ವೇಷ ಭೂಷಣ ಧರಿಸಿ ಸಚಿವರ ಮನೆ ಕಡೆಗೆ : ಮಲ್ಲಪ್ಪ ಹಸಮಕಲ್…!!!

Listen to this article

ವೇಷ ಭೂಷಣ ಧರಿಸಿ ಸಚಿವರ ಮನೆ ಕಡೆಗೆ : ಮಲ್ಲಪ್ಪ ಹಸಮಕಲ್

ಸಿಂಧನೂರು : ಮಸ್ಕಿ ಗಣರಾಜ್ಯೋತ್ಸವ ದಿನದ ಜ 26 ರಂದು ಬೊಬ್ಬೆ ಚಳುವಳಿ ಬದಲಾಗಿ ಈ ಭಾಗದ ಎಲ್ಲಾ ಪ್ರಕಾರದ ಕಲಾವಿದರು ತಮ್ಮ ತಮ್ಮ ವೇಷ -ಭೂಷಣಗಳನ್ನು ಧರಿಸಿ ಕಾಲ್ನಡಿಗೆ ಮೂಲಕ ಕಲಾವಿದರ ನಡಿಗೆ ಸಚಿವರ ಹಾಗೂ ಶಾಸಕರ ಮನೆಯ ಕಡೆಗೆ ಎಂಬ ವಿನೂತನ ಚಳುವಳಿ ಹಮ್ಮಿಕೊಳ್ಳಲು ಒಮ್ಮತದ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಮಸ್ಕಿ ತಾಲೂಕು ಕಲಾವಿದರ ಒಕ್ಕೂಟದ ಅಧ್ಯಕ್ಷ ಮಲ್ಲಪ್ಪ ಹಸಮಕಲ್ ಪ್ರಧಾನ ಕಾರ್ಯದರ್ಶಿ ಬಸಪ್ಪ ಗ್ಯಾಂಗ್ ಮ್ಯಾನ ತಿಳಿಸಿದರು.
ಮಸ್ಕಿ ಪಟ್ಟಣದ ಗಚ್ಚಿನಮಠ ದಲ್ಲಿ ಏರ್ಪಡಿಸಿದ್ದ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದರು.

15 ಆ 2021ರಂದು ಕಲ್ಯಾಣ ಕರ್ನಾಟಕ ಕಲಾವಿದರ ಒಕ್ಕೂಟದಿಂದ ಈ ಭಾಗದ ಕಲಾವಿದರು ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಕಲ್ಯಾಣ ಕರ್ನಾಟಕ ಪ್ರದೇಶದ 41 ಶಾಸಕರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರುಗಳಿಗೆ ಮನವಿ ಪತ್ರ ಸಲ್ಲಿಸಲಾಗಿತ್ತು. ಆದರೂ,ಶಾಸಕರು ಹಾಗೂ ಸಚಿವರು ಕಲಾವಿದರ ಬೇಡಿಕೆಗಳ ಕುರಿತು ಬೆಳಗಾವಿಯ ಸುವರ್ಣಸೌಧದಲ್ಲಿ ನಡೆದ ಚಳಿಗಾಲದ ಅಧಿವೇಶನದಲ್ಲಿ ಕಲಾವಿದರ ಬೇಡಿಕೆಗಳ ಬಗ್ಗೆ ಧ್ವನಿ ಎತ್ತಿಲ್ಲ, ಹೀಗಾಗಿ, ಜ.26 ರಂದು ಈ ಭಾಗದ ಶಾಸಕರು ಹಾಗೂ ಸಚಿವರ ಮನೆಯ ಮುಂದೆ ಬೋಬ್ಬೆ ಚಳುವಳಿ ನಡೆಸಲು ಉದ್ದೇಶಿಸಲಾಗಿತ್ತು. ಗಣರಾಜ್ಯೋತ್ಸವ ದಿನದಂದು ಬೋಬ್ಬೆ ಚಳವಳಿ ಬದಲಾಗಿ ಕಲಾವಿದರ ನಡಿಗೆ ಶಾಸಕರು ಹಾಗೂ ಸಚಿವರ ಮನೆಯ ಕಡೆಗೆ ಎಂಬ ವಿನೂತನ ಚಳವಳಿ ನಡೆಸಲಾಗುತ್ತದೆ ಎಂದಿದ್ದಾರೆ. ಆದ್ದರಿಂದ ಈ ಭಾಗದ ಆಯಾ ವಿಧಾನಸಭೆ ಮತಕ್ಷೇತ್ರದ ಕಲಾವಿದರು ತಮ್ಮ ತಮ್ಮ ಕಲಾ ಪ್ರಕಾರದ ವೇಷ-ಭೂಷಣ ಹಾಕಿಕೊಂಡು ಶಾಸಕರ ಹಾಗೂ ಸಚಿವರ ಮನೆ ಮನೆಗೆ ಕಾಲು ನಡಿಗೆ ಜಾಥಾ ಹೆಚ್ಚಿನ ಸಂಖ್ಯೆಯಲ್ಲಿ ಕಲಾವಿದರು ಭಾಗವಹಿಸಬೇಕೆಂದು ಕೋರಿದರು.

ಈ ಸಂದರ್ಭದಲ್ಲಿ ಅಧ್ಯಕ್ಷರಾದ ಮಲ್ಲಪ್ಪ ಹಸಮಕಲ್, ಪ್ರಧಾನ ಕಾರ್ಯದರ್ಶಿ ಬಸಪ್ಪ ಗ್ಯಾಂಗ್ ಮ್ಯಾನ ಗೌಡನಬಾವಿ, ರಾಜ್ಯ ಸಹ ಕಾರ್ಯದರ್ಶಿ ಅಮರೇಶ ಹಸಮಕಲ್,ತಿಮ್ಮಣ್ಣ ನಾಯಕ ಜಿಲ್ಲಾ ಸಂಚಾಲಕರು, ಬಸನಗೌಡ ಜಿನ್ನಾಪುರ ಜಿಲ್ಲಾ ಸಂಚಾಲಕರು, ಬಸನಗೌಡ ಆದಾಪೂರ ಗೌರವ ಅಧ್ಯಕ್ಷರು, ಮೌನೇಶ್ ನಗರ ಘಟಕ ಅಧ್ಯಕ್ಷರು, ಶರಣಯ್ಯ ಸ್ವಾಮಿ ಬಸವರಾಜ, ಹನುಮನಗೌಡ ಮ್ಯಾದರಾಳ, ವೆಂಕೊಬ ಖಜಾಂಚಿ, ಸತ್ಯಪ್ಪ ಉಪಾಧ್ಯಕ್ಷರು,ಇನ್ನಿತರರಿದ್ದರು…

 

ವರದಿ. ದುಗ್ಗಪ್ಪ ಸಿಂಧನೂರು

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend