ಸಿಂಧನೂರು : ನಟನಿಗೆ ಕಾರುಣ್ಯಾ ವ್ರದ್ದಾಶ್ರಮದಿಂದ ನುಡಿನಮನ…!!!

Listen to this article

ಸಿಂಧನೂರು : ನಟನಿಗೆ ಕಾರುಣ್ಯಾ ವ್ರದ್ದಾಶ್ರಮದಿಂದ ನುಡಿನಮನ.

ಇಂದು ಕರುನಾಡಿನ ಕಂದ,ಕನ್ನಡದ ಕೋಟ್ಯಾಧಿಪತಿ, ಎಂಬ ಖ್ಯಾತಿಗೆ ಹೆಸರಾಗಿದ್ದ ಪವರ್ ಸ್ಟಾರ್ ದಿವಂಗತ ಪುನೀತ್ ರಾಜಕುಮಾರ್ ಅವರ ಅಗಲಿಕೆ ಹಿನ್ನೆಲೆಯಲ್ಲಿ ನಗರದ ಕಾರುಣ್ಯ ನೆಲೆ ವೃದ್ಧಾಶ್ರಮದಲ್ಲಿ ವಿವಿಧ ರಾಜಕೀಯ ಪಕ್ಷಗಳ ಹಿರಿಯರು ಹಾಗೂ ಸಾಮಾಜಿಕ ಕಾರ್ಯಕರ್ತರ ಸಮ್ಮುಖದಲ್ಲಿ ಅಪ್ಪು ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಪೂಜೆ ಸಲ್ಲಿಸಿ ಭಾವಪೂರ್ಣ ಶ್ರದ್ಧಾಂಜಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಈ ಕಾರ್ಯಕ್ರಮದಲ್ಲಿ ಕೆ ವಿರುಪಾಕ್ಷಪ್ಪ ಮಾಜಿ ಸಂಸದ ಕನ್ನಡ ಚಿತ್ರರಂಗದಲ್ಲಿ ಅನೇಕ ನಟನಟಿಯರು ನಟಿಸಿದ್ದಾರೆ. ಆದರೆ ರಾಜಕುಮಾರ ಕುಟುಂಬದ ಪುನೀತ್ ರಾಜಕುಮಾರ್ ಯಾವುದೇ ಕುಟುಂಬಕ್ಕೆ ಸಮುದಾಯಕ್ಕೆ ನೋವುಂಟು ಮಾಡುವ ಸಿನಿಮಾ ಮಾಡಲಿಲ್ಲ. ಇಂದಿನ ದಿನಗಳಲ್ಲಿ ಶ್ರೀಮಂತಿಕೆ ಮುಖ್ಯವಲ್ಲ, ಮನುಷ್ಯತ್ವ ಮುಖ್ಯ. ಸಿನಿಮಾದಿಂದ ಕುಟುಂಬವನ್ನು, ಸಮಾಜವನ್ನು ತಿದ್ದುವ ಕೆಲಸ ಪುನೀತ್ ರಾಜಕುಮಾರ್ ಮಾಡುತ್ತಿದ್ದರು. ಅವರು ಅನೇಕ ಅನಾಥಾಶ್ರಮ, ಉಚಿತಶಾಲೆ,ವೃದ್ದಾಶ್ರಮ , ಗೋಶಾಲೆ ,1800 ಮಕ್ಕಳ ಸಂಪೂರ್ಣ ಶಿಕ್ಷಣ ಹಾಗೂ ಮೈಸೂರಿನಲ್ಲಿ ಶಕ್ತಿದಾಮ ಹೆಸರಿನಲ್ಲಿ ಹೆಣ್ಣುಮಕ್ಕಳಿಗೆ ಶಿಕ್ಷಣದ ವ್ಯವಸ್ಥೆ ನೋಡಿಕೊಳ್ಳುತ್ತಿರುವ ಅವರ ಮಾಡಿದ ಕೆಲಸ ನಿಜಕ್ಕೂ ಶ್ಲಾಘನೀಯ.ಇಷ್ಟೆಲ್ಲ ಸಹಾಯ ಮಾಡಿದ್ದರು ತಮ್ಮ ಸಾಮಾಜಿಕ ಸೇವೆ ಯಾರಿಗೂ ತೋರಿಸಿಕೊಳ್ಳಲಿಲ್ಲ ಎಂದು ನುಡಿನಮನ ಸಲ್ಲಿಸಿ ಮಾತನಾಡಿದರು.

ಚಂದ್ರು ಭೂಪಾಲ ನಾಡಗೌಡ ಜೆಡಿಎಸ್ ಮುಖಂಡರು ಮಾತನಾಡಿ ನಾನು ಬೆಂಗಳೂರಿನಲ್ಲಿರುವಾಗ ಪುನೀತ್ ರಾಜಕುಮಾರ್ ಹೋಗುವ ಜಿಮ್ಮಿಗೆ ಹೋಗುತ್ತಿದ್ದೆ. ಆದರೆ ಅವರ ನಾನು ಒಬ್ಬ ಸ್ಟಾರ್ ನಟ ಎಂಬುದನ್ನು ಮರೆತು ಜನಸಾಮಾನ್ಯರಂತೆ ಇರುತ್ತಿದ್ದರು ಎಂದು ಭಾವುಕರಾಗಿ ಮಾತನಾಡಿದರು. ನೇತ್ರತಜ್ಞ ಚನ್ನನಗೌಡ ಮಾಲಿ ಪಾಟೀಲ್ ನಾವು ಚಿಕ್ಕ ವಯಸ್ಸಿನಿಂದ ಅವರ ಸಿನಿಮಾ ನೋಡಿಕೊಂಡು ಬೆಳೆದಿದ್ದೇನೆ. ಅವರ ಸಿನಿಮಾಗಳು ನಮ್ಮಂಥವರಿಗೆ ಸ್ಪೂರ್ತಿದಾಯಕವೂ ಹೌದು. ಬದುಕಿದ್ದಾಗ ಸಮಾಜಕ್ಕೆ ಸೇವೆ ಮಾಡುವವರು ತು೦ಬಾ ಜನ ಇದ್ದಾರೆ, ಆದರೆ ರಾಜಕುಮಾರ ಕುಟುಂಬ ಸತ್ತಾಗಲೂ ತಂದೆಯವರು ನೇತ್ರದಾನ ಮಾಡಿದ್ದರು. ಅವರ ಹಾದಿಯಲ್ಲಿ ಪುನೀತ್ ರಾಜಕುಮಾರ್ ಕೂಡ ನೇತ್ರದಾನ ಮಾಡಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಶಿವನಗೌಡ ಗೊರೆಬಾಳ ಬಿಜೆಪಿ ಮುಖಂಡರು, ಶರಣು.ಪಾ. ಹಿರೇಮಠ ಗೌರವಾಧ್ಯಕ್ಷರು ಕಾರುಣ್ಯ ಆಶ್ರಮ, ವೀರೇಶ ಯಡಿಯೂರು ಮಠ ಕಾರ್ಯಾಧ್ಯಕ್ಷರು ಕಾರುಣ್ಯ ಆಶ್ರಮ,ಶ್ರೀಮತಿ ಚಂದ್ರಕಲಾ ಅಧ್ಯಕ್ಷರು ಜೆಡಿಎಸ್ ಮಹಿಳಾ ಘಟಕ, ದ್ರಾಕ್ಷಾಯಿಣಿ ಬಸನಗೌಡ ಮಾಲಿಪಾಟೀಲ್ ಅಧ್ಯಕ್ಷರು ಮಹಿಳಾ ಕಾಂಗ್ರೆಸ್, ಬಶೀರ್ ಎತ್ಮಾರಿ ಮುಸ್ಲಿಂ ಸಮಾಜದ ಮುಖಂಡರು, ಪೂಜಪ್ಪ ಸುಕಾಲಪೇಟೆ ಕುರುಬ ಸಮಾಜದ ಹಿರಿಯ ಮುಖಂಡರು,ಸಂತೋಷ್ ಅಂಗಡಿ ರಾಜ್ಯಾಧ್ಯಕ್ಷರು ಕರ್ನಾಟಕ ಯುವಶಕ್ತಿ ಸೇವಾ ಟ್ರಸ್ಟ್,ಅವಿನಾಶ್ ದೇಶಪಾಂಡೆ ಕಾರ್ಯದರ್ಶಿಗಳು ಜೀವ ಸ್ಪಂದನ ಸೇವಾ ಸಂಸ್ಥೆ, ಮತ್ತು ಎಲ್ಲಾ ಪಕ್ಷದ ಕಾರ್ಯಕರ್ತರುಗಳು ಭಾಗವಹಿಸಿ ಭಾವುಕರಾಗಿ ಅಪ್ಪು ಅವರಿಗೆ ‘ಭಾವಪೂರ್ಣ ಶ್ರದ್ಧಾಂಜಲಿ ‘ಸಲ್ಲಿಸಿದರು . ಈ ಕಾರ್ಯಕ್ರಮದಲ್ಲಿ ಆಶ್ರಮದ ಆಡಳಿತಾಧಿಕಾರಿಗಳಾದ ಚನ್ನಬಸವ ಸ್ವಾಮಿ ಹಿರೇಮಠ ಅಪ್ಪು ಅವರ ಭಾವಚಿತ್ರಕ್ಕೆ ಎಲ್ಲ ಹಿರಿಯರ ಸಮ್ಮುಖದಲ್ಲಿ ಪುಷ್ಪ ನಮನಗಳನ್ನು ಸಲ್ಲಿಸಿ ಮೌನಾಚರಣೆ ಮಾಡುವುದರ ಮೂಲಕ ಭಗವಂತನಲ್ಲಿ ಪ್ರಾರ್ಥಿಸಿದರು…

ವರದಿ.ದುಗ್ಗಪ್ಪ ಸಿಂಧನೂರು

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend