ಕಾಣದಂತೆ ಮಾಯವಾಗುತ್ತಿದೆ ಲಿಂಗಸುಗೂರಿನ ರಾಜಕಾಲುವೆ ಎಚ್ಚೆತ್ತುಕೊಳ್ಳದ ಸಂಬಂಧ ಪಟ್ಟ ಅಧಿಕಾರಿಗಳು…!!!

Listen to this article

ಕಾಣದಂತೆ ಮಾಯವಾಗುತ್ತಿದೆ ಲಿಂಗಸುಗೂರಿನ ರಾಜಕಾಲುವೆ ಎಚ್ಚೆತ್ತುಕೊಳ್ಳದ ಅಧಿಕಾರಿಗಳು ..

ಬಹುತೇಕ ನಗರಗಳಲ್ಲಿ ರಾಜಕಾಲುವೆಗಳ ಒತ್ತುವರಿಯಿಂದ ಅಲ್ಲಿಯ ನಿವಾಸಿಗಳು ಸಾಕಷ್ಟು ಸಂಕಷ್ಟಕ್ಕೀಡಾಗಿದ್ದು .ಪ್ರತಿದಿನ ನಾವು ಕಾಣುತ್ತಿದ್ದೇವೆ ಮತ್ತು ಕೇಳುತ್ತಿದ್ದೇವೆ . ಭೂ ದಾಹದ ಭೂ ಮಾಫಿಯ ಗಳು ಯಾವುದೇ ಕಾಯ್ದೆ ಕಾನೂನುಗಳಿಗೆ ಕ್ಯಾರೆ ಎನ್ನದೆ .
ಅಕ್ರಮವಾಗಿ ರಾಜಕಾಲುವೆ ಗಳನ್ನು ಒತ್ತುವರಿ ಮಾಡಿ ನಿವೇಶನ ಮಾರಾಟ ಮಾಡುವುದು ಮತ್ತು ಕಟ್ಟಡ ನಿರ್ಮಿಸುವುದು ನಿರಂತರವಾಗಿ ನಡೆಯುತ್ತಲೇ ಇದೆ
ಲಿಂಗಸುಗೂರಿನ ಐತಿಹಾಸಿಕ ರಾಜಕಾಲುವೆ ಇದಕ್ಕೆ ಹೊರತಾಗಿಲ್ಲ
ರಾಯಚೂರು ರಸ್ತೆಯ ಹೊಲಗದ್ದೆಯಿಂದ ಹಿಡಿದು ಕರಡಕಲ್ ಅವರಿಗೂ ಸಾಗುವ ಈ ರಾಜ ಕಾಲುವೆ ಸುಮಾರು 5 ಕಿಲೋಮೀಟರಗು ಹೆಚ್ಚು ವ್ಯಾಪಿಸಿದೆ
ಲಿಂಗಸುಗೂರಿನ ನಗರದ ಮಧ್ಯದಲ್ಲಿ ಸಾಗಿರುವ ಈ ರಾಜಕಾಲುವೆ.
ಬಹುತೇಕ ಲಿಂಗಸುಗೂರಿನ ಸುತ್ತಮುತ್ತಲಿನ ಹೊಲಗದ್ದೆಗಳ ಮತ್ತು ಲಿಂಗಸುಗೂರಿನ ನಗರದಲ್ಲಿ
ಸುರಿವ ಮಳೆಯ ನೀರು
ಈ ರಾಜ ಕಾಲುವೆ ಮುಖಾಂತರ ಹರಿದು.ನದಿ ಸೇರುತ್ತದೆ ಮೊದಲಿಗೆ ಈ ಕಾಲುವೆಯ ವಿಸ್ತೀರ್ಣ ಸುಮಾರು 80 ಮೀಟರ್ ನಿಂದ ಕೂಡಿತ್ತು.
ಆದರೆ ಇತ್ತೀಚೆಗೆ ಇದರ ಒತ್ತುವರಿ ಹೆಚ್ಚಾಗಿದ್ದು ಕೇವಲ ಐದು ಮೀಟರ್ ಗೆ ತಲುಪಿದೆ.


ಒಂದೊಮ್ಮೆ ಅತಿಯಾಗಿ ಮಳೆಯಾದರೆ ಇದೇ ಕಾಲುವೆಯಿಂದ ಊರಿನ ನೀರು ಹರಿದು ಮುಂದೆ ಹೋಗುವುದು ಅಸಾಧ್ಯ ಸದ್ಯದ ಪರಿಸ್ಥಿತಿ ನೋಡಿದರೆ ಮುಂದೊಂದು ದಿನ ಊರಿನ ಬಹುತೇಕ ಕಟ್ಟಡಗಳು ಹಾನಿಯಾಗಿ ಜನಜೀವನ ಅಸ್ತವ್ಯಸ್ತ ಆಗುವುದರಲ್ಲಿ ಅನುಮಾನವೇ ಇಲ್ಲ
ಇದನ್ನು ಕಂಡು ಕಾಣದಂತೆ ಇರುವ ಸಹಾಯಕ ಆಯುಕ್ತರ ಅಧಿಕಾರಿಗಳು ತಾಲೂಕು ದಂಡಾಧಿಕಾರಿ ಅಧಿಕಾರಿಗಳು ಮತ್ತು ಪುರಸಭೆಯ ಅಧಿಕಾರಿಗಳು ತಮ್ಮ ಪಾಡಾಯಿತು ತಾವಾಯಿತು ಎಂಬಂತೆ ಇದ್ದಾರೆ ಸಂಘಟನೆಗಳು ಸಹ ಕಂಡು ಕಾಣದಂತೆ ಇರುವುದು ಸೋಜಿಗದ ಸಂಗತಿಯೇ ಸರಿ
ಈಗಾಗಲೇ ಅತಿಕ್ರಮಣದಿಂದ ಕೋಟ್ಯಾಂತರ ಭೂಮಿ ಒತ್ತುವರಿಯಾಗಿದೆ. ಅಲ್ಲದೆ ಮಳೆಯ ನೀರು ಚರಂಡಿ ನೀರು ಹರಿದುಹೋಗಲು ಸಾಕಷ್ಟು ಜಾಗವಿಲ್ಲ ಊರಿನ ಬಹುತೇಕ ಕಸಾಯಿಖಾನೆಯಲ್ಲಿ ಸುರಿಯುತ್ತಿದ್ದಾರೆ ಅಲ್ಲದೆ ಗಿಡಗಂಟೆಗಳಿಂದ ಕೊಡಿ ಸಂಪೂರ್ಣ ಮುಚ್ಚಿಹೋಗಿದೆ ಮುಂದೊಂದು ದಿನ ಇದು ಮಹಾ ಸಮಸ್ಯೆಯಾಗಿ ಲಿಂಗಸುಗೂರಿನ ನಗರದ ಜನರಿಗೆ ತೊಂದರೆ ಮಾಡುವುದರಲ್ಲಿ ಅನುಮಾನವೇ ಇಲ್ಲ .
ಇನ್ನಾದರೂ ಶೀಘ್ರವೇ ಅಧಿಕಾರಿಗಳು ಎಚ್ಚೆತ್ತು ಕಾಲುವೆಯ ವ್ಯಾಪ್ತಿ ವಿಸ್ತರಿಸಿ ಅಕ್ರಮ ಕಟ್ಟಡಗಳನ್ನು ತೆರವುಗೊಳಿಸಿ ದುರ್ಘಟನೆ ತಪ್ಪಿಸಬೇಕೆಂದು. ಸಾರ್ವಜನಿಕರು ಮತ್ತು ಕೆಲವು ಸಂಘಟನೆಗಳು ಒತ್ತಾಯಿಸುತ್ತಿದ್ದಾರೆ…

ವರದಿ. ಬಸವರಾಜ್ ಹಿರೇಮಠ್ ಲಿಂಗಸಗೂರು

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend