ಡಿ.30ರವರೆಗೆ ಮಾದರಿ ನೀತಿ ಸಂಹಿತೆ ಜಾರಿ…!!!

Listen to this article

ಡಿ.30ರವರೆಗೆ ಮಾದರಿ ನೀತಿ ಸಂಹಿತೆ ಜಾರಿ
ಹೊಸಪೇಟೆ ನಗರಸಭೆ,ಹಗರಿಬೊಮ್ಮನಹಳ್ಳಿ ಪುರಸಭೆ,ಮರಿಯಮ್ಮನಹಳ್ಳಿ ಪಟ್ಟಣ ಪಂಚಾಯ್ತಿಗೆ ಡಿ.27ರಂದು ಮತದಾನ:ಡಿಸಿ ಅನಿರುದ್ಧ್ ಶ್ರವಣ್
ವಿಜಯನಗರ(ಹೊಸಪೇಟೆ): ವಿಜಯನಗರ ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳಾದ ಹೊಸಪೇಟೆ ನಗರಸಭೆ, ಹಗರಿಬೊಮ್ಮನಹಳ್ಳಿ ಪುರಸಭೆ, ಮರಿಯಮ್ಮನಹಳ್ಳಿ ಪಟ್ಟಣ ಪಂಚಾಯ್ತಿಗೆ ಇದೇ 27ರಂದು ಮತದಾನ ನಡೆಯಲಿದೆ.ತಕ್ಷಣದಿಂದಲೇ ಮಾದರಿ ನೀತಿ ಸಂಹಿತೆ ಜಾರಿಗೆ ಬಂದಿದ್ದು,ಡಿ.30ರವರೆಗೆ ಜಾರಿಯಲ್ಲಿರಲಿದೆ. ಸುಸೂತ್ರ ಚುನಾವಣೆಗೆ ಎಲ್ಲ ರೀತಿಯ ಸಿದ್ಧತೆಗಳನ್ನು ಜಿಲ್ಲಾಡಳಿತ ಮಾಡಿಕೊಂಡಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳು ಆಗಿರುವ ಜಿಲ್ಲಾಧಿಕಾರಿ ಅನಿರುದ್ಧ ಪಿ.ಶ್ರವಣ್ ಅವರು ತಿಳಿಸಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬುಧವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಈ ವಿಷಯ ತಿಳಿಸಿದರು.
ಹೊಸಪೇಟೆ ನಗರಸಭೆಗೆ 35 ವಾರ್ಡ್‍ಗಳಿದ್ದು, 167 ಮತಗಟ್ಟೆಗಳನ್ನು ಸ್ಥಾಪಿಸಲಾಗುತ್ತಿದೆ. 82522 ಪುರುಷರು,86546 ಮಹಿಳೆಯರು, 44 ಇತರೇ ಸೇರಿದಂತೆ 169112 ಮತದಾರರಿದ್ದಾರೆ. ಹಗರಿಬೊಮ್ಮನಹಳ್ಳಿ ಪುರಸಭೆಯಲ್ಲಿ 23 ವಾರ್ಡ್‍ಗಳಿದ್ದು, 31 ಮತಗಟ್ಟೆಗಳನ್ನು ಸ್ಥಾಪಿಸಲಾಗುತ್ತಿದೆ. 14972 ಪುರುಷರು ಮತ್ತು 15909 ಮಹಿಳೆಯರು ಮತ್ತು 04 ಜನ ಇತರೆ ಸೇರಿದಂತೆ 30885 ಮತದಾರರಿದ್ದಾರೆ. ಮರಿಯಮ್ಮನಹಳ್ಳಿ ಪಟ್ಟಣ ಪಂಚಾಯ್ತಿಯಲ್ಲಿ 18 ವಾರ್ಡ್‍ಗಳಿದ್ದು, 18 ಮತಗಟ್ಟೆಗಳನ್ನ ಸ್ಥಾಪಿಸಲಾಗುತ್ತಿದೆ. 7070 ಪುರುಷರು 7744 ಮಹಿಳೆಯರು ಹಾಗೂ 03 ಜನ ಇತರೇ ಸೇರಿದಂತೆ 14817 ಮತದಾರರಿದ್ದಾರೆ ಎಂದು ಅವರು ವಿವರಿಸಿದ್ದಾರೆ.
ಈ ಮೂರು ಸ್ಥಳೀಯ ಸಂಸ್ಥೆಗಳಿಗೆ ಈ ತಿಂಗಳ 15 ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದ್ದು, 16ರಂದು ನಾಮಪತ್ರಗಳ ಪರಿಶೀಲನೆ, 18 ನಾಮಪತ್ರ ವಾಪಸ್ ಪಡೆಯಲು ಕೊನೆಯ ದಿನವಾಗಿದ್ದು, 27ರಂದು ಮತದಾನ ನಡೆಯಲಿದೆ ಎಂದು ಅವರು ವಿವರಿಸಿದರು.
ಎಲ್ಲ ರಾಜಕೀಯ ಪಕ್ಷಗಳು ಸೇರಿದಂತೆ ಎಲ್ಲರೂ ಚುನಾವಣಾ ನೀತಿ ಸಂಹಿತೆಯನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಸೂಚನೆ ನೀಡಿದ ಡಿಸಿ ಅನಿರುದ್ಧ ಶ್ರವಣ್ ಅವರು ಖರ್ಚುವೆಚ್ಚಗಳನ್ನು ನಿಗದಿತವಾಗಿ ಸಲ್ಲಿಸಲು ಮತ್ತು ಅವುಗಳ ಮೇಲೆ ನಿಗಾವಹಿಸಲು ಹಾಗೂ ಮಾದರಿ ನೀತಿ ಸಂಹಿತೆ ಪಾಲನೆ ಸೇರಿದಂತೆ ವಿವಿಧ ತಂಡಗಳನ್ನು ರಚಿಸಲಾಗಿದೆ ಎಂದರು.
ಕರ್ನಾಟಕ ಮುನ್ಸಿಪಲ್ ಕಾರ್ಪೋರೇಶನ್ ಕಾಯ್ದೆ 1976ರ ಪ್ರಕರಣ 41ರನ್ವಯ ರಾಜಕೀಯ ಪಕ್ಷಗಳ ಮುಖಂಡರು,ತಾರಾ ಪ್ರಚಾರಕರು ಮತ್ತು ಸ್ಪರ್ಧಿಸುತ್ತಿರುವ ಅಭ್ಯರ್ಥಿಗಳು ಮತದಾನ ನಿಗದಿಪಡಿಸಿದ ಅಂದರೇ ಡಿ.27ರ ಮುಂಚಿನ 48 ಗಂಟೆಯೊಳಗೆ ಚುನಾವಣಾ ಬಹಿರಂಗ ಪ್ರಚಾರ ಅಂದರೇ ಸಭೆ,ಸಮಾರಂಭ,ಮೆರವಣಿಗೆ,ಟಿ.ವಿ.,ಮುದ್ರಣ,ಶ್ರವಣ,ಎಲೆಕ್ಟ್ರಾನಿಕ್ ಮಾಧ್ಯಮ ಇತ್ಯಾದಿ ಮಾಡುವಂತಿಲ್ಲ;ಇದನ್ನು ಕಟ್ಟುನಿಟ್ಟಾಗಿ ನಿಷೇಧಿಸಿದೆ ಎಂದು ತಿಳಿಸಿದ ಅವರು ಅಭ್ಯರ್ಥಿಗಳ ಕೈಪಿಡಿಯಲ್ಲಿ ಈ ಬಗ್ಗೆ ಸ್ಪಷ್ಟವಾಗಿ ತಿಳಿಸಲಾಗಿದೆ ಹಾಗೂ ಈ ಕೈಪಿಡಿಗಳನ್ನು ಅಭ್ಯರ್ಥಿಗಳಿಗೆ ಒದಗಿಸಲಾಗುತ್ತಿದೆ ಎಂದರು.
ರಾಜಕೀಯ ಪಕ್ಷಗಳ ಮುಖಂಡರು,ತಾರಾ ಪ್ರಚಾರಕರು ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಿಂದ,ಅಭ್ಯರ್ಥಿಗಳ ಪರ ಮತಯಾಚಿಸುವ ಆ ವಾರ್ಡಿನ ಮತದಾರರಲ್ಲದ ಏಜೆಂಟರು ಮತ್ತು ವಾರ್ಡ್ ಮತದಾರರಲ್ಲದವರು ಡಿ.25ರಂದು ಬೆಳಗ್ಗೆ 7ರೊಳಗಾಗಿ ವಾರ್ಡ್ ವ್ಯಾಪ್ತಿ ಬಿಡತಕ್ಕದ್ದು.ನೀತಿ ಸಂಹಿತೆಯನ್ನು ಕಟ್ಟುನಿಟ್ಟಾಗಿ ಪಾಲಿಸಿ ಚುನಾವಣೆಗಳನ್ನು ಮುಕ್ತ,ನ್ಯಾಯಸಮ್ಮತ ಮತ್ತು ಶಾಂತಿಯುತವಾಗಿ ನಡೆಸಲು ಜಿಲ್ಲಾಡಳಿತದೊಂದಿಗೆ ಸಹಕರಿಸುವಂತೆ ಅವರು ತಿಳಿಸಿದರು.

ವರದಿ. ಜಾವೆದ್, ಹೊಸಪೇಟೆ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend