ಕರೋನ ಅಬ್ಬರದ ನಡುವೆ ರಾಜ್ಯ ಅಡಳಿತ ಪಕ್ಷದಲ್ಲಿ ನಾಯಕತ್ವದ ಬದಲಾವಣೆ ಕೂಗು…!!!

Listen to this article

ಕರೋನ ಅಬ್ಬರದ ನಡುವೆ ರಾಜ್ಯ ಅಡಳಿತ ಪಕ್ಷದಲ್ಲಿ ನಾಯಕತ್ವದ ಬದಲಾವಣೆ ಕೂಗು

ವರದಿ.ವೀರೇಶ್ ಪಿ.

ಕರ್ನಾಟಕ ರಾಜ್ಯದಲ್ಲಿ ಬಿಜೆಪಿ ಪಕ್ಷ ಅಧಿಕಾರದ ಚುಕ್ಕಾಣಿ ಹಿಡಿದ ಮೇಲೆ “ಹುಚ್ಚನ ಮದುವೆಯಲ್ಲಿ ಉಂಡವನೇ ಜಾಣ” ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ.ರಾಜ್ಯದಲ್ಲಿ ಕರೋನ ಮಹಾಮಾರಿ ವೈರಸನ 2ನೇ ಅಲೆ ಭಯಂಕರವಾಗಿದೆ ಅತಿ ಬೇಗ ಹರಡಿಕೊಳ್ಳುತ್ತಿದೆ ಜೊತೆಗೆ ಬ್ಲ್ಯಾಕ್ ಫಂಗಸ್ ವೈರಸ್ ಜನರನ್ನು ಮತ್ತಷ್ಟು ಭಯಭೀತಿಗೊಳಿಸಿದೆ.ದಿನಕ್ಕೆ ಸಾವಿರಾರು ಕರೋನ ಪಾಸಿಟಿವ್ ಕೇಸ್ ಪತ್ತೆಯಾಗುತ್ತಿದ್ದಾವೆ ನೂರಾರು ಜನರು ಮರಣಹೊಂದುತ್ತಿದ್ದಾರೆ.

ಆಸ್ಪತ್ರೆಗಳಲ್ಲಿ.ಆಕ್ಸಿಜನ . ವೆಂಟಿಲೆಟರ್.ಡಾಕ್ಟರಗಳು. ಹಾಸಿಗೆಗಳು ಇಲ್ಲ ಹೀಗೆ ಅನೇಕ ಸಮಸ್ಯೆಗಳ ಸರಮಾಲೆ ಇರುವ.ಅತ್ಯಂತ ಕಷ್ಟದ ಸಂದರ್ಭದಲ್ಲಿ ನಾಯಕತ್ವ ಬದಲಾವಣೆಯ ಕೂಗು ಅಡಳಿತ ಬಿಜೆಪಿ ಪಕ್ಷದಲ್ಲಿ ಕೇಳಿಬರುತ್ತಿದೆ ಇದು ದುರದೃಷ್ಟಕರ ಸಂಗತಿ.”ಇಲಿಗೆ ಪ್ರಾಣ ಸಂಕಟ ಬೆಕ್ಕಿಗೆ ಚೆಲ್ಲಾಟ” ಎಂಬತೆ ರಾಜಕೀಯ ನಾಯಕರಿಗೆ ತಮ್ಮ ತಮ್ಮ ಸ್ವಾರ್ಥಗಳೇ ಮುಖ್ಯವೆ ಹೊರತು ಜನರ ಜೀವಗಳು ಮುಖ್ಯವಲ್ಲ.ಯಾರು ಸತ್ತರೆ ನಮಗೇನು ಅಧಿಕಾರ ಮತ್ತು ಸರ್ಕಾರದ ಸೌಲಭ್ಯಗಳು ಬೇಕೆಂಬ ಮನಸ್ಥಿತಿಯಿದೆ.

ನಾಯಕತ್ವ ಬದಲಾಯಿಸಿ ಎಂದು ನಿಮ್ಮ ಬೇಳೆ ಬೇಯಿಸಿಕೊಳ್ಳುವುದಕ್ಕೆ ದೆಹಲಿಗೆ ಹೋಗುತ್ತಿರ.ಕೋವಿಡ್ ವ್ಯಾಕ್ಸಿನ್.ಆಕ್ಸಿಜನ್ ಇಲ್ಲದೆ ಸಾವಿರಾರು ಜನರು ಸಾಯುತ್ತಿದ್ದಾರೆ.ಕೇಂದ್ರದಲ್ಲಿ ಬಿಜೆಪಿ ಪಕ್ಷದ ಸರ್ಕಾರವಿದೆ ಯಾರಾದರೂ ದೆಹಲಿಗೆ ಹೋಗಿ ಪ್ರಧಾನಿಮಂತ್ರಿಗೆ ನಮ್ಮರಾಜ್ಯ ಕರೋನ ವೈರಸನಿಂದ ಸಾವು ನೋವು ಜಾಸ್ತಿಯಾಗಿವೆ ನಮಗೆ ಬಹಳಷ್ಟು ಕೋವಿಡ್ ವ್ಯಾಕ್ಸಿನ್.ಆಕ್ಸಿಜನ್ ಸರಬರಾಜು ಮಾಡಿಯೆಂದು ಕೇಳಿದ್ದಿರಾ ಮ್ಯಾನ ಮುಖ್ಯಮಂತ್ರಿಗಳೆ ಹಾಗೂ ಶಾಸಕ ಮತ್ತು ಸಚಿವರುಗಳೇ.ಉತ್ತಮ ಆಡಳಿತ ನೆಡೆಸುವಲ್ಲಿ ವಿಫಲರಾಗಿದ್ದಿರಿ ಪ್ರೆಟೋಲ್ ಡೀಸೆಲ್ ದಿನನಿತ್ಯದ ವಸ್ತುಗಳ ಮೇಲೆ ಬೆಲೆ ಏರಿಕೆಯಾಗಿವೆ ಕೋವಿಡ್ ಪರಿಸ್ಥಿತಿ ಎದುರುಸುವಲ್ಲಿ ವಿಫಲರಾಗಿದ್ದಿರಿ ಇಂತಹ ಸಂಕಟ ಸಮಯದಲ್ಲಿ ನಾಯಕತ್ವ ಬದಲಾವಣಗೆ ಕಿತ್ತಾಡುತ್ತಿದ್ದಿರಲ್ಲ ಇದು ನ್ಯಾಯವೇ ? ರಾಜ್ಯದ ಜನರು ಎಲ್ಲಾವನ್ನು ಗಮನಿಸುತ್ತಿದ್ದಾರೆ ಮುಂದಿನ ದಿನಗಳಲ್ಲಿ ಸರಿಯಾದ ಪಾಠ ಕಲಿಸುತ್ತಾರೆ. ಸೋತವರನ್ನು ಮಂತ್ರಿಗಳು ಮಾಡಿದರೆ ರಾಜ್ಯ ಅಭಿವೃದ್ಧಿ ಅಗುವುದಿಲ್ಲ ಅವರ ಜೇಬುಗಳು ಅಭಿವೃದ್ಧಿಯಾಗುತ್ತಾವೆ. ನಾಯಕತ್ವ ಬದಲಾವಣೆಗೆ ತಂತ್ರ ಪ್ರತಿತಂತ್ರ ರೂಪಿಸುವಲ್ಲಿ ಸಮಯ ವ್ಯರ್ಥವಾಗುತ್ತೆ ಹೊರತು ಜನರ ಬಗ್ಗೆ ಆಲೋಚನೆ ಮಾಡುವುದಿಲ್ಲ. ಕೆಲವೆ ಕೆಲವು ಜನಪ್ರತಿನಿಧಿಗಳು ಮತದಾರರ ಕಷ್ಟಗಳಿಗೆ ಸ್ಪಂದಿಸುತ್ತಿದ್ದಾರೆ.ಕರೋನ ಜಾಸ್ತಿಯಗಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕಾರಣ. ಕೊಲ್ಕತ್ತಾ.ಕೇರಳ ತಮಿಳುನಾಡು ವಿಧಾನಸಭಾ ಚುನಾವಣೆ.ರಾಜ್ಯದ ಉಪಚುನಾವಣೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡರು ಕರೋನ ಜಾಸ್ತಿಯಾಯಿತು ಚುನಾವಣೆ ಮೊದಲು ಲಾಕ್ಡೌನ್ಮಾಡಿದರೆ ಇಷ್ಟೊಂದುಕೈಮಿರುತ್ತಿಲ್ಲ. ನಾಯಕತ್ವದ ಬದಲಾವಣೆ ಕೂಗು ಬಿಟ್ಟು ಒಟ್ಟಾಗಿ ಕೆಲಸ ಮಾಡಿ ಜನರಿಗೆ ಉತ್ತಮ ಸೌಲಭ್ಯ ಒದಗಿಸಿ ನಿಮ್ಮ ಜೊತೆಗೆ ನಾವು ಇದ್ದೆವೆಂದು ಧ್ಯೇರ್ಯ ತುಂಬುವ ಕೆಲಸ ಮಾಡಿರಿ.ಇಲ್ಲದಿದ್ದರೆ ತಕ್ಕ ಪಾಠ ಕಲಿಸುತ್ತಾರೆ..

 

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend