ಸಿಂಧನೂರು: ಕೊರೊನಾ ಸಂಕಷ್ಟದ ಸಮಯದಲ್ಲಿ ಸೈನಿಕರಾಗಿ ಸೇವೆ -ಡಿ. ಎಚ್. ಕಂಬಳಿ…ಸಿಂಧನೂರು: ಕೊರೊನಾ ಸಂಕಷ್ಟದ ಸಮಯದಲ್ಲಿ ಸೈನಿಕರಾಗಿ ಸೇವೆ -ಡಿ. ಎಚ್. ಕಂಬಳಿ…!!!

Listen to this article

ಸಿಂಧನೂರು: ಕೊರೊನಾ ಸಂಕಷ್ಟದ ಸಮಯದಲ್ಲಿ ಸೈನಿಕರಾಗಿ ಸೇವೆ -ಡಿ. ಎಚ್. ಕಂಬಳಿ.

ಆಶಾ,ಅಂಗನವಾಡಿ ಕಾರ್ಯಕರ್ತೆಯರು ಪ್ರಪಂಚದಲ್ಲಿ ಕೋರೋನಾ ಮುಕ್ತ ದೇಶ ಮಾಡಲು ಪ್ರಮುಖರು. ಸಂಕಷ್ಟದ ಸಮಯದಲ್ಲಿನ ನಿರಂತರ ಸೇವೆಯನ್ನ ನಾವ್ಯಾರೂ ಮರೆಯಬಾರದು.ವೈಧ್ಯಾದಿಕಾರಿಗಳು ತಮ್ಮ ಸುತ್ತಲೂ ಗ್ಲಾಸ್ ಕಟ್ಟಿಕೊಂಡು ಚಿಕಿತ್ಸೆ ನೀಡಿದರೆ, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತರು ಮನೆ ಮನೆಗೆ ತೆರಳಿ ಜನರಿಂದ ಅವಾಚ್ಯ ಶಬ್ದಗಳಿಂದ ನಿಂದಿಸಿಕೊಂಡು, ಕೆಲವರು ಬಡಿಸಿಕೊಂಡರು, ಆದರೂ ಎದೆಗುಂದದೆ ಸೈನಿಕರಾಗಿ ಮುನ್ನುಗ್ಗಿ ಹಗಲಿರುಳು ಸೇವೆ ಸಲ್ಲಿಸಿ ಕೊರೊನಾ ಮುಕ್ತ ದೇಶ ಮಾಡಿದ್ದಾರೆ. ಡಾ. ನವೀನ್ ಕುಮಾರ್ ರವರು ಇಂತಹವರಿಗೆ ಡೆಂಟಲ್ ಕಿಟ್ ನೀಡುವ ಜೊತೆ ಪ್ರತಿ ತಪಾಸಣೆಯ ಸಮಯದಲ್ಲಿ ಒಂದು ವರ್ಷಗಳವರೆಗೆ 40% ರಿಯಾಯಿತಿ ನೀಡಿ ವಿಶೇಷ ಗೌರವ ನೀಡಿರುವುದು ಶ್ಲಾಘನೀಯ ಎಂದರು.

ನಗರದ ಸ್ತ್ರೀ ಶಕ್ತಿ ಭವನದಲ್ಲಿ ಡಾ ನವೀನ್ ಮಲ್ಟಿ ಸ್ಪೆಷಾಲಿಟಿ ಡೆಂಟಲ್ ಕೇರ್ ವತಿಯಿಂದ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಡಿ. ಎಚ್. ಕಂಬಳಿ ಮಾತನಾಡಿದರು.

ತಾಲೂಕಿನ 700ಜನ ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರಿಗೆ ಉಚಿತವಾಗಿ ದಂತ ಆರೋಗ್ಯ ಕಿಟ್ ಗಳನ್ನು ಹಾಗೂ ದಂತ ಆರೋಗ್ಯ ಕಾರ್ಡ್ ಗಳನ್ನು ವಿತರಿಸುವ ಕಾರ್ಯಕ್ರಮಕ್ಕೆ ಸಸಿಗೆ ನೀರು ಹಾಕುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು.

ತಾಲೂಕಿನಲ್ಲಿ ದಂತ ಆಸ್ಪತ್ರೆಯನ್ನು ಏಳು ತಿಂಗಳುಗಳ ಹಿಂದೆ ಪ್ರಾರಂಭ ಮಾಡಿದ್ದೇವೆ. ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಕಡಿಮೆ ಅವಧಿಯಲ್ಲಿ ದಂತ ಶಿಬಿರಗಳನ್ನು ಆಯೋಜಿಸಿ ದಂತ ಚಿಕಿತ್ಸೆಯನ್ನು ಹಲವು ಜನರಿಗೆ ನೀಡಿದ್ದೇವೆ. ಕೋರೊನಾ ಸಂಕಷ್ಟದ ಸಮಯದಲ್ಲಿ ಅನೇಕ ಬಗೆಯ ಕೊರೋನಾ ವಾರಿಯರ್ಸಯಾಗಿ ಕೆಲಸ ನಿರ್ವಹಿಸಿದ್ದಾರೆ. ಅವುರುಗಳಲ್ಲಿ ಅಂಗನವಾಡಿ ಮತ್ತು ಆಶಾ ಕಾರ್ಯಕರ್ತರು ಜೀವದ ಹಂಗು ತೊರೆದು ಸೇವೆ ಸಲ್ಲಿಸಿದ್ದಾರೆ. ಅವರ ಸೇವೆಗೆ ಅಭಿನಂದನೆ ಸಲ್ಲಿಸುವ ಸಲುವಾಗಿ ಅವರ ಆರೋಗ್ಯದ ದೃಷ್ಟಿಯಿಂದ ನಮ್ಮ ಅಸ್ಪತ್ರೆ ಕಡೆಯಿಂದ ದಂತ ಆರೋಗ್ಯ ಕಾರ್ಡ್ ಮತ್ತು ದಂತ ಆರೋಗ್ಯ ಕಿಟ್ ಗಳನ್ನು ನೀಡಲಾಗಿದೆ ಎಂದು ಪ್ರಾಸ್ತಾವಿಕವಾಗಿ ಡಾ ನವೀನ್ ಕುಮಾರ ಮಾತನಾಡಿದರು.

ಕೊಳಲು ನಾದದ ಮೂಲಕ ಯುವ ಕಲಾವಿದ ವಿರಾಟ್ ಬದಿ ಭಕ್ತಿ ಗೀತೆ ನುಡಿಸಿ, ಪ್ರಾರ್ಥಿಸಿದರು.

ನಂತರ ಕೋರೋನಾ ವಾರಿಯರ್ಸಗಳಾದ ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರಿಗೆ ದಂತ ಆರೋಗ್ಯ ಕಿಟ್ ಹಾಗೂ ದಂತ ಆರೋಗ್ಯ ಕಾರ್ಡ್ ವಿತರಣೆ ಮಾಡಲಾಯಿತು.

ಡಾ.ನಾಗರಾಜ್ ಕಾಟ್ವಾ ಮಾತನಾಡಿ ಕರೋನಾದಿಂದ ಮುಕ್ತ ಮಾಡಲು ಅಂಗನವಾಡಿ ಮತ್ತು ಆಶಾಕಾರ್ಯಕರ್ತೆಯರ ಸೇವೆ ಅಪಾರ. ತಮ್ಮ ಮನೆಯ ಕುಟುಂಬ,ಮಕ್ಕಳ ಬಿಟ್ಟು ತಮ್ಮ ಕೆಲಸದ ಅವಧಿಗಿಂತ ಹೆಚ್ಚಾಗಿ ಕಾರ್ಯನಿರ್ವಹಿಸಿದ್ದಾರೆ. ಇವರುಗಳು ಆರೋಗ್ಯ ಇಲಾಖೆಗೆ ಸೇರಿದ ಮೇಲೆ ಗ್ರಾಮೀಣ ಪ್ರದೇಶ ಜನರಲ್ಲಿ ಬಹಳಷ್ಟು ಬದಲಾವಣೆಗಳಾಗಲು ಅವರ ಪರಿಶ್ರಮವೇ ಕಾರಣ.ಇವರ ಸೇವೆಯನ್ನು ಗುರುತಿಸಿ ಮಲ್ಟಿಸ್ಪೆಷಾಲಿಟಿ ಡೆಂಟಲ್ ಕೇರ್ ವೈಧ್ಯಾದಿಕಾರಿ ಡಾ. ನವೀನ್ ಕುಮಾರರವರಿಗೆ ಕಾರ್ಡ ಮತ್ತು ಕೀಟಗಳನ್ನು ವಿತರಣೆ ಮಾಡಿದ್ದಾರೆ ಅವರಿಗೆ ಅಭಿನಂದನೆಗಳು ಎಂದರು.

ಆರೋಗ್ಯ ಇಲಾಖೆಯಲ್ಲಿ ದಂತ ಆರೋಗ್ಯಕ್ಕೆ ಹೆಚ್ಚು ಗಮನ ಕೊಡುವುದಿಲ್ಲ.ನವೀನ್ ಕುಮಾರ್ ರವರ ಈ ಸೇವೆಗೆ ನಿಜಕ್ಕೂ ಶ್ಲಾಘನೀಯ. ಗ್ರಾಮೀಣ ಪ್ರದೇಶದಲ್ಲಿ ಇಂದಿಗೂ ಯುವಕರು ಇಷ್ಟವಾದ ಆಹಾರವನ್ನು ನಿರ್ಬಂಧನೆ ಇಲ್ಲದೆ ತಿನ್ನುತ್ತಿರುವುದರಿಂದ ಮೂವತ್ತರಿಂದ ನಲವತ್ತು ವರ್ಷಗಳಲ್ಲಿ ಬಹಳಷ್ಟು ಜನ ಅನಾರೋಗ್ಯಕ್ಕೆ ಒಳಗಾಗುತ್ತಿದ್ದಾರೆ. ರೋಗರುಜಿನಗಳು ಹೆಚ್ಚಾಗಿದ್ದರಿಂದ ಆಸ್ಪತ್ರೆಗಳು ಕೂಡ ಹೆಚ್ಚಾಗುತ್ತಿವೆ. ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನಲ್ಲಿ ಮೊದಲ ಡೋಸ್ ವ್ಯಾಕ್ಸಿನೇಷನ್ ನಲ್ಲಿ ರಾಜ್ಯದಲ್ಲಿ 90% ಎರಡನೆಯ ಡೋಸ್ 70% ಬರಲು ಅಂಗನವಾಡಿ ಮತ್ತು ಆಶಾ ಕಾರ್ಯಕರ್ತರು ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ತಾಲೂಕು ಆಸ್ಪತ್ರೆ ಆಡಳಿತಾಧಿಕಾರಿ ಡಾ. ಅಯ್ಯನಗೌಡ ತಿಳಿಸಿದರು .

ಡಾ.ಶರಣಬಸವ ದೇವರೆಡ್ಡಿ, ಪತ್ರಕರ್ತ ಸಂಘದ ಅಧ್ಯಕ್ಷ ಅಶೋಕ್ ಬೆನ್ನೂರು, ಮುಖ್ಯ ಅತಿಥಿಗಳಾಗಿ ತಾಲೂಕು ಆರೋಗ್ಯಾಧಿಕಾರಿ ಅಯ್ಯನಗೌಡ ಪಾಟೀಲ್, ವನಸಿರಿ ಫೌಂಡೇಶನ್ ಸಂಸ್ಥಾಪಕ ಅಮರೇಗೌಡ ಮಲ್ಲಾಪೂರ, ಕಾರುಣ್ಯ ವೃದ್ಧಾಶ್ರಮದ ಆಡಳಿತಾಧಿಕಾರಿ ಚನ್ನಬಸಯ್ಯಸ್ವಾಮಿ ಹಿರೇಮಠ ಹರೇಟನೂರು ಮಾತನಾಡಿದರು.

ಕಾರ್ಯಕ್ರಮದಅಧ್ಯಕ್ಷತೆಯನ್ನು ರಾಘವೇಂದ್ರ ಪಿ.ಬದಿ, ಸಿದ್ದೇಶ್.ಕೆ.ಪಿ ನಂಬೋದರಿ ಪ್ರೋಡಕ್ಟ್ಸ, ಮನೋಹರ್ ಎನ್ ಜೋಗಳೇಕರ್ ನಿವೃತ್ತ ಪೋಲಿಸ್ ವರಿಷ್ಠಾಧಿಕಾರಿ ಹುಬ್ಬಳ್ಳಿ, ಸುರೇಶ್ ಕುಮಾರ್ ಉದ್ಯಮಿಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಅವಿನಾಶ್ ದೇಶಪಾಂಡೆ ಜೀವ ಸ್ಪಂದನ ಸೇವಾ ಸಂಸ್ಥೆ ಕಾರ್ಯದರ್ಶಿ, ಅಕ್ಷಯ ಆಹಾರ ಜೋಳಿಗೆ ಸೇವಾ ಟ್ರಸ್ಟ್ ಕಾರ್ಯದರ್ಶಿ ಅಶೋಕ್ ನಲ್ಲ, ಸ್ವಾಮಿ ವಿವೇಕಾನಂದ ಯುವ ವೇದಿಕೆ ಸದಸ್ಯ ಚನ್ನವೀರನಗೌಡ, ಗ್ರಾಂ ಪಂ ಸದಸ್ಯ ಮಹಾಂತೇಶ ರೌಡಕುಂದ,ಪಾಲಾಕ್ಷಿಗೌಡ ಜವಳಗೇರಾ ಸೇರಿದಂತೆ ನೂರಾರು ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು ಭಾಗವಹಿಸಿದ್ದರು..

ವರದಿ.ದುಗ್ಗಪ್ಪ ಸಿಂಧನೂರು

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend