ಮತದಾನ ನಮ್ಮೆಲ್ಲರ ಹಕ್ಕು-ಕರ್ತವ್ಯ: ನಿಮಿತ್ತಕಾನೂನು ಅರಿವು ಕಾರ್ಯಕ್ರಮ..!!

Listen to this article

ವರದಿ. ಮಂಜುನಾಥ್, ಎಚ್

ಚಿತ್ರದುರ್ಗ: ಮೊಳಕಾಲ್ಮೂರು: ದೇಶದಲ್ಲಿ ಸೂಕ್ತ ಸರ್ಕಾರವನ್ನು ಅಧಿಕಾರಕ್ಕೆ ತಂದುದೇಶದ ಸಮಗ್ರ ಅಭಿವೃದ್ಧಿಗೊಳಿಸಲು ಪ್ರಜಾಪ್ರಭುತ್ವದ ಸಂವಿಧಾನದಡಿಯಲ್ಲಿ ನೀಡಲಾಗಿರುವ ಮತದಾನದ ಹಕ್ಕುತುಂಬಾ ಪರಿಣಾಮ ಕಾರಿಯಾಗಿದೆ ಎಂದು ಜೆ.ಎಂ.ಎಫ್‌. ಸಿನ್ಯಾಯಾಲಯದ ನ್ಯಾಯಾ ಧೀಶರಾದಎಸ್‌. ನಿರ್ಮಲ ತಿಳಿಸಿದರು. ಪಟ್ಟಣದ ಸರ್ಕಾರಿ ಪ್ರಥಮ ದರ್ಜೆಕಾಲೇಜಿನಲ್ಲಿ ತಾಲೂಕು ಕಾನೂನುಸೇವಾ ಸಮಿತಿ, ವಕೀಲರ ಸಂಘ, ತಾಲೂಕು ಆಡಳಿತ, ರಾಷ್ಟ್ರೀಯಸೇವಾ ಯೋಜನಾ ಘಟಕ,ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಹಯೋಗದೊಂದಿಗೆ ಆಯೋಜಿಸಿದ್ದ ಮತದಾರರ ದಿನಾಚರಣೆ ನಿಮಿತ್ತಕಾನೂನು ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ವಕೀಲ ರಾಮಾಂಜಿನೇಯ ಮಾತನಾಡಿ, ದೇಶದಲ್ಲಿ ಮತದಾನದ ಹಕ್ಕು ಪ್ರಮುಖವಾಗಿದೆ. ದೇಶದಲ್ಲಿಜನ ಸಾಮಾನ್ಯ ರಸಮಸ್ಯೆಗಳನ್ನು ಬಗೆಹರಿಸುವ ನಾಯಕನನ್ನು ಆಯ್ಕೆಮಾಡುವ ಹಕ್ಕಾಗಿದೆ. ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಪ್ರತಿಯೊಬ್ಬ ನಾಗರಿಕರ ಸಮಸ್ಯೆಗಳನ್ನು ನಿವಾರಿಸಲು ಒಬ್ಬ ನಾಯಕನನ್ನು ಮತದಾನದಮೂಲಕ ಆಯ್ಕೆ ಮಾಡುವುದೇ ಮತದಾನದ ಹಕ್ಕಾಗಿದೆ. ಮತದಾನದಜಾಗೃತಿಯಿಲ್ಲದವರಿಗೆ ಜಾಗೃತಿಮೂಡಿಸಿ ಜವಾಬ್ದಾರಿ ಮೂಡಿ ಸುವಧ್ಯೇಯೋದ್ದೇಶವಾಗಿದೆ. ದೇಶದಲ್ಲಿ
18 ವರ್ಷ ತುಂಬಿದ ಯಾವುದೇ ತಾರತಮ್ಯವಿಲ್ಲದೆ ನೋಂದಾಯಿತರುಮತದಾನ ಮಾಡಬಹುದಾಗಿದೆ ಎಂದರು. ಈ ಸಂದರ್ಭದಲ್ಲಿ ಪ್ರತಿಜ್ಞಾ ವಿಧಿ ಬೋಧಿ ಸಲಾಯಿತು. ಅರ್ಹ ಫಲಾನು ಭವಿಗಳಿಗೆ ಮತದಾನದ ಗುರುತಿನಚೀಟಿ ವಿತರಿಸಲಾಯಿತು. ಪಾಪಯ್ಯ, ಡಿ.ಸೂರಯ್ಯ, ಹಸೀನಾ ಬಾನು, ವೀಣಾ, ಎಂ.ಎನ್‌.ವಿಜಯಲಕ್ಷ್ಮಿ, ಅನಸೂಯ, ಶ್ರುತಿ, ಚಂದ್ರು, ಶಿವಣ್ಣ, ಡಾ.ಎಸ್‌.ಕೆ. ಯೋಗಾನಂದ, ತಿಮ್ಮಣ್ಣ, ರಾಜೇಶ್ವರಿ, ಸುಷ್ಮ, ಎಲ್‌.ರಾಘವೇಂದ್ರ, ನಾಗರಾಜ್‌ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಪ.ಪಂ ಕಚೇರಿ ಪಟ್ಟಣದ ಪ.ಪಂ ಕಾರ್ಯಾಲಯದಲ್ಲಿ ಮತದಾರರ ದಿನಾಚರಣೆ ಅಂಗವಾಗಿ ತಾಲೂಕ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಡಾ.ಬಿ.ಆರ್‌.ಅಂಬೇಡ್ಕರ್‌ ಭಾವಚಿತ್ರ ವಿತರಿಸಲಾಯಿತು. ಪಟ್ಟಣದ ತಾಲೂಕು ಮಟ್ಟದ ಎಲ್ಲಾ ಇಲಾಖೆಗಳಿಗೂ ನೀಡಲಾಗುವುದೆಂದು ತಾಲೂಕು ಸಮಾಜ ಕಲ್ಯಾಣಾಧಿಕಾರಿ ಪ್ರೇಮನಾಥ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಪ.ಪಂ ಅಧ್ಯಕ್ಷ ಪಿ.ಲಕ್ಷ್ಮಣ, ಸದಸ್ಯ ಮಂಜಣ್ಣ, ಮುಖ್ಯಾಧಿಕಾರಿ ಪಿ.ಬಸಣ್ಣ, ಫಜಲೂರೆಹಮಾನ್‌, ಪವನ್‌ಕುಮಾರ್‌, ತಿಪ್ಪೇಸ್ವಾಮಿ, ಪಿ.ಆರ್‌.ಸಿದ್ದಣ್ಣ, ರಮೇಶ್‌ ಮೊದಲಾದವರು ಭಾಗವಹಿಸಿದ್ದರು.

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend