ರಾಷ್ಟ್ರೀಯ ಹೆದ್ದಾರಿ “ಹಾನಗಲ್ ರಾಯದುರ್ಗ” ರಸ್ತೆ ವಿಸ್ತರಣೆ ಕಾರ್ಯ ಶೀಘ್ರ..!!

Listen to this article

ವರದಿ. ಮಂಜುನಾಥ್, ಎಚ್

ಚಿತ್ರದುರ್ಗ: ಮೊಳಕಾಲ್ಮುರು: ಪಟ್ಟಣ ಹೃದಯ ಭಾಗದಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ (ಹಾನಗಲ್-ರಾಯದುರ್ಗ ರಸ್ತೆ) ವಿಸ್ತರಣೆ ಕಾರ್ಯವನ್ನು ಶೀಘ್ರವೇ ಕೈಗೆತ್ತಿಕೊಳ್ಳುವ ಚಟುವಟಿಕೆಗಳು ನಡೆಯುತ್ತಿವೆ.20ಕ್ಕೂ ಹೆಚ್ಚು ವರ್ಷಗಳಿಂದ ಈ ರಸ್ತೆಯನ್ನು ವಿಸ್ತರಣೆ ಮಾಡಲಾಗುವುದು ಎಂಬ ವದಂತಿ ಹರಿದಾಡುತ್ತಿದೆ. ಆದರೆ ಜನಪ್ರತಿನಿಧಿಗಳು ರಸ್ತೆ ವಿಸ್ತರಣೆಗೆ ಒತ್ತು ನೀಡದ ಕಾರಣ ಈ ಕಾರ್ಯ ನನೆಗುದಿಗೆ ಬಿದ್ದಿತ್ತು. ಈ ರಸ್ತೆಯು ಹೈದರಾಬಾದ್-ಹಾನಗಲ್ ರಾಷ್ಟ್ರೀಯ ಹೆದ್ದಾರಿಯಾಗಿದೆ. ಎಂದಾದರೂ ಒಂದು ದಿನ ಈ ರಸ್ತೆ ವಿಸ್ತರಣೆ ಆಗಿಯೇ ತೀರುತ್ತದೆ ಎಂಬ ಕಾರಣಕ್ಕಾಗಿ ಇಕ್ಕೆಲಗಳ ಕಟ್ಟಡಗಳನ್ನು ನವೀಕರಣ ಮಾಡದ ಕಾರಣ ಪಟ್ಟಣದ ಅಂದಕ್ಕೆ ಅಡ್ಡಿಯಾಗಿತ್ತು. ರಾಷ್ಟ್ರೀಯ ಹೆದ್ದಾರಿ ಕಾರ್ಯಾಲಯ ಅಧಿಕಾರಿಗಳು ಪಟ್ಟಣಕ್ಕೆ ಭೇಟಿ ನೀಡಿ ಸಮೀಕ್ಷೆ ನಡೆಸಿದರು. ನಂತರ ‘ಪ್ರಜಾವಾಣಿ’ ಜತೆ ಮಾತನಾಡಿದ ಕಾರ್ಯಾಲಯದ ಸಹಾಯಕ ಎಂಜಿನಿಯರ್ ನರೇಂದ್ರ, ‘ಈ ಹಿಂದೆಯೇ ಈ ರಸ್ತೆ ವಿಸ್ತರಣೆ ಅನುಮೋದನೆಗಾಗಿ ದೆಹಲಿಯ ಕಾರ್ಯಲಯಕ್ಕೆ ಕಳುಹಿಸಲಾಗಿತ್ತು. ಆದರೆ, ರಸ್ತೆ ಮಧ್ಯಭಾಗದಲ್ಲಿನ ಡಿವೈಡರ್‌ನಲ್ಲಿ ಅಳವಡಿಸುವ ವಿದ್ಯುತ್ ದೀಪಗಳ ನಿರ್ವಹಣೆ ಹಾಗೂ ವಿದ್ಯುತ್ ಕಂಬಗಳ ತೆರವು ಹೊಣೆಯನ್ನು ಪಟ್ಟಣ ಪಂಚಾಯಿತಿ ಮಾಡಲಿದೆ ಎಂಬ ಅನುಮತಿ ಪತ್ರ ಬೇಕು ಎಂಬ ಕಾರಣ ಮುಂದಿಟ್ಟು ಕಾಮಗಾರಿ ಸ್ಥಗಿತವಾಗಿದೆ. ಈ ಕುರಿತು ಅನುಮೋದನೆ ನೀಡುವಂತೆ ಪಟ್ಟಣ ಪಂಚಾಯಿತಿಗೆ ಮನವಿ ಸಲ್ಲಿಸಲಾಗಿದೆ’ ಎಂದು ಹೇಳಿದರು. ಪ್ರಸ್ತುತ ಇರುವ ರಸ್ತೆ 5.5 ಮೀಟರ್ ಅಗಲವಿದೆ. ಇದನ್ನು ಪಟ್ಟಣ ವ್ಯಾಪ್ತಿಯಲ್ಲಿ 19.5 ಮೀಟರ್ ವಿಸ್ತರಣೆ ಮಾಡಲಾಗುವುದು. ಹಾನಗಲ್ ಕ್ರಾಸ್‌ನಿಂದ ಆಂಧ್ರ ಗಡಿವರೆಗಿನ 5.85 ಕಿ.ಮೀ ರಸ್ತೆ ವಿಸ್ತರಣೆ ಮಾಡಲಾಗುತ್ತಿದೆ. ಇದಕ್ಕೆ ₹ 33.5 ಕೋಟಿ ಅನುದಾನ ನಿಗದಿಪಡಿಸಲಾಗಿದೆ’ ಎಂದು ತಿಳಿಸಿದರು. ನಿರೀಕ್ಷೆಯಂತೆ ನಡೆದಲ್ಲಿ ಜನವರಿ ಅಂತ್ಯಕ್ಕೆ ಕಾಮಗಾರಿಗೆ ಅನುಮೋದನೆ ಸಿಗಬಹುಹುದು. ನಂತರ ಟೆಂಡರ್ ಪ್ರಕ್ರಿಯೆ ಪೂರ್ಣ ಮಾಡಿ, ಏಜೆನ್ಸಿ ನಿಗದಿ ಮಾಡಲು 2 ತಿಂಗಳು ಹಿಡಿಯುತ್ತದೆ. ಮಾರ್ಚ್‌ನಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು’ ಎಂದು ತಿಳಿಸಿದರು.

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend