ಸಿಂಧನೂರು :ಮತಾಂತರ ನಿಷೇಧ ಕಾಯ್ದೆಗೆ ವಿರೋಧ – ಬಿ.ಎಸ್.ಪಿ ಜಿಲ್ಲಾಧ್ಯಕ್ಷ ಹನುಮಂತರಾಯ ಕಪಗಲ್…!!!

Listen to this article

ಸಿಂಧನೂರು :ಮತಾಂತರ ನಿಷೇಧ ಕಾಯ್ದೆಗೆ ವಿರೋಧ – ಬಿ.ಎಸ್.ಪಿ ಜಿಲ್ಲಾಧ್ಯಕ್ಷ ಹನುಮಂತರಾಯ ಕಪಗಲ್.

ಕರ್ನಾಟಕದಲ್ಲಿ ಬಸವರಾಜ ಬೊಮ್ಮಾಯಿ ನೇತೃತ್ವದ ಬಿ.ಜೆ.ಪಿ ಸರಕಾರ ಮತಾಂತರ ನಿಷೇದ ಕಾಯ್ದೆಯನ್ನು ಜಾರಿಗೆ ತರಲು ಹೊರಟಿರುವದನ್ನು ಬಹುಜನ ಸಮಾಜ ಪಾರ್ಟಿ ಖಂಡಿಸುತ್ತದೆ. ಈಗಾಗಲೆ ರಾಜ್ಯದಲ್ಲಿ ಜಾರಿಯಲ್ಲಿರುವ ಕಾನೂನಿನ ಅನ್ವಯ ಆಮಿಷ ಮತ್ತು ಬಲವಂತದ ಮತಾಂತರದ ವಿರುದ್ಧ ಕ್ರಮ ಕೈಗೊಳ್ಳಲು ಅವಕಾಶವಿದೆ. ಆದರೂ ಹೊಸ ಕಾಯ್ದೆ ಜಾರಿ ಮಾಡಲು ಹೊರಟಿರುವದು ಜನರನ್ನು ದಿಕ್ಕು ತಪ್ಪಿಸುವ ಕುತಂತ್ರವಾಗಿದೆ. ಸಮ್ಮಿಶ್ರ ಸರಕಾರವನ್ನು ಪತನಗೊಳಿಸಿ ಇತರೆ ಪಕ್ಷಗಳ ಶಾಸಕರನ್ನು ಖರೀದಿ ಮಾಡಿ ಅಸ್ತಿತ್ವಕ್ಕೆ ಬಂದ ಬಿ.ಜೆ.ಪಿ ಸರಕಾರ ರಾಜ್ಯದ ಜನರ ಬಹು ನಿರೀಕ್ಷೆಗಳನ್ನು ಈಡೇರಿಸುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ. ಕರೋನಾ ನಿಯಂತ್ರಣದ ವೈಪಲ್ಯ, ಹಾಸಿಗೆ ವೆಂಟಿಲೇಟರ್‌ ಮತ್ತು ಔಷಧಿ ಖರೀದಿ ಹಗರಣ, ಪ್ರವಾಹ ಪೀಡಿತರಿಗೆ ಸೂಕ್ತ ನೆರವು ಒದಗಿಸಲು ವಿಫಲವಾಗಿದೆ. ಗುತ್ತಿಗೆಯಲ್ಲಿ ಶೇ40%, ಬ್ರಾಹ್ಮಣ ಸಮುದಾಯದ ಶ್ರೀ ಕೃಷ್ಣ ಭಟ್ಟನ ಬೀಟ ಕಾಯಿನ್ ಹಗರಣ, ಅಲ್ಲದೆ ಚರ್ಚುಗಳ ಮೇಲೆ ಕ್ರಿಶ್ಚಿಯನ್ ಸಮುದಾಯದವರ ಮೇಲೆ ಹಾಗೂ ದಲಿತಸಮುದಾಯಗಳ ಮೇಲೆ ದಾಳಿ ಹೀಗೆ ಎಲ್ಲವೂ ಜನರ ಆಕ್ರೋಶಕ್ಕೆ ಕಾರಣವಾಗಿದೆ ಎಂದರು.

ನಗರದ ಎಪಿಎಂಸಿಯ ಬಿ.ಎಸ್.ಪಿ ಕಾರ್ಯಲಯದಲ್ಲಿ ಸುದ್ದಿಗೋಷ್ಟಿ ಉದ್ದೆಶಿಸಿ ಬಹುಜನ ಸಮಾಜ ಪಾರ್ಟಿ ಜಿಲ್ಲಾಧ್ಯಕ್ಷ ಹನುಮಂತರಾಯ ಕಪ್ಪಗಲ್ ಮಾತನಾಡಿದರು.

ಬಹುಜನ ಸಮಾಜ ಪಾರ್ಟಿಯನ್ನು ರಾಜ್ಯದಲ್ಲಿ ಯಾಕೆ ಅಧಿಕಾರ ತರಲು ಪ್ರಯತ್ನ ಮಾಡುತ್ತಿಲ್ಲ ಎಂದು ಸುದ್ದಿಗಾರರ ಪ್ರಶ್ನೆಗೆ ಕಾಂಗ್ರೆಸ್ ಮತ್ತು ಬಿಜೆಪಿ ಸರಕಾರಗಳು ತಮ್ಮ ತಮ್ಮ ಅಧಿಕಾರ ಅವಧಿಯಲ್ಲಿ ಲೂಟಿ ಮಾಡಿ ಮತದಾರರಿಗೆ ಹಣ,ಇನ್ನಿತರ ಆಮಿಷಗಳನ್ನು ಕೊಟ್ಟು ಅಧಿಕಾರ ಪಡೆಯುತ್ತಾ ಬಂದಿದ್ದಾರೆ. ಆದರೆ ಮತದಾರರಿಗೆ ಮತದಾನದ ಮಹತ್ವ,ಸಾಮಾಜಿಕ ಸಾಮರಸ್ಯ, ಸಮಾನತೆ ಬಗ್ಗೆ ತಿಳುವಳಿಕೆ ಬಂದಾಗ ನಾವೂ ಅಧಿಕಾರ ಪಡೆದು ಆಡಳಿತ ನಡೆಸುತ್ತೇವೆ ಎಂದರು.

ಒಂದು ವೇಳೆ ಕಾಯ್ದೆ ವಾಪಸ್ಸು ತೆಗೆದುಕೊಳ್ಳದಿದ್ದರೆ ನಿಮ್ಮ ಪಕ್ಷದ ನೀಲುವೇನು ಎಂಬ ಪ್ರಶ್ನೆಗೆ, ಕಾಯ್ದೆ ಕೈಬಿಡುವವರೆಗೆ ನಮ್ಮ ಹೋರಾಟ ನಿರಂತರವಾಗಿ ನಡೆಯುತ್ತದೆ.ದೀನದಲಿತರ, ಅಲ್ಪಸಂಖ್ಯಾತರ,ಹಿಂದುಳಿದವರ ಪರ ಯಾರೇ ಹೋರಾಟ ಮಾಡಿದರು ಬಹುಜನ ಸಮಾಜ ಪಾರ್ಟಿ ಸಂಪೂರ್ಣ ಬೆಂಬಲವಿರುತ್ತದೆ ಎಂದರು.

ನಂತರ ಮಾತನಾಡಿದ ಹುಲಗಪ್ಪ ಮಲ್ಕಾಪೂರು ಬಿಜೆಪಿ ದುರಾಡಳಿತಕ್ಕೆ ಜನ ಬೇಸತ್ತು ಹೋಗಿದ್ದಾರೆ. ಅದಕ್ಕಾಗಿ ಬಿ.ಬಿ.ಎಂ.ಪಿ. ಜಿಲ್ಲಾ ಮತ್ತು ತಾಲೂಕು ಪಂಚಾಯತಿ ಚುನಾವಣೆಯನ್ನು ಮುಂದೂತ್ತಾ ಬರಲಾಗುತ್ತಿದೆ. ಹಾಗೆಯೇ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಅಧಿಕಾರ ಕಳೆದುಕೊಳ್ಳುವ ಭಯದಿಂದ ಜನರನ್ನು ದಿಕ್ಕು ತಪ್ಪಿಸಲು ಮತಾಂತರ ಹಾಗೂ ಲವ್ ಜಿಹಾದ್ ನಂತಹ ಭಾವನಾತ್ಮಕ ವಿಚಾರಗಳನ್ನು ಮುನ್ನಲೆಗೆ ತರುತ್ತಿದೆ. ಜಗಜ್ಯೋತಿ ಬಸವಣ್ಣನವರ ಅನುಭವ ಮಂಟಪದ ತವರುರಾದ ಕರ್ನಾಟಕ ಎಂದು ಸಹ ಕೋಮುವಾದಕ್ಕೆ ಆಸ್ಪದ ನೀಡಿಲ್ಲ. ಹಾಗೆಯೇ ಮಹಾನ್ ಮಾನವತಾವಾದಿ ಡಾ|| ಬಿ.ಆರ್. ಅಂಬೇಡ್ಕರ ರೂಪಿಸಿರುವ ಸಂವಿಧಾನದಲ್ಲಿ ಎಲ್ಲರಿಗೂ ಧಾರ್ಮಿಕ ಸ್ವತಂತ್ರ ಇದೆ, ಯಾರೂ ಯಾವ ಧರ್ಮವನ್ನು ಬೇಕಾದರೂ ಒಪ್ಪಿಕೊಳ್ಳುವ ಅಥವಾ ಪ್ರಚಾರ ಮಾಡುವ ಅಥವಾ ತಿರಸ್ಕರಿಸುವ ಹಕ್ಕನ್ನು ನೀಡಲಾಗಿದೆ. ಬಿ.ಜೆ.ಪಿ. ಮತ್ತು ಸಂಘ ಪರಿವಾರದ ಸಂಘಟನೆಗಳು ಜನರನ್ನು ದಿಕ್ಕು ತಪ್ಪಿಸಲು ಹಾಗೂ ದಲಿತ – ಹಿಂದುಳಿದ ಮತ್ತು ಧಾರ್ಮಿಕ ಅಲ್ಪ ಸಂಖ್ಯಾತರ ಸಾಮರಸ್ಯಕ್ಕೆ
ಬೆಂಕಿ ಹಚ್ಚಲು ಸಹ ಸಂವಿಧಾನ ಬಾಹಿರ ಕಾಯ್ದೆಗಳ ಮೊರೆ ಹೋಗಿವೆ. ಬಿ.ಜೆ.ಪಿ ಸರಕಾರದ ಈ ಕುತಂತ್ರವನ್ನು ಬಹುಜನ ಸಮಾಜ ಪಾರ್ಟಿ ಜಿಲ್ಲಾ ಸಮಿತಿ ರಾಯಚೂರು ತೀವ್ರವಾಗಿ ಖಂಡಿಸುತ್ತದೆ. ಹಾಗೂ ಈ ಕಾಯ್ದೆ ವಿರುದ್ಧ ನಡೆಯುವ ಹೋರಾಟಕ್ಕೆ ಸಂಪೂರ್ಣ ಬೆಂಬಲವನ್ನು ಸೂಚಿಸುತ್ತೆವೆ ಎಂದು ಮಾತನಾಡಿದರು.

ವಿರೇಶ ಕೆ. ಹಂಚಿನಾಳ ಜಿಲ್ಲಾ ಉಪಾಧ್ಯಕ್ಷರು,ಎಸ್.ಐ. ಸಾಲುಗುಂದಾ ತಾಲೂಕು ಉಪಾಧ್ಯಕ್ಷರು ಇದ್ದರು…

ವರದಿ. ದುಗ್ಗಪ್ಪ ಸಿಂಧನೂರು

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend