ಮೊಳಕಾಲ್ಮೂರು: ಮುಖ್ಯ ರಸ್ತೆಯ ಕಾಮಗಾರಿಗೆ ಅಧಿಕೃತವಾಗಿ ಇಂದು ಚಾಲನೆ.!

Listen to this article

ಮೊಳಕಾಲ್ಮೂರು: ಮುಖ್ಯ ರಸ್ತೆಯ ಕಾಮಗಾರಿಗೆ ಅಧಿಕೃತವಾಗಿ ಇಂದು ಚಾಲನೆ.!

ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ಪಟ್ಟಣದಲ್ಲಿ ಕೊನೆಗೂ ಕೂಡಿಬಂತು ಸುಂದರ ಮೊಳಕಾಲ್ಮೂರು ಮುಖ್ಯ ರಸ್ತೆಯ ಕಾಮಗಾರಿಗೆ ಅಧಿಕೃತವಾಗಿ ಈ ದಿನ ಪೊಲೀಸ್ ಸರ್ಪಗಾವಲಿನ ಒಂದಿಗೆ ಬೆಳಗ್ಗೆ ಚಾಲನೆ ನೀಡಲಾಯಿತು. ಸುಮಾರು ವರ್ಷಗಳಿಂದ ರಸ್ತೆಯನ್ನು ರಾಜಕೀಯಕ್ಕೆ ಬಳಸಿಕೊಂಡು ಈ ದಿನ ಹಾಗುತ್ತದೆ ಮುಂದಿನ ದಿನ ಹಾಗುತ್ತದೆ ನಾನು ಈ ರಸ್ತೆಯನ್ನು ಖಂಡಿತವಾಗಿ ಮಾಡುತ್ತೇನೆ ಎಂದು ಸುಳ್ಳು ಆಶ್ವಾಸನೆ ನೀಡುತ್ತಾ ಅದೆಷ್ಟೋ ದಿನಗಳು ಉರುಳಿದವು. ಆದರೆ ಸಾರಿಗೆ ಸಚಿವರಾದ ಶ್ರೀರಾಮುಲು ಬರಬೇಕಾಯಿತು ರಸ್ತೆಯನ್ನು ಬೇಧಿಸಲು.ಕೊಟ್ಟ ಮಾತಿನಂತೆ ಈ ದಿನ ರಸ್ತೆ ಅಗಲೀಕರಣಕ್ಕೆ ಪಟ್ಟಣ ಪಂಚಾಯಿತಿ ಅಧ್ಯಕ್ಷರು ಉಪಾಧ್ಯಕ್ಷರು ಸರ್ವ ಸದಸ್ಯರು ಹಾಗೂ ಮುಖ್ಯ ಅಧಿಕಾರಿಗಳೊಂದಿಗೆ ಸಬ್ ಇನ್ಸ್ಪೆಕ್ಟರ್ ಬಸವರಾಜ್ ಅವರ ತಂಡದೊಂದಿಗೆ ಈ ದಿನ ಅಧಿಕೃತವಾಗಿ ಚಾಲನೆ ನೀಡಿದರು. .ಕೊನೆಗೂ ಎಷ್ಟು ದಿನಗಳ ಕನಸು ನನಸಾಗಿದೆ ಎಂದು ಮಂಡಲ ಅಧ್ಯಕ್ಷರಾದ ಡಾಕ್ಟರ್ ಮಂಜುನಾಥ್ ಹರ್ಷ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಸಬ್ ಇನ್ಸ್ಪೆಕ್ಟರ್ ಬಸವರಾಜ್ ಮುಖ್ಯಾಧಿಕಾರಿ ಕಾಂತರಾಜ್ ಪಟ್ಟಣ ಪಂಚಾಯಿತಿ ಅಧ್ಯಕ್ಷರಾದ ಲಕ್ಷ್ಮಣ್ ಮತ್ತು ಪಟ್ಟಣ ಪಂಚಾಯತಿಯ ಎಲ್ಲ ಸಿಬ್ಬಂದಿ ಮತ್ತು ಪೋಲಿಸ್ ಸಿಬ್ಬಂದಿಗಳು ಭಾಗವಹಿಸಿದ್ದರು…

ವರದಿ.ಮಂಜುನಾಥ್, ಎಚ್.

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend