ಬಡವರ ಅನ್ನಭಾಗ್ಯ ಯೋಜನೆಗೆ ಕನ್ನ ಹಾಕುವ ಖದೀಮರ ಆಟಕ್ಕೆ, ಕೊನೆ ಯಾವಾಗ..???

Listen to this article

ಪಡಿತರ ಅನ್ನಭಾಗ್ಯ ಅಕ್ಕಿಗೆ ಕಣ್ಣುಹಾಕಿದ ಖದೀಮರು ಬಾಗಲಕೋಟ ಜಿಲ್ಲಾ ವ್ಯಾಪ್ತಿಯಲ್ಲಿ ಅಕ್ರಮಕ್ಕೆ ಕಡಿವಾಣ ಹಾಕದ ಅಧಿಕಾರಿಗಳು.

1.ಬಾಗಲಕೋಟ ಜಿಲ್ಲೆಯ ರಬಕವಿ ಬನಹಟ್ಟಿ {ತಾ} ಯಲ್ಲಟ್ಟಿ ಗ್ರಾಮದಲ್ಲಿ ದಿ: 14.07.2021 ರಂದು ಮಧ್ಯರಾತ್ರಿ 2. ಗಂಟ್ಟೆಯ ಸಮಯದಲ್ಲಿ ಪಡಿತರ ವಿತರನೆ ಮಾಡುವ ಮಾಲಿಕ ಒಂದು ಮಿನಿ ಲಾರಿಯ ಮೂಲಕ ಅನ್ನಬಾಗ್ಯ್ ಅಕ್ಕಿಯನ್ನು ಲಾರಿಯಲ್ಲಿ ತುಂಬುತ್ತಿದ್ದಾಗ ಅದೇ ಗ್ರಾಮದ ಮುಖಂಡರು ಲಾರಿಯಲ್ಲಿ ತುಂಬಿರುವ ಅಕ್ಕಿ ಲಾರಿ ಸಮೇತ ಆರೋಪಿಯನ್ನು ಹಿಡಿದು ಬನಹಟ್ಟಿ ಪೊಲೀಸ್ ಠಾಣೆಗೆ ಆರೋಪಿಗಳನ್ನು 3:30 ಕ್ಕೆ ಒಪ್ಪಿಸಿದ್ದರು.


ಅನ್ನಬಾಗ್ಯ ವಿತರಕರಾದ ಸಂತೋಷ ಕಂಚನಕಿ ರಬಕವಿ ಮತ್ತು ಶಿವಾನಂದ ಹಣಮಂತ ತೇಲಿ ಯಲ್ಲಟ್ಟಿ ಗ್ರಾಮದ ಇವರುಗಳು ಕಾರ್ಡುದಾರರಿಗೆ ಕೊಡಬೇಕಾಗಿರೋ ಅಕ್ಕಿಯ ಬದಲು ಗೋದಿ ಅಂದರೆ (4 ಕೆಜಿ ಅಕ್ಕಿಯ ಕಡಿತ ಮಾಡಿ 1ಕೆಜಿ ಗೋದಿ ವಿತರಣೆ )ಕಳಪೆ ಮಟ್ಟದ ಗೋಧಿಯನು ಜಮಖಂಡಿ ಪಟ್ಟಣದಿಂದ ಖರೀದಿಸಿ ಜನರಿಗೆ ವಿತರಿಸುತ್ತಾನೆ ಎಂದು ಸ್ಥಳೀಯರ ಆರೋಪ ಮಾಡಿದ್ದಾರೆ.
□ ಕೊರೋನ ಸಮಯದಲ್ಲಿ ಆಹಾರ ಇಲ್ಲದೆ ಜನರು ಕಷ್ಟ ಪಡುತಿರುವಾಗ ಅನ್ನಭಾಗ್ಯ ಅಂಗಡಿ ಮಾಲೀಕರು ಪಡಿತರ ದಾನ್ಯವನ್ನು ಕಳ್ಳದಂದೆ ಮೂಲಕ ಹೊರ ರಾಜ್ಯಗಳಿಗೆ ಕಳಿಸುತ್ತಾರೆ. ಈ ವಿಷಯ ಸಂಬಂದಪಟ ಅಧಿಕಾರಿಗಳಿಗೆ ಗೋತ್ತಿದರು ತಮಗೆ ಗೊತ್ತೇಯಿಲ್ಲ ಅನ್ನುವ ರೀತಿ ಇದ್ದಾರೆ. ಕಳ್ಳ ದಂದೆಯಕೋರರನು ಪತ್ರಿಕಾಮಿತ್ರರು ಮಾಲು ಸಮೇತ ಮತ್ತು ಎಲ್ಲ ದಾಖಲೆ ಒದಗಿಸಿದರು ಆರೋಪಿಗಳ ರಕ್ಷಣೆಯಾಗುತ್ತೆ ಮತ್ತು ಪತ್ರಿಕಾವರದಿಗಾರರ ಮೇಲೆ ಕೇಸ್ ಮಾಡುತ್ತಾರೆ. ಇನ್ನಾದರೂ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ತಮ್ಮಲಿ ಮನವಿ.

ವರದಿ :ಮಹಾಲಿಂಗ ಎಚ್ ಗಗ್ಗರಿ
ಜಿಲ್ಲಾ ವರದಿಗಾರ ಬೆಳಗಾವಿ.

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend