ತನಿಖಾಧಿಕಾರಿಯ ತನಿಖೆಯಿಂದ ಬಯಲಾಗುವುದೇ ,ತಮ್ಮೆನಹಳ್ಳಿ ಗ್ರಾಮಪಂಚಾಯಿತಿ ಅಭಿವೃದ್ದಿ ಅಧಿಕಾರಿಯ ನಿಜ ಬಣ್ಣ…???

Listen to this article

ನಮ್ಮ ಒಂದು ರಾಜ್ಯವು, ಸುಸಂಸ್ಕೃತಿ ಮತ್ತು ಸಂಪ್ರದಾಯಿಕ ಒಂದು ಪಾರಂಪರೆಯನ್ನು ಒಂದಿರುವ ಒಂದು ರಾಜ್ಯವೆಂದೆ ನಮ್ಮ ಒಂದು ದೇಶದಲ್ಲಿ ಗುರುತಿಸಲ್ಪಟ್ಟ ಒಂದು ಶಾಂತಿಯ ನೆಲೆಯನ್ನು ಕಂಡಂತಹ ಒಂದು ವಿಭಿನ್ನ ರೀತಿಯಲ್ಲಿ ತನ್ನದೇ ಆದ ವೈವಿದ್ಯಮಯೆಯನ್ನು ಹೊಂದಿರುವ ಒಂದು ಕರುನಾಡು, ಆದರೆ ಇದೆಲ್ಲಾ ನೀವು ತಿಳಿದಹಾಗೆ ದಶಕಗಳ ಹಿಂದೆ ಮಾತ್ರ ಈ ರೀತಿಯಲ್ಲಿತ್ತು ಆದರೆ ಇಂದಿನ ನಮ್ಮ ಕರುನಾಡಲ್ಲಿ ಬಡವರಿಗೆ ಸಿಗಬೇಕಾದ ಸೌಲಭ್ಯಗಳು ಮರೀಚಿಕೆ ಆಗುತ್ತಿವೆ ಮತ್ತು ಸರ್ಕಾರದ ಸವಲತ್ತುಗಳನ್ನು ಪಡೆಯಬೇಕೆಂದರೆ ಬಡವರ ಬವಣೆಗೆ ಬರೆಯನ್ನು ಎಳೆದಂತ ಒಂದು ಬಾಸಾ ಅಂದರೆ, ಇಂತಹ ಒಂದು ಸನ್ನಿವೇಶಗಳು ಸರಿಸುಮಾರು ರಾಜ್ಯದ ಸರ್ಕಾರಿ ಕಚೇರಿಗಳಲ್ಲಿ ಕಂಡು ಬರುತ್ತವೆ ಇದೆಲ್ಲದಕ್ಕೂ ಕಾರಣ ಅಧಿಕಾರದ ವ್ಯಾಮೋಹ, ದೌರ್ಜನ್ಯ, ದರ್ಪದಿಂದ ಬಡವರನ್ನು ಬರೀಗೈಯಲ್ಲಿ ಇರುವಂತೆ ಮಾಡಿದೆ ಇಂದಿನ ಒಂದು ರಾಜಕೀಯ ವ್ಯವಸ್ಥೆ ಅಂದರು ತಪ್ಪಾಗಲಾರದು ಹಲವು ಸರ್ಕಾರಿ ಕಚೇರಿಗಳಲ್ಲಿ ಭ್ರಷ್ಟಾಚಾರ, ಲಂಚವತಾರ, ಸರ್ಕಾರದ ಒಂದು ಹಣವನ್ನು ದುರುಪಯೋಗ ಮಾಡುತ್ತಿರುವ ಹಲವು ಸತ್ಯಸಂಗತಿಗಳು ಸಾಕಷ್ಟಿದ್ದರು ಸಹ, ಅಕ್ಷರ ಶಹ ನಿಷ್ಯಕ್ತರಾಗುತ್ತಿದ್ದಾರೆ ಇಂದಿನ ಹಲವಾರು ವಿದ್ಯಾವಂತರ ಯುವಕರು, ಮನಸ್ಸಲ್ಲಿ ಭ್ರಷ್ಟಾಚಾರವನ್ನು ತಡೆಯುವ ತವಕ, ಅದರ ಜೊತೆಗೆ ಜೀವದ ಒಂದು ಭಯ ಇವೆಲ್ಲದರ ನಡುವೆ ಭ್ರಷ್ಟ ಅಧಿಕಾರಿಗಳು, ಮತ್ತು ಹಲವಾರು ಮುಖಂಡರ ಒಂದು ಕಪಿಮುಷ್ಟಿಯಲ್ಲಿದೆ ನಮ್ಮಂತ ಯುವಕರ ಪರಿಸ್ಥಿತಿ ಎನ್ನುತ್ತಾರೆ ಕೆಲ ಯುವಕರು.

ಅದು ಏನೇ ಇರಲಿ ಬಿಡಿ ಈಗ ನಾವು ಹೇಳಹೊರಟಿರುವ ಒಂದು ಸಂಗತಿಯಂದರೆ, “ಮೊಳಕಾಲ್ಮುರು ತಾಲೂಕಿನ, ತಮ್ಮೆನಹಳ್ಳಿಗ್ರಾಮಪಂಚಾತಿ “ಬಗ್ಗೆ ಇಲ್ಲಿ ಹಲವು ರೀತಿಯಲ್ಲಿಯು ಸಹ ಸರ್ಕಾರದ ಹಣವನ್ನು ದುರುಪಯೋಗ ಮಾಡಿದ್ದರು ಅವರ ಮೇಲೆ ಇವರು, ಇವರ ಮೇಲೆ ಅವರು ಕುಂಟುನೆಪವನ್ನು ಸಾರ್ವಜನಿಕರಿಗೆ ಹೇಳುತ್ತಾ ಸಾಗುತ್ತಿದ್ದಾರೆ.

ಇಲ್ಲಿನ ಅಭಿವೃದ್ಧಿ ಅಧಿಕಾರಿಗಳು ಎನ್ನುತ್ತಾರೆ ಇಲ್ಲಿನ ಮುರುಡಿ ಗ್ರಾಮದಲ್ಲಿನ ಗ್ರಾಮಸ್ಥರು, ಅಂದರೆ ಹಲವಾರು ಶೌಚಾಲಯಗಳನ್ನು ನಿರ್ಮಿಸದೆ ಅದರ ಹೆಸರಲ್ಲಿ ಸರ್ಕಾರದ ಹಣವನ್ನು ಕೊಳ್ಳೆ ಹೊಡೆದಿದ್ದಾರೆ ಎನ್ನುತ್ತಾರೆ ಅಲ್ಲಿನ ನೋವುಂದ ಗ್ರಾಮಸ್ಥರು ಆದರೆ ಹಾಲಿ “ಗ್ರಾಮಪಂಚಾಯಿತಿ ಅಭಿವೃದ್ಧಿಅಧಿಕಾರಿಗಳನ್ನು ಕೇಳಿದರೆ, ಈ ಕೆಲಸ ನನ್ನ ಒಂದು ಆಡಳಿತ ವ್ಯವಸ್ಥೆಯಲ್ಲಿ ಆಗಿಲ್ಲ ಅದಕ್ಕೂ ನನಗೂ ಸಂಬಂಧವಿಲ್ಲ ಎನ್ನುವ “ನುಣುಪಾದ “ಉತ್ತರದೊಂದಿಗೆ ಜಾರುವುದಕ್ಕೆ ಪ್ರಯತ್ನ ಪಡುತ್ತಾರೆ ಆದರೆ, ನಮ್ಮೂದೊಂದೇ ಪ್ರಶ್ನೆ, ಇವರು ಬಂದ ಮೇಲೆ ಮೊದಲಿದ್ದ ಅಧಿಕಾರಿಯಿಂದ ಅಧಿಕಾರವನ್ನು ವಹಿಸಿಕೊಳ್ಳುವ ಸಮಯದಲ್ಲಿ ಇದನ್ನು ಪರಿಶೀಲನೆಯನ್ನು ಮಾಡದೇ ಅಧಿಕಾರವನ್ನು ಹೇಗೆ ವಹಿಸಿಕೊಂಡರು? ಮತ್ತು ಇನ್ನು ಹಲವಾರು ರೀತಿಯಲ್ಲಿ ಪಂಚಾಯತಿಯಲ್ಲಿ ಹಗರಣವನ್ನು ಮೊದಲಿನ ಅಧಿಕಾರಿ ಮಾಡಿದ್ದರೆ ಇದಕ್ಕೆಲ್ಲ ಯಾರು ಹೊಣೆ?ಹಾಗೂ ಗ್ರಾಮಗಳಲ್ಲಿನ ಸಾರ್ವಜನಿಕರು ಯಾರನ್ನು ಕೇಳಬೇಕು ಇದಕ್ಕೆಲ್ಲ ಅವರೇ ಉತ್ತರವನ್ನು ಕೊಡಲಿ.

MGNREGA ಒಂದು ಕಳಪೆ ಕಾಮಗಾರಿ, ಸೊಕ್ ಪಿಟ್ ಕೆಲಸವನ್ನು ಮಾಡದೇ ಪಲಾನುಬಾವಿ ತಿಳಿಸದೆ ಬಿಲ್ ತೆಗೆದಿರುವುದು ಎಷ್ಟು ಸರಿ ಅದನ್ನು, ಹಾಲಿ ಗ್ರಾಮಪಂಚಾಯಿತಿ ಅಭಿರುದ್ದಿಅಧಿಕಾರಿಯನ್ನು ಕೇಳಿದಾಗ ನನ್ನ ಒಂದು ಅಧಿಕಾರ ಅವಧಿಯಲ್ಲಿ ಆಗಿಲ್ಲ. ನನಗಿಂತ ಮೊದಲಿದ್ದ ಅಭಿವೃದ್ಧಿ ಅಧಿಕಾರಿಯ ಒಂದು ಅಧಿಕಾರವದಿಯಲ್ಲಿ ಆಗಿದೆ ಇದಕ್ಕೂ ನನಗೂ ಸಂಬಂಧವಿಲ್ಲ ಎನ್ನುತ್ತಾರೆ, ಅಂದರೆ ಇದಕ್ಕೆಲ್ಲ ಯಾರೋ ಹೊಣೆಗಾರರು ಸಾರ್ವಜನಿಕರೇ, ಅಥವಾ ಸಂಬಂಧ ಮೇಲಾಧಿಕಾರಿಗಳೆ ಇದಕ್ಕೆಲ್ಲ ಉತ್ತರ ಕೊಡಬೇಕು, ಇನ್ನು 4 ರಿಂದ 5 ಇದೆ ತರನಾದ ರೀತಿಯಲ್ಲಿ ಆಗಿರಬಹುದು ಅವರಿದ್ದ ಸಮಯದಲ್ಲಿ ಅನ್ನುತ್ತಾರೆ ಹಾಲಿ ಅಧಿಕಾರಿ, ಇದರ ಬಿಲ್ ಸಹ ಅವರಒಂದು ಅಧಿಕಾರವದಿಯಲ್ಲಿ ಮುಂಜೂರು ಮಾಡಿಕೊತ್ತಿರುತ್ತಾರೆ, ಅಂದರೆ ತಮ್ಮೆನಹಳ್ಳಿ ಗ್ರಾಮಪಂಚಾಯಿತಿಯಲ್ಲಿ ಮೊದಲು ಕಾರ್ಯವನ್ನು ನಿರ್ವಹಿಸುತ್ತಿದ್ದ ಅಧಿಕಾರಿ ಇವಾಗ ಇದೆ ತಾಲೂಕಿನ, ಜಾಗೇರು ಬುಡ್ಡೆನಹಳ್ಳಿ ಗ್ರಾಮಪಂಚಾಯಿತಿಯಲ್ಲಿ ತನ್ನ ಕಾರ್ಯವನ್ನು ನಿರ್ವಹಿಸುತ್ತಿದ್ದಾರೆ ಎನ್ನುತ್ತಾರೆ ಮತ್ತು ಬದು ನಿರ್ಮಾಣದಲ್ಲಿ JCB ಕಡೆಯಿಂದ ಕೆಲಸವನ್ನು ಮಾಡಿಸಿ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಕೆಲಸವನ್ನು ಮಾಡಿಸದೇ ಜೆಸಿಬಿ ಯಂತ್ರವನ್ನು ಬಳಸಿಕೊಂಡು ಬೇಕಾದವರ ಬ್ಯಾಂಕ್ ಕಾತೆಗೆ ಹಣವನ್ನು ವರ್ಗಾವಣೆ ಮಾಡಿದ್ದಾರೆ ಎನ್ನುತ್ತಾರೆ ಅಲ್ಲಿನ ಕೆಲ ಮುರುಡಿ ಗ್ರಾಮದ ಗ್ರಾಮಸ್ಥರು ಹಾಗೂ ಹಳ್ಳದಲ್ಲಿ ಸ್ಟೋನ್ ಪಿಚ್ಚಿoಗ್ ಕಾಮಗಾರಿಯಲ್ಲಿಯೂ ಸಹ ಜಾಬ್ ಕಾರ್ಡ್ ಹೊಂದಿರುವವರಿಗೆ ಕೆಲಸವನ್ನು ಕೊಡದೆ ಬೇರೆಯವರ ಒಪ್ಪಂದದೊಂದಿಗೆ ಕಾಮಗಾರಿಯನ್ನು ಮಾಡಿಸಿ ಬಿಲ್ ಎತ್ತಿದ್ದಾರೆ ಎನ್ನುತ್ತಾರೆ ಇಲ್ಲಿನ ಹಲವಾರು ನೋವುಂಡ ಗ್ರಾಮಸ್ಥರು

ಮತ್ತು ಇದೆ ಮುರುಡಿ ಗ್ರಾಮದಲ್ಲಿನ ಶೌಚಾಲಯ ಹಾಗೂ ಹಳ್ಳದ ಹತ್ತಿರ ನಡೆದ ಹಲವಾರು ಕೆಲಸಗಳ ಕಳಪೆಯನ್ನು ವೀಕ್ಷಣೆ ಮಾಡಲು “ಮಾನ್ಯ AD ಸಾಹೇಬ್ರು “ಬಂದು ಪರಿವಿಕ್ಷಣೆಯನ್ನು ಮಾಡಿದ್ದರೆ ಎನ್ನುವ ಒಂದು ವಿಷಯವನ್ನುಅಲ್ಲಿನ ಮುರುಡಿ ಗ್ರಾಮದಲ್ಲಿನ ಗ್ರಾಮಸ್ಥರು ನಮ್ಮ ಒಂದು ಗಮನಕ್ಕೆ ತಂದರು, ಸರಿ ಕೆಲಸವನ್ನು ಮಾಡದೇ ಸರ್ಕಾರದ ಹಣವನ್ನು ಖಾತೆಯಿಂದ ತೆಗೆಯಲು ಸರ್ಕಾರದ ಯಾವ ಯೋಜನೆಯಲ್ಲಿ ಉಲ್ಲೇಖಮಾಡಿದ್ದರೋ ಅದು ಅವರಿಗೆ ಗೊತ್ತು ಆದರೆ ಇಲ್ಲಿ ಹಳ್ಳಿಗಳು ಅಭಿವೃದ್ಧಿಯಾಗಲಿ ಮತ್ತು ಅಭಿವೃದ್ಧಿ ಮಾಡಲಿ ಎನ್ನುವ ದೃಷ್ಟಿಯಲ್ಲಿ ಪ್ರತಿಯೊಂದು ಗ್ರಾಮಪಂಚಾಯಿತಿಯ ಮಟ್ಟದಲ್ಲಿ ಅಭಿವೃದ್ಧಿ ಅಧಿಕಾರಿಗಳನ್ನು ನಿಯೋಜನೆ ಮಾಡಿದರೆ, ಇದರಿಂದ ಯಾರಿಗೆ ಲಾಭ ನೀವೇ ಯೋಚಯನ್ನು ಮಾಡಿ!

ನೋಡಿ ಇದೆಲ್ಲಾ ಮೇಲಧಿಕಾರಿಗಳ ಗಮನಕ್ಕೆ ಹೋದರು ಸಹ ಇಲ್ಲಿ ಹಾಳಗುವುದು ಸಾರ್ವಜನಿಕರೇ ಹೊರೆತು ಮತ್ಯಾರು ಅಲ್ಲ ನೋಡೋಣ ತಮ್ಮೆನಹಳ್ಳಿ ಗ್ರಾಮಪಂಚಾಯಿತಿಯ, ಮುರುಡಿ ಗ್ರಾಮದಲ್ಲಿನ ಅನ್ಯಾಯದ ಒಂದು ವಿಷಯಕ್ಕೆ ನ್ಯಾಯ ನಿಗುವೊದೋ ಅಥವಾ ಇನ್ನು ಮುಂದುವರೆಯುವುದೋ ಅದಕ್ಕೆ ಸೂಕ್ತ ರೀತಿಯಲ್ಲಿ ತನಿಖೆಯನ್ನು ಮಾಡಿದ ಅಧಿಕಾರಿಗಳಿಂದ ಸಾರ್ವಜನಿಕರಿಗೆ ದೊರಕಲಿ ಎಂಬುದೇ ನಮ್ಮ ಒಂದು ಆಶಯ ಮತ್ತೆ…. ಮುಂದಿನ ಸಂಚಿಕೆಯಲ್ಲಿ ಸವಿಸ್ತಾರವಾಗಿ ನಿಮ್ಮಗಳ ಮುಂದೆ ಸುದ್ದಿಯೊಂದಿಗೆ

ವರದಿ. ಮಂಜುನಾಥ್, ಎಚ್

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend