ರಾಯಪುರ ಸಿ.ಜಿ.ಕೆ. ನೆನಪಲ್ಲಿ ಬಯಲಾಟ ಕಲಾವಿದರ ಸಮಸ್ಯೆ ಕುರಿತು ಕಾರ್ಯಕ್ರಮ..!!

Listen to this article

ವರದಿ. ಮಂಜುನಾಥ್, ಎಚ್..

ಚಿತ್ರದುರ್ಗ: ಮೊಳಕಾಲ್ಮುರು ತಾಲೂಕಿನ ರಾಯಾಪುರ ಗ್ರಾಮದಲ್ಲಿ ರಂಗ ಪರಿಸರ ರಕ್ಷಿತ ನಾಟ್ಯ ಕಲಾ ಸಂಘದಿಂದ ಆಯೋಜಿಸಲಾಗಿದ್ದ ಬಯಲಾಟ ನಾಟಕ ತರಬೇತಿಯನ್ನು ಸಿ.ಪಿ.ಐ ಉಮೇಶ ನಾಯಕ ಉದ್ಘಾಟಿಸಿದರು. ತಾಲ್ಲೂಕಿನ ಅವಸಾನದತ್ತ ಸಾಗುತ್ತಿರುವ ಬಯಲಾಟದ ಕಲೆಗಳನ್ನು ಜೀವಂತ ಗೊಳಿಸಿ ಮುಂದಿನ ತಲೆಮಾರಿಗೂ ಪರಿಚಯಿಸುವ ಕೆಲಸವಾಗಬೇಕೆಂದು ಪೊಲೀಸ್ ವೃತ್ತ ನಿರೀಕ್ಷಕ ಉಮೇಶ ನಾಯಕ ಹೇಳಿದರು. ತಾಲೂಕಿನ ರಾಯಾಪುರ ಗ್ರಾಮದಲ್ಲಿ ರಂಗ ಪರಿಸರ ರಕ್ಷಿತ ನಾಟ್ಯ ಕಲಾ ಸಂಘದಿಂದ ಆಯೋಜಿಸಿದ್ದ ರಂಗಕರ್ಮಿ ಸಿಜೆಕೆ ನೆನಪಲ್ಲಿ ಬಯಲಾಟ ನಾಟಕ ತರಬೇತಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಸಾವಿರಾರು ವರ್ಷಗಳಿಂದ ರೂಢಿಗತವಾಗಿ ಬಂದಿರುವ ಜನಪದ ಕಲೆಗಳಲ್ಲಿ
ರಂಗಭೂಮಿಯ ಬಯಲಾಟ ಕಲೆಗಳು ಒಂದಾಗಿವೆ. ಬಯಲಾಟಗಳು ದುಡಿದ ಜನರ ಮನಸಿಗೆ ಮನರಂಜನೆ ನೀಡುತ್ತಿದ್ದವು. ಆದರೆ ಯುವ ಪೀಳಿಗೆಯೇ ನಿರ್ಲಕ್ಷ್ಯದಿಂದಾಗಿ ಜನಪದ ಕಲೆಗಳು ಅವಸಾನದತ್ತ ಸಾಗುತ್ತಿವೆ. ಶ್ರಮ ಸಂಸ್ಕೃತಿ ಬಯಲಾಟಗಳು ಇಲ್ಲವಾಗುತ್ತಿವೆ. ಯುವಕರು ಮೊಬೈಲ್ ವ್ಯಾಮೋಹಕ್ಕೆ ಬಲಿಯಾಗುತ್ತಿದ್ದಾರೆ. ಜನಪದಗಳನ್ನು ಮರೆಯುತ್ತಿದ್ದಾರೆ. ಯುವಕರು ಜಾಗೃತರಾಗಬೇಕು. ಜನಪದ ಕಲೆಗಳನ್ನು ಮುಂದಿನ ತಲೆ ಮಾರಿಗೆ ಜೀವಂತಗೊಳಿಸುವ ಜತೆಗೆ ಪರಿಚಯಿಸುವಂತ ಕೆಲಸವಾಗಬೇಕೆಂದು ತಿಳಿಸಿದರು. ಸಂದರ್ಭದಲ್ಲಿ ರಕ್ಷಿತ ನಾಟ್ಯ ಕಲಾ ಸಂಘದ ನಂದಗೋಪಾಲ್, ಕಲಾವಿಧರ ಕಲ್ಯಾಣ ವೇದಿಕೆಯ ತಾಲೂಕು ಅಧ್ಯಕ್ಷ ಜಿ.ಪಿ.ಸುರೇಶ, ಭೀಮಣ್ಣ ಮೊದಲಾದವರು ಉಪಸ್ಥಿತರಿದ್ದರು.

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend