ಸಿಂದಗಿ ತಾಲೂಕಿನ ಗಬಸಾವಳಗಿ ಹೇಮರೆಡ್ಡಿ ಮಲ್ಲಮ್ಮ ಸಂಸ್ಥೆಯ ಪದಾಧಿಕಾರಿಗಳು ಕಾರುಣ್ಯ ಆಶ್ರಮಕ್ಕೆ ಭೇಟಿ…!!!

Listen to this article

ಸಿಂದಗಿ ತಾಲೂಕಿನ ಗಬಸಾವಳಗಿ ಹೇಮರೆಡ್ಡಿ ಮಲ್ಲಮ್ಮ ಸಂಸ್ಥೆಯ ಪದಾಧಿಕಾರಿಗಳು ಕಾರುಣ್ಯ ಆಶ್ರಮಕ್ಕೆ ಭೇಟಿ. ಸಿಂಧನೂರು ನಗರದ ಕುಷ್ಟಗಿ ರಸ್ತೆಯಲ್ಲಿರುವ ಶ್ರೀಮಠ ಸೇವಾ ಟ್ರಸ್ಟ್ (ರಿ)ಹರೇಟನೂರು ಕಾರುಣ್ಯ ನೆಲೆ ವೃದ್ಧಾಶ್ರಮ ಹಾಗೂ ಬುದ್ಧಿಮಾಂಧ್ಯ ಆಶ್ರಮಕ್ಕೆ ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಗಬಸಾವಳಿಗಿ ಯ ಪ್ರಸಿದ್ದ ಹೇಮರೆಡ್ಡಿ ಮಲ್ಲಮ್ಮ ಸಂಸ್ಥೆಯ ಎಲ್ಲಾ ಪದಾಧಿಕಾರಿಗಳು ಭೇಟಿ ನೀಡಿ ಆಶ್ರಮದ ಸೇವೆಯ ಮಾಹಿತಿಯನ್ನು ತೆಗೆದುಕೊಂಡು ಎಲ್ಲಾ ವೃದ್ಧರು ಹಾಗೂ ಬುದ್ಧಿಮಾಂದ್ಯರಿಗೆ ಹಣ್ಣು ಹಂಪಲುಗಳನ್ನುಗಳನ್ನು ವಿತರಿಸಿ ಆಶ್ರಮದ ಸೇವೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತಪಡಿಸಿದರು. ನಂತರ ಮಾತನಾಡಿದ ನಿವೃತ್ತ ಇಂಜಿನಿಯರಾದ ಎಂ.ಎನ್. ಪಾಟೀಲ್ ನಾನು ಕೂಡ ಸುಮಾರು ವರ್ಷಗಳ ಹಿಂದೆ ಸಿಂಧನೂರು ನಗರದಲ್ಲಿ ಎಂಟು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದೇನೆ. ಈಗ ನಿವೃತ್ತಿಯಾಗಿ ಸಿಂಧಗಿಯಲ್ಲಿ ವಾಸವಿದ್ದೇನೆ ಈ ಆಶ್ರಮದ ಬಗ್ಗೆ ನಾನು ಕೇಳಲ್ಪಟ್ಟಿದ್ದೆ. ಆದರೆ ಇಂದು ಈ ಆಶ್ರಮಕ್ಕೆ ಭೇಟಿ ನೀಡುವ ಸೌಭಾಗ್ಯ ದೊರೆತಿದೆ. ಈ ಸಿಂಧನೂರು ಭಾಗದಲ್ಲಿ ಒಳ ಬಳ್ಳಾರಿಯ ಶ್ರೀ ಚನ್ನಬಸವೇಶ್ವರರ ಆಶೀರ್ವಾದದಿಂದ ನಡೆಸುತ್ತಿರುವ ಈ ಆಶ್ರಮವನ್ನು ಕಾರುಣ್ಯ ಕುಟುಂಬ ಎಂದು ಪ್ರಸಿದ್ಧಿ ಮಾಡಿರುವ ಹರೇಟನೂರಿನ ಚನ್ನಬಸವ ಸ್ವಾಮಿಯವರ ಸೇವೆಯನ್ನು ನಾನು ಇಲ್ಲಿ ವೃತ್ತಿ ಮಾಡುತ್ತಿದ್ದಾಗಲೂ ಸಹಿತ ಅರಿತಿದ್ದೆ. ಇಂತಹ ಸೇವೆಗೆ ಪ್ರತಿಯೊಬ್ಬರು ಕೂಡ ಸಹಾಯ ಸೇವೆ ಮಾಡುವುದರ ಮೂಲಕ ಸಮಾಜಕ್ಕೆ ಮಾದರಿಯಾಗಬೇಕು ಎನ್ನುವ ಸಂದೇಶವನ್ನುನೀಡಿದರು.ನಂತರ ಮಾತನಾಡಿದ ಸಿಂದಗಿ ತಾಲೂಕಿನ ಗಬಸಾವಳಿಗಿಯ ಹೇಮರೆಡ್ಡಿ ಮಲ್ಲಮ್ಮ ಸಂಸ್ಥೆ ಉಪಾಧ್ಯಕ್ಷರಾದ ಶಾಂತಗೌಡ ಅಯ್ಯಪ್ಪ ಗೌಡ ಬಿರಾದಾರ್ ನಾವು ಕೂಡ ನಮ್ಮ ಸಂಸ್ಥೆಯ ವತಿಯಿಂದ ಹಲವಾರು ಕಲ್ಲು ದೇವರುಗಳ ದೇವಸ್ಥಾನ ನಿರ್ಮಾಣ ಮಾಡಿದ್ದೇವೆ. ಆದರೆ ನಿಜವಾದ ದೇವಾಲಯ ಈ ಕಾರುಣ್ಯ ಆಶ್ರಮ ಎಂದೆನಿಸುತ್ತದೆ. ನಮ್ಮ ತಾಲೂಕ ನಮ್ಮ ಜಿಲ್ಲೆಯ ವತಿಯಿಂದ ಈ ಕಾರುಣ್ಯ ಆಶ್ರಮಕ್ಕೆ ದೊಡ್ಡ ಪ್ರಮಾಣದ ಸಹಾಯ ಮಾಡುತ್ತೇವೆ. ಅಲ್ಲದೇ ನಿರಂತರವಾಗಿ ಆಶ್ರಮದ ಸೇವೆಯಲ್ಲಿ ಭಾಗಿಯಾಗಿ ನಮ್ಮ ಜೀವನವನ್ನು ಸಾರ್ಥಕಗೊಳಿಸಿಕೊಳ್ಳುತ್ತೇವೆ. ಇಂದು ನಮ್ಮ ಹೇಮರೆಡ್ಡಿಮಲ್ಲಮ್ಮ ಸಂಸ್ಥೆಯಿಂದ ಮೊದಲನೆಯ ಸಹಾಯ 5001=00 ರುಪಾಯಿಗಳನ್ನು ನೀಡುವುದರ ಮೂಲಕ ನಮ್ಮ ಭಾಗದಲ್ಲಿನ ಎಲ್ಲಾ ರೈತಾಪಿ ವರ್ಗದವರಿಗೆ ಪ್ರತಿ ಬೆಳೆಗಳಿಗೆ ಕಾಳುಕಡಿಗಳನ್ನು ವಿತರಿಸುವ ಅಭಿಯಾನ ಪ್ರಾರಂಭಿಸುತ್ತೇವೆ. ಇಂತಹ ಸಣ್ಣ ವಯಸ್ಸಿಗೆ ಚನ್ನ ಬಸಯ್ಯಸ್ವಾಮಿ ಹಾಗೂ ಅವರ ಧರ್ಮ ಪತ್ನಿಯಾದ ಸುಜಾತ ಅವರ ನಿರ್ಧಾರ ಸಮಾಜಕ್ಕೆ ಒಂದು ದೊಡ್ಡ ಅಪಾರ ಕೊಡುಗೆ. ಇವರ ಆದರ್ಶಗಳನ್ನು ವ್ಯಕ್ತಿತ್ವಗಳನ್ನು ಈಗಿನ ಸಮಾಜದ ಯುವಕರು ಮೈಗೂಡಿಸಿಕೊಳ್ಳಬೇಕು. ಇಂತಹ ಹಿರಿಯರ ಹಾಗೂ ವಯಸ್ಕರ ಬುದ್ಧಿಮಾಂದ್ಯರ ಸೇವೆ ಮಾಡುತ್ತಿರುವ ಕಾರುಣ್ಯ ಆಶ್ರಮದ ಎಲ್ಲಾ ಸಿಬ್ಬಂದಿಗಳಿಗೆ ಆ ಭಗವಂತ ಇನ್ನೂ ಹೆಚ್ಚಿನ ಆಯಸ್ಸು ಸುಖ ಶಾಂತಿ ನೆಮ್ಮದಿಯನ್ನು ತಮ್ಮ ಆರೋಗ್ಯವನ್ನು ಕರುಣಿಸಲಿ ಎಂದು ನಮ್ಮ ಗ್ರಾಮದ ಪರವಾಗಿ ಸಂಸ್ಥೆಯ ಪರವಾಗಿ ಪ್ರಾರ್ಥಿಸಿ ಇವರಿಗೆ ಮಾರ್ಗದರ್ಶನ ನೀಡುತ್ತೇವೆ ಎಂದು ಮಾತನಾಡಿದರು. ಈ ಸಂದರ್ಶನದಲ್ಲಿ ಬಂಗಾರಪ್ಪ ಗೌಡ ಶಾಂತಗೌಡ ಬಿರಾದಾರ ಅಧ್ಯಕ್ಷರು ಹೇಮರೆಡ್ಡಿ ಮಲ್ಲಮ್ಮ ಸಂಸ್ಥೆ ಗಬಸಾವಳಿಗಿ. ಗಂಗಪ್ಪ ಗೌಡ ದಾನಪ್ಪ ಗೌಡ ಬಿರಾದಾರ್ ಕಾರ್ಯದರ್ಶಿಗಳು ಹೇಮರೆಡ್ಡಿ ಮಲ್ಲಮ್ಮ ಸಂಸ್ಥೆ ಗಬಸಾವಳಿಗಿ. ಗುರುರಾಜ ಮುಕ್ಕುಂದಾ ರಾಜ್ಯ ಪ್ರಧಾನ ಕಾರ್ಯದರ್ಶಿಗಳು ಅಂಬೇಡ್ಕರ್ ಮಹಾಸಭಾ ಸಿಂಧನೂರು. ಪ್ರಭು ಮುಕ್ಕುಂದಾ. ಇವರುಗಳು ಭಾಗವಹಿಸಿದ್ದರು. ನಂತರ ಕಾರುಣ್ಯ ಆಶ್ರಮದ ವತಿಯಿಂದ ಎಲ್ಲಾ ಗಣ್ಯರಿಗೆ ಸನ್ಮಾನಿಸಿ ಗೌರವಿಸಿ ನೆನಪಿನ ಕಾಣಿಕೆಯನ್ನು ವಿತರಿಸಲಾಯಿತು.

ವರದಿ. ದುಗ್ಗಪ್ಪ ಸಿಂಧನೂರು

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend