ಸಿಂಧನೂರು: ಕೊಪ್ಪಳದ ಗವಿಶ್ರೀಗಳಿಂದ ವನಸಿರಿ ವೃಕ್ಷ ರಥಕ್ಕೆ ಚಾಲನೆ…!!!

Listen to this article

ಸಿಂಧನೂರು: ಕೊಪ್ಪಳದ ಗವಿಶ್ರೀಗಳಿಂದ ವನಸಿರಿ ವೃಕ್ಷ ರಥಕ್ಕೆ ಚಾಲನೆ.

ಸಿಂಧನೂರು ತಾಲೂಕು ಸೇರಿದಂತೆ ಕಲ್ಯಾಣ ಕರ್ನಾಟಕದ ಮೂಲೆ ಮೂಲೆ ಗಳಲ್ಲಿ ಕಳೆದ 4 ವರ್ಷಗಳಿಂದ ಸಸಿಗಳ ನೆಡುವ ಕಾರ್ಯದ ಜೊತೆ ಪರಿಸರ ಸಂರಕ್ಷಣೆ ಮಾಡುವ ಸಂಕಲ್ಪ ತೊಟ್ಟು, ಪರಿಸರದಲ್ಲಿ ವಾಸಿಸುವ ಪಕ್ಷಿಗಳಿಗೂ ನೀರಿನ ಅರವಟ್ಟಿಗೆಗಳನ್ನು ಗಿಡಗಳಿಗೆ ಕಟ್ಟಿ, ಪಕ್ಷಿ ಸಂಕುಲದ ಉಳಿವಿಗಾಗಿ ವನಸಿರಿ ಫೌಂಡೇಶನ್ ಸಂಸ್ಥಾಪಕ ಅಮರೇಗೌಡ ಮಲ್ಲಾಪೂರ ಹಾಗೂ ಅವರ ತಂಡದ ಕಾರ್ಯ ಶ್ಲಾಘನೀಯ.

ಪರಿಸರದ ಕಾರ್ಯಕ್ಕೆ 365ದಿನ 24×7 ಪರಿಸರ ರಕ್ಷಣಾ ರಥವನ್ನು ಕೊಪ್ಪಳ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳ ದಿವ್ಯ ಹಸ್ತದಿಂದ ಉದ್ಘಾಟನೆ ಮಾಡಿದರು. , ಉಚಿತ ಸಹಾಯ ವಾಣಿ ಸಂಖ್ಯೆ ನೀಡಿ, ಹಳ್ಳಿ ಹಳ್ಳಿಗೆ, ನಗರಗಳಲ್ಲಿ ಪರಿಸರ ರಥದ ಮೂಲಕ ಸಸಿ ನೆಡುವ ಕಾರ್ಯ,ಪರಿಸರ ಜಾಗೃತಿ, ಪರಿಸರ ರಕ್ಷಣೆಗೆ ವಿನೂತನ ಪ್ರಯತ್ನ ಮಾಡುತ್ತಿರುವುದು ‌ ಕ್ರಿಯಾಶೀಲತೆ ಹಿಡಿದ ಕೈಗನ್ನಡಿಯಾಗಿದೆ. ಇವರ ಸೇವೆಗೆ ಡಾ.ಎಪಿಜೆ ಅಬ್ದುಲ್ ಕಲಾಂ ಗೋಲ್ಡನ್ ಪ್ರಶಸ್ತಿ, ಶ್ರೇಷ್ಠ ಪರಿಸರ ಯೋಗಿ ಸೇರಿದಂತೆ ಹಲವು ಪ್ರಶಸ್ತಿಗಳು ಒದಗಿಬಂದಿರುವುದು ಹೆಮ್ಮೆಯ ಸಂಗತಿ.

ವನಸಿರಿ ತಂಡದ ಪರಿಸರ ಕಾರ್ಯ ರಾಜ್ಯಾದ್ಯಂತ ಪಸರಿಸಲಿ, ವನಸಿರಿ ಫೌಂಡೇಶನ್ ತಂಡದ ಎಲ್ಲಾ ಸದಸ್ಯರ ನಿರಂತರ ಒಗ್ಗಟ್ಟಿನ ಶ್ರಮದಿಂದ ಹಸಿರಿಕರಣ ಆಗುತ್ತಿರುವುದು ಶ್ಲಾಘನೀಯ. ಇವರ ಸೇವೆ ಇನ್ನಷ್ಟು ಯುವಕರಿಗೆ ಪ್ರೇರಣೆ ಆಗಲಿ
ವನಸಿರಿ ತಂಡ ನಿರಂತರವಾಗಿ ಪರಿಸರ ಸೇವೆಗೆ ಗಿಡ ಮರಗಳ ಸಂರಕ್ಷಣೆಗಾಗಿ, ಪರಿಸರ ಗಿಡ ಮರಗಳ ರಕ್ಷಣೆಗಾಗಿ ಮೂಕಪ್ರಾಣಿ – ಪಕ್ಷಿಗಳಿಗೆ ಅರವಟ್ಟಿಗೆ ಏಪ್ರಿಲ್ ಫೂಲ್ ಬದಲು ಏಪ್ರಿಲ್ ಕೂಲ್, ರಕ್ಷಾಬಂಧನ ಬದಲು ವೃಕ್ಷ ಬಂಧನ ಆಚರಣೆ,ಪಿಓಪಿ ಗಣಪ ಬದಲು ಮಣ್ಣಿನ ಗಣಪ, ಗಿಡಗಳಿಗೆ ರಾಖಿ ಕಟ್ಟಿ ವೃಕ್ಷ ಬಂಧನ ಆಚರಣೆ, ಗುಡ್ಡಗಾಡು ಪ್ರದೇಶದಲ್ಲಿ ಬೀಜದ ಉಂಡೆ ಯಾವುದೇ ವಿಶೇಷ ಕಾರ್ಯಕ್ರಮದಲ್ಲಿ ಸಸಿ ಕೊಡುವ ಮೂಲಕ ಶುಭ ಕೋರುವುದು, ಸರ್ಕಾರಿ ಶಾಲೆ ಆವರಣ,ದೇವಸ್ಥಾನ, ಸ್ಮಶಾನ, ರಸ್ತೆ ಬದಿಯಲ್ಲಿ ಗಿಡ ನೆಡುವುದು,ಸಂರಕ್ಷಣೆ ಬೇಸಿಗೆ ಕಾಲದಲ್ಲಿ ಗಿಡಗಳಿಗೆ ನೀರುಣಿಸುವ ಕಾಯಕ
ಇನ್ನು ಹಲವಾರು ಪರಿಸರದ ಸೇವೆಗಾಗಿ ವನಸಿರಿ ತಂಡ ಹಗಲಿರುಳು ಶ್ರಮಿಸುತ್ತಿದೆ .
ವನಸಿರಿ ತಂಡಕ್ಕೆ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದೆ…

 

ವರದಿ. ದುಗ್ಗಪ್ಪ ಸಿಂಧನೂರು

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend