ನಾಯಕನಹಟ್ಟಿ: ವಾರ್ಡ್‌ಗಳ ಮೀಸಲಾತಿ ಪಟ್ಟಿಯನ್ನು ಬದಲಾಯಿಸಿ ಆದೇಶಿಸಿದೆ.!!!

Listen to this article

ಚಿತ್ರದುರ್ಗ: ನಾಯಕನಹಟ್ಟಿ: ನಾಯಕನಹಟ್ಟಿ ಪಟ್ಟಣ ಪಂಚಾಯಿತಿಯು 16 ವಾರ್ಡ್‌ಗಳನ್ನು ಹೊಂದಿದ್ದು, 2016ರಲ್ಲಿ ಚುನಾವಣೆ ನಡೆದು ಸದಸ್ಯರು ಆಯ್ಕೆಯಾಗಿದ್ದರು. ಈ ಸದಸ್ಯರ ಅಧಿಕಾರ ಅವಧಿ ಇದೇ ತಿಂಗಳ 30ಕ್ಕೆ ಕೊನೆಯಾಗಲಿದೆ. ಹಾಗಾಗಿ ಸರ್ಕಾರ ಹಿಂದೆ ಇದ್ದ ವಾರ್ಡ್‌ಗಳ ಮೀಸಲಾತಿ ಪಟ್ಟಿಯನ್ನು ಬದಲಾಯಿಸಿ ಆದೇಶಿಸಿದೆ. ಮೀಸಲಾತಿಗೆ ಸಂಬಂಧಪಟ್ಟಂತೆ ಆಕ್ಷೇಪಣೆಗಳಿಗೆ 7 ದಿನಗಳ ಕಾಲಾವಕಾಶ ನೀಡಿದೆ. ಪಟ್ಟಣ ಪಂಚಾಯಿತಿ ಸದಸ್ಯರ ಅಧಿಕಾರ ಅವಧಿ ಇದೇ 30ಕ್ಕೆ ಕೊನೆಯಾಗಲಿದ್ದು, ವಾರ್ಡ್ ಚುನಾವಣೆಗೆ ಪೂರ್ವಭಾವಿಯಾಗಿ ಸರ್ಕಾರ ವಾರ್ಡ್‌ವಾರು ಮೀಸಲಾತಿ ಪಟ್ಟಿಯನ್ನು ಪ್ರಕಟಿಸಿದೆ. ಏಪ್ರಿಲ್ 29ರಂದು ಕರ್ನಾಟಕ ರಾಜ್ಯಪತ್ರದಲ್ಲಿ ನಗರಾಭಿವೃದ್ಧಿ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಪ್ರಕಟಣೆಯನ್ನು ಹೊರಡಿಸಿದ್ದಾರೆ. ಮೀಸಲಾತಿ ವಿವರ: ವಾರ್ಡ್‌ 1- ಪರಿಶಿಷ್ಟ ಜಾತಿ, ವಾರ್ಡ್‌ 2- ಸಾಮಾನ್ಯ, ವಾರ್ಡ್‌ 3-ಸಾಮಾನ್ಯ, ವಾರ್ಡ್‌ 4- ಪರಿಶಿಷ್ಟ ಜಾತಿ (ಮ), ವಾರ್ಡ್‌ 5- ಪರಿಶಿಷ್ಟ ಪಂಗಡ, ವಾರ್ಡ್‌ 6- ಪರಿಶಿಷ್ಟ ಪಂಗಡ (ಮ), ವಾರ್ಡ್‌ 7- ಸಾಮಾನ್ಯ, ವಾರ್ಡ್‌ 8- ಸಾಮಾನ್ಯ (ಮ), ವಾರ್ಡ್‌ 9- ಸಾಮಾನ್ಯ, ವಾರ್ಡ್‌ 10- ಸಾಮಾನ್ಯ (ಮ), ವಾರ್ಡ್‌ 11- ಪರಿಶಿಷ್ಟ ಪಂಗಡ (ಮ), ವಾರ್ಡ್‌ 12- ಪರಿಶಿಷ್ಟ ಪಂಗಡ, ವಾರ್ಡ್‌ 13- ಸಾಮಾನ್ಯ (ಮ), ವಾರ್ಡ್‌ 14- ಪರಿಶಿಷ್ಟ ಪಂಗಡ (ಮ), ವಾರ್ಡ್‌ 15- ಸಾಮಾನ್ಯ (ಮ), ವಾರ್ಡ್‌ 16- ಪರಿಶಿಷ್ಟ ಪಂಗಡ.

ವರದಿ. ಮಂಜುನಾಥ್, ಎಚ್

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend