ಸಿಂಧನೂರು : ಕನ್ನಡದ ಕೋಟ್ಯಾಧಿಪತಿ, ದೊಡ್ಮನೆ ಕುಟುಂಬದ ಕುಡಿ,ಪ್ರತಿಭಾನ್ವಿತ ಯುವರತ್ನ,…!!!

Listen to this article

ಸಿಂಧನೂರು : ಕನ್ನಡದ ಕೋಟ್ಯಾಧಿಪತಿ, ದೊಡ್ಮನೆ ಕುಟುಂಬದ ಕುಡಿ,ಪ್ರತಿಭಾನ್ವಿತ ಯುವರತ್ನ, ಅಭಿಮಾನಿಗಳ ರಾಜಕುಮಾರ,ಕನ್ನಡದ ಪ್ರಸಿದ್ದ ನಟ ಪುನೀತ್ ರಾಜ್‍ಕುಮಾರ ಅಕಾಲಿಕ ನಿಧನರಾಗಿದ್ದು ನೋವಿನ ಸಂಗತಿ. ಅವರ ನೆನಪುಗಳ ಆಧಾರವಾಗಿ ಇಂದು ವನಸಿರಿ ಫೌಂಡೇಶನ್ ವತಿಯಿಂದ ನಗರದ ವೀರಶೈವ ರುದ್ರಭೂಮಿಯಲ್ಲಿ 46ರ ವಯಸ್ಸಿನಲ್ಲಿ ಪುನಿತ್ ರಾಜಕುಮಾರ ಕರ್ನಾಟಕ ರಾಜ್ಯ ಬಡವಾಗಿದೆ. ಅವರ ನೆನಪಿಗೊಸ್ಕರ ಇಂದು 46 ಸಸಿಗಳನ್ನು ನೆಟ್ಟು ನೂರಾರು ಜೀವಗಳಿಗೆ ನೇರಳಾಗಿ, ಉಸಿರಾಗಿ ಮತ್ತು ಪರಿಸರಕ್ಕೆ ಕೊಡುಗೆಯಾಗಿ ಸಾರ್ಥಕ ಬದುಕಿನ ನಾಯಕನಿಗೆ ವಿಭಿನ್ನ ರೀತಿಯಲ್ಲಿ ನಮನ ಸಲ್ಲಿಸಿದರು. ಅಮರೇಗೌಡ ಮಲ್ಲಾಪುರ ವನಸಿರಿ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷರು, 26 ಅನಾಥಾಶ್ರಮ,46 ಉಚಿತಶಾಲೆ,
16 ವೃದ್ದಾಶ್ರಮ,19 ಗೋಶಾಲೆ,
1800 ಮಕ್ಕಳ ಸಂಪೂರ್ಣ ಶಿಕ್ಷಣ ಹಾಗೂ ಮೈಸೂರಿನಲ್ಲಿ ಶಕ್ತಿದಾಮ ಹೆಸರಿನಲ್ಲಿ ಹೆಣ್ಣುಮಕ್ಕಳಿಗೆ ಶಿಕ್ಷಣದ ವ್ಯವಸ್ಥೆ ನೋಡಿಕೊಳ್ಳುತ್ತಿರುವ ಕನ್ನಡದ ಏಕೈಕ ನಟ,ಯಾವುದನ್ನು ತೊರಿಸಿಕೊಳ್ಳಲಿಲ್ಲ.ಯುವರತ್ನನ ಸಾರ್ಥಕ ಬದುಕು ಬಗ್ಗೆ ಮಾತನಾಡಿ, ಅವರ ಜೀವನದ ಸಮಾಜ ಮುಖಿ ಕಾರ್ಯಗಳು ಇನ್ನೊಬ್ಬರಿಗೆ ಪ್ರೇರಣೆಯಾಗಲಿ, ಮತ್ತೆ ಹುಟ್ಟಿಬರಲಿ, ಅಂಥವರ ಅವಶ್ಯಕತೆ ಕನ್ನಡಕ್ಕೆ ತುಂಬಾ ಇದೆ ಎಂದು ಮಾತನಾಡಿದರು,

ಈ ಸಂದರ್ಭದಲ್ಲಿ: ವೀರಶೈವ ಸಮಾಜದ ಹಿರಿಯ ಮುಖಂಡರಾದ ಶರಣಪ್ಪ ತೆಂಗಿನಕಾಯಿ,
ಮಂಜುನಾಥ ಗಾಣಿಗೇರ,
ರಾಜು ಅಡ್ವಿಬಾವಿ, ಪ್ರವೀಣ ಸಾಗರ ನಗರಸಭೆ ಅಧಿಕಾರಿಗಳು, ರಾಜವಂಶ ಯುವರತ್ನ ಟ್ರಸ್ಟ್ ತಾಲೂಕು ಅಧ್ಯಕ್ಷ ಬಸವರಾಜ, ಪ್ರದೀಪ್ ಪೂಜಾರಿ, CMC ಮೌನೇಶ್, ಮಲ್ಲೇಶ್, ಶಿವು ಹಿರೇಮಠ, ಹನೀಫ್, ಲಕ್ಷ್ಮಿಪತಿಗೌಡ, ಮನೋಹರ ಹಿರೇಮಠ, ಮುತ್ತು ಪಾಟೀಲ್ ಬೂತಲದಿನ್ನಿ, ವನಸಿರಿ ಸದಸ್ಯರಾದ ಮುದಿಯಪ್ಪ, ಕನಕ, ವೆಂಕಟೇಶ, ಸಲೀಂ ಸೇರಿದಂತೆ ಹಲವಾರು ಪರಿಸರ ಪ್ರೇಮಿಗಳು ಉಪಸ್ತಿತರಿದ್ದರು….

 

ವರದಿ. ದುಗ್ಗಪ್ಪ ಸಿಂಧನೂರು

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend