಖಾಂತರ 1976 ರಲ್ಲಿ ಜಾತ್ಯಾತೀತ, ಸಮಾಜವಾದ,ಸಮಗ್ರತೆಯನ್ನು ತರುವುದರ ಮುಖಾಂತರ ಸಮಾಜವಾದ ರಾಷ್ಟ್ರವೆಂದು ಹೇಳಿದ್ದಾರೆ. ನ್ಯಾಯಾಧೀಶರು ಸಮಾಜವಾದ ಎಂದರೇನು ಎಂಬುದು ಮೊದಲು ಅರಿತುಕೊಳ್ಳಬೇಕು.ಎಲ್ಲರೂ ಕಾನೂನಿನ ಮುಂದೆ ಸಮಾನರಾದ ನೀವು ವಕೀಲ ವೃತ್ತಿಯಿಂದ ನ್ಯಾಯಾಧೀಶ ರಾಗಬೇಕಾದರೆ ಅಂಬೇಡ್ಕರ್ ಕೊಟ್ಟ ಭಿಕ್ಷೆ.ಅಂಬೇಡ್ಕರ್ ಅವರು ಈ ದೇಶದಲ್ಲಿ ಹುಟ್ಟದಿದ್ದರೆ ಇವತ್ತು ನಾವು ನಾಯಿನರಿಗಳಿಗಿಂತ ಕಡೆಯಾಗಿ ಬದುಕುತ್ತಿದ್ದೆವು. ಶ್ರೇಣೀಕೃತ ಸಮಾಜದಲ್ಲಿ ನೀವು ನ್ಯಾಯಾಧೀಶರಾಗಬೇಕಾದರೆ ನೀವು ಏನನ್ನು ಓದಿ ನ್ಯಾಯಾಧೀಶರಾಗಿದ್ದಿರಿ ಎಂದು ಅರ್ಥಮಾಡಿಕೊಳ್ಳಬೇಕು ಎಂದು ನಿರುಪಾದೆಪ್ಪ ವಕೀಲರು ಆಕ್ರೋಶ ಭರಿತರಾಗಿ ಮಾತನಾಡಿದರು.

ಈ ಸಂದರ್ಭದಲ್ಲಿ ಶೇಖರಪ್ಪ ದುಮತಿ, ಹನುಮಂತಪ್ಪ ಬೂದಿಹಾಳ ವಕೀಲರು , ಖಾಜಿ ಮಲ್ಲಿಕ್ ವಕೀಲರು, ವಿರೇಶ ಚಿಂಚರಕಿ, ಸಲ್ಮಾನ್ ವಕೀಲರು, ಅಯ್ಯಪ್ಪ ಮಲ್ಲಾಪೂರು ವಕೀಲರು,ಮೌಲಪ್ಪ ವಕೀಲರು, ನ್ಯಾಯವಾದಿಗಳ ಸಂಘದ ಸದಸ್ಯರು ಇನ್ನೂ ಅನೇಕರಿದ್ದರು…

ವರದಿ.ದುಗ್ಗಪ್ಪ ಸಿಂಧನೂರು

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend