ಹತ್ತನೇ ತರಗತಿ ಪರೀಕ್ಷೆಯಲ್ಲಿ ಪಾಲ್ಗೊಳ್ಳುವ ಮಕ್ಕಳ ಆರೋಗ್ಯ ಹಿತದೃಷ್ಟಿಯಿಂದ ಸ್ಯಾನಿಟೇಸರ್ ವಿತರಣೆ…!!!

Listen to this article

ಸರ್ಕಾರದ ಸಾರ್ವಜನಿಕ ಶಿಕ್ಷಣ ಇಲಾಖೆಯ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ವತಿಯಿಂದ ನಡೆಯುವ ದಿನಾಂಕ 19 ಮತ್ತು 22 ಜುಲೈ 2021 ರಂದು ಎಸ್ ಎಸ್ ಎಲ್ ಸಿ ಪರೀಕ್ಷೆಗೆ ಬೆಳಗಾವಿ,ವಿಜಯಪುರ, ಬಾಗಲಕೋಟೆ, ಶೈಕ್ಷಣಿಕ ಜಿಲ್ಲೆ ಚಿಕ್ಕೋಡಿ ಜಿಲ್ಲೆಯಲ್ಲಿ ಪರೀಕ್ಷೆ ಬರೆಯಲಿರುವ ಮಕ್ಕಳ ಮತ್ತು ಪರೀಕ್ಷೆಯ ಕರ್ತವ್ಯ ನಿರ್ವಹಿಸುತ್ತಿರುವ ಶಿಕ್ಷಕರು, ಅಧಿಕಾರಿಗಳ ಆರೋಗ್ಯ ಮತ್ತು ಸುರಕ್ಷತೆಯ ಹಿತದೃಷ್ಟಿಯಿಂದ ಕರ್ನಾಟಕ ಸರ್ಕಾರದ ಸಚಿವರಾದ ಸನ್ಮಾನ್ಯ ಶ್ರೀ ಮುರುಗೇಶ ನಿರಾಣಿ ಮತ್ತು ವಿಧಾನ ಪರಿಷತ್ ಸದಸ್ಯರಾದ ಸನ್ಮಾನ್ಯ ಶ್ರೀ ಹಣಮಂತ ನಿರಾಣಿ ಸಹೋದರರು ಸ್ಯಾನಿಟೈಜರ ಮತ್ತು ಮಾಸ್ಕಗಳನ್ನು ನೀಡಿರುವುದು ಶ್ಲಾಘನೀಯ ಕಾರ್ಯವಾಗಿದೆ.

ಸದರಿ ಸಂದರ್ಭದಲ್ಲಿ ಬಿಜೆಪಿ ಯುವ ಧುರೀಣರು, ಧನಲಕ್ಷ್ಮಿ ಸಹಕಾರ ಸಕ್ಕರೆ ಕಾರ್ಖಾನೆಯ ಅಧ್ಯಕ್ಷರಾದ ಮಲ್ಲಣ್ಣ ಯಾದವಾಡ, ಮಹಾದೇವ ಜೋರಾಪುರ,ಭಾರತೀಯ ಜನತಾ ಪಕ್ಷದ ನಗರಾಧ್ಯಕ್ಷರಾದ ಶ್ರೀ ಶಶಿಕಾಂತ ಪಾಟೀಲ,ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಮುರಗೇಂದ್ರಗೌಡ ಪಾಟೀಲ, ಶ್ರೀ ದಾದಗೌಡ ಬಿರಾದಾರ, ಜಿಲ್ಲಾ ವಿಶೇಷ ಸಂಪರ್ಕಾಧಿಕಾರಿ ಶ್ರೀ ಮಹಾದೇವ ದಾನಣ್ಣವರ.ಮಾನ್ಯ ಸಚಿವರ ಮತ್ತು ವಿಧಾನ ಪರಿಷತ್ ಸದಸ್ಯರ ಪ್ರತಿನಿಧಿಗಳಾಗಿ ಆಗಮಿಸಿದ ಶ್ರೀ ಶ್ರೀಕಾಂತ ಮೂಲಿಮನಿ ವಕೀಲರು, ಶ್ರೀ ವೀರಣ್ಣ ತೋಟದ, ಶ್ರೀ ಸಿದ್ದು ಮನ್ನಿಕಟ್ಟಿ. ಮಾನ್ಯ ಕಾರ್ಯದರ್ಶಿಗಳು,ಸಹ ನಿರ್ದೇಶಕರಾದ ಶ್ರೀ ವಾಲ್ಟರ್ ಎಚ್ ಡಿ ಮೆಲ್ಲೋ ಉಪನಿರ್ದೇಶಕರಾದ ಡಾ, ಆನಂದ ಪುಂಡಲೀಕ, ಶಿಕ್ಷಣಾಧಿಕಾರಿಗಳಾದ ಶ್ರೀ ಎನ್ ಆರ್ ಪಾಟೀಲ ಬಸವರಾಜ ಮಿಲ್ಲಾನಟ್ಟಿ ಶ್ರೀ ಮಹೇಶ ಚನ್ನಂಗಿ ಸಹ ಶಿಕ್ಷಕರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ರಾಮು ಅ ಗುಗವಾಡ, ಜಿಲ್ಲಾ ಕಾರ್ಯದರ್ಶಿಗಳಾದ ಶ್ರೀ ಬಸವರಾಜ ಗಾಣಿಗೇರ, ಉಪಾಧ್ಯಕ್ಷರಾದ ಶ್ರೀ ಅಶೋಕ ಅಣ್ಣಿಗೇರಿ,ನಗರ ಕಾರ್ಯದರ್ಶಿ ಶ್ರೀ ಎನ್ ಎಮ್ ಮದನಬಾವಿ ಹಾಗೂ ವಿಷಯ ಪರಿವೀಕ್ಷಕರು ಮುಂತಾದವರು ಉಪಸ್ಥಿತರಿದ್ದರು…

ವರದಿ ಸುಲೇಮಾನ್ ರಾಜಪಾಲೇ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend