ಚುನಾವಣೆಗೆ 3187 ಪೊಲೀಸ್‌ ಅಧಿಕಾರಿಗಳು, ಸಿಬ್ಬಂದಿ ನಿಯೋಜನೆ: ಎಸ್ಪಿ ಯಶೋಧಾ ವಂಟಗೋಡಿ…!!!

Listen to this article

ಚುನಾವಣೆಗೆ 3187 ಪೊಲೀಸ್‌ ಅಧಿಕಾರಿಗಳು, ಸಿಬ್ಬಂದಿ ನಿಯೋಜನೆ: ಎಸ್ಪಿ ಯಶೋಧಾ ವಂಟಗೋಡಿ

ಕೊಪ್ಪಳ : ಕರ್ನಾಟಕ ವಿಧಾನಸಭಾ ಚುನಾವಣೆ-2023 ಹಿನ್ನೆಲೆಯಲ್ಲಿ ಜಿಲ್ಲೆಯ 05 ವಿಧಾನಸಭಾ ಕ್ಷೇತ್ರಗಳಲ್ಲಿ ಮತ್ತು 1322 ಮತಗಟ್ಟೆಗಳಲ್ಲಿ ಮೇ-10 ರಂದು ಮತದಾನವು ಶಾಂತಿಯುತವಾಗಿ ನಡೆಯುವ ನಿಟ್ಟಿನಲ್ಲಿ ಮುಂಜಾಗ್ರತಾ ಕ್ರಮವಾಗಿ ಕೇಂದ್ರೀಯ ಮೀಸಲು ಪಡೆ ಸೇರಿದಂತೆ ಜಿಲ್ಲಾ ಪೊಲೀಸ್ ಇಲಾಖೆಯಿಂದ ಒಟ್ಟು 3187 ಮತು ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ‌ ಯಶೋಧಾ ವಂಟಗೋಡಿ ಅವರು ತಿಳಿಸಿದರು.
ಮೇ-8 ರಂದು ಜಿಲ್ಲಾಡಳತ ಭವನದ ಸಭಾಂಗಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಚುನಾವಣಾ ಕಾರ್ಯಕ್ಕಾಗಿ ಕೊಪ್ಪಳ ಜಿಲ್ಲೆಯಲ್ಲಿ ಲಭ್ಯವಿರುವಂತ 02-ಡಿಎಸ್‌ಪಿ, 12-ಸಿಪಿಐ/ಪಿ.ಐ, 43 ಪಿಎಸ್‌ಐ, 115 ಎಎಸ್‌ಐ, 620 ಪೊಲೀಸ್ ಸಿಬ್ಬಂದಿಗಳು ಮತ್ತು 500 ಜನ ಗೃಹ ರಕ್ಷಕ ದಳ ಸಿಬ್ಬಂದಿಯವರನ್ನು ನಿಯೋಜಿಸಲಾಗಿದೆ. ಕೊರತೆಯನ್ನು ಸಲಪಡಿಸಲು ಮತ್ತು ಹೆಚ್ಚಿನ ರೀತಿಯಲ್ಲಿ ಭದ್ರತೆಯನ್ನು ಒದಗಿಸುವ ನಿಟ್ಟಿನಲ್ಲಿ ಕೋರಿಕೆಯಂತೆ ರಾಜ್ಯದ ಇತರೆ ಜಿಲ್ಲೆಗಳಿಂದ ಒಬ್ಬರು ಎಸ್ಪಿ, 3 ಡಿ.ಎಸ್.ಪಿ, 5 ಸಿಪಿಐ/ಪಿ.ಐ. ಮತ್ತು ಹೊರ ರಾಜ್ಯದಿಂದ (ಆಂಧ್ರಪ್ರದೇಶ) 300 ಜನ ಪೊಲೀಸ್ ಸಿಬ್ಬಂದಿಗಳು ಮತ್ತು 300 ಜನ ಗೃಹ ರಕ್ಷಕ ದಳ ಸಿಬ್ಬಂದಿ ಸೇರಿ ಒಟ್ಟು 600 ಜನ ಜಿಲ್ಲೆಗೆ ಆಗಮಿಸಿರುತ್ತಾರೆ.
ಕೊಪ್ಪಳ ಜಿಲ್ಲೆಯ 05 ವಿಧಾನಸಭಾ ಕ್ಷೇತ್ರಗಳಿಗೆ ತಲಾ ಒಂದೊಂದು ಕೆಎಸ್‌ಆರ್‌ಪಿ ಪಡೆಗಳನ್ನು ನಿಯೋಜನೆ ಮಾಡಲಾಗಿದೆ. ಕೇಂದ್ರೀಯ ಮೀಸಲು ಪಡೆಯ ಒಟ್ಟು 16 ತುಕಡಿಗಳಿಂದ ಒಟ್ಟು 1152 ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಲಾಗಿದೆ.
ಪ್ರತಿ ವಿಧಾನಸಭಾ ಕ್ಷೇತ್ರದ ಭದ್ರತಾ ಮೇಲ್ವಿಚಾರಣೆಗಾಗಿ ತಲಾ ಒಬ್ಬರು ಡಿಎಸ್ಪಿಗಳನ್ನು, ಸಹಾಯಕರಾಗಿ ತಲಾ 3 ಜನ ಸಿಪಿಐ ರವರನ್ನು ನಿಯೋಜನೆ ಮಾಡಲಾಗಿದೆ. ಇದಲ್ಲದೆ ಡಿ.ಎಸ್.ಪಿ ಮತ್ತು ಸಿ.ಪಿ.ಐ ರವರ ಅಧೀನದಲ್ಲಿ ಒಟ್ಟು 70 ಪಿಎಸ್‌ಐ/ಎಎಸ್‌ಐ ರವರನ್ನು ಸೆಕ್ಟರ್ ಮೊಬೈಲ್ ಕರ್ತವ್ಯಕ್ಕೆ ನಿಯೋಜಿಸಲಾಗಿದೆ.
ಕೊಪ್ಪಳ ಜಿಲ್ಲೆಯಲ್ಲಿ ಲಭ್ಯವಿರುವ 1292 ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿ ಹಾಗೂ ಹೊರಗಡೆಯಿಂದ ಬಂದಿರುವ 09 ಜನ ಪೊಲೀಸ್ ಅಧಿಕಾರಿಗಳು, 500 ಜನ ಜಿಲ್ಲೆಯ ಗೃಹ ರಕ್ಷಕ ದಳ ಸಿಬ್ಬಂದಿ, 5 ಕೆಎಸ್‌ಆರ್‌ಪಿ ತುಕಡಿಗಳು, 18 ಕೇಂದ್ರ ಮೀಸಲು ಪೊಲೀಸ್ ತುಕಡಿ, ಆಂಧ್ರಪ್ರದೇಶ ರಾಜ್ಯದ 300 ಜನ ಪೊಲೀಸ್ ಸಿಬ್ಬಂದಿ ಹಾಗೂ 300 ಜನ ಗೃಹ ರಕ್ಷಕ ಸಿಬ್ಬಂದಿಗಳನ್ನು ಕರ್ತವ್ಯಕ್ಕೆ ನಿಯೋಜಿಸಿದೆ.
108 ಜನ ಪೊಲೀಸ್ ಅಧಿಕಾರಿ/ಸಿಬ್ಬಂದಿಯವರನ್ನು 38 ಫ್ಲಾಯಿಂಗ್ ಸ್ಟ್ಯಾಡ್‌ಗಳ ಕರ್ತವ್ಯಕ್ಕೆ, 78 ಜನ ಪೊಲೀಸ್ ಅಧಿಕಾರಿ/ಸಿಬ್ಬಂದಿಯವರನ್ನು 15 ಚೆಕ್‌ಪೋಸ್ಟ್‌ಗಳ ಕರ್ತವ್ಯಕ್ಕೆ, 15 ಜನ ಸಿಬ್ಬಂದಿಯವರನ್ನು ವಿಡಿಯೋ ಸರ್ವೆಲೆನ್ಸ್ ಟೀಮ್ ಕರ್ತವ್ಯಕ್ಕೆ, 107 ಜನ ಪೊಲೀಸ್ ಅಧಿಕಾಲ/ಸಿಬ್ಬಂದಿಯವರನ್ನು ಕಂದಾಯ ಇಲಾಖೆ ಸೆಕ್ಟರ್ ಮೊಬೈಲ್‌ಗಳ ಕರ್ತವ್ಯಕ್ಕೆ ನಿಯೋಜಿಸಿದೆ.
ಒಟ್ಟಾರೆ ಜಿಲ್ಲೆಯ, ಹೊರ ಜಿಲ್ಲೆಯ ಹಾಗೂ ಹೊರ ರಾಜ್ಯದ ಪೊಲೀಸ್ ಅಧಿಕಾಲ/ಸಿಬ್ಬಂದಿ, ಗೃಹ ರಕ್ಷಕ ದಳ ಸಿಬ್ಬಂದಿ, ಕೇಂದ್ರೀಯ ಮೀಸಲು ಪಡೆ, ರಾಜ್ಯ ಮೀಸಲು ಪಡೆಯ ಅಧಿಕಾರಿ ಮತ್ತು ಸಿಬ್ಬಂದಿಗಳು ಸೇರಿ ಒಟ್ಟು 3187 ಜನರನ್ನು ಮುಕ್ತ, ನ್ಯಾಯಸಮ್ಮತ, ಶಾಂತಿಯುತ ಚುನಾವಣೆಗಾಗಿ ಭದ್ರತಾ ಕರ್ತವ್ಯಕ್ಕೆ ನಿಯೋಜಿಸಿದೆ.
ಸಾರ್ವಜನಿಕರು ನಿರ್ಭಯವಾಗಿ ಮತದಾನ ಮಾಡಲು ಅನುಕೂಲವಾಗುವಂತೆ ಜಿಲ್ಲೆಯ ಒಟ್ಟು 225 ಪ್ರದೇಶ ವ್ಯಾಪ್ತಿಯಲ್ಲಿ ಬರುವ 500 ಮತಗಟ್ಟೆಗಳಿಗೆ ಕೇಂದ್ರೀಯ ಮೀಸಲು ಪಡೆಯ ಸಿಬ್ಬಂದಿಯವರನ್ನು ನಿಯೋಜಿಸಿದೆ.
ಮಾದರಿ ನೀತಿ ಸಂಹಿತೆ ಜಾರಿ ನಂತರದಿಂದ ಮೇ-7 ರವರೆಗೆ ಜಿಲ್ಲೆಯ ನಗರ, ಪಟ್ಟಣ ಮತು ಗ್ರಾಮೀಣ ಪ್ರದೇಶಗಳು ಸೇರಿದಂತೆ ಒಟ್ಟು 223 ಸ್ಥಳಗಳಲ್ಲಿ ಪಥಸಂಚಲನ (ರೂಟ್ ಮಾರ್ಚ) ಮಾಡಲಾಗಿದೆ.
ಮಾದರಿ ನೀತಿ ಸಂಹಿತೆ ಉಲ್ಲಂಘನೆಗೆ ಸಂಬಂಧಿಸಿದಂತೆ ಇದುವರೆಗೆ 34 ಪ್ರಕರಣಗಳು ದಾಖಲಾಗಿದ್ದು, ನೀತಿ ಸಂಹಿತೆ ಜಾರಿ ನಂತರ ಚುನಾವಣಾ ಅಕ್ರಮಗಳನ್ನು ತಡೆಗಟ್ಟಲು ಕಾರ್ಯಾಚರಣೆ ಕೈಗೊಂಡು ನಗದು ಸೇರಿ ಕೋಟ್ಯಾಂತರ ರೂ ಮೌಲ್ಯದ ಮದ್ಯ, ಮಾಧಕ ದ್ರವ್ಯ ಹಾಗೂ ಇನ್ನಿತರೆ ಸಾಮಗ್ರಿಗಳನ್ನು ವಶಪಡಿಸಕೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ವಿವರಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳಾದ ಎಂ. ಸುಂದರೇಶಬಾಬು, ಜಿಲ್ಲಾ ಪಂಚಾಯತ್ ಸಿಇಓ ರಾಹುಲ್ ರತ್ನಂ ಪಾಂಡೆಯ, ಅಪರ ಜಿಲ್ಲಾಧಿಕಾರಿ ಸಾವಿತ್ರಿ ಕಡಿ ಹಾಗೂ ಇತರರು ಇದ್ದರು…

 

ವರದಿ. ಚನ್ನಬಸವರಾಜ್ ಕಳ್ಳಿಮರದ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend