ರಾಜ್ಯದ ತೋಟಗಾರಿಕಾ ಕ್ಷೇತ್ರಕ್ಕೆ ಎಂ.ಹೆಚ್.ಮರಿಗೌಡರ ಕೊಡುಗೆ ಅಪಾರ…!!!

Listen to this article

ರಾಜ್ಯದ ತೋಟಗಾರಿಕಾ ಕ್ಷೇತ್ರಕ್ಕೆ ಎಂ.ಹೆಚ್.ಮರಿಗೌಡರ ಕೊಡುಗೆ ಅಪಾರ

ತುಮಕೂರು: ರಾಜ್ಯದ ತೋಟಗಾರಿಕಾ ಕ್ಷೇತ್ರಕ್ಕೆ ಎಂ.ಹೆಚ್.ಮರಿಗೌಡರ ಕೊಡುಗೆ ಅಪಾರ. ರಾಜ್ಯದ ೧೯ ಜಿಲ್ಲೆಗಳಲ್ಲಿ ೩೫೭ ಫಾರಂಗಳನ್ನು ತೆರೆದು ತೋಟಗಾರಿಕೆಗೆ ಉತ್ತೇಜನ ನೀಡಿದ್ದರು ಎಂದು ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ತಿಳಿಸಿದರು.
ತುಮಕೂರು ತಾಲೂಕು ಸಿರಿವರ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ತೋಟಗಾರಿಕಾ ಇಲಾಖೆಯಿಂದ ಆಯೋಜಿಸಿದ್ದ ರಾಷ್ಟ್ರೀಯ  ತೋಟಗಾರಿಕಾ ದಿನಾಚರಣೆ ಹಾಗೂ ತೋಟಗಾರಿಕಾ ಭೀಷ್ಮ ಡಾ.ಎಂ.ಹೆಚ್.ಮರಿಗೌಡ ಜನ್ಮಜಯಂತಿ ಕಾರ್ಯಕ್ರಮಕ್ಕೆ ಶಾಲಾ ಆವರಣದಲ್ಲಿ ಸಸಿ ನೆಡುವ ಮೂಲಕ ಚಾಲನೆ ನೀಡಿ ಮಾತನಾಡುತಿದ್ದ ಅವರು, ಕೃಷಿಯ ಜೊತೆಗೆ, ತೋಟಗಾರಿಕಾ ಬೆಳೆಗಳ ಮೂಲಕ ಪರಿಸರದ ಜೊತೆಗೆ, ಕೃಷಿ ಇಲಾಖೆಯಿಂದ ತೋಟಗಾರಿಕೆಯನ್ನು ವಿಭಾಗಿಸಿ, ಪ್ರತ್ಯೇಕ ಇಲಾಖೆಯನ್ನಾಗಿಸಿ, ತೋಟಗಾರಿಕೆ ಬೆಳೆಗಳ ಬಗ್ಗೆ ಒತ್ತು ನೀಡಿದರು ಎಂದರು.


ಬೆಂಗಳೂರು, ಕೋಲಾರ, ತುಮಕೂರು ಹುಣಸೆ,ಹಲಸು,ಮಾವು ಬೆಳೆಯುವ ಮೂಲಕ ಬಂಜರು ಭೂಮಿಯನ್ನು ತೋಟವಾಗಿ ಪರಿವರ್ತಿಸಿ,ರೈತನನ್ನು ಆರ್ಥಿಕವಾಗಿ ಸದೃಢರನ್ನಾಗಿಸಿದರು. ಇದರ ಫಲವಾಗಿ ಸರಕಾರ ೧೯೯೩ನಲ್ಲಿ ಡಾ.ಎಂ.ಹೆಚ್. ಮರಿಗೌಡರಿಗೆ ತೋಟಗಾರಿಕಾ ರತ್ನ ಬಿರುದು ನೀಡಿ ಗೌರವಿಸಿತು ಎಂದು ಅವರು ತಿಳಿಸಿದರು.
ಹೈಸ್ಕೂಲ್ ವಿದ್ಯಾರ್ಥಿಗಳಿಗೆ ಹತ್ತನೇ ತರಗತಿ ನಂತರ ಮುಂದೇನು ಎಂಬ ವಿಷಯದ ಕುರಿತು ಶಾಲಾ ಶಿಕ್ಷಕರು ತಿಳಿಸಿಕೊಡುವ ಮೂಲಕ ಅವರು ಗುರಿಗಳನ್ನು ಹಾಕಿಕೊಳ್ಳಲು ಅನುವು ಮಾಡಿಕೊಡಬೇಕೆಂದು ಸಲಹೆ ನೀಡಿದರು.
ಎಸ್.ಎಸ್.ಎಲ್.ಸಿ ಮತ್ತು ಪಿಯುಸಿ ನಂತರ ಸಾಕಷ್ಟು ಅವಕಾಶಗಳಿದ್ದು, ಹೈಸ್ಕೂಲ್‌ನಲ್ಲಿ ನಿಮ್ಮ ಮುಂದಿನ ಗುರಿಗಳನ್ನು ನಿಗಧಿ ಪಡಿಸಿಕೊಂಡರೆ ಹೆಚ್ಚಿನ ಎತ್ತರಕ್ಕೆ ಬೆಳೆಯಲು ಸಹಕಾರಿಯಾಗಲಿದೆ ಎಂದರು.
ತೋಟಗಾರಿಕಾ ಇಲಾಖೆಯ ಉಪನಿರ್ದೇಶಕಿ ಬಿ.ಸಿ.ಶಾರದಮ್ಮ ಮಾತನಾಡಿ, ರಾಜ್ಯದಲ್ಲಿ ತೋಟಗಾರಿಕಾ ಬೆಳೆಗಳಿಗೆ ಉತ್ತೇಜನ ನೀಡಿ, ಕೃಷಿಗೆ ಪರ್ಯಾಯವಾಗಿ ತೋಟಗಾರಿಕೆಗೆ ಹೆಚ್ಚಿನ ಪ್ರಾಶಸ್ತ್ಯ ನೀಡಿ, ರೈತರಿಗೆ ಶಾಶ್ವತ ಆದಾಯ ಬರುವಂತೆ ಮಾಡಿದ ತೋಟಗಾರಿಕಾ ಪಿತಾಮಹ ಡಾ.ಎಂ.ಹೆಚ್.ಮರಿಗೌಡರ ೧೦೭ನೇ ಜನ್ಮಜಯಂತಿ ಅಂಗವಾಗಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಮಕ್ಕಳಿಗೆ ತೋಟಗಾರಿಕೆಯ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಸಿರಿವರ ಹೈಸ್ಕೂಲ್‌ನ ಮಕ್ಕಳಿಗೆ ಚಿತ್ರಸ್ಪರ್ಧೆ, ಪ್ರಭಂಧ, ಆಶುಭಾಷಣ ಸ್ಪರ್ಧೆಗಳನ್ನು ಏರ್ಪಡಿಸಿದ್ದು, ಇಂದು ಆ ಮಕ್ಕಳಿಗೆ ಬಹುಮಾನ ವಿತರಿಸಲಾಗುತ್ತಿದೆ. ಬಹುವಾರ್ಷಿಕ ಬೆಳೆಗಳಾದ ಬಾಳೆ, ಹಲಸು, ಸೀಬೆ, ಸಪೋಟ, ತೆಂಗು, ಅಡಿಕೆ, ಮಾವು ಇನ್ನಿತರ ತೋಟಗಾರಿಕಾ ಬೆಳೆಗಳು ಮತ್ತು ಅವರು ಬೀಜೋತ್ಪಾದನಾ ಕೇಂದ್ರಗಳನ್ನು ನಿರ್ಮಿಸುವಲ್ಲಿ ಡಾ.ಎಂ.ಹೆಚ್.ಮರಿಗೌಡರ ಪಾತ್ರ ಮಹತ್ವದ್ದು ಎಂದರು.


ಮಕ್ಕಳು ಮನೆಯಂಗಳದಲ್ಲಿ ತೋಟ ಬೆಳೆಸಲು ಮುಂದಾಗಬೇಕು. ಮನೆಯ ಮುಂದೆ ನಳನಳಿಸುವ ಗಿಡಗಳಿದ್ದರೆ, ಅವುಗಳ ಹಾರೈಕೆಯಿಂದ ಮನಸ್ಸಿಗೆ ಶಾಂತಿ, ನೆಮ್ಮದಿ ದೊರೆಯುತ್ತದೆ. ಹಾಗಾಗಿ ಮನೆಯ ಮುಂದಿನ ಖಾಲಿ ಜಾಗದಲ್ಲಿ ಕನಿಷ್ಠ ಎರಡು ತೋಟಗಾರಿಕಾ ಸಸಿಗಳನ್ನು ನೆಟ್ಟು ಪೋಷಿಸುವತ್ತ ಮಕ್ಕಳು ಮುಂದಾಗುವoತೆ ಡಿಡಿಹೆಚ್ ಬಿ.ಸಿ.ಶಾರದಮ್ಮ ಸಲಹೆ ನೀಡಿದರು.
ಕಾರ್ಯಕ್ರಮದ ಅಂಗವಾಗಿ ಮಕ್ಕಳು ರಚಿಸಿದ್ದ ಚಿತ್ರಗಳನ್ನು ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ವೇದಿಕೆಯಲ್ಲಿ ಹಿರಿಯ ತೋಟಗಾರಿಕಾ ಸಹಾಯಕ ನಿರ್ದೇಶಕ ಸುಧಾಕರ್ ಹೆಚ್.ಎ.,ಸಹಾಯಕ ತೋಟಗಾರಿಕಾ ನಿರ್ದೇಶಕರಾದ ರೇಖಾ ಎಂ.ಎನ್.,ರಾಘವೇoದ್ರ, ದರ್ಶನ್ ಕ.ಎಸ್., ಆರ್.ಐ .ಮಂಜುನಾಥ್, ಕಾಲೇಜಿನ ಪ್ರಾಂಶುಪಾಲರಾದ ಕುಮಾರಯ್ಯ, ಉಪಪ್ರಾಂಶುಪಾಲ ಚೇತನ್, ಸಹಾಯಕ ತೋಟಗಾರಿಕಾ ಅಧಿಕಾರಿಗಳಾದ ಅಂಜನ್‌ಕುಮಾರ್, ಶಿವಕುಮಾರ್, ಸಿರಿವರ ಶಾಲೆಯ ಸಿಬ್ಬಂದಿ ಮತ್ತು ಮಕ್ಕಳು ಉಪಸ್ಥಿತರಿದ್ದರು. ಚಿತ್ರಕಲಾ ಸ್ಪರ್ಧೆಯಲ್ಲಿ ಪಾಲ್ಗೊಂಡು ವಿಜೇತ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು…

ವರದಿ. ಸುರೇಶ್, ತುಮಕೂರು

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend