ವಿಧಾನಪರಿಷತ್ ಚುನಾವಣೆ ಸುಸೂತ್ರಶೇ.99.81ರಷ್ಟು ಮತದಾನಅಭ್ಯರ್ಥಿಗಳ ಭವಿಷ್ಯಮತಯಂತ್ರಗಳಲ್ಲಿಭದ್ರ…!!!

Listen to this article

ವಿಧಾನಪರಿಷತ್ ಚುನಾವಣೆ ಸುಸೂತ್ರಶೇ.99.81ರಷ್ಟು ಮತದಾನಅಭ್ಯರ್ಥಿಗಳ ಭವಿಷ್ಯಮತಯಂತ್ರಗಳಲ್ಲಿಭದ್ರ.
ಬಳ್ಳಾರಿ:- ಕರ್ನಾಟಕ ವಿಧಾನಪರಿಷತ್ ಬಳ್ಳಾರಿ ಸ್ಥಳೀಯ ಸಂಸ್ಥೆಗಳ ಕ್ಷೇತ್ರದ ಚುನಾವಣೆಯ ಮತದಾನ ಶುಕ್ರವಾರ ಅತ್ಯಂತ ಸುಸೂತ್ರವಾಗಿ ಜರುಗಿತು. ಸಂಜೆ 4ಕ್ಕೆ ಮತದಾನ ಪೂರ್ಣಗೊಂಡಾಗ ಶೇ.99.81ರಷ್ಟು ಮತದಾನವಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ. ಒಟ್ಟು 4663 ಮತದಾರರಲ್ಲಿ 4654 ಮತದಾರರು ಮತದಾನ ಮಾಡಿದ್ದು,09 ಜನರು ಗೈರು ಹಾಜರಾಗಿದ್ದಾರೆ. ಅಭ್ಯರ್ಥಿಗಳ ಭವಿಷ್ಯ ಮತಯಂತ್ರಗಳಲ್ಲಿ ಭದ್ರವಾಗಿದೆ.
ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳಲ್ಲಿ ಸ್ಥಾಪಿಸಲಾಗಿರುವ 247 ಮತಗಟ್ಟೆಗಳಲ್ಲಿ ಮತದಾನ ಬೆಳಿಗ್ಗೆ 8 ಗಂಟೆಗೆ ಆರಂಭವಾಯಿತು. ಆರಂಭದಲ್ಲಿ ಅಷ್ಟೇನು ಚುರುಕುಗೊಳ್ಳದ ಮತದಾನ 10ಗಂಟೆಯಾಗುತ್ತಲೇ ಮತದಾರರು ಮತಗಟ್ಟೆಗಳತ್ತ ಬಂದು ಮತದಾನ ಮಾಡುತ್ತಿರುವುದು ಕಂಡುಬಂದಿತು. ಕ್ಷೇತ್ರದಲ್ಲಿ 2194 ಪುರುಷ ಮತ್ತು 2468 ಮಹಿಳಾ ಮತದಾರರು,01 ಇತರೇ ಸೇರಿದಂತೆ ಒಟ್ಟು 4663 ಅರ್ಹ ಮತದಾರರಿದ್ದಾರೆ. ಅವರಲ್ಲಿ 4654 ಜನರು ಮತದಾನ ಮಾಡಿದ್ದಾರೆ.
ಇತ್ತೀಚೆಗೆ ಜರುಗಿದ ಚುನಾವಣೆಯಲ್ಲಿ ಆಯ್ಕೆಯಾದ ಬಳ್ಳಾರಿ ಮಹಾನಗರ ಪಾಲಿಕೆಯ ಸದಸ್ಯರಿಗೂ ಮತದಾನದ ಹಕ್ಕು ಇರುವ ಹಿನ್ನೆಲೆಯಲ್ಲಿ ನಗರದ ಜಿಪಂನಲ್ಲಿ ತೆರೆಯಲಾದ ಮತದಾನ ಕೇಂದ್ರದಲ್ಲಿ ಮತದಾನ ಮಾಡಿದರು.
ಬೆಳಗ್ಗೆ 10ಕ್ಕೆ ಶೇ.11.62ರಷ್ಟು, ಮಧ್ಯಾಹ್ನ 12ಕ್ಕೆ ಶೇ.61.36, ಮಧ್ಯಾಹ್ನ 2ಕ್ಕೆ 91.04ರಷ್ಟು ಹಾಗೂ ಮತದಾನ ಪೂರ್ಣಗೊಂಡ ನಂತರ ಶೇ.99.81ರಷ್ಟು ಮತದಾನವಾಗಿದೆ.
ಪ್ರತಿ ಮತಗಟ್ಟೆಗೆ ಪೆÇ್ರಸಿಡಿಂಗ್ ಆಫೀಸರ್, ಅಸಿಸ್ಟೆಂಟ್ ಪೆÇ್ರಸಿಂಡಿಂಗ್ ಆಫೀಸರ್, ಪೆÇಲೀಂಗ್ ಆಫೀಸರ್, ಐಡೆಂಫಿಕೇಶನ್ ಆಫೀಸರ್ ಮತ್ತು ಗ್ರೂಪ್ ಡಿ ಸಪ್ರತಿ ಮತಗಟ್ಟೆಗೆ ಓರ್ವ ಮೈಕ್ರೋ ಅಬ್ಸರ್ವರ್ ಕಾರ್ಯನಿರ್ವಹಿಸಿದ್ದರು.
ಶಾಂತಿಯುತ ಮತ್ತು ಮುಕ್ತ ಮತದಾನಕ್ಕೆ ಸಕಲ ವ್ಯವಸ್ಥೆಯನ್ನು ಜಿಲ್ಲಾಡಳಿತ ಮಾಡಿತ್ತು. ಎಲ್ಲ ಮತಗಟ್ಟೆಗಳಲ್ಲಿ ಕೋವಿಡ್ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಿರುವುದು ಕಂಡುಬಂದಿತು.
ಸಚಿವ ಆನಂದಸಿಂಗ್ ಸೇರಿದಂತೆ ಶಾಸಕರು,ಸಂಸದರು ತಮ್ಮ ವ್ಯಾಪ್ತಿಯ ಮತಗಟ್ಟೆಗಳಲ್ಲಿ ಮತದಾನ ಮಾಡಿದರು.
ಚುನಾವಣಾ ವೀಕ್ಷಕರಾದ ಹಿರಿಯ ಐಎಎಸ್ ಅಧಿಕಾರಿ ಡಾ.ವಿ.ರಾಮ್ ಪ್ರಸಾತ್ ಮನೋಹರ್ ಅವರು ವಿಜಯನಗರ ಜಿಲ್ಲೆಯ ಕಮಲಾಪುರ ಪಟ್ಟಣ ಪಂಚಾಯಿತಿ,ಹಂಪಿ ಗ್ರಾಪಂ,ಸೀತಾರಾಮ ತಾಂಡಾ ಗ್ರಾಪಂ,ಬುಕ್ಕಸಾಗರ ಗ್ರಾಪಂ ಸೇರಿದಂತೆ ವಿವಿಧೆಡೆ ಸ್ಥಾಪಿಸಲಾಗಿರುವ ಮತಗಟ್ಟೆಗಳಿಗೆ ಭೇಟಿ ನೀಡಿ ಮತದಾನ ಪ್ರಕ್ರಿಯೆಯನ್ನು ಪರಿಶೀಲಿಸಿದರು.
ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಚುನಾವಣಾ ವೀಕ್ಷಕ ಡಾ.ರಾಮ್ ಪ್ರಸಾತ್ ಮನೋಹರ್ ಅವರು ಅವಳಿ ಜಿಲ್ಲೆಯಲ್ಲಿ ಶಾಂತಿಯುತ ಮತದಾನ ನಡೆದಿದೆ. ಎಲ್ಲಿಯೂ ಯಾವುದೇ ರೀತಿಯ ಅಹಿತಕರ ಘಟನೆಗಳು ಆದ ಬಗ್ಗೆ ವರದಿಯಾಗಿಲ್ಲ ಎಂದರು.
ಜಿಲ್ಲಾ ಚುನಾವಣಾಧಿಕಾರಿಗಳಾದ ಪವನಕುಮಾರ್ ಮಾಲಪಾಟಿ ಅವರು ಜಿಪಂ ಮತಗಟ್ಟೆ ಸೇರಿದಂತೆ ವಿವಿಧೆಡೆ ಸ್ಥಾಪಿಸಲಾಗಿರುವ ಮತಗಟ್ಟೆಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.
ಡಿ.14ರಂದು ನಗರದ ಸರಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಮತಎಣಿಕೆ ನಡೆಯಲಿದೆ.
ಈ ಚುನಾವಣೆಯಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನಿಂದ ಕೆ.ಸಿ.ಕೊಂಡಯ್ಯ, ಬಿಜೆಪಿಯಿಂದ ಏಚರೆಡ್ಡಿ ಸತೀಶ್, ಪಕ್ಷೇತರರಾಗಿ ಗಂಗೀರೆಡ್ಡಿ ಮತ್ತು ಸಿ.ಎಂ.ಮಂಜುನಾಥ ಕಣದಲ್ಲಿದ್ದು, ಯಾರು ಬಳ್ಳಾರಿ ಸ್ಥಳೀಯ ಸಂಸ್ಥೆಗಳ ಕ್ಷೇತ್ರ ಇನ್ಮುಂದೆ ಪ್ರತಿನಿಧಿಸುತ್ತಾರೆ ಎಂಬುದು ಡಿ.14ಕ್ಕೆ ಗೊತ್ತಾಗಲಿದೆ…

ವರದಿ. ಎಂ, ಎಲ್, ವೆಂಕಟೇಶ್ ಬಳ್ಳಾರಿ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend