ಬಳ್ಳಾರಿ: ವಿವಿಧೆಡೆ ಅಕ್ರಮ ಮದ್ಯ ವಶ…!!!

Listen to this article

ಬಳ್ಳಾರಿ: ವಿವಿಧೆಡೆ ಅಕ್ರಮ ಮದ್ಯ ವಶ

ಬಳ್ಳಾರಿ:ಲೋಕಸಭಾ ಸಾರ್ವತ್ರಿಕ ಚುನಾವಣೆ ಅಂಗವಾಗಿ ನೀತಿ ಸಂಹಿತೆ ಜಾರಿ ಇರುವ ಹಿನ್ನೆಲೆಯಲ್ಲಿ ಕಳೆದ ಮೂರು ದಿನಗಳಲ್ಲಿ ವಿವಿಧೆಡೆ ಅಕ್ರಮವಾಗಿ ಸಾಗಿಸುತ್ತಿದ್ದ ಮದ್ಯವನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಕೊಳ್ಳಲಾಗಿದೆ ಎಂದು ಅಬಕಾರಿ ಉಪ ಆಯುಕ್ತ ಎನ್.ಮಂಜುನಾಥ ಅವರು ತಿಳಿಸಿದ್ದಾರೆ.
ಬಳ್ಳಾರಿ-ಸಿರುಗುಪ್ಪ ಮುಖ್ಯ ರಸ್ತೆಯಲ್ಲಿನ ತೆಕ್ಕಲಕೋಟೆ ಪಟ್ಟಣದ ಕ್ರಾಸ್ ಬಳಿ ದ್ವಿಚಕ್ರ ವಾಹನದ ಮೂಲಕ 25.920 ಲೀ. (ಅಂದಾಜು ಮೌಲ್ಯ ರೂ.51520) ಮದ್ಯವನ್ನು ಸಾಗಾಣೆ ಮಾಡುತ್ತಿದ್ದ ವ್ಯಕ್ತಿಯನ್ನು ವಶಕ್ಕೆ ಪಡದು, ವಾಹನ ಜಪ್ತಿ ಮಾಡಲಾಗಿದೆ.


ಬಳ್ಳಾರಿ ತಾಲ್ಲೂಕಿನ ಶ್ರೀಧರಗಡ್ಡೆ ಗ್ರಾಮದಲ್ಲಿನ ಅನುಮಾಸ್ಪದ ಅಂಗಡಿಗೆ ದಾಳಿ ನಡೆಸಿ, ಅಕ್ರಮವಾಗಿ ಹೊಂದಿದ್ದ 17.280ಲೀ. (ಅಂದಾಜು ಮೌಲ್ಯ ರೂ. 7680) ಮದ್ಯವನ್ನು ಜಪ್ತಿ ಮಾಡಿ ಅಂಗಡಿ ಮಾಲೀಕನ್ನು ವಶಕ್ಕೆ ಪಡೆಯಲಾಗಿದೆ.
ಬಳ್ಳಾರಿ ನಗರದ ತಾಳೂರು ರಸ್ತೆಯ ಬಳಿ ದ್ವಿಚಕ್ರ ವಾಹನದಲ್ಲಿ ಸಾಗಿಸುತ್ತಿದ್ದ 8.640 ಲೀ (ಅಂದಾಜು ಮೌಲ್ಯ ರೂ.48840) ಮದ್ಯವನ್ನು ಜಪ್ತಿ ಮಾಡಿ ವಾಹನ ಸವಾರನನ್ನು ವಶಕ್ಕೆ ಪಡೆಯಲಾಗಿದೆ.


ಬಳ್ಳಾರಿ ನಗರದ ಸಿ.ಟಿ ಬಸ್ ನಿಲ್ದಾಣ ಮುಂಭಾಗದಲ್ಲಿ ಆಟೋದಲ್ಲಿ ಸಾಗಾಣೆ ಮಾಡುತ್ತಿದ್ದ 17.280 ಲೀಟರ್ ಮದ್ಯವನ್ನು (ಅಂದಾಜು ಮೌಲ್ಯ ರೂ. 157680) ಜಪ್ತಿ ಮಾಡಿ ಆಟೋ ಚಾಲಕನ್ನು ವಶಕ್ಕೆ ಪಡೆಯಲಾಗಿದೆ.
ಬಳ್ಳಾರಿ ತಾಲ್ಲೂಕಿನ ಗೋಡೆಹಾಳ್ ಗ್ರಾಮದಿಂದ ಚಾಗನೂರು ಗ್ರಾಮಕ್ಕೆ ಹೋಗುವ ರಸ್ತೆಯಲ್ಲಿ ದ್ವಿಚಕ್ರ ವಾಹನ ಮೂಲಕ ಸಾಗಿಸುತ್ತಿದ್ದ 6.660 ಲೀ ಮದ್ಯವನ್ನು (ಅಂದಾಜು ಮೌಲ್ಯ ರೂ. 28831) ಜಪ್ತಿ ಮಾಡಿ ಬೈಕ್ ಸವಾರನನ್ನು ವಶಕ್ಕೆ ಪಡೆಯಲಾಗಿದೆ.


ಬಳ್ಳಾರಿ ತಾಲ್ಲೂಕಿನ ಗೋಡೆಹಾಳ್ ಗ್ರಾಮದಿಂದ ತೆಗ್ಗಿನಬೂದಿಹಾಳ್ ಗ್ರಾಮಕ್ಕೆ ಹೋಗುವ ರಸ್ತೆಯಲ್ಲಿ ದ್ವಿಚಕ್ರ ವಾಹನದ ಮುಖಾಂತರ ಸಾಗಾಟ ಮಾಡುತ್ತಿದ್ದ 4.320 ಲೀ ಮದ್ಯವನ್ನು (ಅಂದಾಜು ಮೌಲ್ಯ ರೂ. 22160) ಜಪ್ತಿ ಮಾಡಿ ವಾಹನ ಸವಾರನನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಳ್ಳಲಾಗಿದೆ.


ಕಂಪ್ಲಿ ಪಟ್ಟಣದಿಂದ ಕೊಟ್ಟಾಲ್ ಕಡೆಗೆ ಹೋಗುವ ರಸ್ತೆಯ ಕಾಲುವೆ ಬಳಿ ದ್ವಿಚಕ್ರ ವಾಹನದಲ್ಲಿ 7.380 ಲೀ ಮದ್ಯವನ್ನು(ಅಂದಾಜು ಮೌಲ್ಯ ರೂ.48690) ಜಪ್ತಿ ಮಾಡಿ ಬೈಕ್ ಸವಾರರನ್ನು ವಶಕ್ಕೆ ಪಡೆದು ಪ್ರರಕರಣ ದಾಖಲಿಸಿಕೊಳ್ಳಲಾಗಿದೆ.
ಸಂಡೂರು ತಾಲ್ಲೂಕಿನ ವಿದ್ಯಾನಗರ ರೈಲ್ವೇ ಗೇಟ್ ಹತ್ತಿರ ದ್ವಿ ಚಕ್ರ ವಾಹನದ ಮೂಲಕ 7.290 ಲೀ ಮದ್ಯವನ್ನು(ಅಂದಾಜು ಮೌಲ್ಯ ರೂ.33240) ಜಪ್ತಿ ಮಾಡಿ ವಾಹನ ಸವಾರನ್ನು ವಶಕ್ಕೆ ಪಡೆದ ಸಂಡೂರು ವಲಯ ಅಬಕಾರಿ ಉಪ ನಿರೀಕ್ಷಕರು-2 ಇವರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಸಿರುಗುಪ್ಪ ನಗರದ ಹೊರ ವಲಯದ ಸಿರುಗುಪ್ಪ-ಆದೋನಿ ರಸ್ತೆಯಲ್ಲಿರುವ ತಾಯಮ್ಮ ಗುಡಿ ಬಳಿ ದ್ವಿಚಕ್ರ ವಾಹನದಲ್ಲಿ 17.280 ಲೀ. ಮದ್ಯವನ್ನು(ಅಂದಾಜು ಮೌಲ್ಯ ರೂ. 32700) ಜಪ್ತಿ ಮಾಡಿ ವಾಹನ ಸವಾರನ್ನು ವಶಕ್ಕೆ ಪಡೆದು, ಸಿರುಗುಪ್ಪ ವಲಯದ ಅಬಕಾರಿ ನಿರೀಕ್ಷಕರು ಪ್ರಕರಣ ದಾಖಲಿಸಿಕೊಂಡಿದ್ದಾರೆ
ಬಳ್ಳಾರಿ ತಾಲ್ಲೂಕಿನ ಡಿ.ಕಗ್ಗಲ್ ಗ್ರಾಮದಲ್ಲಿ ಅನುಮಾನಸ್ಪದ ಅಂಗಡಿ ಮೇಲೆ ದಾಳಿ ನಡೆಸಿ, ಅಕ್ರಮವಾಗಿ ಹೊಂದಿದ್ದ 8.640ಲೀ. ಮದ್ಯವನ್ನು (ಅಂದಾಜು ಮೌಲ್ಯ ರೂ.4870) ಜಪ್ತಿ ಮಾಡಿ, ಅಂಗಡಿ ಮಾಲಿಕನ್ನು ವಶಕ್ಕೆ ಪಡೆದು ಬಳ್ಳಾರಿ ವಲಯ-2ನ ಅಬಕಾರಿ ಉಪ ನಿರೀಕ್ಷಕರು ಇವರು ಪ್ರಕರಣ ದಾಖಲು ಮಾಡಿಕೊಂಡಿರುತ್ತಾರೆ.


ಬಳ್ಳಾರಿ ನಗರದ ಕಣೇಕಲ್ ಬಸ್ ನಿಲ್ದಾಣದ ಸರ್ಕಲ್ ಮುಂಭಾಗ ತ್ರಿಚಕ್ರ ವಾಹನದ ಮೂಲಕ 17.280(ಅಂದಾಜು ಮೌಲ್ಯ ರೂ. 82680) ಲೀ. ಮದ್ಯವನ್ನು ಸಾಗಾಣಿಕೆ ಮಾಡುತ್ತಿದ್ದ ವಾಹನ ಸವಾರನ್ನು ವಶಕ್ಕೆ ಪಡೆದು ಮದ್ಯವನ್ನು ಜಪ್ತಿ ಮಾಡಿ, ಬಳ್ಳಾರಿ ವಲಯ-1ನ ಅಬಕಾರಿ ನಿರೀಕ್ಷಕರು ಪ್ರಕರಣ ದಾಖಲಿಸಿರುತ್ತಾರೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ….

ವರದಿ. ವಿರೇಶ್, ಎಚ್, ಬಳ್ಳಾರಿ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend